Police Bhavan Kalaburagi

Police Bhavan Kalaburagi

Monday, May 26, 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 25-05-2014 ರಂದು ರಂದು 00:15 ಎ.ಎಂ ಕ್ಕೆ ಖಚಿತವಾದ ಬಾತ್ಮಿ ದೊರೆತ್ತಿದ್ದೆನೆಂದೆರೆ, ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಗುಬ್ಬಿ ಕಾಲೋನಿಯ ಸಾಯಿ ಮಂದಿರದ ಸಾರ್ವಜನಿಕರ ಗಾರ್ಡನ ಹತ್ತಿರ ದುಂಡಾಗಿ ಕುಳಿತು ಕೆಲವು ಜನರು ಹಣಕ್ಕೆ ಪಣ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದವರ ಬಗ್ಗೆ ಖಚಿತ ಬಾತ್ಮಿ ಮೇರೆಗೆ  ಶ್ರೀ ಗಜಾನನ .ಕೆ. ನಾಯ್ಕ ಪಿಎಸ್.ಐ (ಕಾ.ಸು)  ಎಂ.ಬಿ ನಗರ ಠಾಣೆ ಗುಲಬರ್ಗಾ ರವರು ಮತ್ತು  ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 10 ಜನರನ್ನು ಹಿಡಿದು ವಿಚಾರಿಸಲು 1. ವಿನಯ್ ತಂದೆ ಬಸಲಿಂಗಪ್ಪ ದೇವಪೂರ್ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 2. ದಿನೇಶ ಕುಮಾರ್ ತಂದೆ ಎಸ್. ಭಂಡಾರಕರ್ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ  3. ಶಕ್ತಿ ತಂದೆ ರವೀಂದ್ರ ಪಾಟೀಲ್ ಸಾಃ ಎಂ.ಬಿ ನಗರ ಗುಲಬರ್ಗಾ 4. ಕೃಷ್ಣ ತಂದೆ ಶರಣು ಸಾಃ ಪ್ರಗತಿ ಕಾಲೋನಿ ಗುಲಬರ್ಗಾ 5. ಸಂತೋಷ್ ತಂದೆ ನಿಂಗಪ್ಪ ಪೂಜಾರಿ ಸಾಃ ಆದರ್ಶ ನಗರ ಗುಲಬರ್ಗಾ 6. ಶರಣು ತಂದೆ ನಿಂಗಪ್ಪ ಪೂಜಾರಿ ಸಾಃ ಆದರ್ಶ ನಗರ ಗುಲಬರ್ಗಾ 7. ಪ್ರಕಾಸ್ ತಂದೆ ಬಸವರಾಜ ಸಿಂಧೆ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ 8. ರವಿಕುಮಾರ್ ತಂದೆ ಶಿವರಾಯ ಪಾಟೀಲ್ ಸಾಃ ಆದರ್ಶ ನಗರ ಗುಲಬರ್ಗಾ 9. ಕರಣ್ಕುಮಾರ್ ತಂದೆ ಕಾಶಿನಾಥ ಸೂರ್ಯವಂಶಿ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 10. ಶಂಕರ್ ತಂದೆ ಶರಣಪ್ಪ ಪಾಟೀಲ್ ಸಾಃ ಪೊಲೀಸ್ ಕ್ವಾರ್ಟಸ್ ಗುಲಬರ್ಗಾ  ತಿಳಿಸಿದ್ದು ಸದರಿಯವರಿಂದ  ಒಟ್ಟು 18,000/- ರೂ. ನಗದು ಹಣ ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 25-05-2014 ರಂದು ರಂದು 06:15 ಪಿ.ಎಂ ಕ್ಕೆ ಖಚಿತವಾದ ಬಾತ್ಮಿ ದೊರೆತ್ತಿದ್ದೆನೆಂದೆರೆ, ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಆದರ್ಶ ನಗರದ ಗಾರ್ಡನ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಹಣಕ್ಕೆ ಪಣ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದವರ ಬಗ್ಗೆ ಖಚಿತ ಬಾತ್ಮಿ ಮೇರೆಗೆ  ಶ್ರೀ ಗಜಾನನ .ಕೆ. ನಾಯ್ಕ ಪಿಎಸ್.ಐ (ಕಾ.ಸು)  ಎಂ.ಬಿ ನಗರ ಠಾಣೆ ಗುಲಬರ್ಗಾ ರವರು ಮತ್ತು  ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 7 ಜನರನ್ನು ಹಿಡಿದು ವಿಚಾರಿಸಲು 1. ಮಹ್ಮದ ರಿಯಾಜ ತಂದೆ ಮಹ್ಮದ ಹುಸೇನ ಸಾಃ ಆದರ್ಶ ನಗರ ಗುಲಬರ್ಗಾ 2. ಅತೀಕ ಹುಸೇನ ತಂದೆ ಇಸಾಕ ಹುಸೇನ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ 3. ಮಹಿಮೂದ ಆರೀಫ್ ತಂದೆ ಶೇಖ್ ಮಹ್ಮದ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 4. ಜುಬೇರ ತಂದೆ ರಷೀದ ಮಿಯಾ ಸಾಃ ಬ್ಯಾಂಕ್ ಕಾಲೋನಿ ಗುಲಬರ್ಗಾ 5. ಅಬ್ದುಲ್ ರಶೀದ ತಂದೆ ಅಬ್ದುಲ್ ಬಶೀರ ಸಾಃ ಉಪ್ಪರ ಗಲ್ಲಿ ಸಂತ್ರಾಸವಾಡಿ ಗುಲಬರ್ಗಾ 6. ಮಹ್ಮದ ಖಾಜಾ ತಂದೆ ಮಹ್ಮದ ಖಾಸಿಂ ಸಾಃ ಯಾದುಲ್ಲಾ ಕಾಲೋನಿ ಗುಲಬರ್ಗಾ 7. ಇಮ್ತಿಯಾಜ್ ತಂದೆ ಮಕಬೂಲ್ ಅಹ್ಮದ ಸಾಃ ಖಲಾಯಿಗಲ್ಲಿ ಸಾತ್ ಗುಮ್ಮಜ್ ಹತ್ತಿರ  ಗುಲಬರ್ಗಾ. ತಿಳಿಸಿದ್ದು ಸದರಿಯವರಿಂದ  ಒಟ್ಟು 25,000/- ರೂ. ನಗದು ಹಣ ಹಾಗು 52 ಇಸ್ಪೇಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 25-05-2014 ರಂದು ರಾತ್ರಿ 08:00 ಗಂಟೆ ಸುಮಾರಿಗೆ ಶ್ರೀಮತಿ ನೀಲಾಂಬಿಕಾ ಗಂಡ ಶಿವಕುಮಾರ ಭೀಮನಳ್ಳಿ ಸಾ:ಆರ್.ಎಸ್. ಕಾಲೋನಿ ಗುಲಬರ್ಗಾ ಇವರು  ಅನುಷಾ ಇವರೊಂದಿಗೆ  ತನ್ನ ಮನೆಯಿಂದ ವಿರೇಂದ್ರ ಕಲ್ಯಾಣಿ ಇವರ ಮನೆಯ ಮದುವೆ ಕಾರ್ಯಕ್ರಮಕ್ಕೆ ಹೊರಟಾಗ ರೇವಣಸಿದ್ದೇಶ್ವರ ಕಾಲೋನಿಯ ರೇವಣಸಿದ್ದೇಶ್ವರ ಗುಡಿಯ ಹಿಂದುಗಡೆ ಇರುವ ಹಲೋ ಕಿಡ್ಸ ಮುಂದಿನಿಂದ ಹಾಯ್ದು ಹೋಗುವಾಗ ಹಿರೋ ಹೊಂಡಾ ಸಿಲವರ್ ಕಲರ್ ಮೋಟಾರ ಸೈಕಲ ಮೇಲೆ ಒಬ್ಬ ಅಪರಿಚಿತ ಅಂದಾಜ 25-30 ವರ್ಷದವನು ಬಂದವನೇ ತನ್ನ ಕೊರಳಿಗೆ ಕೈ ಹಾಕಿ ತನ್ನ ಕೊರಳಲ್ಲಿದ್ದ 50 ಗ್ರಾಂ ತೂಕದ ಬಂಗಾರದ ಗಂಟನ್ ಹಾಗು 10 ಗ್ರಾಂ ತೂಕವುಳ್ಳ ಬಂಗಾರದ ಲೇಪನ್ ಮಾಡಿದ ರುದ್ರಾಕ್ಷೀ ಸರ ಹೀಗೆ ಒಟ್ಟು 1,60,000/ರ- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಕಸಿದುಕೊಂಡು ಓಡಿ ಹೋಗಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 22-05-2014 ರಂದು 05-00 ಪಿ.ಎಮ್ ಕ್ಕೆ ಶ್ರೀ ಹಣಮಂತ ತಂದೆ ಕಾಶಿನಾಥ ಬಜಂತ್ರಿ, ಸಾಃ ಲಂಗಾರ ಹನುಮಾನ ಗುಡಿ ಹತ್ತಿರ ಗುಲಬರ್ಗಾ  ರವರು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಯು 8317 ನೇದ್ದನ್ನು ಚಲಾಯಿಸಿಕೊಂಡು ಹುಮನಾಬಾದ ರಿಂಗ ರೋಡ ಕಡೆಯಿಂದ ಗಂಜ ಬಸ್ ಸ್ಟಾಂಡ ಕಡೆಗೆ ಬರುತ್ತಿದ್ದಾಗ ಆರೋಪಿ ಗೋವಿಂದ ರಾಠೋಡ ತನ್ನ ಮೋಟಾರ ಸೈಕಲ ನಂ. ಕೆ.ಎ 39 ಎಚ್. 5858 ನೇದ್ದನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನ ದಿಂದ ಚಲಾಯಿಸಿಕೊಂಡು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 24-05-2014 ರಂದು 6-15 ಪಿ.ಎಮ್ ಕ್ಕೆ ಶ್ರೀ ಸಂಪತ್ರಾಯ ತಂದೆ ಗುರಣ್ಣಾ ತಳವಾರ, ಸಾಃ ಶಹಾಬಜಾರ ಗುಲಬರ್ಗಾ  ತನ್ನ ಅಟೋರಿಕ್ಷಾ ನಂ. ಕೆ.ಎ 32 2326 ನೇದ್ದರಲ್ಲಿ ಹಿಂದೆ ಪಂಡಿತ ತಂದೆ ಜೀವರಾಜ ಗುಮಟೆ ಇವರನ್ನು ಕೂಡಿಸಿಕೊಂಡು ಮದನ ಟಾಕೀಜ ಕಡೆಯಿಂದ ಹುಮನಾಬದ ರಿಂಗ ರೋಡ ಕಡೆ ಹೋಗುತ್ತಿದ್ದಾಗ ಲಾಹೋಟಿ ಪೆಟ್ರೊಲ ಬಂಕ ಎದರುಗಡೆ ರೋಡಿನ ಮೇಲೆ ಗೂಡ್ಸ ಟಂ.ಟಂ ನಂ. ಕೆ.ಎ 32 ಬಿ. 4620 ನೇಧ್ದರ ಚಾಲಕ ಗಂಜ ಬಸ್ ನಿಲ್ದಾಣ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡ ಬಂದು ನನ್ನ ಅಟೋರಿಕ್ಷಾಕ್ಕೆ ಹಿಂದಿನಿಂದ ಓವರಟೆಕ್ ಮಾಡಿ ಅಟೋರಿಕ್ಷಾ ಎಡಭಾಗಕ್ಕೆ ಡಿಕ್ಕಿ ಪಡಿಸಿ ಮುಂದೆ ಹೋಗಿ ಬ್ಯಾಲೆನ್ಸ ತಪ್ಪಿ ಗೂಡ್ಸ ಟಂ.ಟಂ ಪಲ್ಟಿ ಮಾಡಿ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾದಲ್ಲಿ ಗೂಡ್ಸ ವಾಹನದಲ್ಲಿದ್ದ ರಸೂಲ ಪಟೇಲ ತಂದೆ ಅಹ್ಮದ ಪಟೇಲ ಈತನಿಗೆ ತಲೆಗೆ ಹಿಂದೆ ಭಾರಿಗಾಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಮರಲಿಂಗಪ್ಪ ತಂದೆ ರಾಮಪ್ಪ  ಮುಧೊಳ  ಸಾ: ಇಮಡಾಪುರ ಇವರ ತಮ್ಮನಾದ  ಶ್ರೀ ಮಹೇಶ ತಂದೆ  ರಾಮಪ್ಪ ಮುಧೋಳ ಇವರು ದಿನಾಂಕ: 24-05-2014 ರಂದು ಸಾಯಾಂಕಾಲ 5 ಗಂಟೆಯ ಸುಮಾರಿಗೆ  ನಮ್ಮ ಅಳಿಯನಾದ  ಸತೀಶ ತಂದೆ ಮರೆಪ್ಪ  ಇತನಿಗೆ ಸಾತನೂರ ಗ್ರಾಮಕ್ಕೆ ಬಿಟ್ಟು ಬರಲು  ಆತನ ಗೆಳೆಯನ ಹೊಸ ಮೋಟಾರು ಸೈಕಲ ತಗೆದುಕೊಂಡು  ಅದರ ಮೇಲೆ ಇಬ್ಬರೂ ಊರಿಗೆ ಹೋಗುವದಾಗಿ ಹೇಳಿ ಹೋದರು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ಸಂಭಂದಿಕನಾದ  ಗೌಡನಳ್ಳಿ ಗ್ರಾಮದ ಶಿವರಾಜ ತಂದೆ ಮಲ್ಲೇಶಪ್ಪ  ದಳಪತಿ ಇತನು ಪೋನ್ ಮುಖಾಂತರ ತಿಳಿಸಿದೆನಂದರೆ  ನಾನು ನಮ್ಮ ಊರಿನಿಂದ ಕೊಡ್ಲಾ ಗ್ರಾಮಕ್ಕೆ ಹೊರಟಾಗ  ನಾಮವಾರ ಗೇಟ್ ಹತ್ತಿರ   ರೋಡಿನ  ಮೇಲೆ ಕೈಪಂಪ ಬೊರಿಂಗ  ಎದುರುಗಡೆ ನಿಮ್ಮ ತಮ್ಮನಾದ ಮಹೇಶ ಮತ್ತು ಅಳಿಯನಾದ ಸತೀಶ ಇವರಿಬ್ಬರೂ ಬರುತ್ತಿದ್ದ ಮೋಟಾರು ಸೈಕಲಿಗೆ ಯಾದಗೀರ ಕಡೆಯಿಂದ ಸೇಡಂ ಕಡೆಗೆ ಹೋದ ಯಾವುದೋ ಒಂದು ವಾಹನವು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಅವರಿಬ್ಬರೂ ಮೋಟಾರು ಸೈಕದೊಂದಿಗೆ ಬಿದ್ದಿದ್ದು ಆಗ ಅಪಘಾತ ಮಾಡಿದ ವಾಹನವು ಅಲ್ಲಿ ನಿಲ್ಲಿಸದೆ ಅದರ ಚಾಲಕನು ಅದನ್ನು ಓಡಿಸಿಕೊಂಡು ಹೋಗಿರುತ್ತಾನೆ ಈ ಘಟನೆಯಿಂದ ಮಹೇಶ ಇತನಿಗೆ ತಲೆಗೆ  ಎಡಗಾಲಿನ ಮೊಳಕಾಲಿಗೆ, ಭಾರಿ ರಕ್ತ ಗಾಯವಾಗಿ ಎಡಗಾಲು ಮುರಿದಿರುತ್ತದೆ ಆತನು ಮಾತನಾಡುವ  ಸ್ತಿತಿಯಲ್ಲಿ ಇರುವದಿಲ್ಲಾ ನಿಮ್ಮ ಅಳಿಯನಾದ ಸತಿಶ ಇತನಿಗೆ ತಲೆಗೆ ಭಾರಿ ರಕ್ತ ಗಾಯವಾಗಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದ ಮೇರೆಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ಬಸವರಾಜ ತಂದೆ ಶಿವಣಗೌಡ ಮಾಲಿಬಿರಾದಾರ ಸಾ:ಆಲೂರ ತಾ:ಜೇವರ್ಗಿ ರವರ ಮಗನಾದ ಶರಣಗೌಡ ಇವನಿಗೆ ಮದುವೆ ದಿವಸ ನಮ್ಮೂರಿಗೆ ಬರಲು ಹೇಳಿ ಹೋಗಿದ್ದು ದಿನಾಂಕ 25-5-2014 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ನಮ್ಮೂರಿನ ಹೊಟೇಲವೊಂದರಲ್ಲಿ ಚಹಾ ಕುಡಿಯುತ್ತಾ ಕುಳಿತಾಗ ನನಗೆ ಯಾರೋ ಪೊನ್ ಮಾಡಿ ವಿಷಯ  ತಿಳಿಸಿದ್ದೇನೆಂದರೆ, ರಾಷ್ಟ್ರಿಯ ಹೆದ್ದಾರಿ 218 ರ ರಸ್ತೆಯ ಸರಡಗಿ ಬಿ ಕ್ರಾಸ ಹತ್ತಿರ ಕೆ.ಎ 32 ಯು 8033 ನೇದ್ದರ ಮೊಟಾರ ಸೈಕಲ ಮೇಲೆ ಹೊರಟಿದ್ದ ವ್ಯಕ್ತಿಗೆ ಇಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ಯಾವುದೋ ಒಂದು ವಾಹನ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡೆಯಿಸಿ ತನ್ನ ವಾಹನ ನಿಲ್ಲಿಸದೇ ಹಾಗೇಯೆ  ಹೋಗಿರುತ್ತಾನೆ. ಮೊಟಾರ ಸೈಕಲ ಸವಾರನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದಲ್ಲದೆ ಬಾಯಿಯಿಂದ, ಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಚಂದ್ರಕಾಂತ ಮಾಲಿ ಬಿರಾದಾರ ಇಬ್ಬರೂ ಕೂಡಿಕೊಂಡು ಬಂದು ನೋಡಲಾಗಿ ಸದರಿ ನನ್ನ ಮಗನಾದ ಶರಣಗೌಡ ಈತನಿಗೆ ಯಾವುದೋ ಒಂದು ವಾಹನ ಡಿಕ್ಕಿ ಪಡೆಯಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿದ್ದಲ್ಲದೆ, ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು, ಎಡ ಗೈ ಭುಜಕ್ಕೆ ಪೆಟ್ಟಾಗಿದ್ದು  ಬಾಯಿಯಿಂದ, ಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 25-05-2014 ರಂದು ಚಿಂಚನಸೂರ ಗ್ರಾಮದಲ್ಲಿ ಮಹಾಪೂರ ತಾಯಿ ದೇವಿಯ ಜಾತ್ರೆ ಮತ್ತು ಪಲ್ಲಕ್ಕಿ ಇದ್ದುದರಿಂದ ದರ್ಶನಕ್ಕೆ ಹೋಗಬೇಕೆಂದು ಕು: ಕಾಮಾಕ್ಷಿ ತಂ ದಶರಥ ಹರಸೂರಕರ್ ಸಾ|| ಮಹಾಗಾಂವ ಕ್ರಾಸ  ರವರು ದಿನಾಂಕ 24-05-2014 ರಂದು ರಾತ್ರಿ ನಾನು ನನ್ನ ತಂಗ್ಗಿಯಾದ ಮೀನಾಕ್ಷಿ , ಅವಳ ಮಗಳಾದ ಅರ್ಪಿತಾ ಹಾಗೂ ನನ್ನ ತಮ್ಮನ ಹೆಂಡತಿಯಾದ ಇತನ ಹೆಂಡತಿ ಮನಿಶಾ ಕೂಡಿಕೊಂಡು ನಮ್ಮ ಪರಿಚಯದವನಾದ ಕಟ್ಟೊಳ್ಳಿ ಗ್ರಾಮದ ಮಲ್ಲಿಕಾರ್ಜುನ ತಂದೆ ರಾಜಪ್ಪ ಇತನ ಟಂಟಂ ಆಟೋ ನಂ ಕೆ,, 32 9969 ನೇದ್ದು ಕಟ್ಟಿಕೊಂಡು ರಾತ್ರಿ 8.00 ಗಂಟೆಗೆ ಮನೆಯಿಂದ ಕುರಿಕೋಟ ಮಾರ್ಗವಾಗಿ ಚಿಂಚನಸೂರಕ್ಕೆ ಹೊರಟಿದ್ದು 8.10 ಪಿ,ಎಮ್,ಕ್ಕೆ ಕುರಿಕೋಟ ಹತ್ತಿರ ಇರುವ ಶಿವಪ್ರಭು ಪಾಟೀಲ ಪೆಟ್ರೊಲಪಂಪ ಹತ್ತಿರ ಇರುವ ಎನ್, ಹೆಚ್, 218 ರ ಮೇಲಿಂದ ಹೋಗುತ್ತಿರುವಾಗ ನಾವು ಕುಳಿತ ಟಂಟಂ ಚಾಲಕ ಮಲ್ಲಿಕಾರ್ಜುನ ಇತನು ತನ್ನ ವಶದಲ್ಲಿದ್ದ ಟಂಟಂ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮ,ಲೆ ಕಟ್ಟಮಾಡಿ ಪಲ್ಟಿ ಮಾಡಿ ಅಪಘಾತಗೊಳಿಸಿದ್ದರಿಂದ ಅಪಘಾತದಲ್ಲಿ  ನನಗೆ ಆಟೋ ನನ್ನ ಬಲಗಾಲ ಮೇಲ ಬಿದ್ದಾಗ ಮೊದಲಿನಿಂದಲೆ ನಾನು 2 ಕಾಲುಗಳಿಂದ ಅಂಗವಿಕಲ ವಿದ್ದು ನನ್ನ ಬಲಗಾಲಿನ ಹಿಂಬಡಿ ಮೇಲಭಾಗಕ್ಕೆ ಭಾರಿ ಒಳಪೆಟ್ಟಾಗಿ ಕಾಲು ಮುರಿದಂತೆ ಆಗಿರುತ್ತದೆ ನಂತರ ನನ್ನ ತಂಗಿ ಮಿನಾಕ್ಷಿಯ ಮಗಳಾದ ಅರ್ಪಿತಾ ಇವಳಿಗೆ ನೋಡಲಾಗಿ ಅವಳ ಬಲಗೈ ಮಣಿಕಟ್ಟಿನ ಹತ್ತಿರ ಭಾರಿ ಒಳಪಟ್ಟಾಗಿ ಕೈ ಮುರಿದಂತೆ ಆಗಿದ್ದು ಎಡಮೇಲಕಿನ ಹತ್ತರ ಒಳಪೆಟ್ಟಾಗಿದ್ದು ಕಂಡು ಬಂತ್ತು ಮೀನಾಕ್ಷಿ,ಹಾಗೂ ಮನೀಶಾಗೆ ಯಾವುದೆ ಗಾಯಗಳು ಆಗಿಲ್ಲಾ ಟಂಟಂ ಚಾಲಕ ಮಲ್ಲಿಕಾರ್ಜುನ ಇತನಿಗೆ ಯಾವುದೆ ಗಾಯಗಳಾಗಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ವಿಜಯಕುಮಾರ ತಂದೆ ನಿಂಗಪ್ಪಾ ಸಾ: ಜೋಗೂರ ಇವರು ದಿನಾಂಕ: 20-05-2014 ರಂದು ನಮ್ಮ ಊರಿನವರಾದ ಶ್ರೀ ಶಂಕ್ರೇಪ್ಪಾ ಮ್ಯಾಕೇರಿ ಇವರ ಮಗನ ಮದುವೆ ಇದ್ದು ನಾನು ಜೋಗೂರ ಗ್ರಾಮಕ್ಕೆ ಹೋಗಿದ್ದೆ ಆಗ ಮದುವೆ ಮುಗಿಸಿಕೊಂಡು ಗುಲಬರ್ಗಾಕ್ಕೆ ಬರುವ ಸಮಯದಲ್ಲಿ ನಮ್ಮೂರಿನ ಹೆಣ್ಣು ಮಕ್ಕಳ ಶೌಚಾಲಯ ಇಲ್ಲದಿರುವುದರಿಂದ ನಮ್ಮೂರಿನ ಪೂಜಾರಿ ಹೆಣ್ಣು ಮಕ್ಕಳು ಮತ್ತು ಕೂಲಿ ಸಮಾಜದ ಹೆಣ್ಣು ಮಕ್ಕಳು ನನ್ನ ಬಳಿಗೆ ಬಂದು ಹೇಳಿದಾಗ ಆಗ ನಾನು ಒಬ್ಬ ಸಮಾಜ ಸೇವೆ ಮಾಡುವ ವ್ಯಕ್ತಿಯಾಗಿದ್ದು ನಾನು ಕವಲಗಾ(ಬಿ) ಗ್ರಾಮ ಪಂಚಾಯತ ಅದ್ಯಕ್ಷರಾದ ಚಂದ್ರು ನಡಗಟ್ಟಿ ಮು: ಹಾಗರಗುಂಡಗಿ ಇವರಿಗೆ ಫೋನ ಮಾಡಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಿನಗ್ಯಾಕ ಬೇಕು ನಾ ಅದ್ಯಕ್ಷ ಇದ್ದಿನಿ ನಾ ಹೆಣ್ಣು ಮಕ್ಕಳಿಗೆ ಶೌಚಾಲಯ ಕಟ್ಟಿಸಿ ಕೊಡುತ್ತಿನಿ ಅಂತಾ ಅಂದು ಜಾತಿ ನಿಂದನೆ ಮಾಡಿರುತ್ತಾನೆ. ಅದೆ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯನಾದ ಶರಣು ತಳವಾರ ಇವರು ಕೂಡಿಕೊಂಡು ಜೋಗೂರದಿಂದ ಗುಲಬರ್ಗಕ್ಕೆ ಬರುವಾಗ ಫರಹತಾಬಾದ ಪೊಲೀಸ ಠಾಣೆಯಲ್ಲಿ ರೌಡಿಶೀಟರ ಆಗಿರುವ ಗ್ರಾಮ ಪಂಚಾಯತ ಅದ್ಯಕ್ಷ ಚಂದ್ರು ನಡಗಟ್ಟಿ ಮತ್ತು ಅವನ ಗೆಳೆಯ ಇಬ್ಬರು ಕೂಡಿಕೊಂಡು ನಾವು ಬರುತ್ತಿರುವ ಬೈಕನ್ನು ಜೋಗೂರ ಹತ್ತಿರ 3 ಪಿ.ಎಮಕ್ಕೆ ನಿಲ್ಲಿಸಿ ಚಂದ್ರ ನಡಗಟ್ಟಿ ಅವರು ನನಗೆ ಬಡಗೆಯಿಂದ ಹೋಡೆದು ಗುಪ್ತಗಾಯ ಮತ್ತು ಎಡಭುಜದ ಮೇಲೆ ಬಡಿಗೆಯಿಂದ ಹೋಡೆದು ಗಾಯಗೋಳಿಸಿ ಅಂಲಿಂದ ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಚಂದ್ರಕಾಂತ ತಂದೆ ಭೋಜರಾಯ ನಡಗಟ್ಟಿ ಸಾ: ಹಾಗರಗುಂಡಗಿ ಇವರು ದಿನಾಂಕ: 20-05-2014 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಮಲ್ಲು ಖನ್ನಾ , ಅಂಬೃತ ಕೋಬಾಳ, ಮಲ್ಕಪ್ಪಾ ಹಬಸಿ ನಮ್ಮೂರಿನ ಶರಣ ಬಸವೇಶ್ವರ ದೇವಸ್ಥಾನದ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ  ಜೋಗೂರ ಗ್ರಾಮದ ವಿಜಯಕುಮಾರ ತಂದೆ ನಿಂಗಪ್ಪಾ ಇವರು ನನ್ನ ಮೊಬೈಲ ನಂಬರ 9945570556 ನೇದ್ದಕ್ಕೆ ಮೊ. ನಂ. 9980317751 ನಂಬರಿನಿಂದ ಫೊನ ಮಾಡಿ ಜೋಗೂರ ಗ್ರಾಮದ ಸರ್ಕಾರಿ ಗೈರಾಣು ಜಾಗೆಯಲ್ಲಿ 8 ಪ್ಲಾಟ ನಾನು ಹೇಳಿದವರ ಹೆಸರಿಗೆ ಮತ್ತು ನನ್ನ ಹೆಸರಿಗೆ ಮಾಡಬೇಕು ಅಂತಾ ಅಂದು ಮತ್ತು ಉದ್ಯೋಗ ಖಾತ್ರಿ ಕಾಮಗಾರಿಗೆ ನಾನು ಕಂಪ್ಲೆಟ್ ಮಾಡಿರುತ್ತೆನೆ ಆ ಕಂಪ್ಲೆಟ್ ಹಿಂದಕ್ಕೆ ಪಡೆದುಕೊಳ್ಳಲು 30.000 ಸಾವಿರ ರೂಪಾಯಿ ಕೋಡಬೇಕು ಮತ್ತು ಸಾರ್ವಜನಿಕ ಶೌಚಾಲಯ ಕಟ್ಟಿಸಿ ಕೋಡು ಎಂದಾಗ ಸರಕಾರದ ಆದೇಶ ಸಾರ್ವಜನಿಕ ಶೌಚಾಲಯಕ್ಕೆ ಅನುಮತಿ ಇಲ್ಲಾ ವೈಯಕ್ತಿಕ ಶೌಚಾಲಯಕ್ಕೆ ಅನುಮತಿ ಇರುತ್ತದೆ ಅಂತಾ ನಾನು ಅಂದಾಗ ಇಲ್ಲಾ ಇಲ್ಲಾ ನಾನು ಹೇಳಿದಂಗೆ ಕಟ್ಟಸಿಕೊಡಬೇಕು ಅಂತಾ ಅಂದಾಗ ಇಲ್ಲಾ ವಿಜಯಕುಮಾರ ಸರಕಾರದ ಆದೇಶದಂತೆ ಮಾಡಬೇಕಾಗುತ್ತದೆ ಅಂತಾ ನಾನು ಅಂದಾಗ ಎ ಭೋಸಡಿ ಮಗನೆ ನಾನು ಹೇಳಿದಷ್ಟು ಕೇಳು ಇಲ್ಲಾ ಅಂದರೆ ಪಂಚಾಯತ ಎದುರು ನಿನ್ನ ವಿರುಧ್ಧ ಧರಣಿ ಮಾಡಿಸುತ್ತೆನೆ  ನಾನು ಹೇಳಿದಷ್ಟು ಕೇಳದಿದ್ದರೆ ನಿನು ಗುಲಬರ್ಗಾದಲ್ಲಿ ಸಿಕ್ಕರೆ ನಿನ್ನ ಜೀವ ತಗೆಯುತ್ತೆನೆ ಅಂತಾ ಜೀವದ ಭಯ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಮಾಡಿದ ಪ್ರಕರಣ
ಅಫಜಲಪೂರ ಠಾಣೆ : ದಿನಾಂಕ 09-04-2014 ರಂದು ಸದರಿ ಸೈಪನಸಾಬ ರವರಿಗೆ ಇವತ್ತು ನಮ್ಮ ಸ್ಕ್ರ್ಯಾಪ ಮಾಲನ್ನು ಲಾತೂರಗೆ ಕಳುಹಿಸಬೇಕು ನಿಮ್ಮಲ್ಲಿ ಯಾವುದಾದರು ವಾಹನ ಇದ್ದರೆ ಕಳುಹಿಸಿ ಅಂತಾ ಹೆಳಿದ್ದು. ನಂತರ ಸೈಪನಸಾಬ ಒಂದು ಲಾರಿ ಕಳುಹಿಸಿಕೊಟ್ಟಿದ್ದು, ಅದರ ಮೇಲೆ ಒಬ್ಬನೆ ಚಾಲಕ ಇರುತ್ತಾನೆ ಅಂತಾ ಹೆಳಿದರು, ಸದರಿ ಲಾರಿ ನಂ ಎಮ್.ಹೆಚ್-24 ಜೆ-9606 ನೇದ್ದು ಇತ್ತು, ಸದರಿ ಲಾರಿಯಲ್ಲಿ ನಮ್ಮ ಅಂಗಡಿಯಲ್ಲಿದ್ದ 10480 ಕೆ.ಜಿ ಸ್ಕ್ರ್ಯಾಪ ಸಮಾನು ಅಂದಾಜು 3,13,307/- ರೂ ಕಿಮ್ಮತ್ತಿನದು ತುಂಬಿಸಿದೆನು, ಆಗ ಸದರಿ ಸ್ಕ್ರ್ಯಾಪ ಸಾಮಾನು ಲಾರಿಯಲ್ಲಿ ತುಂಬಿದವರು 1] ಸುಭಾಶ ಜಾಧವ ಸಾ|| ಅಜಲಪೂರ 2] ಮೌಲಾಲಿ ಕರಜಗಿ, 3] ರೇವಣಸಿದ್ದ  ಪೂಜಾರಿ, 4] ದತ್ತು ಪೂಜಾರಿ ಸಾ|| ಎಲ್ಲರು ಮಲ್ಲಾಬಾದ ಇವರು ಇರುತ್ತಾರೆ. ಸದರಿ ಲಾರಿ ಚಾಲಕನ ಹೆಸರು ರಾಜು ಅಂತಾ ಹೇಳಿರುತ್ತಾನೆ. ಸದರಿ ಚಾಲಕನಿಗೆ ಈ ಮಾಲನ್ನು ಲಾತೂರದಲ್ಲಿ ಗಜಾನನ ಎಮ್.ಎಸ್.ಎಮ್ ಸ್ಟೀಲ್ಸ್ ರವರಿಗೆ ಒಪ್ಪಿಸುವಂತೆ ಕಾಗದ ಪತ್ರಗಳನ್ನು ಕೊಟ್ಟು ಸಾಯಂಕಾಲ 6;00 ಗಂಟೆ ಕಳುಹಿಸಿಕೊಟ್ಟಿರುತ್ತೇವೆ. ಮರುದಿನ ದಿನಾಂಕ 10-04-2014 ರಂದು ಸದರಿ ಗಜಾನನ ಎಮ್.ಎಸ್.ಎಮ್ ಸ್ಟೀಲ್ಸ್ ರವರಿಗೆ ಫೋನ ಮಾಡಿ ನಮ್ಮ ಸ್ಕ್ರ್ಯಾಪ ಮಾಲು ತಲುಪಿದ ಬಗ್ಗೆ ವಿಚಾರಿಸಿದಾಗ ನಮ್ಮ ಹತ್ತಿರ ನಿಮ್ಮ ಸ್ಕ್ರ್ಯಾಪ ಸಾಮಾನು ತುಂಬಿದ ಯಾವುದೆ ಲಾರಿ ಬಂದಿರುವುದಿಲ್ಲ ಅಂತಾ ಹೇಳಿದರು, ನಂತರ ದಿನಾಂಕ 11-04-2014 ರಂದು ಪುನಃ ಲಾತೂರಗೆ ಫೋನ ಮಾಡಿ ವಿಚಾರಿಸಿದಗಾ ನಿಮ್ಮ ಹೆಸರಿನ ಯಾವುದೆ ಸ್ಕ್ರ್ಯಾಪ ಸಾಮಾನುಗಳು ಬಂದಿರುವುದಿಲ್ಲ ಅಂತಾ ಹೆಳಿದರು ದಿನಾಂಕ 12-04-2014 ರಂದು ನಾನು ಮತ್ತು ಸೈಪನಸಾಬ ಚಿಕ್ಕಳಗಿ ರವರು ಕೂಡಿಕೊಂಡು ಲಾತೂರಕ್ಕೆ ಹೋಗಿ ಅಲ್ಲಿ ಗಜಾನನ ಎಮ್.ಎಸ್.ಎಮ್ ಸ್ಟೀಲ್ಸ್ ರವರಿಗೆ ಬೇಟಿ ಯಾಗಿ ವಿಚಾರಿಸಿದಾಗ ನಿಮ್ಮ ಸ್ಕ್ರ್ಯಾಪ ಸಾಮಾನು ತುಂಬಿಕೊಂಡು ನಿಮ್ಮ ಹೆಸರಿನ ಮೇಲೆ ನಮ್ಮ ಹತ್ತಿರ ಯಾವುದೆ ವಾಹನ ಬಂದಿರುವುದಿಲ್ಲ ಅಂತಾ ತಿಳಿಸಿದರು. ನಂತರ ನಾವಿಬ್ಬರು ಕೂಡಿ ಅಲ್ಲೆ ಎಲ್ಲಾ ಕಡೆ ಸದರಿ ವಾಹನ ಹುಡಕಾಡಿ ಸಿಗದಿದ್ದರಿಂದ ಮರಳು ನಮ್ಮೂರಿಗೆ ಬಂದಿರುತ್ತೇವೆ. ಸದರಿ ಲಾರಿ ನಂ ಎಮ್.ಹೆಚ್-24 ಜೆ-9606 ನೇದ್ದರ ಚಾಲಕ ರಾಜು ಇವನು  ನಮ್ಮ ಸ್ಕ್ರ್ಯಾಪ ಮಾಲನ್ನು ನಾವು ಹೇಳಿದ ಜಾಗದಲ್ಲಿ ತಲುಪಿಸುತ್ತೆನೆ ಅಂತಾ ಹೇಳಿ ತೆಗೆದುಕೊಂಡು ಹೋಗಿ ನಾವು ಹೇಳಿದ ವಿಳಾಸಕ್ಕೆ ತಲುಪಿಸದೆ ಮತ್ತು ನಮ್ಮ ಹತ್ತಿರ ಮರಳಿ ಬರದೆ, ನಮಗೆ ನಂಬಿಸಿ ದ್ರೋಹ ಮಾಡಿ ಮೋಸದಿಂದ ತೆಗೆದುಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: