Police Bhavan Kalaburagi

Police Bhavan Kalaburagi

Wednesday, May 14, 2014

Gulbarga District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ  ಇಮ್ತಿಯಾಜ ತಂದೆ ಖತಾಲಸಾಬ ಗಿರಣಿವಾಲಾ ಸಾ: ಮದಿನಾಕಾಲೋನಿ ಮಕ್ಕಾ ಮಜೀದ ಹತ್ತಿರ ಗುಲಬರ್ಗಾ ಇವರ ಅಣ್ನನಾದ ಮಹಿಬೂಬ ತಂದೆ ಖತಾಲಸಾಬ ಗಿರಣಿವಾಲೆ ವ: 45 ವರ್ಷ ಇವನು ಕಳೆದ ಎಂಟು ಹತ್ತು ವರ್ಷಗಳಿಂದ ಸ್ವಲ್ಪ ಮಾನಸಿಕವಾಗಿದ್ದು ಅವನಿಗೆ  ಅಲ್ಲಲ್ಲಿ ಆಸ್ಪತ್ರೆಗೆ ತೊರಿಸಿದರು ಕೂಡ  ಗುಣಮೂಕ ವಾಗಿರುವದಿಲ್ಲಾ. ಅಲ್ಲದೆ ಅವನು ಮನೆಯಲ್ಲಿ ಯಾರ ಜೊತೆಯಲ್ಲಿ ಮಾತನಾಡದೆ ಇರುತ್ತಿದ್ದನ್ನು.ಅವನು ಆಗಾಗೆ ಮನೆಯಿಂದ ಹೊಗಿ  ನಂತರ 3-2 ದಿವಸದ ನಂತರ ಮತ್ತೆ ಮರಳಿ ಮನೆಗೆ  ಬರುತ್ತಿದ್ದನು. ಅವನಿಗೆ ಕಳೆದ ವರ್ಷ ಮದುವೆ ಮಾಡಿದ್ದು ಅವನು ಸ್ವಲ್ಪ ಮಾನಸಿಕ ಇರುವದರಿಂದ ಅವನ ಹೆಂಡತಿ ಕೂಡ ಅವನು ಹುಚ್ಚು ಇರುತ್ತಾನೆ ಅಂತ ಮದುವೆಯ ನಂತರ ಅಂದಾಜ 10 ದಿವಸದಲ್ಲಿ ಬಿಟ್ಟು ಅವಳು ತನ್ನ ತವರು ಮನೆಗೆ ಹೊಗಿರುತ್ತಾಳೆ .ಅವನಿಗೆ  ಹೆಂಡತಿ ಮಕ್ಕಳು ಇರುವದಿಲ್ಲಾ .  ಮನೆಯಲ್ಲಿ ನಾನು ನನ್ನ ಹೆಂಡತಿ ಮಕ್ಕಳು ಹಾಗು ನನ್ನ ತಾಯಿ ಮುಮ್ತಾಜಬೇಗಂ ಮತ್ತು ಕಾಣೆಯಾದ ನನ್ನ ಅಣ್ನ ಮಹಿಬೂದ ಇರುತ್ತಿದ್ದೆವು. ದಿನಾಂಕ 15-4-2014 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಮಹಿಬೂಬ ಇವನು ಮನೆಯಿಂದ ಹೊರಗೆ ಹೊದವನು ಮರಳಿ ಮನೆಗೆ ಬಂದಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಚನ್ನಬಸಪ್ಪಾ ತಂದೆ ವಿರುಪಾಕ್ಷಪ್ಪಾ ಪೋಪಣ್ಣಾ ಇವರು ದಿನಾಂಕಃ 12/05/2014 ರಂದು 08:45 ಪಿ.ಎಂ. ಸುಮಾರಿಗೆ ತನ್ನ ಸ್ವಂತ ಮನೆಯಾದ ವಿಶ್ವೇಶ್ವರಯ್ಯ ಕಾಲೋನಿಯ ಮೇನ್ ಗೇಟ್ ದಿಂದ ಖಾಸಗಿ ಕೆಲಸ ನಿಮಿತ್ಯ ಸೇಡಂ ಹೋಗುವ ರೋಡಿನ ಹತ್ತಿರ ಆಟೋಕ್ಕೆ ಕಾಯುತ್ತಾ ನಿಂತಿರುವಾಗ ಸೇಡಂ ರೋಡ ಓಂ ನಗರ ಗೇಟ್ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ 32 ಇ 2973 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫೀರ್ಯಾದಿದಾರರ ಬಲಗಾಲಿಗೆ ಡಿಕ್ಕಿ ಪಡಿಸಿದ್ದರಿಂದ ಫಿರ್ಯಾದಿದಾರನು ಕೆಳಗೆ ಬಿದ್ದು ಬಲಗಾಲ ಮಂಡಿಗೆ ಮತ್ತು ಬಲ ಗಣ್ಣಿಗೆ, ಹಣೆಯ ಮೇಲೆ, ತಲೆಯ ಮೇಲೆ ಗುಪ್ತಗಾಯವಾಗಿದ್ದು ಪ್ರಜ್ಞಾಹೀನನಾಗಿ ಬಿದ್ದಿದ್ದು ಅಲ್ಲೇ ಪಕ್ಕದವರು ಖಾಸಗಿ ಆಟೋದಲ್ಲಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನ ಹಿಪ್ಪರಗಾ ಠಾಣೆ : ಶ್ರಿಮತಿ ನೀಲಾಬಾಯಿ ಗಂಡ ರಾಮ ಹತ್ತಘಾಳೆ  ಸಾ: ಪ್ಲಾಟ್ ನಂ, 14 ಸಾಯಿಬಾಬ ನಗರ ಯಶ್ವಂತ ಸೂತ್ ಮೀಲ್ ಹಿಂದೂಗಡೆ ಅಕ್ಕಲಕೊಟ ರೋಡ ಸೊಲ್ಲಾಪೂರ ಇವರು ದಿನಾಂಕ 02-05-2014 ರಂದು ಮದ್ನಾಹ 01-30 ಗಂಟೆಗೆ ಸರಸಂಬಾ ಗ್ರಾಮದ ದಾಟಿ ಹಿರೋಳಿ ದೇಶಮುಖ ಇವರ ಹೊಲದ ಹತ್ತೀರ ಪೂಲಿನ ಕರವಿಂಗ್ ರಸ್ತೆಯಲ್ಲಿ ಆಪೇ ರಿಕ್ಷಾ ಟಂಟಂ ನಂ, ಕೆ- 32, ಬಿ- 2428 ನೇದ್ದರ ಚಾಲಕನು ಅತೀ ವೇಗದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ಸದರಿ ಟಂಟಂದಲ್ಲಿ ಕುಳಿತ ನನಗೆ ಮತ್ತು ನನ್ನ ಮಕ್ಕಳಾದ ಶುಭಂ ಮತ್ತು ವಿಕ್ರಂ ಇವರಿಗೆ ಹಾಗು ಅಂಬುಭಾಯಿ ಗಂಡ ಶಿವಶರಣ ಕಲಶೇಟ್ಟಿ ಹಾಗು ನನಗೆ ಗೊತ್ತಿರಲಾರದ ಇತರ ಐದು ಆರು ಜನರಿಗೆ ಸಣ್ಣ ಪುಟ್ಟ ಮತ್ತು ಭಾರಿ ಪ್ರಮಾಣದ ಗಾಯವಾಗಿರುತ್ತವೆ. ನಾನು ಉಪಚಾರ ಕುರಿತು ಮಾರ್ಖಾಂಡಯ್ಯ ಆಸ್ಪತ್ರೆ ಸೊಲಾಪೂರ ಉಪಚಾರಕ್ಕಾಗಿ ಸೇರಿಕೆಯಾಗಿರುತ್ತನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: