ಕಳವು ಪ್ರಕರಣಗಳು :
ನಿಂಬರ್ಗಾ
ಠಾಣೆ : ಶ್ರೀ ಗುಂಡೆರಾವ ತಂದೆ ಶರಣಪ್ಪ ಹಳಿಮನಿ ಸಾ||
ನಿಂಬರ್ಗಾ ಇವರು ದಿನಾಂಕ 27-05-2014 ರಂದು 0100 ಗಂಟೆಯಿಂದ 5 ಗಂಟೆಯ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಬಾಗಿಲ ಕೀಲಿ ಮುರಿದು
ಮನೆಯಲ್ಲಿನ ಟೀಜೂರಿಯಲ್ಲಿ ಇಟ್ಟಂತಹ 2 ಬಂಗಾರದ ಸುತ್ತುಂಗರಗಳು ಅ.ಕಿ 14000/- ರೂಪಾಯಿ ಹಾಗೂ 5000/- ರೂಪಾಯಿ ನಗದು ಹಣ ಮತ್ತು ಫಿರ್ಯಾದಿಯ
ಪ್ಯಾಂಟಿನ ಕಿಸೇಯಲ್ಲಿ ಇಟ್ಟಿರುವ 5000/- ರೂಪಾಯಿ ನಗದು ಹಣ ಹೀಗೆ ಒಟ್ಟು 2400/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ನಿಂಬರ್ಗಾ
ಠಾಣೆ : ಶ್ರೀ ರಾಚಣ್ಣಾ ತಂದೆ
ಮಲ್ಲಿನಾಥ ಅಮಾಣಿ ಸಾ||
ನಿಂಬರ್ಗಾ ಇವರು ದಿನಾಂಕ 26-05-2014 ರಂದು 11 ಗಂಟೆಯಿಂದ ದಿನಾಂಕ 27-05-2014 ರಂದು 6 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿನ
ಟೀಜೂರಿಯಲ್ಲಿ ಇಟ್ಟಂತಹ ಅರ್ಧ ತೊಲಿಯ ಎರಡು ಬಂಗಾರದ ಉಂಗುರ ಅ.ಕಿ 12000/-, ಬೆಳ್ಳಿ ಸಾಮಾನು ಚಮಚಾ, ವಾಟಿ ಅ.ಕಿ 2000/- ಮಗುವಿನ ಕಿವಿಯಲ್ಲಿಯ ಬಂಗಾರದ ರಿಂಗ 1500/-, ಮಗುವಿನ ಬಂಗಾರದ
ಉಂಗುರ 1500/-, ನಗದು ಹಣ 6000/- ರೂಪಾಯಿ ಹೀಗೆ ಒಟ್ಟು 23000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಹಾಗೂ ಬೆಳ್ಳಿಯ
ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ
ಠಾಣೆ : ಶ್ರೀ ಶಂಭುಲಿಂಗಯ್ಯಾ ತಂ ರಾಚಯ್ಯಾ ಮಠಪತಿ ಸಾ|| ತೊಂಡಕಲ ತಾ||ಜಿ|| ಗುಲಬರ್ಗಾ ದಿನಾಂಕ 26-05-2014 ರಂದು ತಾನು ಹೊಲಕ್ಕೆ ಹೋಗಿ
ಸಾಯಂಕಾಲ ಮನೆಗೆ ಬಂದಿದ್ದು ತನ್ನ ಆಳು
ಮನುಷ್ಯ ಕೂಡಾ ರಾತ್ರಿ 8.30 ಗಂಟೆಗೆ ಮನೆಗೆ ಬಂದು
ಎತ್ತುಗಳು ಮತ್ತು ಎಮ್ಮೆ ಹೋಲದಲ್ಲಿ ಕಟ್ಟಿ ಮೇವು
ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿ ತನ್ನ ಮನೆಗೆ ಹೋದನು ಇಂದು ಬೆಳಗ್ಗಿನ ಜಾವ 6 ಗಂಟೆಗೆ ನಮ್ಮ ಆಳು ಮನುಷ್ಯ ಹೋಲಕ್ಕೆ ಹೋಗಿದ್ದು 6.15 ಎ,ಎಮ್,ಕ್ಕೆ ವಾಪಸ ಮನೆಗೆ ಬಂದು ತಿಳಿಸಿದ್ದೆನಂದರೆ ಒಂದು ಎತ್ತು ಕಾಣುತ್ತಿಲ್ಲಾ ಅಂತಾ
ಹೇಳಿದ್ದಾಗಿ ತಾನು ತನ್ನ ಮಕ್ಕಳೊಂದಿಗೆ ಹೋಲಕ್ಕೆ ಹೋಗಿ ನೊಡಲಾಗಿ ಒಂದು ಎಮ್ಮೆ ಮತ್ತು ಒಂದು ಎತ್ತು
ಹೋಲದಲ್ಲಿದ್ದು ಇನ್ನೊಂದು ಬೀಳಿ ಬಣ್ಣದ ಸಹದೃಡ ಮೈಕಟ್ಟಿನ 2 ಕೋಡುಗಳು ನೇರವಾಗಿದ್ದ ಅಂದಾಜು 7-8 ವರ್ಷ ವಯಸ್ಸಿನ ಅ.ಕಿ.
45,000 ರೂ ಕಿಮ್ಮತ್ತಿ ನ ಎತ್ತು ಕಾಣಲಿಲ್ಲಾ ದಾವಣಿಯಲ್ಲಿ ನೋಡಿದ್ದಾಗ ನನ್ನ ಎತ್ತು ಹಗ್ಗದ
ಸಮೇತಾ ಬಿಡಿಸಿಕೊಂಡು ಹೊಗಿದ್ದು ಕಂಡು ಬಂತ್ತು ನಂತರ ನಮ್ಮ ಆಳು ಮನುಷ್ಯ ನನ್ನ ಮಕ್ಕಳು ಹಾಗೂ ನಾನು
ಅಡವಿಯಲ್ಲಿ ಎಲ್ಲಾ ಕಡೆ ಹುಡುಕಾಡಿದರು
ಪತ್ತೆಯಾಗಿಲ್ಲಾ ನಿನ್ನೆ ದಿನಾಂಕ 26-05-2014 ರಂದು ರಾತ್ರಿ 9 ಪಿ,ಎಮ್,ದಿಂದ ಇಂದು 27-05-2014 ರ ಬೆಳಗ್ಗಿನ ಜಾವ 5.30 ಎ,ಎಮ್,ದ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ತೋಟದಲ್ಲಿ ಕಟ್ಟಿದ ಒಂದು ಎತ್ತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು :
ಫರತಾಬಾದ
ಠಾಣೆ : ಶ್ರೀ ಸೋಮಶೇಖರ ತಂದೆ ರೇವಣಸಿದ್ದಪ್ಪಾ ಜನಕಟ್ಟಿ ಸಾ:ಡೊಂಗರಗಾಂವ ತಾ:ಜಿ: ಗುಲಬರ್ಗಾ ಇವರು ಲಾರಿ ನಂ ಎಮ್
ಹೆಚ್ 25 ಬಿ 9066
ನೆದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡು ಉಪ ಜೀವನ
ಸಾಗಿಸುತ್ತಿದ್ದೆನೆ . ನನ್ನಂತೆ ನನ್ನ ಮಗ ಪ್ರಭು ಸಹ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 24-05-2014 ರಂದು 6 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066 ನೆದರಲ್ಲಿ ರಾಯಚೂರನ
ವಿಜಯಲಕ್ಷ್ಮೀ ಕಮರ್ಸಿಯಲ ಕಂಪನಿಯಿಂದ ಅಕ್ಕಿಲೋಡ ಮಾಡಿಕೊಂಡು ಗುಲಬರ್ಗಾಕ್ಕೆ ಬರುತ್ತಿದ್ದೆನೆ ಅಂತಾ ನನ್ನ ಮಗ ಪ್ರಭು ಇವರು ನನಗೆ ಪೋನ ಮಾಡಿ
ತಿಳಿಸಿರುತ್ತಾನೆ. ಹೀಗಿದ್ದು ದಿನಾಂಕ 25-05-2014 ರಂದು ರಾತ್ರಿ 12-15 ಗಂಟೆಯ ಸುಮಾರಿಗೆ ನಾನು ನಮ್ಮೂರಿನಲ್ಲಿದ್ದಾಗ
ನನ್ನ ಮಗ ಪ್ರಭು ಈತನು ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 24-05-2014 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ನಾನು
ಅಕ್ಕಿಲೋಡ ಮಾಡಿದ ನಮ್ಮ ಲಾರಿ ನಂ ಎಮ್ ಹೆಚ್ 25 ಬಿ 9066
ನೆದ್ದನ್ನು ರಾಯಚೂರಿನಿಂದ ಗುಲಬರ್ಗಾ ಕಡೆಗೆ ರಾಷ್ಟ್ರೀಯ ಹೆದ್ದಾರಿ 218
ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ಬರುತ್ತಿರುವಾಗ ನನ್ನ
ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಪಲ್ಟಿಗೊಳಿಸಿರುತ್ತೆನೆ. ಇದರಿಂದ ನನಗೆ ಯಾವುದೇ
ಗಾಯ ವೈಗೆರೆಯಾಗಿರುವುದಿಲ್ಲಾ ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನಮ್ಮ ಅಳಿಯ ಶಿವಕುಮಾರ ಬೀಮಳ್ಳಿ ಇಬ್ಬರೂ ಕೂಡಿ ಸದರ ಸ್ಥಳಕ್ಕೆ ಬಂದು
ನೋಡಲಾಗಿ ನನ್ನ ಮಗ ಪ್ರಭು ಇತನು ಅಕ್ಕಿ ಲೋಡ ಮಾಡಿದ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಗಡೆಗೆ ಲಾರಿಯನ್ನು ಪಲ್ಟಿಗೊಳಿಸಿ
ಹಾನಿಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 26/05/2014
ರಂದು ರಾತ್ರಿ 10:30 ಪಿ.ಎಂ. ಸುಮಾರಿಗೆ ನನ್ನ ಮಗ ಫೈಸಲ ಇತನು ಜಾಗನೇಕಿ ರಾತ್ ಸಲುವಾಗಿ
ಮನೆಯಿಂದ ಪಲ್ಸರ್ ಮೋಟಾರ ಸೈಕಲ ನಂ. KA 32 Y 2211 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ KNZ ಫಂಕ್ಷನ್
ಹಾಲ್ ಎದರುಗಡೆ ಇರುವ ರಿಂಗ್ ರೋಡದಲ್ಲಿ ಪಲ್ಸರ್ ಮೋಟಾರ ಸೈಕಲ ಸ್ಕಿಡ್ ಆಗಿ ಬಿದ್ದಿದ್ದರಿಂದ
ಎಡಗೈ ಮೊಳಕೈ ಹತ್ತಿರ ಭಾರಿ ಗಾಯವಾಗಿ ಮುರಿದಂತಾಗಿದ್ದು, ಎಡಗಡೆ ತೊಡೆಯ ಹತ್ತಿರ ಭಾರಿ ಗಾಯ ಹಾಗು
ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಅಲ್ಲಿನ ಜನರು ನೋಡಿ ಅಂಬುಲೆನ್ಸ್ ದಲ್ಲಿ ಹಾಕಿ
ಉಪಚಾರಕ್ಕಾಗಿ ಸತ್ಯ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಂತಾ ಶ್ರೀ ಇಕ್ರಾಮೂದ್ದಿನ ತಂದೆ ಮೈನೂದ್ದಿನ ಖಲೀಫ್ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ತಿಪ್ಪಣ್ಣಾ ತಂದೆ ಭಾಗಣ್ಣಾ ಹೊಸಮನಿ ಸಾ;ಜನಿವಾರ ಹಾವ;
ಬಸವೇಶ್ವರ ಕಾಲನಿ ಎಂ.ಜಿ ರೋಡ ಕೆ.ಇ.ಬಿ ಆಪೀಸ ಎದುರುಗಡೆ ಗುಲಬರ್ಗಾ ಇವರ
ಮಗಳಾದ ಸರಸ್ವತಿ ವ|| 17 ವರ್ಷ ಇವಳಿಗೆ ನಮ್ಮ ಗ್ರಾಮದವನೆಯಾದ ರಮೇಶ ತಂದೆ ಸಿದ್ದಪ್ಪಾ ಇತನು ದಿನಾಂಕ:20.05.2014 ರಂದು 3 ಪಿ ಎಮ್ ಕ್ಕೆ ನಾವು ಮನೆಯಲ್ಲಿ ಯಾರು ಇಲ್ಲದ
ಸಮಯದಲ್ಲಿ ನನ್ನ ಮಗಳಿಗೆ ಅಪಹರಣ ಮಾಡಿಕೋಂಡು
ಹೋಗಿರುತ್ತಾನೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment