ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಗೌಡಪ್ಪಾಗೌಡ ತಂದೆ ಶಂಕರಗೌಡ ಪಾಟೀಲ ಸಾ: ಪ್ಲಾಟ ನಂ.
6 ಗೊದುತಾಯಿ ನಗರ
ಗುಲಬರ್ಗಾ ರವರು ದಿನಾಂಕ 14-05-2014 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿ ಊಟ
ಮಾಡಿಕೊಂಡು ನಾನು ಮತ್ತು ಮಲ್ಲಿಕಾರ್ಜುನ ಪಾಟೀಲ ಇಬ್ಬರು ಮನೆ ಮುಂದೆ ವಾಕಿಂಗ ಮಾಡುತ್ತಾ ಇದ್ದಾಗ ಟೆಂಗಳಿ ಮನೆಯ ಹತ್ತಿರ ರಸ್ತೆ ಟರ್ನಿಂಗದಲ್ಲಿ ಒಬ್ಬ
ಮೊಟರ ಸೈಕಲ ಸವಾರನು ಬಂದನವೇ ಒಮ್ಮೇಲೆ ನನ್ನ ಕೊರಳಲ್ಲಿ ಕೈ ಹಾಕಿ ಬಂಗಾರದ
ಲಾಕೇಟ ಕಸಿದುಕೊಂಡು ಹೊಗಿರುತ್ತಾನೆ. ಎರಡು ತೊಲೆ ಬಂಗಾರದ ಲಾಕೇಟ ಇತ್ತು ಅದರಲ್ಲಿ ಅರ್ಧ
ಭಾಗ ಮತ್ತು ಪದಕ ಉಳಿದಿದ್ದು, ಅವನಿಗೆ ಬೆನ್ನು ಹತ್ತಿದ್ದರು. ಸಿಕ್ಕಿರುವುದಿಲ್ಲಾ. ಕತ್ತಲಲ್ಲಿ ಮೊಟರ
ಸೈಕಲ ನಂಬರ ಕಾಣಿಸಿರುವುದಿಲ್ಲಾ. ಒಬ್ಬ ಮೊಟರ ಸೈಕಲ ಸವಾರನು ಅರ್ಧ ಬಂಗಾರದ ಚೈನ ಕಸಿದುಕೊಂಡು ಹೊಗಿದ್ದು
ಅರ್ಧ ಚೈನು ಒಂದು ತೊಲೆ ಇರಬಹುದು. ಅದರ ಕಿಮ್ಮತ್ತು 25,000/- ರೂಪಾಯಿ ಇರುತ್ತದೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಹೀನಾ ಕೌಸರ ಗಂಡ ಖಾಸಿಂ ಪಟೇಲ್ ಗಾಲಿಬ ಕಾಲೋನಿ
ಎಮ್.ಎಸ್,ಕೆ.ಮಿಲ್ ಗುಲಬರ್ಗಾ ಇವರನ್ನು
ದಿನಾಂಕ:21.04.2013 ರಂದು ಖಮರ ಕಾಲೋನಿಯ ಮಹ್ಮದ ರಫಿಕ ಚೌಕ ಗುಲಬರ್ಗಾದ ಶ್ರೀ ಖಾಸಿಂ ಪಟೇಲ್ ತಂದೆ ನಜೀರ ಅಹ್ಮದ
ಇವರ ಜೊತೆ ನಮ್ಮ ಧಾರ್ಮಿಕ ಸಂಪ್ರದಾಯ ಪ್ರಕಾರ
ಮದುವೆಯಾಗಿದ್ದು ನನ್ನ ಮದುವೆಯಲ್ಲಿ ನನ್ನ ಗಂಡನಿಗೆ 25,000/- ರೂಪಾಯಿ ಮತ್ತು ಎರಡುವರೆ ತೋಲಿ
(25) ಗ್ರಾಮ್ ಬಂಗಾರ ಹಾಗೂ ಒಂದು ಹೀರೋ ಹೊಂಡಾ
ಮೋಟಾರ ಸೈಕಲ್ ಅಲ್ಲದೇ ಫರ್ನಿಚರ ಮತ್ತು ಮನೆ ಬಳಿಕೆಯ ಸಾಕಷ್ಟು ಪಾತ್ರೆಗಳನ್ನು ವರದಕ್ಷಿಣೆಯಾಗಿ ಕೊಟ್ಟು ಮದುವೆ
ಮಾಡಿದ್ದು ಇರುತ್ತದೆ.ನನಗೆ ಮದುವೆಯಾದ ನಂತರ ಕೇವಲ ಒಂದು ವಾರ ಮಾತ್ರ ಸರಿಯಾಗಿ ನೋಡಿಕೊಂಡಿದ್ದು ನಂತರ ನನ್ನ ಪತಿಯವರು
ಡಿಪ್ಲೋಮಾ ಸಿವಿಲ್ ಮಾಡಿದ್ದು ಇವರ ಕೆಲಸಕ್ಕೆ 5,00,00/-ರೂ. ಗಳ ಅವಶ್ಯಕತೆ ಇದೆ. ನೀನು 5,00,00/- ರೂಪಾಯಿಗಳನ್ನು ತವರು ಮನೆಯಿಂದ ತಂದು ಕೊಡು
ನಮ್ಮ ಮಗ ಗುಲಬರ್ಗಾದಲ್ಲಿಯೇ ಇದ್ದುಕೊಂಡು ವ್ಯಾಪಾರ ಮಾಡುತ್ತಾನೆ, ಅಂತಾ ದಿನಾಲು ನನ್ನ ಪತಿಯವರಾದ ಖಾಸಿಂ ಪಟೇಲ್ , ಮಾವನಾದ ನಜೀರ ಪಟೇಲ್ , ಅನಸರ ಮೌಲಾನ, ಲೈಕ, ಅತ್ತೆಯಾದ
ರಾಬೀಯಾ , ಮೈದುನ ವಸೀಮ, ನಾದನಿಯವರಾದ ವಾಹೆದಾ, ಖಾಲೇದಾ,
ಸಾಜೇದಾ ಅಲ್ಲದೇ ನನ್ನ ಮಾವನ ತಮ್ಮನಾದ ನಸೀರ ಹಾಗೂ ನನ್ನ
ಗಂಡನ ಅತ್ತೆಯಾದ ನಸೀಮಾ ಬೇಗಂ ಇವರು ನನಗೆ
ದಿನಾಲು ಅವಾಚ್ಯ ಶಬ್ದಗಳಿಂದ ಬೈಯುವುದು ಹಾಗೂ ಮಾನಸಿಕವಾಗಿ ಹಿಂಸೆ ಕೊಡುವುದರೊಂದಿಗೆ ನನಗೆ ಹೊಡೆ
ಬಡೆ ಮಾಡುತ್ತಾ ಬಂದಿರುತ್ತಾರೆ. ಸುಮಾರು 10
ತಿಂಗಳು ಹಿಂದೆ ನನಗೆ ಹೊಡೆ-ಬಡೆ ಮಾಡಿ ನನಗೆ ನನ್ನ ತವರು ಮನೆಯಿಂದ 5,00,00/-
ರೂಪಾಯಿಗಳ ತೆಗೆದುಕೊಂಡು ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ನನಗೆ ನನ್ನ ತವರು
ಮನೆಗೆ ಕಳುಹಿಸಿದ್ದು ನಾನು ಸುಮಾರು 10 ತಿಂಗಳಿಂದ ನನ್ನ ತವರು ಮನೆಯಲ್ಲಿಯೇ ಇದ್ದೇನೆ ನನಗೆ 3 ತಿಂಗಳ ಒಂದು ಹೆಣ್ಣು ಮಗು ಇರುತ್ತದೆ. ದಿನಾಂಕ: 09.09.2013 ರಂದು ತಮ್ಮ ಮನೆಯಾದ ಮಹಾರಾಜ
ಹೋಟಲ ಹತ್ತಿರ ಮಹಿಬೂಬ ನಗರಕ್ಕೆ ಕರೆದುಕೊಂಡು ಹೋಗಿ ರಾತ್ರಿ 10.00 ಗಂಟೆಗೆ ಮತ್ತೆ ನೀನು ನಿಮ್ಮ
ತಂದೆಯಿಂದ 5.00.000/- ರೂಪಾಯಿಗಳು
ತೆಗೆದುಕೊಂಡು ಬಾ ಅಂದರೆ ಖಾಲಿ ಕೈಯಲ್ಲಿ
ಬಂದಿರುತ್ತಿ ಅಂತಾ ಹೊಡೆ ಬಡೆ ಮಾಡಿರುತ್ತಾನೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ
ಸಿದ್ದಣ್ಣಾ ಸರಡಗಿ ಇವರು ಸುಮಾರು 15 ವರ್ಷಗಳಿಂದ ಬಸವೇಶ್ವರ ಆಸ್ಪತ್ರೆ ಮುಂದುಗಡೆ ಅಂಬುಲೆನ್ಸ್
ವಾಹನ ಇಟ್ಟು ಚಲಾಯಿಸಿಕೊಂಡು ಉಪಜೀವಿಸುತ್ತಿದ್ದು, ಅದರಂತೆ ಮಹ್ಮದ ನಜೀರ ಮಸುಲ್ದಾರ ಇತನು
ಸುಮಾರು 8-9 ವರ್ಷಗಳಿಂದ ಬಾಡಿಗೆಯಿಂದ ಅಂಬ್ಯುಲೆನ್ಸ್ ಪಡೆದು ಡ್ರೈವರ ಕೆಲಸ
ಮಾಡಿಕೊಂಡಿರುತ್ತಾನೆ. ಈಗ ಸುಮಾರು 4-5 ತಿಂಗಳ ಹಿಂದೆ ಅಂಬ್ಯುಲೆನ್ಸ್ ವಾಹನಗಳ ಚಾಲಕರ ಸಂಘಟನೆ
ಮಾಡಿದ್ದು ಸದರ ಸಂಘಟನೆಯ ಕಾರ್ಯಲಯ ಬಸವೇಶ್ವರ ಆಸ್ಪತ್ರೆಯ ಆವರಣದಲ್ಲಿರುತ್ತದೆ. ಈಗ ಸುಮಾರು 5-6
ದಿವಸಗಳ ಹಿಂದೆ ಸದರಿ ನಜೀರ ಇತನು ನನ್ನ ಅಂಬುಲೆನ್ಸ್ ಪಾಳಿ ಬರುತ್ತದೆ ನೀನ್ಯಾಕೆ ಅಂಬುಲೆನ್ಸ್
ಪಾಳಿ ಹಚ್ಚಿದ್ದಿ ಅಂತಾ ತಕರಾರು ತೆಗೆದು ಅಂಬುಲೆನ್ಸ್ ಸಂಘಟನೆ ಏನು ನಿಮ್ಮಪ್ಪಂದು ಸೂಳ್ಯ ಮಗನೆ
ಇದಕ್ಕೆಲ್ಲಾ ನೀನೆ ಮುಖ್ಯಸ್ಥನಂತೆ ನಡೆದುಕೊಳ್ಳುತ್ತಿದ್ದಿ ಅಂತಾ ತರಕಾರು ಮಾಡುವಾಗ ಅಂಬುಲೆನ್ಸ್
ಡ್ರೈವರು ಸಮಜಾಯಿಸಿ ಕಳುಹಿಸಿರುತ್ತಾರೆ. ಹೀಗಿದ್ದು ದಿನಾಂಕಃ 13/05/2004 ರಂದು 10:45 ಪಿ.ಎಂ.
ಸುಮಾರಿಗೆ ಬಸವೇಶ್ವರ ಆಸ್ಪತ್ರೆಯ ಕ್ಯಾಜುಲಿಟಿ ಮುಂದೆ, ಸದರಿ ಮಹ್ಮದ ನಜೀರ ಮುಸುಲ್ದಾರ ಈತನು
ಅಂಬ್ಯುಲೆನ್ಸ್ ಪಾಳಿಯ ವಿಷಯಕ್ಕೆ ಜಗಳ ತೆಗೆದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು
ಕೊಲೆ ಮಾಡುವ ಉದ್ದೇಶದಿಂದ ಉದ್ದನೇಯ ಜಂಬ್ಯದಿಂದ ಬಲಗೈ ಮೊಳಕೈ ಹತ್ತಿರ, ಬಲ ತೊಡೆಯ ಹಿಂದೆ
ಹೊಡೆದು ಭಾರಿ ರಕ್ತಗಾಯ ಪಡಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment