ಕಳವು ಪ್ರಕರಣ:
ಅಫಜಲಪೂರ ಠಾಣೆ: ಅಫಜಲಪೂರ ಪಟ್ಟಣದ ವಾರ್ಡ ನಂ. 20 ರಲ್ಲಿ ಮಾದಾಬಾಳ ತಾಂಡಾ
ಬಡವಾಣೆಯಲ್ಲಿ 2009-10 ನೇ ಸಾಲಿನ ಎಸ್.ಎಫ್.ಸಿ ಅನುದಾನದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ಕಾಮಗಾರಿ
ಕೈಗೊಂಡಿದ್ದು. ದಿ. 30-04-2014 ರಂದು ಪಟ್ಟಣ ಪಂಚಾಯತಿಯ ಕಿರಿಯ ಅಭಿಯಂತರರಾದ ಶಾಂತಪ್ಪ ಹೋಸೂರ
ಮತ್ತು ಸದಸ್ಯರಾದ ಮಳೇಂದ್ರ ಡಾಂಗೆ ರವರು ಸದರಿ ಶೌಚಾಲಯದ ಕಟ್ಟಡದ ಬಗ್ಗೆ ಸ್ಥಳ ಪರಿಶಿಲನೆ ಮಾಡಲು
ಹೊಗಿದ್ದು, ಸದರಿ ಸಮಯದಲ್ಲಿ ಸದರಿ
ಕಟ್ಟಡಕ್ಕೆ ಸಂಭಂದಪಟ್ಟ 1) 1.5 ಎಚ್.ಪಿ ಸಿಂಗಲ ಪೇಸ್ ಮೋಟರ, 2)ಸ್ಟಾಟರ ಬಾಕ್ಸ ಒಳಗಿನ ಸಾಮಾನುಗಳು 3) 500 ಲೀಟರನ
ಸಿಂಟೆಕ್ಸ ರೂ 4) ನೀರು ಸರಬರಾಜು ಪೈಪಲೈನ 5) ಸ್ಯಾನಿಟೇಷನ ಪೈಪುಗಳು ಹೀಗೆ ಒಟ್ಟು ಅಂದಾಜು
29,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶ್ರೀ
ಗಂಗಾಧರ. ಜಿ. ವಾಲಿ ಮುಖ್ಯ ಅದಿಕಾರಿಗಳು ಪಟ್ಟಣ ಪಂಚಾಯತ ಅಫಜಲಪೂರ ರವರು ಸಲ್ಲಿಸಿದ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ
ಪೊಲೀಸ ಠಾಣೆ: ದಿನಾಂಕ 06.05.2014 ರಂದು 11.30 ಪಿ.ಎಂಕ್ಕೆ ಫಿರ್ಯಾದಿ ಶ್ರೀಮತಿ.ಸುಮಲತಾ ಗಂಡ ಸಂದೀಪ ಠಾಣೆಗೆ ಹಾಜರಾಗಿ ದಿನಾಂಕ 15.04.2012 ರಂದು ಹುಮನಾಬಾದ
ಗ್ರಾಮದ ಸಂದೀಪ ರವರೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ 3 ತೊಲೆ
ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ 8
ತಿಂಗಳ ನಂತರ ನನ್ನ ಗಂಡ ಅತ್ತೆ,ನಾದಿನಿ ಎಲ್ಲರೂ ಕೂಡಿ ತವರು ಮನೆಯಿಂದ ಹಣ ಮತ್ತು ಮೋಟಾರ ಸೈಕಲ್ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದು . ದಿನಾಂಕ
26.03.2013 ರಂದು ನನ್ನ ಅತ್ತೆ,ನಾದಿನಿ ಕೂಡಿ ಕೈಯಿಂದ ಹೊಡೆಬಡೆ ಮಾಡಿ ತವರು ಮನೆಯಿಂದ ಹಣ ಮತ್ತು
ಮೋಟಾರ ಸೈಕಲ ತೆಗೆದುಕೊಂಡು ಬಾ ಇಲ್ಲಾವಾದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಮನೆಯಿಂದ ಹೊರಗೆ
ಹಾಕಿದ್ದು. ಆಗಿನಿಂದ ನಾನು ನನ್ನ ತವರು ಮನೆಯಲ್ಲಿಯೇ ಇದ್ದು. ದಿನಾಂಕ 18.05.2013 ರಂದು ನನ್ನ ಗಂಡ ಅತ್ತೆ ನಾದಿನಿ ಎಲ್ಲರೂ ನನ್ನ ತವರು ಮನೆಗೆ ಬಂದು
ಸಂದೀಪ ಇತನು ತವರು ಮನೆಯಿಂದ ಹಣ ಮತ್ತು ಮೋಟಾರ ಸೈಕಲ್ ತೆಗೆದುಕೊಂಡು ಬಾ ಅಂದರೆ ಇಲ್ಲಿಯೇ
ಕುಳಿತಿರುವಿಯಾ ಎಂದು ಕೈಯಿಂದ ಹೊಡೆಬಡೆ ಮಾಡಿದ್ದು. ನನ್ನ ಅತ್ತೆ ನಾದಿನಿ
ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ಕೊಟ್ಟಿರುತ್ತಾರೆ. ಕಾರಣ
ದಯಾಳುಗಳಾದ ತಾವುಗಳು ನನ್ನ ಗಂಡ ಅತ್ತೆ ನಾದಿನಿ ಹಾಗೂ ಹರಿಸಿಂಗ್ ಇವರ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ;
ಎಂ.ಬಿ.ನಗರ ಪೊಲೀಸ್ ಠಾಣೆ: ದಿನಾಂಕಃ 06/05/2014
ರಂದು ಶ್ರೀ ಬಾಬುರಾವ ತಂದೆ ಬಾಲಪ್ಪ ಜಂಗಿ ಸಾಃ ಜ್ಯೋತಿ ನಗರ ಗುಲಬರ್ಗಾ ಇವರು ತಮ್ಮ ಮೋಟಾರ ಸೈಕಲ ನಂ.
ಕೆ.ಎ 32 ವಾಯ 5663 ನೇದ್ದರ ಮೇಲೆ ಜಯನಗರ ಕ್ರಾಸ್ ಹತ್ತಿರ ಇರುವ ಅಂಬಿಕಾ ಚಾಟ್ ಅಂಗಡಿ ಮುಂದಿನ
ರಸ್ತೆಯಲ್ಲಿ ಹೋಗುತ್ತಿರುವಾಗ ಸೇಡಂ ಕಡೆಯಿಂದ ಬರುತ್ತಿದ್ದ ಬುಲೇರೋ ವಾಹನ ನಂ. ಕೆ.ಎ 32 ಬಿ
2528 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಹಿಂದಿನಿಂದ
ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಶ್ರೀ ಬಾಬುರಾವ ತಂದೆ ಬಾಲಪ್ಪ ಜಂಗಿ ಇವ ಬೆನ್ನಿನ
ಭಾಗಕ್ಕೆ ಭಾರಿ ಗುಪ್ತಗಾಯ, ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಎಡಗಡೆ ತೊಡೆಗೆ ತರಚಿದ
ಗಾಯವಾಗಿದ್ದು ಬುಲೇರೋ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಎಂ.ಬಿ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ : ದಿನಾಂಕ: 06/05/2014 ರಂದು ರಾತ್ರಿ 8=15 ಗಂಟೆಯ ಸುಮಾರಿಗೆ ಸಂತೋಷಕುಮಾರ
ತಂದೆ ಬಂಡಪ್ಪ ರವರು ಶರಣಬಸವೇಶ್ವರ ದೇವಸ್ತಾನ
ದಿಂದ ವೆಂಕವ್ವ ಮಾರ್ಕೇಟ ಕಡೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತಿದ್ದಾಗ ಲಾಲಗೇರಿ ಕ್ರಾಸ್
ಕಡೆಯಿಂದ ಮೋ/ಸೈಕಲ್ ನಂ: ಕೆಎ 32 ಇಇ 9615 ರ ಸವಾರ ಬುಡ್ಡಪ್ಪನು ತನ್ನ
ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಹಿಂದಿನಿಂದ ಅಪಘಾತಮಾಡಿ
ಗಾಯಗೊಳಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲಿಸ್ ಠಾಣೆ : ದಿನಾಂಕ: 06-05-14 ಶ್ರೀ
ಮಲ್ಲಿಕಾರ್ಜುನ ತಂದೆ ಕಾಶಪ್ಪ ಸಂಗಾವಿ ಸಾ:ಭಗವತಿ ನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತಾನು ಸಲ್ಲಿಸಿದ ಪಿರ್ಯಾದಿ ಅರ್ಜಿಯ ಸಾರಾಂಶವೇನೆಂದರೆ ತಾನು 7-8 ವರ್ಷದ ಹಿಂದೆ ಭಗವತಿ ನಗರದಲ್ಲಿರುವ ತನ್ನ ಮ.ನಂ. 1-1495/48ಸಿ ನೇದ್ದನ್ನು ಡಾ:ಸುಜಾತ ಮತ್ತು ಅವರ ಗಂಡ ಶಶಿಕಾಂತ ಹಾರಕೂಡ ಸಾ:ಹುಮನಾಬಾದರವರಿಗೆ ಮನೆ ಮಾರಾಟ ಮಾಡುವ ಬಗ್ಗೆ
ಮಾತುಕತೆಯಾಗಿದ್ದು ಸರ್ಕಾರದಿಂದ ನನಗೆ ಪರವಾನಿಗೆ ಬಂದ ನಂತರ ಸೆಲ್ ಡಿಡ್ ಮಾಡಿಕೊಡುವದಾಗಿ ಹೇಳಿದ್ದು. ನನ್ನ ಮನೆಯನ್ನು ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿರವರಿಗೆ ಬಾಡಿಗೆಗೆ ಕೊಟ್ಟಿದ್ದು ಇರುತ್ತದೆ.
ನಾನು ದಿ:22-04-14 ರಂದು ನನ್ನ ಮನೆಯಲ್ಲಿ ಬಾಡಿಗೆಗೆ ಇರುವ ಬಾಡಿಗೆದಾರ ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿ ರವರಿಗೆ ಮನೆ ಬಾಡಿಗೆ ಕೇಳಲಾಗಿ ಮನೆ
ಬಾಡಿಗೆಯನ್ನು ಡಾ:ಸುಜಾತ ಮತ್ತು ಅವರ ಗಂಡ ಶಶಿಕಾಂತ ಹಾರಕೂಡ ರವರು ಬಾಡಿಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು
ಹೇಳಿದರು ಆಗ ನಾನು ಅವರಿಗೆ ನಾನು ಮನೆ ಮಾಲಿಕನಿದ್ದೆನೆ ನೀವು ಅವರಿಗೆ ಹೇಗೆ ಬಾಡಿಗೆ
ಕೊಟ್ಟಿರುತ್ತೀರಿ ಎಂದು ಕೇಳಿದ್ದಕ್ಕೆ ಬಾಡಿಗೆದಾರ ಕನ್ನರಾಮ (ಪಿ.ಡಿ ಭಾಠಿ) ಮಾರವಾಡಿ ರವರು ನನಗೆ ಜಾತಿ ನಿಂದನೆ
ಮಾಡಿ ಅವಾಚ್ಯ ಶಬ್ದಗಳೀಂದ ಬಯ್ದು ಮನೆಯಿಂದ ಹೊರಗೆ ಹೋಗು ನೀನು ಎನು ಕೇಳುವುದಿದ್ದರೊ ಡಾ:ಸುಜಾತ ಮತ್ತು ಅವರ ಗಂಡನಿಗೆ ಕೇಳು ಬೈದಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment