ದರೋಡೆ ಮಾಡಲು ಹೊಂಚು ಹಾಕುತ್ತಿದ್ದವರ ಬಂಧನ :
ಗ್ರಾಮೀಣ
ಠಾಣೆ : ದಿನಾಂಕ:-27/04/2014
ರಂದು ರಾತ್ರಿ 10:00 ಗಂಟೆಗೆ ಶ್ರೀ ಡಿ.ಜಿ ರಾಜಣ್ಣಾ ಸಿ.ಪಿ.ಐ ಗ್ರಾಮೀಣ ವೃತ್ತ ಗುಲಬರ್ಗಾ ಇವರು
5 ಜನ ಆಪಾದಿತ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಒಂದು ಜಪ್ತಿ ಪಂಚನಾಮೆ ಜೊತೆಗೆ
ಜ್ಞಾಪನಾ ಪತ್ರ ಸಲ್ಲಿಸಿದ್ದು ಸಾರಾಂಶವೆನೆಂದರೆ ದಿನಾಂಕ: 27/04/2014 ರಂದು ಸಾಯಂಕಾಲ 6:00
ಗಂಟೆಯ ಸುಮಾರಿಗೆ ನಾನು ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣೆಯ ವ್ಯಾಪ್ತಿಯ ಪೈಕಿ ತಾವರಗೇರಾ
ಕ್ರಾಸ್ ದಿಂದ ಹರಸೂರ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿನ ತಾವರಗೇರಾ ಸೀಮಾಂತರದ ಸಿದ್ದಾರೂಢ ಮಠದ ಮುಂದೆ ಒಂದು
ಸಣ್ಣ ಬ್ರಿಡ್ಜ ಹತ್ತಿರ ರೋಡಿನ ಮೇಲೆ ರಸ್ತೆಗೆ ಕೆಲವು ಜನರು ತಮ್ಮ ಮುಖಕ್ಕೆ ಕಪ್ಪು ಬಟ್ಟೆ
ಕಟ್ಟಿಕೊಂಡು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತಡೆದು ನಿಲ್ಲಿಸಿ ದರೋಡೆ ಮಾಡುವ
ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಈ ವಿಷಯವನ್ನು ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು
ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾ ರವರ ಗಮನಕ್ಕೆ ತಂದು ಪಂಚರು ಹಾಗು ಸಿಬ್ಬಂದಿಯೊಂದಿಗೆ ಬಾತ್ಮಿಯಂತೆ
ಸ್ಥಳಕ್ಕೆ ಹೋಗಿ ದರೋಡೆಗೆ ಹೊಂಚು ಹಾಕುತ್ತಿದ್ದ 7 ಜನರ ಮೇಲೆ ದಾಳಿ ಮಾಡಿ ಹಿಡಿವುವಾಗ ಅದರಲ್ಲಿ 5
ಜನರು ಸಿಕ್ಕು ಬಿದ್ದಿದ್ದು 2 ಜನರು ಓಡಿ ಹೋಗಿದ್ದು ಸಿಕ್ಕು ಬಿದ್ದವರ ಹೆಸರು 1) ಅಜರ
ತಂದೆ ಕೈಸರ್ ಅಹೆಮ್ಮದ ಖಾನ ಸಾ:ಅತ್ತರ ಪೂಲ್ ಹೈದ್ರಾಬಾದ 2) ಸೈಯ್ಯದ ಹಾಜಿ ತಂದೆ
ಸೈಯ್ಯದ ರಫೀ ಸಾ:ಅಮ್ಮನ ನಗರ ತಲಾಫ ಕಟ್ಟಿ
ಹೈದ್ರಾಬಾದ 3) ಮಹಮ್ಮದ ವಾಸೀಮ ತಂದೆ ಅಬ್ದಲ್ ಕಲಾಂ ಸಾಬ ಸಾ:ಭಾಕರ
ಫಂಕ್ಷನ್ ಹಾಲ ಭಾರಾ ಹೀಲ್ಸ ಗುಲಬರ್ಗಾ 4) ಅಬ್ದುಲ್ ಖಾದರ ತಂದೆ ಅಬ್ದುಲ್ ಸತ್ತಾರ ಸಾ:ಇಸ್ಲಾಂಬಾದ ಕಾಲೋನಿ ಗುಲಬರ್ಗಾ 5) ಶೇಖ
ಮೈಜೋದ್ದಿನ ತಂದೆ ಶೇಖ ಮೈನೋದ್ದಿನ ಸಾ:ಮಿಜಬಾ ನಗರ ಗುಲಬರ್ಗಾ ಇದ್ದು, ಓಡಿ ಹೋದವರ ಹೆಸರು 1) ಸರ್ವತ್ತ ಅಲಿ ತಂದೆ ಖಾಸಿಂ ಅಲಿ
ಸಾ:ಹಾಗರಗಾ ರೋಡ ಗುಲಬರ್ಗಾ 2) ಸೈಯ್ಯದ ವಸೀಮ ತಂದೆ ಸೈಯ್ಯದ ಖೈಬರ ಸಾ:ಮಿಲತ್ತ ಬಗರ
ಜಬ್ಬಾರ ಫಂಕ್ಷನ ಹಾಲ ಹತ್ತಿರ ಗುಲಬರ್ಗಾ ಅಂತಾ ಗೊತ್ತಾಗಿದ್ದು ಇರುತ್ತದೆ. ಸಿಕ್ಕಿ ಬಿದ್ದ 5
ಆಪಾದಿತರನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗುದುಕೊಂಡು ನಂತರ ಅವರ ವಶದಿಂದ 1] ಒಂದು
ಮಚ್ಚು 2] ಒಂದು ಚಾಕು 3]
ಅಂದಾಜ 05 ಫಿಟ್ ಉದ್ದದ ಮೂರು ಬಡಿಗೆಗಳು 4] ಒಂದು ಖಾರ ಪುಡಿಯ ಪಾಕೇಟ್ 5] ಒಂದು
ಅಂದಾಜ 30-35 ಫಿಟ್ ಉದ್ದದ ಬಿಳಿ ನೂಲಿನ ಹಗ್ಗ 6] ಐದು ಜನರು ತಮ್ಮ ಮುಖಗಳಿಗೆ ಕಟ್ಟಿಕೊಂಡ ಕಪ್ಪು ಬಟ್ಟೆಗಳು
7] ಒಂದು
ಸ್ಕಾರ್ಪಿಯೋ ವಾಹನ ನಂ ಕೆ.ಎ.32.ಎನ್.1491 ಅ,ಕಿ. 5,00,000/ರೂ 8] ಸ್ಕಾರ್ಫಿಯೋ ವಾಹನದಲ್ಲಿದ್ದ ಮೂರು ಬಿಳಿಯ ಬಟ್ಟೆ
ತುಕಡಿಗಳು ನೇದ್ದವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ಜಪ್ತ ಮಾಡಿಕೊಂಡಿದ್ದು ಸದರಿ 5
ಜನ ಆಪಾದಿತರೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಸೇಡಂ
ಠಾಣೆ : ಶ್ರೀ ಮೊಹ್ಮದ್ ಯೂಸೂಫ್
ಹುಸೇನ್ ತಂದೆ ಮೊಹ್ಮದ್ ಹುಸೇನ್ ಸವೆರಾವಾಲೆ, ಸಾ:ಕೆ.ಇ.ಬಿ. ಕಾಲೋನಿ, ಸೇಡಂ
ಇವರು ಸುಮಾರು ಆರು ವರ್ಷಗಳಿಂದ ಸೇಡಂ ಬಸ್
ನಿಲ್ದಾಣದ ಎದುರುಗಡೆ ತಮ್ಮ ಸ್ವಂತ ಹೋಟೆಲ್ ಇದ್ದು ಅದರ ಹೆಸರು ಸವೆರಾ ಅಂತ ಇರುತ್ತದೆ. ಸೇಡಂ
ಪಟ್ಟಣದಲ್ಲಿಯ ಕೆಲವು ಡಿ.ಎಸ್.ಎಸ್. ಮುಖಂಡರು ನಮ್ಮ ಹೋಟಲ್ಗೆ ಬಂದು ತಿಂಗಳಿಗೊಮ್ಮೆ ಹಫ್ತಾ
ಕೊಡಬೇಕು ಅಂತ ತಕರಾರು ಮಾಡುತ್ತಾ ಬಂದಿದ್ದು ಆದರೆ ನಾನು ಇಲ್ಲಿಯವರೆಗೆ ಯಾರಿಗೂ ಹಫ್ತಾ
ಕೊಟ್ಟಿರುವದಿಲ್ಲ. ದಿನಾಂಕ:27-04-2014 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ನಾನು ನಮ್ಮ
ಹೋಟೆಲ್ದಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದಾಗ,
1. ವಿಜಯಕುಮಾರ ಆಡಕಿ 2. ನರಸಪ್ಪ ಯಾದಗೀರ, 3.
ಮಾರುತಿ ಕೊಡಂಗಲಕರ್ 4. ಟಿ. ಜಾನ ಹೊಸಳ್ಳಿಕರ ಹಾಗೂ ಇನ್ನೂ ನಾಲ್ಕು ಜನರು ಅವರ ಹೆಸರು ವಿಳಾಸ
ಗೊತ್ತಿಲ್ಲ ಇವರೆಲ್ಲರೂ ಕೂಡಿಕೊಂಡು ಬಂದವರೇ ನನಗೆ ಏ ಮೈನಾಸೆ ಮಂತಲಿ ಹಫ್ತಾ ದೇನಾ ನಹಿತೊ
ತುಮಾರಾ ಹೋಟೆಲ್ ಬಂದ ಕರನಾ ಅಂತ ಹೆದರಿಸ ಹತ್ತಿದರು ಆಗ ನಾನು ಯಾಕೆ ನಿಮಗೆ ಹಫ್ತಾ ಕೊಡಬೇಕು ಅಂತ
ಕೇಳಿದಾಗ ಅವರಲ್ಲಿಯ 'ವಿಜಯಕುಮಾರ ಆಡಕಿ' ಮತ್ತು 'ಟಿ.
ಜಾನ ಇವರಿಬ್ಬರೂ ನನಗೆ ಎದೆಯ ಮೇಲಿನ ಅಂಗಿ ಹಿಡಿದು ದಂಗಾ ಮಸ್ತಿ ಮಾಡ ಹತ್ತಿದರು ಅವರಲ್ಲಿಯ
ಮಾರುತಿ ಕೊಡಂಗಲಕರ್ ಹಾಗೂ ನರಸಪ್ಪ ಯಾದಗೀರ ಇವರಿಬ್ಬರೂ ಕೈಯಿಂದ ಹೊಡೆಯ ಹತ್ತಿದರು, ಆಗ
ನಮ್ಮ ಹೋಟೆಲ್ದಲ್ಲಿ ಚಹಾ ಕುಡಿಯಲು ಬಂದಿದ್ದ ಮೊಹ್ಮದ್ ಜಾವೀದ್ ತಂದೆ ಮೊಹ್ಮದ್ ಫಕ್ರೋದ್ದಿನ್
ಅಂಡೆವಾಲೆ ಮತ್ತು ನಮ್ಮ ಹೋಟೆಲ್ದಲ್ಲಿ ಕೆಲಸ ಮಾಡುವ ನಾರಾಯಣ ಇವರಿಬ್ಬರೂ ಬಿಡಿಸಲು ಬಂದರೆ
ಅವರಿಗೆ ಹೆದರಿಸಿದರು. ವಿಜಯಕುಮಾರ ಆಡಕಿ ಮತ್ತು ಟಿ.ಜಾನ ಇವರಿಬ್ಬರೂ ಪ್ರತಿ ತಿಂಗಳು 1000/-
ರೂಪಾಯಿ ಹಫ್ತಾ ಕೊಡಬೇಕು ಅಂತ ನನಗೆ ಒತ್ತಾಯ ಮಾಡ ಹತ್ತಿದಾಗ ಆಗ ನಾನು ನನ್ನ ಹತ್ತಿರ ಹಣ ಇಲ್ಲ
ನಾನು ಹಫ್ತಾ ಕೊಡುವದಿಲ್ಲ ಅಂತ ಅಂದಿದ್ದಕ್ಕೆ ಆಗ ಅವರೆಲ್ಲರೂ ಈ ರಂಡಿ ಮಗನಿಗ ಕುತ್ತಿಗಿ ಒತ್ತಿ
ಖಲಾಸ ಮಾಡ್ರಿ ಏನ ಆಗದ ಆಗತದ್ ಏನಾದರೂ ಕೇಸ್ ಮಾಡಿದರೆ ನಾವು ಅಟ್ರಾಸಿಟಿ ಕೇಸ್ ಮಾಡಮ್ ಅಂತ ಜೀವದ
ಬೆದರಿಕೆ ಹಾಕುತ್ತಾ ವಿಜಯಕುಮಾರ ಇತನು ನನಗೆ ಈ ಮಗ ಹಿಂಗಾದರ ಹಫ್ತಾ ಕೊಡಲ್ಲ ಇವನಿಗೆ ಖಲಾಸ
ಮಾಡಮ್ ಅಂತ ಅನ್ನುತ್ತಾ ನನ್ನ ಕುತ್ತಿಗೆಯನ್ನು ಜೋರಿನಿಂದ ಹಿಸುಕ ತೊಡಗಿದನು. ಟಿ. ಜಾನ ಇತನು
ತನ್ನ ಕೈಯಲ್ಲಿದ್ದ ಚಾಕುವಿನಿಂದ ನನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ನನ್ನ ಹೊಟ್ಟೆಗೆ ತಿವಿಯಲು
ಬಂದಿದ್ದು ಆಗ ನಾನು ನನ್ನ ಎಡಗೈ ನಡುವೆ ತಂದಿದ್ದರಿಂದ ಆ ಏಟು ಮೊಳಕೈಗೆ ಹತ್ತಿ
ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಫರತಾಬಾದ
ಠಾಣೆ : ಶ್ರೀ ವಿಜಯಕುಮಾರ
ತಂದೆ ಶಂಕರ ಹಡಪದ ಸಾ:ಕವಲಗಾ(ಬಿ) ಹಾ:ವ:ವರದಾ ನಗರ ಗುಲಬರ್ಗಾ ರವರು ಗುಲಬರ್ಗಾದ ವರದಾ ನಗರದಲ್ಲಿ
ಮನೆ ಮಾಡಿಕೊಂಡಿದ್ದು, ನಮ್ಮೂರಾದ ಕವಲಗಾ(ಬಿ) ಗ್ರಾಮಕ್ಕೆ ಆಗಾಗ ಹೋಗುವದು
ಬರುವದು ಮಾಡುತ್ತೆನೆ. ನಾನು 8 ದಿನಗಳ ಹಿಂದೆ ಕವಲಗಾ(ಬಿ) ಗ್ರಾಮಕ್ಕೆ ಬಂದು ಇದ್ದಿರುತ್ತೆನೆ.
ನಾನು ನಮ್ಮ ಮನೆಯ ಅಡಚಣೆ ಸಲುವಾಗಿ ನನಗೆ ಪರಿಚಯದವನಾದ ಶಂಕರ ತುಪ್ಪಾ(ಬಿರಾದಾರ) ಸಾ:ಬಿದ್ದಾಪುರ
ಕಾಲೋನಿ ಗುಲಬರ್ಗಾ ಇವನ ಹತ್ತಿರ ದಿನಾಂಕ: 9-09-2013 ರಂದು 50 ಸಾವಿರ ರೂ,ಗಳನ್ನು 10% ರಂತೆ ವಾರದ
ಬಡ್ಡಿಗೆ ಹಣವನ್ನು ತೆಗೆದುಕೊಂಡಿರುತ್ತೆನೆ. ಆ ಹಣದ ಬಡ್ಡಿ ವಾರಾ ವಾರಾ ಕೊಟ್ಟಿರುತ್ತೆನೆ. ನನಗೆ
1 ತಿಂಗಳಿಂದ ಹಣದ ಸಮಸ್ಯೆ ಹೆಚ್ಚಾಗಿದ್ದರಿಂದ ಶಂಕರನ ಬಡ್ಡಿಯನ್ನು ಕೊಟ್ಟಿರುವದಿಲ್ಲ. ಆದರೂ
ಅವನಿಗೆ ನಾನು ನಮ್ಮ ಹೊಲವನ್ನು ಮಾರಾಟ ಮಾಡಿದ ನಂತರ ಕೊಡುತ್ತೆನೆ ಅಂತಾ ಹೇಳಿರುತ್ತೆನೆ. ನನಗೆ 2
ದಿನಗಳ ಹಿಂದೆ ಶಂಕರನು ಫೊನ್ ಮಾಡಿ ನೀನು 2 ದಿನದಲ್ಲಿ ನಂಗ ನನ್ನ 50 ಸಾವಿರ
ರೊಕ್ಕ ಕೊಡಲಿಲ್ಲಂದ್ರ ನೀನು ಪರೇಶನ್ ಆಗುತ್ತಿ ಅಂದು ಅಂಜಿಸಿರುತ್ತಾನೆ. ದಿನಾಂಕ:24-04-2014
ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಕವಲಗಾ(ಬಿ) ಊರಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ಶಂಕರ
ತುಪ್ಪಾ ಇವನು ಇಂಡಿಕಾ ಕಾರ ನಂ. ಕೆಎ 32 ಎಮ್-6289 ನ್ನು ತೊಗೊಂಡು ನಮ್ಮ
ಮನೆಗೆ ಬಂದು, ನಂಗೆ ನನ್ನ ರೊಕ್ಕ ಕೊಡುವದು ಏನು ಮಾಡಿದಿ ಎಂದು ಕೇಳಿದಾಗ
ನಾನು ನಮ್ಮ ಮನೆಯಲ್ಲಿ ನಮ್ಮ ಬಾಬಾ ಇದ್ದಾರೆ ಗೊತ್ತಾದರ ಬೈತಾರ ನನ್ನ ಸಮಸ್ಯೆ ಹೇಳ್ತಿನಿ ಬಾ
ಎಂದು ನಮ್ಮ ಮನೆಯ ಹಿಂದೆ ದೊಡ್ಯಾಗ ಕರಕೊಂಡು ಹೋದಾಗ ಶಂಕರನು ನಿಂದು ನಂಗ ಬೇಕಾಗಿಲ್ಲ, ನನ್ನ
ರೊಕ್ಕ ಕೊಡು ಎಂದು ಕೇಳಿದಾಗ, ಇಲ್ಲ 15 ದಿನ ಆಗಲ್ಲ, ನಮ್ಮ ಹೊಲ ಮಾರಿದ ಮೇಲೆ
ಕೊಡುತಿನಿ ಎಂದು ಹೇಳಿರುತ್ತೆನೆ, ಇಲ್ಲ ನೀ ಗುಲಬರ್ಗಾಕ್ಕೆ ನಡಿ ಅಂದಾಗ ಇಲ್ಲ ನಾ ಬರಲ್ಲ ಎಂದು ಹೇಳಿರುತ್ತೆನೆ. ಹ್ಯಾಂಗ
ಬರಲ್ಲ ಮಗನೆ ಎಳೆಕೊಂಡು ತೊಗೊಂಡು ಅವಾಚ್ಯ ಶಬ್ದಗಳಿಂದ ಬೈತ್ತಿದ್ದಾಗ ನೋಡು
ಸುಮ್ನೆ ಇಲ್ಲ ಅವಾಜ ಮಾಡಬೇಡ ನಮ್ಮ ಬಾಬಾ ಬೈತಾನ ಅಂತಾ ಹೇಳುತ್ತಿದ್ದಾಗ ಶಂಕರನು ಅಲ್ಲೆ
ಬಿದ್ದಿದ್ದ ಗಳೆ ಹೊಡೆಯುವ ದಿಂಡಿನ ಇಸಿನ ಮುರಿದ ಕಟ್ಟಿಗೆಯ ತುಕಡಿಯನ್ನು ತೊಗೊಂಡು ನನ್ನ ರೊಕ್ಕ
ತೊಗೊಂಡು ನಂಗೆ ಎದರು ಮಾತಾಡ್ತಿ ರಂಡಿ ಮಗನೆ ಅಂತಾ ಬೈದು ಕಟ್ಟಿಗೆಯಿಂದ ನನಗೆ ಎಡಗಾಲ ಮೊಳಕಾಲಿಗೆ
ಹೊಡೆದಾಗ ನಾ ಕೆಳಗೆ ಬಿದ್ದಿರುತ್ತೆನೆ. ನನಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ
ಠಾಣೆ : ಶ್ರೀ. ವಿಜಯಕುಮಾರ ತಂದೆ ನರಸಪ್ಪ ಆಡಕಿ ಸಾ:ಬಸವನಗರ, ಸೇಡಂ ಇವರು ದಿನಾಂಕ:27-04-2014 ರಂದು
ಸಾಯಂಕಾಲ 07-30 ಕ್ಕೆ ಬಸ್ ನಿಲ್ದಾಣ ಎದುರುಗಡೆ ಇರುವ ಸವೆರಾ ಹೋಟಲ್ ಪಕ್ಕದಲ್ಲಿ ನನ್ನ
ದ್ವೀಚಕ್ರ ವಾಹನ ನಿಲ್ಲಿಸಿ ನಾನು ಚಹಾ ಕುಡಿಯಲು ಪಕ್ಕದ ಹೊಟಲಗೆ ಹೋಗಿ ಚಹಾ ಕುಡಿದು ಮರಳಿ ಹೊರಗೆ
ಬರುವಾಗ ನನ್ನ ದ್ವೀಚಕ್ರ ವಾಹನವನ್ನು ಸವೆರಾ ಹೋಟಲಿನ ಮಾಲಿಕನ ಮಗನಾದ ಬಾಬಾ ತಂದೆ ಹುಸೇನಸಾಬ,
ನನ್ನ ದ್ವೀಚಕ್ರ ವಾಹನವನ್ನು ತೆಗೆಯುತ್ತಿದ್ದ ಸಮಯದಲ್ಲಿ ನಾನು ನೋಡಿ ನನ್ನ ಗಾಡಿಯನ್ನು ಏಕೆ
ತೆಗೆತುತ್ತಿರಿ ಎಂದು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹೊಟಲನಿಂದ ತನ್ನ
ಇನ್ನೂಳಿದ ಮಕ್ಕಳಾದ 1] ಯೂಸೂಫ್ ತಂದೆ ಹುಸೇನಸಾಬ 2] ಮಿಯೀಜ್ ತಂದೆ ಹುಸೇನಸಾಬ 3] ಇದ್ರೀಜ್
ತಂದೆ ಹುಸೇನಸಾಬ ಹಾಗೂ ಇನ್ನೂ ‘3’ ಜನ ಮಕ್ಕಳು ನನ್ನ ಮೇಲೆ ಹಲ್ಲೆ ಮಾಡಿ ಜೀವದ ಬೆದರಿಕೆ
ಹಾಕಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ನೌಸೀನ್ ಫಾತೀಮಾ ಗಂಡ ಶಾಬೀರ ಪಟೇಲ್ ಶೇಖ ಸಾ:ಎಕ್ಬಾಲ್
ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾ .ರವರ ಮದುವೆಯು ದಿನಾಂಕ 24.01.2014 ರಂದು ಮುಸ್ಲಿಂ
ಸಂಪ್ರದಾಯದಂತೆ ಶಾಬೀರ ಪಟೇಲ ಇತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಒಂದು ಪಲ್ಸರ ಗಾಡಿ,
1 ತೊಲೆ ಬಂಗಾರ, 50 ಸಾವಿರ ರೂಪಾಯಿ ನಗದು ಹಣ ಮತ್ತು ನನಗೆ 3 1/2 ತೊಲೆ ಬಂಗಾರದ ಒಡವೆ ಹಾಗೂ
ಗೃಹ ಉಪಯೋಗಿ ಸಾಮಾನುಗಳು ಕೊಟ್ಟು ಸುಮಾರು 8 ಲಕ್ಷ ರೂ ಖರ್ಚು ಮಾಡಿದ್ದು ಇರುತ್ತದೆ. ಮದುವೆ ಆದ
5 ದಿವಸದಲ್ಲಿಯೇ ನನ್ನ ಗಂಡ ಮತ್ತೆ 1 ಲಕ್ಷ ರೂ ವರದಕ್ಷಿಣೆ ಹಣ ತವರು ಮನೆಯಿಂದ ತರುವಂತೆ ನನಗೆ
ಹೊಡೆಬಡೆ ಮಾಡಿರುತ್ತಾನೆ. ನನ್ನ ಅತ್ತೆ ಮಾವ ನಾದಿನಿಯರು ಸಹ ನನ್ನ ಗಂಡನು ಕೇಳಿರುವ 1 ಲಕ್ಷ ರೂ
ತರಬೇಕು ಅಂತಾ ಒತ್ತಡ ಹೇರಲಾರಂಬಿಸಿದರು. ನಮ್ಮ ತಂದೆ ತಾಯಿಯವರು ಜುಮ್ಮಾ ಕಾರ್ಯಕ್ರಮಕ್ಕೆ ನನಗೆ
ಮತ್ತು ನನ್ನ ಗಂಡನಿಗೆ ಕರೆದಾಗ 1 ಲಕ್ಷ ರೂ ಕೊಟ್ಟರೆ ಮಾತ್ರ ಬರುತ್ತೇವೆ ಎಂದು ಹೇಳಿದಾಗ ನಮ್ಮ
ತಂದೆ 1 ತೊಲೆ ಬಂಗಾರದ ಉಂಗುರ ಹಾಕಿರುತ್ತಾರೆ. ಇದಾದ 15 ದಿವಸಗಳ ನಂತರ ಮತ್ತೆ 1 ಲಕ್ಷ ರೂ
ತೆಗೆದುಕೊಂಡು ಬರುವಂತೆ ಮೇಲಿನವರೆಲ್ಲರೂ ಕೂಡಿ ಮತ್ತೆ ಹಿಂಸೆ ಕೊಡಲು ಪ್ರಾರಂಭಿಸಿದರು. ದಿನಾಂಕ
31.03.2014 ರಂದು ರಾತ್ರಿ 10-00 ಗಂಟೆಗೆ ನನ್ನ ಗಂಡ ಶಾಬೀರ ಇತನು 1 ಲಕ್ಷ ರೂ ತರುವಂತೆ ಜಗಳ
ತೆಗೆದು ಬೆಲ್ಟಿನಿಂದ ಹೊಡೆದು ನನ್ನ ಎಲ್ಲಾ ಒಡವೆ ತೆಗೆದುಕೊಂಡು ಮನೆಯಿಂದ ಹೊರಗೆ
ಹಾಕಿರುತ್ತಾರೆ. ನನ್ನ ಹಿಂದೆಯೇ ನನ್ನ ಗಂಡ ಶಾಬೀರ, ಮಾವ ಮಹಿಬೂಬ ಪಟೇಲ ಮತ್ತು ಪಾಶಾ ಮಿಯಾ
ಎಲ್ಲರೂ ಕೂಡಿ 1 ಲಕ್ಷ ರೂ ಕೊಟ್ಟು ನಮ್ಮ ಮನೆಗೆ ಕಳುಹಿಸಿ ಇಲ್ಲವಾದರೆ ಬೇಡ ಎಂದು ಹೇಳಿ ಹೋದರು.
ನನ್ನ ಗಂಡ ಮದುವೆಯಾದಾ ಗಿನಿಂದಲೂ ಬಹಳಷ್ಟು ಹೊಡೆ ಬಡೆ ಮಾಡಿ ಬೆಲ್ಟ ಕೊರಳಿಗೆ ಹಾಕಿ ಖಲಾಸ ಮಾಡಲು
ಪ್ರಯತ್ನಿಸಿರುತ್ತಾನೆ. ಕಾರಣ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ 1 ಲಕ್ಷ ರೂ ಹಣ ತರುವಂತೆ
ಪೀಡಿಸಿ ಬೆಲ್ಟಿನಿಂದ ಹೊಡೆಬಡೆ ಮಾಡಿ ಖಲಾಸ ಮಾಡಿದ ನನ್ನ ಗಂಡ ಹಾಗೂ 1)ಶೇಖ ಶಾಬೀರ್ ಪಾಟೀಲ್
2)ಶೇಖ ಮಹಿಬೂಬ ಪಟೇಲ್ 3)ಫಜೀಲತ್ ಬೇಗಂ 4) ಅಜ್ರಾ 5)ಶೇಖ ತಾಹೇರ್ 6)ಬುಸೀರಾ ಗಂಡ ಪಾಶುಮಿಯ್ಯಾ
7) ಪಾಶಾಮಿಯ್ಯಾ ತಂದೆ ಯಾಸೀನ ಸಾಬ್ ಎಲ್ಲರೂ ಸಾ: ಯಾಸೀನ ಕ್ವಾರ್ಟಸ್ ಶಹಾ ಜಿಲಾನಿ ದರ್ಗಾ
ಹಿಂದುಗಡೆ ಎಮ್.ಎಸ್.ಕೆ ಮಿಲ್ ಗುಲಬರ್ಗಾ. ಇವರುಗಳ ಮೇಲೆ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment