ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಶ್ರೀಶೈಲ್ ತಂದೆ ಶಾಂತಪ್ಪಾ ಬಾಪೂರೆ ಸಾ; ಕಾಳಮಂದರ್ಗಿ ಇವರಿಗೆ ದಿನಾಂಕ: 01-04-2014 ರಂದು ರಾತ್ರಿ 10-00 ಗಂಟೆ ಸುಮಾರಿಗೆ,ನನ್ನ ತಾಯಿ ತಾರಾಬಾಯಿ ಇವಳಿಗೆ
ಆರಾಮವಿರದ ಕಾರಣ ವೈದ್ಯಕೀಯ ಚಿಕಿತ್ಸೆ ಮಾಡಿಸುವದಕ್ಕಾಗಿ ನಮ್ಮೂರಲ್ಲಿರುವ ಡಾಕ್ಟರನ್ನು ಕರೆಯಲು
ನಮ್ಮ ಚಿಕ್ಕಪ್ಪಾ ಸಿದ್ರಾಮ ಇವರ ಮನೆ ಮುಂದಿನ ರಸ್ತೆ ಮೇಲೆ ಹೋಗುತ್ತಿದ್ದಾಗ, ನನ್ನ ಚಿಕ್ಕಪ್ಪಾ ಸಿದ್ರಾಮ,ಚಿಕ್ಕಮ್ಮಾ ಗುರುಬಾಯಿ ಮತ್ತು
ನಮ್ಮೂರಿನ ಗುರಪ್ಪಾ ತಂದೆ ಬಸವಣ್ಣಪ್ಪಾ ಕಾಶೆಟ್ಟಿ ಎಲ್ಲರು ತಮ್ಮ ಮನೆಯ ಮುಂದಿನ ಕಟ್ಟೆ ಮೇಲೆ
ಕುಳಿತುಕೊಂಡು ನನಗೆ ನೋಡಿ, ಈ ಭೋಸಡಿ ಮಕ್ಕಳಿಗೆ ಮೊನ್ನೆ
ಕೇಸ ಮಾಡಿ, ಜೇಲು ಕಳುಹಿಸಿದರು. ಇನ್ನೂ ಬುದ್ದಿ ಬಂದಿಲ್ಲಾ ಅಂತಾ ಅವಾಚ್ಯವಾಗಿ
ಬೈಯುತ್ತಿದ್ದಾಗ ನಾನು, ಯಾಕೆ ಸುಮ್ಮನೆ ಅವಾಚ್ಯವಾಗಿ ಬೈಯುತ್ತಿದ್ದಿರಿ ಅಂತಾ ಅನ್ನುತ್ತಾ
ಹೋಗುತ್ತಿದ್ದಾಗ ಗುರಪ್ಪಾ ಈತನು ಅವಾಚ್ಯವಾಗಿ ಬೈಯುತ್ತಾ ಬಂದು ನನಗೆ ಮುಂದೆ ಹೋಗದಂತೆ
ಆಕ್ರಮವಾಗಿ ತಡೆದು ನಿಲ್ಲಿಸಿ ಒತ್ತಿ ಹಿಡಿದನು. ಸಿದ್ರಾಮನು ಈ ಭೋಸಡಿ ಮಗನಿಗೆ ಬಹಳ ಸೊಕ್ಕು ಬಂದಿದೆ
ಅಂತಾ ಬೈಯುತ್ತಾ ಅಲ್ಲೇ ಬಿದ್ದಿರುವ ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ಗುಪ್ತಗಾಯ
ಪಡಿಸಿದನು. ಆಗ ನಾನು ಚಿರಾಡುತ್ತಿರುವಾಗ ಸಪ್ಪಳ ಕೇಳಿ ಮನೆಯಲ್ಲಿದ್ದ ನನ್ನ ತಮ್ಮ ಮಲ್ಲಪ್ಪಾ, ತಾಯಿ ತಾರಾಬಾಯಿ ಇವರು ಜಗಳ ಬಿಡಿಸಲು ಬಂದಾಗ ಸಿದ್ರಾಮನು ಮಲ್ಲಪ್ಪಾನಿಗೆ ರಂಡಿ ಮಗನೇ ನೀನು
ಈ ಜಗಳದಲ್ಲಿ ಬಂದಿದ್ದಿ ಅಂತಾ ಒತ್ತಿಯಾಗಿ ಹಿಡಿದು ನೆಲದ ಮೇಲೆ ಕೆಡುವಿದಾಗ ಗುರಪ್ಪಾ ಈತನು
ಕಾಲಿನಿಂದ ಟೊಂಕಕ್ಕೆ ಒದ್ದು ಗುಪ್ತಗಾಯ ಪಡಿಸಿದನು. ಸಿದ್ರಾಮನು ಮಲ್ಲಪ್ಪನ ತೊಡ್ಡು (ವೃಷಣ)
ಹಿಡಿದು ಜಗ್ಗಿ ಗುಪ್ತಗಾಯ ಪಡಿಸಿದನು. ಗುರುಬಾಯಿ ಇವಳು ಈ ರಂಡಿದಿಂದೆ ಜಗಳ ಬಂದಿದೆ. ಅಂತಾ
ಅನ್ನುತ್ತಾ ತಾಯಿ ತಾರಾಬಾಯಿ ಇವಳ ಕೂದಲು ಹಿಡಿದು ಜಗ್ಗಾಡಿ, ನೋಕಿಸಿಕೊಟ್ಟಿದ್ದರಿಂದ ನನ್ನ
ತಾಯಿಯ ಹಣೆ ಗೋಡೆಗೆ ಬಡಿದು ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಇಂದುಬಾಯಿ ಗಂಡ ದತ್ತಪ್ಪಾ ನಾಯಿಕೋಡಿ ಸಾ:ಹುಣಸಿಹಡಗಿಲ
ತಾ:ಜಿ: ಗುಲಬರ್ಗಾ ರವರಿಗೆ ಒಂದು ವಾರದ ಹಿಂದೆ ನಮ್ಮೂರಿನ
ನಮ್ಮ ಓಣಿಯ ಅನಸುಬಾಯಿ ಆದನಕರ ಮತ್ತು ಅವರ ಸಂಬಂಧಿಕರ ಹಾಗು ನನ್ನ ಮತ್ತು ನಮ್ಮ ಮನೆಯವರ ನಡುವೆ
ಮನೆಯ ಜಾಗದ ಸಲುವಾಗಿ ಜಗಳವಾಗಿರುತ್ತದೆ ಅದೆ ವೈಮನಸ್ಸು ಇಟ್ಟುಕೊಂಡು ನಿನ್ನೆ
ದಿನಾಂಕ 01-04-2014 ರಂದು ಸಾಯಂಕಾಲ 7 ಗಂಟೆಗೆ ನಾನು ಸಂಡಾಸಕ್ಕೆ ಅನಸುಬಾಯಿ
ಆದನಕರ ಇವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲಿಂದ ಹೊಗುತ್ತಿರುವಾಗ, ಅನಸುಬಾಯಿ ಇವಳು ಬಂದು ನನ್ನನ್ನು ನೋಡಿ ಏ ರಂಡಿ ಇಂದ್ರಿ
ನಮ್ಮ ಮನೆಯ ಮುಂದಿಂದ್ದು ಯಾಕ ಸಂಡಾಸಕ್ಕೆ ಹೊಗುತ್ತಿ ನಿನಗ ಬ್ಯಾರೆ ದಾರಿ ಇಲ್ಲ ರಂಡಿ ಅಂತಾ
ವಿನಾ ಕಾರಣ ನನಗೆ ಅವಾಚ್ಯವಾಗಿ ಬೈಯುತ್ತಿರುವದನ್ನು ನೋಡಿ ನಾನು ಅವಳಿಗೆ ಯಾಕ ಮೈಯಂದು ಸೊಕ್ಕೆನು
ಸುಮ್ಮನೆ ಕಾಲ ಕೆದರಿ ಜಗಳ ತೆಗೆಯುತ್ತಿದ್ದಿ ಅಂತಾ ಕೇಳಿದಕ್ಕೆ ಓಡಿ ಬಂದು ಮುಂದೆ
ಹೊಗುತ್ತಿದ್ದ ನನಗೆ ತಡೆದು ನಿಲ್ಲಿಸಿ ಸೀರೆ ಹಿಡಿದು ಎಳೆದಾಡಿ ಕೈಯಿಂದ ನನಗೆ ಹೆಡಕಿನ ಮೇಲೆ
ಹೊಡೆಯುತ್ತಿರುವಾಗ ನನ್ನ ಕೊರಳಲ್ಲಿನ ಬಂಗಾರದ ತಾಳಿ ಕಡಿದು ಬಿದ್ದಿರುತ್ತದೆ. ಆಗ ನಾನು
ಚೀರಾಡುತ್ತಿರುವ ಗೌಳಿ ಕೇಳಿ ನನ್ನ ಗಂಡ ದತ್ತಪ್ಪಾ ಮತ್ತು ನನ್ನ ಮಗ ಅನಿಲಕುಮಾರ ಇವರು ಓಡಿ
ಬರುತ್ತಿದ್ದಂತೆ ಅನಸುಬಾಯಿ ಇವಳ ಗಂಡ ರುಕ್ಕಪ್ಪ, ಅವಳ ಮಕ್ಕಳಾದ ಸೋಮಲಿಂಗ, ವಿನೋದ ಅವರ ಸಂಬಂದಿ ಚಿದಾನಂದ ಇವರೆಲ್ಲರೂ ಬಂದು
ಅವರಲ್ಲಿ ನನ್ನ ಗಂಡನಿಗೆ ರುಕ್ಕಪ್ಪ ಇತನು ಅವಾಚ್ಯವಾಗಿ ಬೈದು ಕಾಲಿನಿಂದ ನನ್ನ ಗಂಡನ ಎಡಗಾಲಿನ
ಮೊಳಕಾಲಿನ ಮೇಲೆ ಜಾಡಿಸಿ ಒದ್ದಿರುತ್ತಾನೆ. ನನ್ನ ಮಗ ಅನಿಲನಿಗೆ, ಸೊಮಲಿಂಗ ಇತನು ಹಿಡಿದಿದ್ದು, ವಿನೋದ ಇತನು ಹೊಡಿ ರಂಡಿ ಮಗನಿಗೆ ಅಂತಾ
ಬೈದು ಕೈಯಿಂದ ಬೆನ್ನ ಮೇಲೆ ಹೊಡೆದಿರುತ್ತಾನೆ, ಚಿದಾನಂದ ಇತನು ರಂಡಿ ಮಕ್ಕಳಿಗೆ ಹೊಡಿರ್ರಿ
ಖಲಾಸ ಮಾಡ್ರಿ ಅಂತಾ ಬೈದು ಜೀವದ ಭಯ ಹಾಕಿರುತ್ತಾರೆಡ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಗುಂಡಪ್ಪಾ ತಂದೆ ಬಸಪ್ಪಾ ಮೇಲಕೇರಿ ಸಾ; ಅಂತಪನಾಳ ಇವರು ದಿನಾಂಕ 02-04-2014 ರಂದು ಕಲ್ಮೂಡ ಗ್ರಾಮದಲ್ಲಿ , ತಮ್ಮ ಸಂಭಂದಿಕರನ್ನು ಭೇಟ್ಟಿ
ಮಾಡಿಕೊಂಡು ಬರುವ ಕುರಿತು ಅಂತಪನಾಳ ಗ್ರಾಮದಿಂದ ಕಮಲಾಪೂರ –ಕಲ್ಮೂಡ ರಸ್ತೆ ಅಂತಪನಾಳ
ಕ್ರಾಸಿನ ವರೆಗೆ ನಡೆದುಕೊಂಡು ಬಂದು , ಮುಂದೆ ಕ್ರಾಸ ಹತ್ತಿರ ಬಂದು ನಿಂತ್ತುಕೊಂಡಿದ್ದಾಗ , ಕಮಲಾಪೂರ ಕಡೆಯಿಂದ ನಮ್ಮ
ಪರಿಚಯವರಾದ ಶ್ರೀ ವೀರಶೇಟ್ಟೆಪ್ಪಾ ತಂದೆ ರಂಗಣ್ಣ ಪಾಟೀಲ್ ಸಾ;ಸೊಂತ ಇವರು ತಮ್ಮ ಮೋ.ಸೈಕಲ್
ಚಲಾಯಿಸಿಕೊಂಡು ಬಂದು ನಾನು ನಿಂತ್ತಿದನ್ನು ನೋಡಿ , ನಿಲ್ಲಿಸಿ ನನಗೆ ಎಲ್ಲಿಗೆ
ಹೋಗುತ್ತಿರುವಿ ಅಂತ ಕೇಳಿದ್ದು, ಆಗ ನಾನು ಕಲ್ಮೂಡಕ್ಕೆ
ಹೋಗುತ್ತಿದ್ದೆನೆ ಅಂತ ಹೇಳಿದಕ್ಕೆ , ನಾನು ಸೊಂತಕ್ಕೆ ಹೋಗುತ್ತಿದ್ದೆನೆ, ಕಲ್ಮೂಡದಲ್ಲಿ ಬಿಡುತ್ತೇನೆ ನಡೆ
ಅಂತ ಕರೆದಿದಕ್ಕೆ ನಾನು ಅವರ ಮೋ.ಸೈಕಲ್ ಮೇಲೆ ಕುಳಿತುಕೊಂಡೆನು. ಮೋ.ಸೈಕಲನ್ನು ವೀರಶೇಟ್ಟೆಪ್ಪಾ
ಪಾಟೀಲ್ ಇವರೆ ಚಲಾಯಿಸುತ್ತಿದ್ದರು, ಕಮಲಾಪೂರ –ಕಲ್ಮೂಡ ರಸ್ತೆಯ ಅಂತಪನಾಳ ದೋಡ್ಡ ಹಳ್ಳದ ಇಳುಕಿನಲ್ಲಿ
ವೀರಶೆಟ್ಟೆಪ್ಪಾ ಪಾಟೀಲ್ ಇವರು ತಮ್ಮ ಮೋ.ಸೈಕಲನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿ
ದೋಡ್ಡ ಹಳ್ಳದ ಸೇತುವೆ ಹತ್ತಿರ ರಸ್ತೆಯಲ್ಲಿ ಮೋ.ಸೈಕಲ ಒಮ್ಮಲೆ ಮುಂದೆ ಇದ್ದ ತಂಗು ತಪ್ಪಿಸಲು
ಹೋಗಿ ಮೋ. ಸೈಕಲನ್ನು ಸ್ಕೀಡ್ ಮಾಡಿ ಅಫಘಾತ ಪಡಿಸಿದರು, ಆಗಾ ನಾನು ಮೋ.ಸೈಕಲ್ ಸಮೇತ
ರಸ್ತೆಯ ಮೇಲೆ ಬಿದ್ದೆವು, ನನ್ನ ಬಲಗೈ ಬುಜದ ಹತ್ತಿರ ಎದೆಗೆ ಗುಪ್ತಗಾಯವಾಗಿ , ಬಲ ಭುಜ ನೋಯಿ ತಿತ್ತು, ವೀರಶೇಟ್ಟಿ ಇವರಿಗೆ ಮೈಕೈಗಳಿಗೆ ತರಚಿದ ಗಾಯಗಳಾಗಿದ್ದವು, ನಂತರ ಅಪಘಾತ ಪಡಿಸಿದ ಮೋ.ಸೈಕಲ್
ನಂ. ನೋಡಲಾಗಿ ಕೆಎ-32-ಎಸ್-8519 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಭೀಮು ತಂದೆ ಚಂದು ಚವ್ಹಾಣ ಸಾ: ಭರತನಗರ ತಾಂಡಾ
ಗುಲಬರ್ಗಾ ರವರು ದಿನಾಂಕ 01-04-2014 ರಂದು ಸಾಯಂಕಾಲ 5-40 ಗಂಟೆಗೆ ಫಿರ್ಯಾದಿ ಮತ್ತು ಆತನ
ಮೊಮ್ಮಗನಾದ ಲಕನ ವಯಾ: 6 ವರ್ಷ ಇಬ್ಬರು ಕೂಡಿಕೊಂಡು ಹಿರೊ ಹೋಂಡಾ ಶೂ ರೂಮದಿಂದ
ಎಮ್.ಆರ್.ಎಮ್.ಸಿ ಕಾಲೇಜ ರೋಡಿನಲ್ಲಿ ಬರುವ ದೇವಿಂದ್ರ ಗಾಯಕವಾಡ ಇವರ ಮನೆಯ ಎದುರಿನ ರೋಡ ಮೇಲೆ
ನಡೆದುಕೊಂಡು ಹೋಗುತ್ತಿರುವಾಗ ಹಿರೊಹೊಂಡಾ ಶೂ ರೂಮ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಸ್-7904 ರ ಸವರಾನದ ಗಿರೀಶ ಇತನು ತನ್ನ ಮೋಟಾರ
ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೊಮ್ಮಗನಿಗೆ ಡಿಕ್ಕಿ
ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ
ಮಂಜುನಾಥ ತಂದೆ ಚಿಕ್ಕಯ್ಯ ಸಾ|| ಮನೆ ನಂ.ಟಿ-2 4ನೇ ಮಹಡಿ ಪ್ಯಾರಡೈಸ ಅಪಾರ್ಟಮೆಂಟ ವೆಂಕಟೇಶನಗರ
ಗುಲಬರ್ಗಾ ಇವರುಗಳ ದಿನಾಂಕ. 26.03.2014 ರಂದು ಬೆಳಿಗ್ಗೆ 6.00 ಗಂಟೆಯಿಂದ 9.00 ಗಂಟೆಯ
ಅವಧಿಯಲ್ಲಿ ತಮ್ಮ ಮಾಡರ್ನ ಗ್ಯಾಸ ಡಿಸ್ಟ್ರಬೂಟನಲ್ಲಿ ಕೆಲಸ ಮಾಡುವ ಮಂಜುನಾಥ ತಂದೆ ನಾಗಪ್ಪ ಅಗಡಿ
ಈತನು ಮನೆಯಲ್ಲಿಟ್ಟಿದ್ದ 1,30,500/- ರೂಪಾಯಿ ಕಳ್ಳತನ ಮಾಡಿಕೊಂಡು
ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment