ಅಪಘಾತ
ಪ್ರಕರಣಗಳು :
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ನೀಲಕಂಠ ತಂದೆ ಚನ್ನಬಸಪ್ಪ ಮಾಲೀಪಾಟೀಲ ಸಾ: ಯಲಕಪಳ್ಳಿ ತಾ: ಚಿಂಚೋಳಿ ಜಿಲ್ಲಾ: ಗುಲಬರ್ಗಾ ಇವರು ದಿನಾಂಕ 15-05-2014 ರಂದು ಬೆಳಿಗ್ಗೆ 9-15 ಗಂಟೆ
ಸುಮಾರಿಗೆ ಎಸ್.ವಿ.ಪಿ ಸರ್ಕಲದಿಂದ ಪಿ.ಡಿ.ಎ ಕಾಲೇಜ ರೋಡಿನಲ್ಲಿ ಬರುವ ಮಹಾರಾಜ ಹೋಟಲ ಕಡೆಗೆ
ನಡೆದುಕೊಂಡು ಹೋಗಿ ಅದರ ಎದುರುಗಡೆ ಇರುವ ಗಲ್ಲಿಯಲ್ಲಿ ಏಕಿ ಮಾಡಿ ವಾಪಸ್ಸ ಮಹಾರಾಜ ಹೋಟಲ ಕಡೆಗೆ
ನಡೆದುಕೊಂಡು ರೋಡ ದಾಟುತ್ತಿದ್ದಾಗ ಪಿ,ಡಿ,ಎ ಕಾಲೇಜ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-7259 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ
ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ಶ್ರೀ ಗಂಗಾಧರ ತಂದೆ ಮೊನಪ್ಪ ಬಡಿಗೇರ ಸಾ:ಹುಲ್ಲೂರ
ಹಾ:ವ:ಜೇವರ್ಗಿ ಜಿ:ಗುಲಬರ್ಗಾ ರವರ ಅಣ್ಣನಾದ ರಮೇಶ ಇತನು ಅಳಿಯನ ಬಟ್ಟೆ ಖರಿದಿಸಲು ಮತ್ತು ಲಗ್ನ
ಪತ್ರಗಳನ್ನು ತೆಗೆದುಕೊಂಡು ಬರುವ ಸಲುವಾಗಿ ತನ್ನ ಮೋಟರ್ ಸೈಕಲ್ ನಂ. ಕೆಎ 32 ಇಸಿ-9217
ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ:14/05/2014 ರಂದು ಬೆಳಗ್ಗೆ 10:30 ಗಂಟೆಯ
ಸುಮಾರಿಗೆ ನಮ್ಮ ಅತ್ತಿಗೆ ಧಾನಮ್ಮ ಮತ್ತು ನಮಗೆ ಹೇಳಿ ಗುಲಬರ್ಗಾಕ್ಕೆ ಹೋಗಿದ್ದು ದಿನಾಂಕ: 14/05/2014
ರಂದು ರಾತ್ರಿ 11:15 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ನಮ್ಮಣ್ಣ ರಮೇಶ ಇತನ
ಮೋಬೈಲ್ ಫೋನ್‌ದಿಂದ ಯಾರೋ ನನಗೆ ಫೊನ್ ಮಾಡಿ ತಿಳಿಸಿದ್ದೆನಂದರೆ, ಈಗ
ರಾತ್ರಿ 11 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಬೀಮಾ ಬ್ರೀಡ್ಜ ಸಮೀಪ
ಹಸನಾಪೂರ ಕ್ರಾಸ್ ಹತ್ತಿರ ಮೋಟರ್ ಸೈಕಲ್ ನಂ. ಕೆಎ 32 ಇಸಿ-9217 ನೇದ್ದರ ಮೇಲೆ ಗುಲಬರ್ಗಾ
ಕಡೆಯಿಂದ ಜೇವರ್ಗಿ ಹೊರಟಿದ್ದ ಈ ಮೋಬೈಲ್‌ನ ವ್ಯಕ್ತಿ ರೋಡಿನ ಎಡಬಾಗದಲ್ಲಿ ಹೋಗುತ್ತಿದ್ದಾಗ
ಎದುರುಗಡೆಯಿಂದ ಒಬ್ಬ ಲಾರಿ ನಂ ಕೆ.ಎ- 25 ಎ-4398 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ
ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮೊಟರ್ ಸೈಕಲ್ ನಂ ಕೆಎ 32 ಇಸಿ-9217
ನೇದ್ದಕ್ಕೆ ಡಿಕ್ಕಿ ಪಡಿಸಿ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಇದರಿಂದ
ಮೊಟರ್ ಸೈಕಲ್ ಮೇಲೆ ಇದ್ದ ವ್ಯಕ್ತಿಯ ತಲೆಗೆ, ಕಾಲಿಗೆ, ತೊಡೆಗೆ, ಕೈಗಳಿಗೆ
ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment