¥ÀwæPÁ ¥ÀæPÀluÉ
ಗುಲಬರ್ಗಾ ನಗರದಲ್ಲಿ ಮೇಲಿಂದ ಮೇಲೆ ಘೋರ ಪ್ರಕರಣಗಳಿ ವರದಿಯಾಗುತ್ತಿರುವ ಕಾರಣ ಮತ್ತು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಶ್ರೀ ಸವಿಶಣಕರ ನಾಯಕ ಡಿ.ವಾಯ್.ಎಸ್.ಸಿ ಎ ಉಪ-ವಿಭಾಗ ಗುಲಬರ್ಗಾ, ಶ್ರೀಮತಿ ವಿಜಯಲಕ್ಷ್ಮಿ ಪಿ.ಐ ಅಶೋಕ ನಗರ ಠಾಣೆ ರವರು ಅಶೋಕ ನಗರ ಠಾಣೆ ವ್ಯಾಪ್ತಿಯ ಒಟ್ಟು 20 ಜನ ರೌಡಿ ಜನರನ್ನು ದಸ್ತಗೀರ ಮಾಡಿ ತಾಲೂಕಾ ದಂಡಾಧಿಕಾರಿಯವರ ಮುಂದೆ ಸನ್ಡತೆಗಾಗಿ ಬಾಂಡ ಓವರ ಮಾಡಿಸಲಾಗಿದೆ.
ಅಪಘಾತ
ಪ್ರಕರಣ:
ಮಾದನ
ಹಿಪ್ಪರತಾ ಠಾಣೆ: ದಿ: 25-04-2014 ರಂದು ಶ್ರೀ ನಾಗೇಶ ತಂ. ಹಣಮಂತರಾಯ ಕಲಶೆಟ್ಟಿ ಸಾ:
ಬೋಳೆವಾಡ ರವರು ದೂರು ಸಲ್ಲಿಸಿದ್ದೇನೆಂದರೆ ದಿ: 24-04-2014 ರಂದು ತಾತ್ರಿ 09-30 ಗಂಟೆ
ಸುಮಾರಿಗೆ ಹೊರೋಳ್ಳಿ ದೇಶಮುಖ ರವರ ಹೊಲದ ಹತ್ತಿರ ಲಾರಿ ನಂ ಕೆಎ25/ಸಿ492 ನೇದ್ದರ ಚಾಲಕ ಆತ್ಮರಾಮ
ತಂ ಮಲ್ಲಿಕಾರ್ಜುನ ಬೆಳಮಗಿ ತನ್ನ ಲಾರಿಯನ್ನು ಅತಿವೇಗ ಮತ್ತು ನಿಶ್ಕಾಳಜಿತನದಿಂದ ಚಲಾಯಿಸಿ ನನ್ನ
ಸಹೋದರ ಅನಿಲ @ ಅಣ್ಣಪ್ಪನಿಗೆ ಅಪಘಾತಪಡಿಸಿದ್ದು. ನನ್ನ ಸಹೋದರನಿಗೆ ಗುಲಬರ್ಗಾದ ಯುನೈಟೆಡ್
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸಾಗಿಸುವಾಗ
ಮಾರ್ಗ ಮಧ್ಯ ಮೃತ ಪಟ್ಟ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂ ಮಾದನ ಹಿಪ್ಪರಗಾ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ;
ಫರಹತಾಬಾದ ಠಾಣೆ: ದಿನಾಂಕ: 27/04/2014 ರಂದು ಶ್ರೀ ಶರಣಪ್ಪಾ ತಂದೆ ಭೀಮಣ್ಣಾ ಪವಾರ ಸಾ|| ಫರಹತಾಬಾದ ರವರು ಶ್ರೀ
ಶರಣಬಸವೇಶ್ವ ಜಾತ್ರಾ ಸ್ಥಳದಲ್ಲಿ ಶರಣಪ್ಪಾ ತಂದೆ ಮರೇಪ್ಪಾ ಹಾಗೂ ಆತನ ಸ್ನೇಹಿತರು ಮತ್ತು ಆತನ
ಚಿಕ್ಕಪ್ಪನಾದ ನಾಗಪ್ಪಾ. ಚಂದ್ರು ಇವರೆಲ್ಲರು ಸೇರಿಕೊಂಡು ಶ್ರೀ ಶರಣಪ್ಪನಿಗೆ ಅವಾಚ್ಯ
ಶಬ್ದಗಳಿಂದ ಜಾತಿ ನಿಂದನೆ ಮಾಡಿದಲ್ಲದೆ ಚಾಕು ತಗೆದುಕೊಂಡು ನನ್ನ ಎರಡು ಕೈಗಳಿಗೆ ಹರಿದು
ಮುಷ್ಟಿಗಾತ್ರಗಳಿಂದ ಹೊಟ್ಟೆಗೆ ಹೋಡೆದು ಜಿವ ಬೆದರಿಕೆ ಹಾಕಿದ್ದು ಅವರಿಂದ ತಪ್ಪಿಸಿಕೊಂಡು ಗುಲಬರ್ಗಾದ
ಸರ್ಕಾರಿ ಆಸ್ಪತ್ರೆ ಬಂದು ಪ್ರಥಮ ಚಿಕಿತ್ಸೆಗಾಗಿ ಸೆರ್ಪಡೆಗೊಂಡು ಉಪಚಾರ ಪಡೆಯುತ್ತಿರುವ ಬಗ್ಗೆ
ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಆಪಾದಿತರ ವಿರುದ್ದ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ: ದಿನಾಂಕ:27/4/2014 ರಂದು ಶ್ರೀ ±ÀgÀt§¸ÀÄì vÀAzÉ ªÀÄgÉ¥Áà ಸಾ:¥sÀgÀºÀvÁ¨ÁzÀ ರವರು ಶರಣಬಸವೇಶ್ವರ ಗುಡಿಯ ಮುಂದೆ ಅಂಗಳದಲ್ಲಿ ನಿಂತು ಕೊಂಡಾಗ ಅದೇ ಗ್ರಾಮದ
1) ಶಂಕರ ತಂದೆ ಭಿಮಣ್ಣ ಪವಾರ
2) ಶರಣಬಸು ತಂದೆ ಭೀಮಣ್ಣ ಪವಾರ ಮತ್ತು ಅವರ ಅಣ್ಣ ತಮ್ಮಕೀಯ 3) ರಂಗಪ್ಪ ಪವಾರ ಇವರೆಲ್ಲರೂ
ಕೂಡಿಕೊಂಡು ಬಂದು ನನಗೆ ವಿನಾ ಕಾರಣವಾಗಿ ನಮ್ಮ ತಂಗಿಗೆ ಚುಡಯಿಸ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು
ಶಂಕರನು ಕೈ ಮುಸ್ಠಿ ಮಾಡಿ ನನಗೆ ಎಡಗಡೆಯ ಕಣ್ಣಿನ ಮೇಲೆ ಹೊಡೆದನು. ಶರಣಬಸು ತನ್ನ ಕೈಯಲ್ಲಿಂದ
ಬ್ಲೇಡಿನಿಂದ ನನ್ನ ಎರಡು ಕೈಗಳ ಮೇಲೆ ಕೊಯ್ದು ರಕ್ತಗಾಯ ಮಾಡಿರುತ್ತಾನೆ. ರಂಗಪ್ಪ ಇತನು ಕಾಲಿನಿಂದ ಒದ್ದಿರುತ್ತಾನೆ. ನಂತರ
ಅಲ್ಲೆ ಇದ್ದ ನಮ್ಮೂರಿನ ಯಲ್ಲಪ್ಪ ಹಾಗರಗಿ, ಬಸವರಾಜ ಕವಲಗಿ ಇವರು ಬಂದು ಜಗಳ
ಬಿಡಿಸಿರುತ್ತಾರೆ. ನಂತರ ನಮ್ಮ ತಂದೆ ಮರೆಪ್ಪ ಮತ್ತು ಯಂಕಪ್ಪ ಬಳವಾಡ ಬಂದು ನನಗೆ ಒಂದು ಖಾಸಗಿ
ವಾಹನದಲ್ಲಿ ಹಾಕಿಕೊಂಡು ಉಪಚಾರಕ್ಕಾಗಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ
ಮಾಡಿರುತ್ತಾರೆ. ಕಾರಣ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಠಾಣೆ: ದಿನಾಂಕ:30/04/2014 ರಂದು ಶ್ರೀ ಹಣಮಂತ ತಂದೆ
ಹುಣಚಪ್ಪಾ ನಾಟಿಕಾರ ಸಾ: ಖಣದಾಳ ಠಾಣೆಗೆ ಹಾಜರಾ ನಮ್ಮೂರಿನ ಶುಬ್ಬಣ್ಣಾ ನಾಟೀಕಾರ ಇವರು 20 ವರ್ಷದಿಂದ ನಮ್ಮ ಮನೆಯಲ್ಲಿ ಬಾಡಿಗೆ ಇದ್ದು. ಸುಬ್ಬಣ್ಣಾ ಮತ್ತು ಅವರ ಅಣ್ಣ ತಮ್ಮಂದಿರಾದ ಮಲ್ಲಿನಾಥ
ಇವರ ನಡುವೆ ಮನೆಯ ಸಲುವಾಗಿ ಮತ್ತು ಹೋಲದಲ್ಲಿ ಕಟ್ಟಿಗೆ ಸುಟ್ಟಿದರ ಸಂಬಂಧ ಆಗಾಗ ಜಗಳ ಆಗುತ್ತಿದ್ದು. ದಿನಾಂಕ: 29/04/2014 ರಂದು ಸುಬ್ಬಣ್ಣನ ತಮ್ಮನಾದ
ಮಲ್ಲಿನಾಥನು ನಮ್ಮ ಮನೆಯಲ್ಲಿ ಬಂದು ಸುಬ್ಬಣ್ಣನೊಂದಿಗೆ ಜಗಳ ಆಡುತ್ತಿದ್ದಾಗ ನಾನು ನಮ್ಮ ಮನೆಯಲ್ಲಿ
ಜಗಳ ಮಾಡಿಕೊಳ್ಳಬೇಡಿ ನಿಮ್ಮಿದು ಏನೆ ಜಗಳ ಇದ್ದರೊ ನಿವು ಹೋರಗೆ ಹೋಗಿ ಜಗಳವಾಡಿ ಎಂದು ಹೇಳಿದ್ದಕ್ಕೆ.
ನಾನು ಪಂಚಾಯತ ಎದುರಗಡೆ ನಿಂತಾಗ ಮಲ್ಲಿನಾಥನು ಕೋಡಲಿ ತಗೆದುಕೊಂಡು ಬಂದು ನನಗೆ ಅವಾಚ್ಯ ಶಬ್ದಗಳಿಂದ
ಬಯ್ಯುತ್ತಾ ನಮ್ಮ ಅಣ್ಣತಮ್ಮರ ಜಗಳದಾಗ ನಿ ಏನು ಹೇಳುತ್ತಿ ಎನ್ನುತ್ತಾ ಕೈಗಳ ಮೇಲೆ ಹೋಡೆದು ರಕ್ತ
ಗಾಯ ಮಾಡಿದ್ದು. ಅವರ ತಮ್ಮನಾದ ಗುರಪ್ಪಾ ಮತ್ತು ಶಿವಪ್ಪಾ ಜಗಳ ಬಿಡಿಸಿರುತ್ತಾರೆ. ಎಂದು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾ ಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
No comments:
Post a Comment