ಶಾಲಾ
ಮಕ್ಕಳಿಗೆ ವಿತರಿಸುವ ಹಾಲಿನ ಪೌಡರ ಮತ್ತು ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದವರ ಬಂಧನ :
ಚೌಕ ಠಾಣೆ : ಇಂದು ದಿನಾಂಕ ೦೭.೦೫.೨೦೧೪ ರಂದು ಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ಗಂಜ ಕಾಟನ
ಮಾರ್ಕಟದಲ್ಲಿ ಆರೋಪಿ ಬೀರಲಿಂಗ ತಂದೆ ಬೀಮಶ್ಯಾ ಪೂಜಾರಿ ವಯ ೩೦ ವರ್ಷ ಉಃ ವ್ಯಾಪಾರ ಜಾಃ ಕುರಬರ
ಸಾಃ ಚೆನ್ನವೀರ ನಗರ ಗುಲಬರ್ಗಾ ಇತನು ಬೀರಲಿಂಗ ಟ್ರೇಡಸ್ ಅಂಗಡಿಯಲ್ಲಿ ಸರಕಾರ ಶಾಲಾ ಮಕ್ಕಳಿಗೆ
ಮತ್ತು ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲು ಒದಗಿಸಿದ ನಂದಿನ ಸ್ಕೀಮಡ ಮಿಲ್ಕ ಪೌಡರ ಮತ್ತು
ನಂದಿನ ಹೋಲ ಮಿಲ್ಕ ಪೌಡರ ಮತ್ತು ಪಡಿತರ ಚೀಟಿಯ ಮೇಲೆ ಸಾರ್ವಜನಿಕರಿಗೆ ವಿತರಣೆ ಮಾಡಲು ಸರಕಾರ
ಒದಗಿಸಿದ ಅಕ್ಕಿಯನ್ನು ಅನಧಿಕೃತವಾಗಿ ಸಂಗ್ರಿಹಿಸಿಟ್ಟುಕೊಂಡು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ
ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ
ಅಪರ ಎಸ್.ಪಿ ಸಾಹೇಬ ಗುಲಬರ್ಗಾ, ಮಾನ್ಯ ಡಿ.ಎಸ್.ಪಿ (ಬಿ) ಉಪವಿಭಾಗ ಗುಲಬರ್ಗಾ ರವರ
ಮಾರ್ಗದರ್ಶನದಲ್ಲಿ ಮಾನ್ಯ ಸಂತೊಷ ಬಾಬು ಕೆ. ಐಪಿಎಸ್ ಎ.ಎಸ್.ಪಿ ಗ್ರಾಮೀಣ ಉಪವಿಭಾಗ ಇವರ
ನೇತೃತ್ವದಲ್ಲಿ ಚೌಕ ಪೊಲೀಸ್ ಠಾಣೆಯ ಶ್ರೀ ಎಸ್.ಕೆ ಮಾರಿಹಾಳ ಪಿ.ಐ, ಶ್ರೀ
ಪ್ರದೀಪಕೊಳ್ಳಾ ಪಿ.ಎಸ್.ಐ(ಕಾಸು) ಮತ್ತು ಸಿಬ್ಬಂಧಿಯವರಾದ ಬಸವರಾಜ ಪಾಟೀಲ ಹೆಚ್.ಸಿ ಆನಂದ ಪಿಸಿ,
ಅನಿಲಪಿಸಿ, ವಿಠಲ
ಎಪಿಸಿ, ಪ್ರಕಾಶ ಪಿಸಿ, ಗೋಪಾಲ ಪಿಸಿ, ಬಾಬು ಶೇರಿಕಾರ ಪಿಸಿ, ಮಹೇಬೂಬಸಾಬ ಪಿಸಿ, ಮಂಜೂನಾಥ
ಪಿಸಿ ರವರು ಕೂಡಿಕೊಂಡು ಆರೋಪಿತನ ಅಂಗಡಿಯ ಮೇಲೆ ಮದ್ಯಾಹ್ನ 02-30 ಗಂಟೆಗೆ ದಾಳಿ ಮಾಡಿ
ಆರೋಪಿತನಿಂದ ಸರಕಾರ
ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಣೆ ಮಾಡಲು ಒದಗಿಸಿದ ನಂದಿನ ಸ್ಕೀಮಡ ಮಿಲ್ಕ
ಪೌಡರ ಮತ್ತು ನಂದಿನ ಹೋಲ ಮಿಲ್ಕ ಪೌಡರ ಒಟ್ಟು 205 ಚೀಲಗಳು ಒಟ್ಟು ತೂಕ 5125 ಕೆ.ಜಿ ಹಾಲಿನ ಪೂಡಿ, ಮತ್ತು
ಪಡಿತರ ಚೀಟಿಯ ಮೇಲೆ ಸಾರ್ವಜನಿಕರಿಗೆ ವಿತರಣೆ ಮಾಡಲು ಸರಕಾರ ಒದಗಿಸಿದ 192 ಅಕ್ಕಿ ಚೀಲಗಳು
ಅಂದಾಜ ತೂಕ 96 ಕ್ವಿಂಟಲ್ ಅಂದಾಜ ಕಿಮತ್ತು 96,000/- ರೂ. ಮತ್ತು ನಗದು ಹಣ 3,15,700/-ರೂ.
ಹೀಗೆ ಒಟ್ಟು 6,57,950/- ರೂ. ಕಿಮತ್ತಿನ ಮಾಲು ಮತ್ತು ನಗದು ಹಣವನ್ನು ಜಪ್ತಿಮಾಡಿಕೊಂಡು
ಆರೋಪಿತನ ವಿರುದ್ದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಸರಸ್ವತಿ ಗಂಡ ಉಶಪ್ಪ ಜಮಾದಾರ
ಸಾ: ಸಾಯಿ ಮಂದಿರ ಹಿಂದುಗಡೆ ಕಾಮದೇನು ಲೇ ಔಟ ಗುಲಬರ್ಗಾ ರವರ ಗಂಡನಾದ ಉಶಪ್ಪ ಇವರು ದಿನಾಂಕ:
07-05-2014 ರಂದು ಸಾಯಂಕಾಲ 0615 ಗಂಟೆಯ ಸುಮಾರಿಗೆ ಮನೆಯಿಂದ ಕೋಳಿ ಮೊಟ್ಟೆ ತರುವ ಸಲುವಾಗಿ ಕರುಣೇಶ್ವರ ನಗರ ಕ್ರಾಸ್
ಹತ್ತಿರ ಇರುವ ರಿಂಗ ರೋಡನಲ್ಲಿ ನಡೆದುಕೊಂಡು ದಾಟುತ್ತಿರುವಾಗ ರಾಮ ಮಂದೀರ ರಿಂಗ ರೋಡ ಕಡೆಯಿಂದ ಅಭಿಶೇಕ ಈತನು ತನ್ನ
ಮೋ/ಸೈಕಲ್ ನಂ; ಕೆಎ 32 ಡಬ್ಲೂ 2539 ನೆದ್ದರ ಹಿಂದುಗಡೆ ಅಬನೇಜರ ಈತನನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ತಲೆಗೆ ಭಾರಿ ರಕ್ತಗಾಯಗೊಳಿಸಿದ್ದು ಗಾಯಾಳು ಉಶಪ್ಪ ಇವರಿಗೆ ಉಪಚಾರ
ಕುರಿತು ಅಟೋರೀಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಬಸವೇಶ್ವರ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯ
ವೈದ್ಯರು ಸಾಯಂಕಾಲ 0645 ಗಂಟೆಗೆ ಪರೀಕ್ಷಿಸಿ ಆಸ್ಪತ್ರೆಗೆ ಬರುವದಕಿಂತ ಮೊದಲೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ.ಶ್ರೀದೆವಿ ಗಂಡ
ಬಸವರಾಜ ಸಾಃ ಮನೆ ನಂ.06 ಸುಭದ್ರ ನಿಲಯ ಪಿ.ಡಬ್ಲ್ಯೂಡಿ ಕ್ವಾಟ್ರಸ್ ಕೆ.ಹೆಚ್.ಬಿ ಕಾಲೋನಿ
ರಾಜಾಪುರ ರೋಡ್ ಗುಲಬರ್ಗಾ ರವರ ಗಂಡನಾದ ಬಸವರಾಜ
ರವರು ದಿನಾಂಕಃ 07-05-2014 ರಂದು 07:40 ಎ.ಎಂ. ಸುಮಾರಿಗೆ ಸ್ವಸ್ತೀಕ ನಗರದ ನಾಗರಾಜ ಪಾಟೀಲ್ ಇವರಿಗೆ ಭೇಟ್ಟಿಗಾಗಿ
ಟಿ.ವಿ.ಎಸ್. ಸುಜಕಿ ನಂ. ಕೆ.ಎ 32 ವಾಯ 9679 ನೆದ್ದರ ಮೇಲೆ ಹೊದರು ಸುಮಾರು 08:10 ಎ.ಎಂ
ಸುಮಾರಿಗೆ ನಮಗೆ ಪರಿಚಯಸ್ತರಾದ ಭೀಮಾಶಂಕರ ಕುಂಬಾರ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ. ಕೆ.ಹೇಚ್.ಬಿ ಕಾಂಪ್ಲೇಕ್ಸ್
ಎದುರುಗಡೆ ರಿಂಗ್ ರಸ್ತೆಯ ಮೇಲೆ ಅಂಕಲ್ ಬಸವರಾಜ ಇವರಿಗೆ ರಸ್ತೆ ಅಪಘಾತ ವಾಗಿದೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ
ಸೇರಿಕೆ ಮಾಡಿರುತ್ತೆವೆ ಅಂತಾ ತಿಳಿಸಿದ ಮೇರೆಗೆ. ಗಾಬರಿಯಾಗಿ ಆಸ್ಪತ್ರೆಗೆ ನಾನು ನನ್ನ ಮಗಳಾದ
ಸಂದ್ಯಾ, ಭಾವನ ಮಗನಾದ ನಾಗರಾಜ, ಎಲ್ಲರು ಆಸ್ಪತ್ರೆಗೆ ಬಂದು
ನೊಡಲಾಗಿ ನನ್ನ ಗಂಡನಿಗೆ ತಲೆಯ ಹಿಂಭಾಗಕ್ಕೆ, ಎಡ ಮಗ್ಗಲಿಗೆ, ಬಲಗೈಗೆ ಭಾರಿ ರಕ್ತಗಾಯ ವಾಗಿ
ರಕ್ತ ಸೊರುತ್ತಿತ್ತು. ಮತ್ತು ಟೊಂಕಕ್ಕೆ ಭಾರಿ ಗುಪ್ತಗಾಯವಾಗಿದ್ದು, ಬಲಗೈ ಭಾರಿ ರಕ್ತಗಾಯ ಮತ್ತು ಅಲ್ಲಲ್ಲಿ ತರಚೀದ
ಗಾಯಗಳಾಗಿದ್ದವು, ನಂತರ ಭೀಮಾಶಂಕರ ಕುಂಬಾರ
ಇವರಿಗೆ ವಿಚಾರಿಸಲಾಗಿ ಹೇಳಿದ್ದೆನೆಂದರೆ. ನಾನು 08:00 ಎ.ಎಂ ಸುಮಾರಿಗೆ ಕೆ.ಹೆಚ್.ಬಿ
ಕಾಂಪ್ಲೆಕ್ಸ್ ಎದುರುಗಡೆ ನನ್ನ ಗೆಳೆಯನೊಂದಿಗೆ ಮಾತಾಡುತ್ತಾ ನಿಂತುಕೊಂಡಾಗ, ಅದೇ ವೇಳೆಗೆ ಹುಮನಾಬಾದ
ಕಡೆಯಿಂದ ಕ್ರುಜರ ನಂ. ಕೆ.ಎ 32 ಬಿ 2916 ನೆದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಹೊಗುತ್ತಿದ್ದ ಟಿ.ವಿ.ಎಸ್. ಸುಜಕಿಗೆ
ಡಿಕ್ಕಿ ಹೊಡೆದ ಪರಿಣಾಮ ಬಸವರಾಜ ಒಂದು ಕಡೆಗೆ ಬಿದ್ದರು, ಸುಜಕಿ ವಾಹನವನ್ನು ಕ್ರುಜರ ವಾಹನ ಒತ್ತಿಕೊಂಡು ಹೋಗಿ ಗಟಾರದಲ್ಲಿ ನಿಂತ್ತಿತ್ತು. ಮತ್ತು
ವಾಹನ ಚಾಲಕನು ವಾಹನವನ್ನು ಬಿಟ್ಟು ಒಡಿ ಹೊಗಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ
ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-05-2014 ರಂದು 1330 ಗಂಟೆಗೆ ಮಾಡಿಯಾಳ ಗ್ರಾಮದ ಅಮೋಘಸಿದ್ದ ದೇವರ ಗುಡಿಯ ಎದುರು ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಮೋಘಸಿದ್ದ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ 03 ಜನ ವ್ಯಕ್ತಿಗಳು
ಅಮೋಘಸಿದ್ದ ದೇವರ ಗುಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ
ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ 03 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಲಾಗಿ 01.
ಕಾಶಿನಾಥ ತಂದೆ ಕೊಳ್ಳಪ್ಪ ಕಲಕುಟಗಿ 02. ಶಿವಶರಣ ತಂದೆ ನಾಗಪ್ಪಾ ಶಿರೂರ 3. ಶಾಂತಪ್ಪ ತಂದೆ
ಭೂತಾಳಿ ನಡಗೇರಿ ಸಾ; ಎಲ್ಲರು ಮಾಡಿಯಾಳ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2000/- ರೂಪಾಯಿ ನಗದು ಹಣ
ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತ ಮಾಡಿಕೊಂಡು ನಂತರ ಠಾಣೆಗೆ ಬಂದು ಸದರಿಯವರ ವಿರುದ್ಧ
ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ
ವಯಸ್ಸಿನ ಹುಡುಗಿಗೆ ಬಾಲ್ಯ ವಿವಾಹ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಆನಂದರಾಜ ತಂದೆ ದೇಶಪ್ಪಾ ಸಾ: . ಅಧ್ಯಕ್ಷರು ಜಿಲ್ಲಾ ಮಕ್ಕಳ ಸಮಿತಿ ಗುಲಬರ್ಗಾ ಸಾ:
ಬಾಲಕೀಯರ ಬಾಲ ಗೃಹ ಆಳಂದ ರಸ್ತೆ ಗುಲಬರ್ಗಾ. ರವರಿಗೆ ದಿನಾಂಕ 07-05-2014
ರಂದು ತಮ್ಮ ಸಿಬ್ಬಂದಿಯಾದ ಭರತೇಶ ಶೀಲವಂತ ಇವರು ದೂರವಾಣಿ ಮೂಲಕ ಕರೆ ಮಾಡಿ ಅಪ್ರಾಪ್ತ
ವಯಸ್ಸಿನ ಮಗುವಾದ ಗೌರಿ@ ಗೌರಮ್ಮ ಎಂಬುವವಳಿಗೆ ಮದುವೆ ಮಾಡಿದ ಬಗ್ಗೆ ಮಾಹಿತಿ
ಬಂದಿದ್ದು ಅವಳಿಗೆ ರಕ್ಷಣೆ ಕೊಡುವ ಕುರಿತು ಹೋಗಬೇಕು ಅಂತಾ ತಿಳಿಸಿದ್ದರಿಂದ ನಾನು 1098 ಕರೆ ಮಾಡಿ ಸಿಬ್ಬಂದಿಯವರನ್ನು ಕರೆದುಕೊಂಡು
ಅಂಬೇಡ್ಕರ ನಗರದ ಆಶ್ರಯ ಕಾಲೋನಿಗೆ ಹೋಗಿ
ಮಗುವನ್ನು ಮಾತನಾಡಿಸಿದ್ದಾಗ ತನಗೆ ಸೋದರ ಮಾವ ಮಾಣಿಕ, ಅತ್ತೆ ಪ್ರೀತಾ,ಅಣ್ಣಂದಿರರಾದ ಹಣಮಂತ ಮತ್ತು ಆಕಾಶ ಕೂಡಿ
ಶಿವಕುಮಾರ ದ್ಯಾಗಯಿ ಎಂಬುವವನೊಂದಿಗೆ ದಿನಾಂಕ 01-05-2014 ರಂದು ಕನ್ನಡಗಿ ಗ್ರಾಮದ ಮಲ್ಲಕಣ್ಣ
ದೇವಾಲಯದಲ್ಲಿ ಮದುವೆ ಮಾಡಿದ ಬಗ್ಗೆ ತಿಳಿಸಿದಳು. ಅಪ್ರಾಪ್ತ ವಯಸ್ಕಳಾದ ಗೌರಿ @ ಗೌರಮ್ಮ ತಂದೆ ಅಂಬಾರಾಯ ಪಾಟೀಲ ವಯ:15 ವರ್ಷ ಸಾ: ಸಡಕ ಕಿಣ್ಣಿ ತಾ: ಜಿ:
ಗುಲಬರ್ಗಾ ಇವಳಿಗೆ ಒತ್ತಾಯವಾಗಿ ಮದುವೆ ಮಾಡಿರುತ್ತಾರೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ನಿರ್ಮಲಾದೇವಿ ಗಂಡ ಪೃಥ್ವಿರಾಜಸಿಂಗ ಠಾಕೂರ ಸಾಃ ಮನೆ ನಂ. 8-719 ಬಂಗಡಿ ಪೀರದ
ಹಿಂದುಗಡೆ ನಮೋಶಿಗಲ್ಲಿ ಗುಲಬರ್ಗಾ
ರವರು ದಿನಾಂಕ 07.05.2014 ರಂದು ಎಂದಿನಂತೆ ಬೆಳಗ್ಗೆ 6.30
ಗಂಟೆಗೆ ಶರಣಬಸಪ್ಪ ಅಪ್ಪನ ಕೇರೆಯ ಸುತ್ತಾ ವಾಕಿಂಗ ಮಾಡಿ, ಮರಳಿ ತನ್ನ ಮನೆಗೆ ಹೋಗುವ ಸಂಬಂದ 0730 ಗಂಟೆಯ ಸುಮಾರಿಗೆ ಹೆರಟಜ್ ಹೊಟೇಲದಿಂದ ಸ್ವಲ್ಪ
ಮುಂದುಗಡೆ ಕಿಲ್ಲಾ ಕಡೆಗೆ ಹೋಗುವ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಯಾರು ಇಬ್ಬರು
ಅಪರಿಚಿತ ಮೊಟಾರ ಸೈಕಲ ಸವಾರರು ಎದುರುಗಡೆಯಿಂದ ಮೊಟಾರ ಸೈಕಲ ಮೇಲೆ ಬಂದು ಮೊಟಾರ ಸೈಕಲ ಹಿಂದುಗಡೆ
ಕುಳಿತವನು ನನ್ನ ಕೊರಳಿಗೆ ಕೈಹಾಕಿ ಕೊರಳಿನಲ್ಲಿರುವ 5-1/2 ತೊಲೆ ಬಂಗಾರದ ಮಂಗಳ ಸೂತ್ರ ಅಃಕಿಃ 1,50,000/- ಕಿತ್ತುಕೊಂಡು
ಫರಾರಿ ಆಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಾಯಿಬಣ್ಣಾ ಮೇಲಿನಕೇರಿ ಸಾ
: ಚಂದನ ಕೇರಾ ತಾ : ಚಿಂಚೋಳಿ ಜಿ: ಗುಲಬರ್ಗಾ ರವರು ದಿನಾಂಕ: 04-05-2014 ರಂದು ರಾತ್ರಿ ಭೂಪಾಲ ತೆಗನೂರ ಕ್ರಾಸದಲ್ಲಿರುವ
ಸಿದ್ದಾರೂಢ ಮಠಕ್ಕೆ ದೇವರ ದರ್ಶನಕ್ಕೆ ಹೋಗಬೇಕೆಂದು ನಡೆದುಕೊಂಡು ತಾವರಗೇರಾ ಕ್ರಾಸ ದಾಟಿ ನಡೆಯುತ್ತಾ
ಭೂಪಾಲ ತೆಗನೂರಕ್ಕೆ ಹೋಗುವ ಕ್ರಾಸದಲ್ಲಿರುವ ಸಿದ್ದಾರೂಢ ಮಠದ ಸಮೀಪ ಅಂದಾಜ ರಾತ್ರಿ 8-30 ಗಂಟೆಗೆ
ಹೋಗಲು ಕಾಲು ನೋಯಿಸುತ್ತಿರುವುದರಿಂದ ಅಲ್ಲಿಯೇ ಸಮೀಪದಲ್ಲಿದ್ದ ಫೂಲ ಮೇಲೆ ಕೂಳಿತುಕೊಂಡಾಗ ಅಷ್ಟರಲ್ಲಿಯೇ
ಇಬ್ಬರು ಅಪರಿಚಿತ ಹುಡುಗರು ಒಂದು ಮೋಟಾರ ಸೈಕಲ್ ಮೇಲೆ ಬಂದವರೇ ಡಿಕ್ಕಿ ಹೊಡೆದಂತೆ ಮಾಡಿ ಹತ್ತಿರ ಬಂದು ಏ ಭೋಸಡಿ ಮಗನೇ ನಿನ್ನ ಹತ್ತಿರ
ರೊಕ್ಕ ಎಷ್ಟು ಇದ್ದಾವ ಅಂತಾ ಕೇಳಲು ನನ್ನ ಹತ್ತಿರ ರೊಕ್ಕ ಇಲ್ಲ ಅಂತಾ ಹೇಳಿದಾಗ ಅವರಿಬ್ಬರೂ ನನ್ನ
ಶರ್ಟ ಹಿಡಿದು ಭೋಸಡಿ ಮಗನೇ ನಿನ್ನ ಹತ್ತಿರ ರೊಕ್ಕ ಹ್ಯಾಂಗ ಇರೋದಿಲ್ಲ ಅನ್ನುತ್ತಾ ಇಬ್ಬರ ಪೈಕಿ ಒಬ್ಬನು
ಶರ್ಟನ ಕೀಸೆಯಲ್ಲಿ ಕೈ ಹಾಕಿ 500/- ರೂಪಾಯಿಯನ್ನು ಜಬರದಸ್ತಿಯಿಂದ ಕಸಿದುಕೊಂಡನು. ನಂತರ ಅವರಿಬ್ಬರೂ
ಅದೇ ಮೋಟಾರ ಸೈಕಲ್ ಮೇಲೆ ಹೋರಟು ಹೋದರು. ಅವರು ಹೋಗುವಾಗ ನಾನು ಅದರ ನಂ ನೋಡಲಾಗಿ ಸದರಿ ವಾಹನವು ಹೀರೋಹೊಂಡಾ
ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದಿದ್ದು ಅದರ ನಂ ಕೆಎ-32 ಡಬ್ಲ್ಯೂ-3551 ನೇದ್ದು ಇತ್ತು. ಸದರಿ
ಇಬ್ಬರು ಅಪರಿಚಿತರು ಸುಮಾರು 20 ರಿಂದ 25 ವರ್ಷದವರಿದ್ದು ಕನ್ನಡದಲ್ಲಿ ಮಾತನಾಡುತ್ತಿದ್ದರು.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment