ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ.
ಜಯಶ್ರೀ ಗಂಡ ವಿನಾಯಕ ಭೋಸಲೆ ಸಾ:ರವಿವಾರಪೇಟ, ಸೋಲಾಪೂರ ಇವರ ದಿನಾಂಕ:26-05-2014 ರಂದು ನಾವು
ನಮ್ಮ ಕುಟುಂಬ ಸಮೇತ ತಿರುಪತಿ ದೇವರ ದರ್ಶನಕ್ಕೆಂದು ಕಾರ ನಂ-MH12-HN-2557 ನೇದ್ದರಲ್ಲಿ
ಕುಳಿತು ಸೋಲಾಪೂರದಿಂದ ತಿರುಪತಿಗೆ ಹೋಗಿ ದೇವರ ದರ್ಶನ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಸೇಡಂ
ಮಾರ್ಗವಾಗಿ ಬರುವಾಗ, ರಂಜೋಳ-ಕುರಕುಂಟಾ ಕ್ರಾಸ್ ಮಧ್ಯೆದಲ್ಲಿ, ರೋಡಿನ ಮಧ್ಯೆದಲ್ಲಿ ಸೇಡಂ ಕಡೆ
ಮುಖಮಾಡಿ ಒಂದು ಲಾರಿ ನಂ-AP28-V-6502 ನೇದ್ದು ಯಾವುದೇ ಮುನ್ಸೂಚನೆ ಇಂಡಿಕೇಟರ್ ಅಥವಾ ಲಾರಿ
ಸುತ್ತಲೂ ಸುಚನಾ ಕಲ್ಲುಗಳು ಇಡದೇ ನಿಷ್ಕಾಳಜಿ ತನದಿಂದ ರೋಡಿನ ಮೇಲೆ ನಿಲ್ಲಿಸಿದ್ದು, ಸದರಿ
ವಾಹನಕ್ಕೆ ಮಗ್ಗಲಾಗಿ ಸೈಡ್ ತೆಗೆದುಕೊಂಡು ನಮ್ಮ ಕಾರ ಚಾಲಕನು ಹೋಗುತ್ತಿ ರುವಾಗ, ಎದುರುಗಡೆಯಿಂದ
ಒಂದು ಲಾರಿ ಟ್ಯಾಂಕರ್ ನಂ-KA22-B-9739 ನೇದ್ದರ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಅತೀವೇಗ
ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿದ್ದರಿಂದ
ಅಪಘಾತದಲ್ಲಿ ನನಗೆ ಭಾರಿ ರಕ್ತಗಾಯಗಳಾದವು ನನ್ನ ಹಾಗೆಯೇ ನಮ್ಮ ತಂಗಿಯಾದ ರಾಜಶ್ರೀ, ಅಣ್ಣನಾದ
ವಿನಾಯಕ, ತಾಯಿಯಾದ ಮಂಗಲಾಬಾಯಿ ಹಾಗೂ ನಮ್ಮ ಕಾರ ಚಾಲಕನಾದ ನಾಗೇಶ ಇವರುಗಳಿಗೆ ಸಾದಾ ಹಾಗೂ ಭಾರಿ
ರಕ್ತಗಾಯಗಳಾದವು. ಹಾಗೂ ಈ ಘಟನೆಯಲ್ಲಿ ಭಾರಿ ರಕ್ತಗಾಯವಾಗಿ ನನ್ನ ಮಕ್ಕಳಾದ ಪ್ರೀತಿ,ಶ್ರುತಿ
ಮತ್ತು ತಂದೆಯಾದ ಕೊಂಡಿಬಾ ಹಾಗೂ ನಮ್ಮ ಗುರುಗಳಾದ ವಿಷ್ಣು ತಂದೆ ದತ್ತು ಮಹರಾಜ ಇವರು
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ದಿನಾಂಕ
28-05-2014 ರಂದು 8;00
ಪಿ.ಎಂ ಕ್ಕೆ ಶ್ರೀಮತಿ ಗಂಗಾಬಾಯಿ ಗಂಡ ಮಹಾದೇವ ಬಾಣಿ ಸಾ|| ದೇವರನಾವುದಗಿ vÁ: ¹AzÀV ರವರ ತಂಗಿ ಗಂಡ ಚಂದ್ರಕಾಂತ ಇವರು ನಮಗೆ ಫೋನ ಮಾಡಿ
ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನನ್ನ ಮಗಳು ಮಾಯಾ ರವರೆಲ್ಲರು ಕೂಡಿಕೊಂಡು ದೇವರು
ಕೇಳಲು ಸಿಂದಿಗಿ ತಾಲೂಕಿನ ತಾರಾಪೂರ ಗ್ರಾಮಕ್ಕೆ ನಮ್ಮೂರ ಶರಬುಕಾಂತ ಕುಮುಸಗಿ ರವರ ಮೋಟರ ಸೈಕಲ್
ನಂ ಕೆ.ಎ-32/ಇಇ-2392 ನೇದ್ದರ ಮೇಲೆ ಗೊಬ್ಬೂರದಿಂದ 6;00 ಪಿ.ಎಂ ಸುಮಾರಿಗೆ
ಹೊರಟಿರುತ್ತೇವೆ, ನಂತರ
ಅಂದಾಜು 7;30
ಪಿ.ಎಂ ಸುಮಾರಿಗೆ ನಾವು ಅಫಜಲಪೂರದ ಸಮೀಪ ನಿರಾವರಿ ಆಫಿಸನಿಂದ ಅರ್ದಾ ಕೀ.ಮಿ ದಾಟಿ ರಸ್ತೆಯ
ಎಡಗಡೆಯಿಂದ ಹೋಗುತ್ತಿದ್ದಾಗ ಮಳೆ ಬಂದು ಅಲ್ಲಿ ಕೆಸರು ಜಾಸ್ತಿಯಾಗಿದ್ದರಿಂದ ನಮ್ಮ ಮೋಟರ ಸೈಕಲ್
ಒಮ್ಮೇಲೆ ಕಟ್ಟ ಮಾಡಲುಹೋಗಿ ಕೆಳಗೆ ಬಿದ್ದೆವು, ನನ್ನ ಹೆಂಡತಿಗೆ
ಒಳಪೆಟ್ಟಾಗಿ ಬಿಕ್ಕುತ್ತಿದ್ದಳು ನನಗೆ ಸ್ವಲ್ಪ ತರಚಿದಗಾಯಗಳು ಆಗಿರುತ್ತವೆ ನನ್ನ ಮಗಳಿಗೆ
ಯಾವುದೆ ಗಾಯಗಳು ಆಗಿರುವುದಿಲ್ಲ, ನಂತರ ನಾನು 108 ಅಂಬೂಲೆನ್ಸಗೆ ಫೋನ ಮಾಡಿ
ವಿಷಯತಿಳಿಸಿ ಅಂಬೂಲೆನ್ಸ್ ಬಂದ ನಂತರ ನನ್ನ ಹೆಂಡತಿಯನ್ನು ಉಪಚಾರ ಕುರಿತು ಅಫಜಲಪೂರ ಸರಕಾರಿ
ಆಸ್ಪತ್ರೆಗೆ ತೆಗದುಕೊಂಡು ಹೋದೆನು. ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾಗ ಅಂದಾಜ ಸಮಯ 8;00
ಗಂಟೆಗೆ ನನ್ನ ಹೆಂಡತಿ ರೇಣುಕಾ ಇವಳು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment