ದರೋಡೆ
ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಸ್ಟೇಷನ
ಬಜಾರ ಠಾಣೆ : ಇತ್ತೀಚಿಗೆ ಗುಲಬರ್ಗಾ ನಗರದಲ್ಲಿ ಕೊಲೆ,ದರೋಡೆ,ಸುಲಿಗೆಗಳು ಹೆಚ್ಚಾಗುತ್ತಿರುವದರಿಂದ
ನಮ್ಮ ಮೇಲಾಧಿಕಾರಿಯವರು ಗುಲಬರ್ಗಾ ನಗರದಲ್ಲಿ ನಡೆದ ಅಪರಾಧಗಳನ್ನು ತಡೆಗಟ್ಟಲು ಹಾಗು
ಆರೋಪಿತರನ್ನು ಪತ್ತೆ ಹಚ್ಚಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ ನಾನು ನಮ್ಮ ರೌಡಿ ನಿಗ್ರಹದಳದ
ಸಿಬ್ಬಂದಿಯವರಾದ ಶಿವಪ್ಪ ಹೆಚ್,ಸಿ,386, ಅಣ್ಣಪ್ಪ ಹೆಚ್.ಸಿ.332, ಶಿವಯೋಗಿ ಹೆಚ್ಸಿ.220, ದೇವಿಂದ್ರಪ್ಪ ಪಿ,ಸಿ 212, ರಾಮುಪವಾರ ಪಿ,ಸಿ 761, ರಫಿಯೋದ್ದಿನ ಪಿ,ಸಿ-11, ಗಜೇಂದ್ರ ಪಿ.ಸಿ 108, ಪ್ರವೀಣ ಪಿ.ಸಿ 907, ಚನ್ನಬಸಪ್ಪಾ
ಎಪಿಸಿ-130 ವಾಹನ ಚಾಲಕ ರವರೊಂದಿಗೆ, ಗುಲಬರ್ಗಾ ನಗರದ ಸ್ಟೇಷನ ಬಜಾರ ಪೊಲೀಸ
ಠಾಣಾ ಹದ್ದಿಯಲ್ಲಿ ದಿನಾಂಕ 10-05-2014 ರಂದು ರಾತ್ರಿ 11.00 ಗಂಟೆ ವೇಳೆಯಲ್ಲಿ
ಪೆಟ್ರೋಲಿಂಗ್ ಮಾಡುತ್ತಿರುವಾಗ ಬೆಳಗಿನ ಜಾವ 2-00 ಗಂಟೆಗೆ ಪಿ.ಡಿ.ಎ ಕಾಲೇಜ ಹತ್ತಿರ ಇರುವಾಗ
ಬಾತ್ಮಿ ಬಂದಿದ್ದೆನೆಂದರೆ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯಲ್ಲಿ ಚಂದ್ರಶೇಖರ ಕ್ರಿಡಾಂಗಣದಿಂದ
ರಾಜಾಪೂರ ಕಡೆಗೆ ಹೋಗುವ ರೋಡಿನ ಪಕ್ಕದಲ್ಲಿರುವ ಖುಲ್ಲಾ ಸ್ಥಳದಲ್ಲಿ ಇರುವ ಗಿಡಗಂಟೆಯಲ್ಲಿ ಕೆಲವು
ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ ಸಿಕ್ಕ
ಮೇರೆಗೆ ನಾನು ಸ್ಟೇಷನ ಬಜಾರ ಠಾಣೆಯ ಪಿಐ ಬಿ.ಬಿ ಭಜಂತ್ರಿ ಮತ್ತು ಅಪರಾಧ ವಿಭಾಗದ ಪಿಎಸ್ಐ ಸುರೇಶ
ಭಾವಿಮನಿ ಅವರ ಸಿಬ್ಬಂದಿ ಬಸವರಾಜ ಪಿಸಿ-612, ಅಶೋಕ ಪಿಸಿ-625, ಶಿವರಾಜ ಪಿಸಿ-277 ಕರೆಯಿಸಿಕೊಂಡು
ಬಾತ್ಮಿಯ ಮಾಹಿತಿಯನ್ನು ಪಿ.ಐ ಸ್ಟೇಷನ ಬಜಾರ ಹಾಗೂ ಎಲ್ಲಾ ಸಿಬ್ಬಂದಿ ಜೊತೆ ಚರ್ಚಿಸಿ ಎಲ್ಲರೂ
ಸೇರಿ ಸರ್ಕಾರಿ ಶಿಕ್ಷಕರ ತರಭೇತಿ ಕಾಲೇಜು ಹತ್ತಿರ ಹೋಗಿ ನಮ್ಮ ವಾಹನಗಳನ್ನು ಅಲ್ಲೇ ನಿಲ್ಲಿಸಿ
ಬಾತ್ಮಿ ಬಂದ ಸ್ಥಳಕ್ಕೆ ಬೆಳಗಿನ ಜಾವ ರಾಜಾಪುರ ಕಡೆಗೆ ಹೋಗುವ ರೋಡಿನ ಜಾಡು ಹಿಡಿದು ಹೋಗಿ ನೋಡಲು
ರೋಡಿನ ಎಡ ಪಕ್ಕದಲ್ಲಿರುವ ಗಿಡ ಗಂಟೆಗಳಲ್ಲಿ ಗುಜು-ಗುಜು ಮಾತನಾಡುವ ಶಬ್ದ ಕೇಳಿಸಿದ್ದು
ಆಗ ನಾವೆಲ್ಲರೂ ಬರುವದನ್ನು ಗಮನಿಸಿ ಓಡರೋ ಓಡರೋ ಅನ್ನುತ್ತಾ ಒಂದೇ ಸವನೆ ಓಡ ತೊಡಗಿದರು. ಕೂಡಲೆ
ನಾವೆಲ್ಲರು ಬೆನ್ನಟಿ ಒಟ್ಟು 5 ಜನ ಹಿಡಿದುಕೊಂಡಿದ್ದು, ಹಿಡಿದುಕೊಂಡ 5 ಜನರನ್ನು ರೋಡಿನ ಮೇಲಿನ
ಬದಿಯಲ್ಲಿರುವ ಲೈಟಿನ ಕಂಬದ ಬೆಳಕಿನ ಕಡೆಗೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು
ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1..ರಾಹುಲ್@ಪಿಂಟ್ಯಾ ತಂದೆ ವಿಠ್ಠಲರಾವ ಹೋಟಕರ ಸಾ:ಕಡಗಂಚಿ
ತಾ:ಅಳಂದ ಜಿ:ಗುಲಬರ್ಗಾ, 2. ಗಿರೀಶ @ ಗಿರಿ ತಂದೆ ಶಿವಾನಂದ ಲೇಖನರ ಸಾ:ರೇವಣಸಿದ್ದೇಶ್ವರ ಕಾಲೋನಿ ಅಫಜಲಪುರ, 3. ರವಿ ತಂದೆ ಪಾಂಡು ರಾಠೋಡ ಸಾ: ಹನುಮಾನ ತಾಂಡ ಶಹಾಬಾದ 4. ಜ್ವಾಲೇಂದ್ರನಾಥ ತಂದೆ
ರವಿಚಂದ್ರ ಕಾವಲೆ ಸಾ:ಬಿದ್ದಾಪುರ ಕಾಲೋನಿ
ರೈಲ್ವೇ ಗೇಟ ಹತ್ತಿರ ಗುಲಬರ್ಗಾ 5. ಸಾಗರ ತಂದೆ ರಾಜು ರಿಟಲಾ ಸಾ:ಗಾಜಿಪುರ ಮೇತಾರಗಲ್ಲಿ
ಗುಲಬರ್ಗಾ ಅಂತ ತಿಳಿಸಿದರು. ಸದರಿಯವರಿಗೆ ಇಲ್ಲಿ ಯಾಕೇ ಕತ್ತಲಲ್ಲಿ ಕುಳಿತ್ತಿದ್ದಿರಿ ಅಂತಾ
ವಿಚಾರಿಸಲು ಸದರಿಯವರು ದರೋಡೆ ಹಾಗೂ ಸುಲಿಗೆ ಮಾಡುವ ಸಲುವಾಗಿ ಕುಳಿತ್ತಿದ್ದೆವೆ ಅಂತಾ ತಿಳಿಸಿದ್ದು
ಸದರಿಯವರನ್ನು ದಸ್ತಗೀರ ಮಾಡಿಕೊಂಡು ಮಾರಕಾಸ್ತ್ರಗಳು ಮತ್ತು ಕೃತ್ಯಕ್ಕೆ ಬಳಸಲು ತಂದ ಖಾರದ ಪುಡಿ, ಹಗ್ಗ ಹಾಗೂ ಮುಖಕ್ಕೆ ಹಾಕುವ ಕಪ್ಪು
ಮುಸುಕು ಬಟ್ಟೆಗಳನ್ನು ಮತ್ತು ಬುಲೇರೊ ವಾಹನ ನಂ.ಕೆಎ-36 ಎಂ-5546 ಗಳನ್ನು ಔಶಪಡಿಸಿಕೊಂಡು
ಠಾಣೆಗೆ ಬಂದು ಸದರಿಯವರ ವಿದುದ್ಧ ಶ್ರೀ ಸಿದ್ದೇಶ್ವರ ಪಿ.ಐ ಡಿ.ಎಸ್.ಬಿ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ
ಠಾಣೆ : ದಿನಾಂಕ 11-05-2014 ರಂದು ಹಡಲಗಿ ಗ್ರಾಮದ ಹನುಮಾನ ದೇವರ ಗುಡಿಯ
ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ
ಮೇರೆಗೆ ಪಿ.ಎಸ್.ಐ ಸಾಹೇಬರು ಹಾಗೂ ಠಾಣೆಯ
ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಹನುಮಾನ ದೇವರ ಗುಡಿಯ
ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ 04 ಜನ
ವ್ಯಕ್ತಿಗಳು ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ
ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲಾಗಿ 1.
ಗುರುಲಿಂಗಪ್ಪ ತಂದೆ ಚನ್ನಬಸವೇಶ್ವರ ಸರಸಂಬಿ 2.ಅಲ್ಲಾಭಕ್ಷ ತಂದೆ ಪಾಚಾಪಟೇಲ ಮುಜಾವರ 3.
ಚಂದ್ರಶಾ ತಂದೆ ಅಣ್ಣಪ್ಪ ನೀಲೂರ 4.ಅರುಣ ತಂದೆ ಲಿಂಬಾಜಿ ಮಾಳವೆ ಸಾ : ಎಲ್ಲರು ಹಡಲಗಿ ಇವರನ್ನು
ವಶಕ್ಕೆ ತೆಗೆದುಕೊಂಡು ಸದರಿಯವರಿಂದ 2900/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು
ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ ಇಪ್ತಿಯಾಜ್ ತಂದೆ ಮಹ್ಮದ
ಅಜಾಮ್ ಇವರು ದಿನಾಂಕಃ 10-05-2014 ರಂದು 10:30 ಪಿ.ಎಂ. ಕ್ಕೆ ತಾನು ಮತ್ತು ತನ್ನ ಗೆಳೆಯ
ಮಹಿಮೂದ ಶರೀಫ್ ಇಬ್ಬರು ತನ್ನ ಮೋಟಾರ ಸೈಕಲ ನಂ. TP / KA 32 TV 9635
ನೇದ್ದರ ಮೇಲೆ ಜಿ.ಜಿ.ಹೆಚ್ ಮಾರ್ಗವಾಗಿ ಸೇಡಂ ರಿಂಗ್ ರೋಡಿಗೆ 11:00 ಪಿ.ಎಂ. ಕ್ಕೆ ಬಂದು ಉಮರ
ಕಾಲೋನಿಗೆ ಹೋಗುತ್ತಿರುವಾಗ ಅದೇ ವೇಳೆಗೆ ಶಹಾಬಾದ ರಿಂಗ್ ರೋಡ್ ಕಡೆಯಿಂದ ಲಾರಿ ನಂ. ಕೆ.ಎ 32 ಎ
8535 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ
ಸೈಕಲಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನನ್ನ ಗೆಳೆಯ ಮಹಿಮೂದ ಈತನಿಗೆ ಬಲಗಡೆ ಕೈಗೆ ಗುಪ್ತಗಾಯ
ಹಾಗು ಬಲ ಕಿವಿಗೆ ಹಾಗು ಬಲ ಕಪಾಳದ ಮೇಲೆ ತರಚಿದ ಗಾಯಗಳಾಗಿದ್ದು, ನನಗೆ ಎದೆಗೆ ಒಳಪೆಟ್ಟಾಗಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment