ಅಪಘಾತ ಪ್ರಕರಣಗಳು
:
ಫರತಾಬಾದ ಠಾಣೆ : ವಿಜಯಕುಮಾರ
ತಂದೆ ಶರಣಬಸಪ್ಪಾ ಮಾಲಗತ್ತಿ ಸಾ : ಭರತನಗರ, ಸಂಜೀವ ನಗರ ತಾ. ಜಿ. ಗುಲಬರ್ಗಾ ಇವನು ಫರಹತಬಾದ ಗ್ರಾಮದ ಸೋಂಶೇಖರ ಕಲಬುರ್ಗಿ ಇತನ ಬ್ಯಾಳಿ
ದಾಲ್ ಮೀಲ್‌ನಲ್ಲಿ ಕೆಲಸ ಮಾಡಿಕೊಂಡು ದಿನಾಲು ಗುಲಬರ್ಗಾದಿಂದ ತನ್ನ ಮೊಟರ್ ಸೈಕಲ್ ನಂ.
ಕೆಎ 32 ಜೆ 7857 ನೇದ್ದರ ಮೇಲೆ ಹೋಗಿ ಬಂದು ಮಾಡುತ್ತಾನೆ. ಎಂದಿನಂತೆ ದಿನಾಂಕ:18/05/2014 ರಂದು ಬೆಳಗ್ಗೆ 10 ಗಂಟೆಯ
ಸುಮಾರಿಗೆ ಗುಲಬರ್ಗಾ ದಿಂದ ಫರಹಾತಾಬಾದ ಗ್ರಾಮಕ್ಕೆ ಕೆಲಸಕ್ಕೆಂದು ಹೊಗಿದ್ದು ರಾತ್ರಿ 10 ಗಂಟೆಯ
ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮಫರಹತಾಬಾದ ಗ್ರಾಮದ ಸೋಮಶೇಖರ ಕಲಬುರ್ಗಿ ಇವರು ಫೊನ್
ಮಾಡಿ ತಿಳಿಸಿದ್ದೆನಂದರೆ. ರಾತ್ರಿ 8:30 ಗಂಟೆಯ ಸುಮಾರಿಗೆ ನಿಮ್ಮ ತಮ್ಮ ವಿಜಯಕುಮಾರ ಇವರು ಫರಹತಬಾದಲ್ಲಿದ್ದ
ನಮ್ಮ ದಾಲ್ ಮೀಲ್‌ದಿಂದ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತೆನೆ ಅಂತಾ ತನ್ನ ಮೊಟರ್ ಸೈಕಲ್
ನಂ ಕೆಎ 32 ಜೆ 7857 ನೇದ್ದರ ಮೇಲೆ ಹೊಗಿರುತ್ತಾನೆ. ಮುಂದೆ
ರಾತ್ರಿ 9 ಗಂಟೆಗೆ ಎನ್ ಹೆಚ್218 ರಸ್ತೆಯ
ಭಾರತಿ ವಿದ್ಯಾ ಮಂದಿರದ ಹತ್ತಿರ ಲಾರಿ ನಂ. ಕೆಎ 39/4641 ನೇದ್ದು ರೋಡಿನ ಮೇಲೆ ಇಂಡಿಕೇಟ್ ಹಾಕದೆ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ನಿಲ್ಲಿಸಿದ್ದರಿಂದ ಸದರಿ ವಿಜಯಕುಮಾರನು ಲಾರಿ ನಿಂತಿದ್ದು ಕಾಣಿಸದೆ ಅವನ ಗಾಡಿ ಲಾರಿಗೆ ಹಿಂಬದಿಗೆ ಡಿಕ್ಕಿಯಾಗಿ ಹಣೆಗೆ
ಗಾಯವಾಗಿ ಬಿದ್ದಿರುತ್ತಾನೆ.ಸದರಿ ಲಾರಿ ಚಾಲಕನು ಸ್ಥಳದಲ್ಲಿ ಇರದೆ ಲಾರಿಯನ್ನು ಆಲ್ಕಷ್ಯತನದಿಂದ
ರೋಡಿನ ಮೇಲೆ ನಿಲ್ಲಿಸಿ ಹೋಗಿರುತ್ತಾನೆ. ಅಂತಾ ಶ್ರೀ ಸಿದ್ದಣ್ಣಾ ತಂದೆ ಶರನಬಸಪ್ಪಾ
ಮಾಲಗತ್ತಿರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ
18-05-2014 ರಂದು ರಾತ್ರಿಯ 8 ಘಂಟೆಯ ಸಮಯದಲ್ಲಿ ಮಹ್ಮದ ಶಹಜಾದ ತಂದೆ ಮಹ್ಮದ ಹನೀಫ
ಸಾ : ಹುಸೇನಿ ಚಿಲ್ಲಾ ಎಂ.ಎಸ್.ಕೆ.ಮಿಲ್ಲ ಗುಲಬರ್ಗಾ ರವರು ನಡೆಸುತ್ತಿದ್ದ ಮೋಟರ ಸೈಕಿಲ್ ನಂಬರ KA 32 S - 5948 ನೇದ್ದರ ಮೇಲೆ ಫಿರ್ಯಾಧಿ ಹಾಗೂ ಆತನ ಗೆಳೆಯ ಜಾಕೀರ ಹಿಂದೆ
ಕುಳಿತು ಜಗತ್ತ ಗಾರ್ಡನ್ ದಿಂದ STBT ರಸ್ತೆಯ ಮೂಲಕ ಮನೆಯ ಕಡೆಗೆ ಹೋಗುತ್ತಿರುವಾಗ ನಾವು ಮೂವರು
ಕುಳಿತುಕೊಂಡು ಹೋಗುತ್ತಿದ್ದ ಮೋಟರ ಸೈಕಿಲ್ ನ್ನು ಚಲಾಯಿಸುತ್ತಿದ್ದ ಮಹ್ಮದ ಶಹಾಬಾಜ ಈತನು ಮೋಟರ
ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಸಾತ ಗುಂಬಜ ಹತ್ತಿರ ತಿರುವಿನಲ್ಲಿ
ಮಕಬೂಲ ಆಝಾದ ಇವರ ಲಾರಿ ಸ್ಕ್ರ್ಯಾಪ ಅಂಗಡಿ ಎದುರುಗಡೆ ಜಾಗದ ಎದುರುಗಡೆ ರೋಡಿನ ಮಧ್ಯದಲ್ಲಿ ಇರುವ
ರೋಡ ಡಿವೈಡರ ಕಟ್ಟೆಗೆ ಜೋರಾಗಿ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಅಪಘಾತದಲ್ಲಿ ಮೂವರೂ ಸಹ
ಮೋಟರ ಸೈಕಲ ಸಮೇತ ಕೆಳಗೆ ಬಿದ್ದು ಸಾದಾ ಮತ್ತು ಭಾರಿ ಗಾಯಗೊಂಡಿರುತ್ತೆವೆ ಅಂತಾ ಶ್ರೀ ಮಹ್ಮದ
ಟಿಪ್ಪು ತಂದೆ ಮಹ್ಮದ ಲಿಯಾಖತ ಅಲಿ ಸಾ : ತರಕಾರಿ ಮಾರ್ಕೆಟ ಕೆ.ಬಿ.ಎನ್. ದರ್ಗಾದ ಹತ್ತಿರ
ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ
ಪಾರ್ವತಿ ಗಂಡ ಪಿರ್ಯಾ ನಾಯಕ ಜಾಧವ,
ಸಾ: ಜಾಕನಪಲ್ಲಿ ತಾಂಡಾ ಇವರು ಸುಮಾರು 5-6 ವರ್ಷಗಳ
ಹಿಂದೆ ಪಾರ್ವತಿ ಇವಳ ಚಿಕ್ಕ ಮಾವನ ಮಗಳಾದ ಸಾವಿತ್ರಿಬಾಯಿಗೆ
ಜಾಕನಪಲ್ಲಿ ತಾಂಡಾದ ಮಾರುತಿ ತಂದೆ ಮಾಣಿಕ್ಯಾ ನಾಯಕ ರಾಠೋಡ ಇವನು ಒಡಿಸಿಕೊಂಡು ಹೊಗಿ ಮದುವೆಯಾಗಿದ್ದು, ಆಗ ಫೀರ್ಯಾದಿಯ ಗಂಡ ಮಾರುತಿಗೆ ಅವಚ್ಚಾ ಶಬ್ದಗಳಿಂದ ಬೈದು ಹೊಡೆದಿರುತ್ತಾನೆ. ಆಗಿನಿಂದ
ಇಲ್ಲಿಯವರೆಗೆ ಫೀರ್ಯಾದಿ ಗಂಡನಿಗು ಮತ್ತು ಆರೋಪಿತನಾದ ಮಾರುತಿ ತಂದೆ ಮಾಣಿಕ್ಯಾ ನಾಯಕ ಇತನಿಗು ವೈಮನಸ್ಸಿನಿಂದ
ದಿನಾಂಕ: 19-05-2014 ರಂದು ಮಧ್ಯಾಹ್ನ 01:00 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡನಾದ ಪಿರ್ಯಾ ನಾಯಕ
ಇತನಿಗೆ ಮಾರುತಿಯ ಸಂಬಂದಿಕರಾದ ಧೂಳ್ಯಾ ನಾಯಕ ತಂದೆ ತೇಜ್ಯಾ ನಾಯಕ ರಾಠೋಡ ಮತ್ತು ಬುಜಿಬಾಯಿ ಗಂಡ
ಧೋಳ್ಯಾ ನಾಯಕ ರಾಠೋಡ ಇವರು ಒಳ ಸಂಚು ಮಾಡಿ, ಅವರ ಮನಗೆ ಬಾ ಅಂತಾ ಕರೆದಿದ್ದು, ನನ್ನ ಗಂಡ ಅವರ ಮನೆಗೆ ಹೊದಾಗ, ಅಲ್ಲೇ ಇದ್ದ, ಮಾರುತಿ ತಂದೆ ಮಾಣಿಕ್ಯಾ ನಾಯಕ ಹಳೆ ವೈಶಮ್ಯಾ ದಿಂದ ಪಿರ್ಯಾ ನಾಯಕನಿಗೆ ಜಗಳಾ ತೆಗೆದು, ಏ ಭೋಸಡಿ ಮಗನೆ 5-6 ವರ್ಷಗಳ ಹಿಂದೆ ನಿಮ್ಮ ಚಿಕ್ಕಪ್ಪನ ಮಗಳಿಗೆ ಏತ್ತಿಕೊಂಡು ಮದುವೆ
ಮಾಡಿಕೊಂಡಾಗ ನನಗೆ ಹೊಡೆದು ಅವಮಾನ ಮಾಡಿದ್ದಿ, ನಿನಗೆ ಖಲಾಸ ಮಾಡುತ್ತೇನೆ
ಅಂತಾ ಕೊಲೆ ಮಾಡುವ ಉದ್ದೇಶದಿಂದ ಅವನ ಕೈಯಲ್ಲಿದ್ದ, ಚಾಕುವಿನಿಂದ ಫೀರ್ಯಾ ನಾಯಕ
ಎಡಗಡೆ ಮೇಲುಕಿಗೆ, ಎಡಗಡೆ ಹೇಡಕಿಗೆ, ಮತ್ತು ಎಡಗಡೆ ಕಿವಿಗೆ ಮತ್ತು ಎಡಗಡೆ ಬೆನ್ನಿಗೆ ಚಾಕುನಿಂದ ಹೊಡೆದು ಭಾರಿ ರಕ್ತಗಾಯ
ಮಾಡಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment