ಕೊಲೆ
ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಶ್ರೀದೇವಿ ಗಂಡ
ಧೂಳಪ್ಪ ಕುಂಬಾರ ಸಾ: ಬೊಳೆವಾಡ ತಾ:ಜಿ:ಗುಲಬರ್ಗಾ ಹಾವ: ಸಿದ್ದೇಶ್ವರ ಕಾಲನಿ ಗುಲಬರ್ಗಾ ರವರು ಒಂದು ವರ್ಷದ ಹಿಂದೆ ಬೊಳೆವಾಡ ಗ್ರಾಮದ ಧೂಳಪ್ಪ
ತಂದೆ ಮಲ್ಲಣ್ಣ ಕುಂಬಾರ ಇತನೊಂದಿಗೆ ಲಗ್ನ ಮಾಡಿಕೊಟ್ಟಿದ್ದು. ಲಗ್ನ ಆದಾಗಿನಿಂದ ಹೊಟ್ಟೆಯ
ಉಪಜೀವನ ಕುರಿತು ಗುಲಬರ್ಗಾದ ಅಜಾದಪೂರ ರೋಡಿನ ಸಿದ್ದೇಶ್ವರ ಕಾಲನಿಯ ಈರಮ್ಮ ಗಂಡ ಅಣ್ಣಪ್ಪ ಇವರ
ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು. ನನ್ನ ಅತ್ತೆ ಮಾವ ಬೊಳೆವಾಡದಲ್ಲಿ ವಾಸವಾಗಿದ್ದು. ನಾನು
ನನ್ನ ಗಂಡ ಕೂಲಿ ಕೆಲಸ ಸಿಕ್ಕಲ್ಲಿ ಹೋಗುತ್ತಿದ್ದೆವು. ಅದರಂತೆ ಇ.ಎಸ್.ಐ ಆಸ್ಪತ್ರೆಯಲ್ಲಿ ನಾನು
ನನ್ನ ಗಂಡ 2 ತಿಂಗಳ ಲೇಬರ ಕೆಲಸ ಮಾಡಿದ್ದು.
ಕೂಲಿ ಕೆಲಸ ಮಾಡುವ ಕಾಲಕ್ಕೆ ವಿಜಯಕುಮಾರ ತಂದೆ ನಿಂಗಪ್ಪ ಕಬ್ಬಲಿಗೇರ ಎಂಬುವನು ನನ್ನ ಗಂಡನಿಗೆ
ಪರಿಚಯವಾಗಿದ್ದು. ಅವನು ಆಗಾಗ ನಮ್ಮ ಮನೆಗ ಬಂದು ನನ್ನ ಗಂಡನಿಗೆ ಸಿಂಧಿ ಕುಡಿಯಲು ಕರೆದುಕೊಂಡು
ಹೋಗುತ್ತಿದ್ದನು. ದಿನಾಂಕ: 25-05-14 ರಂದು 5 ಪಿಎಮ ಸುಮಾರಿಗೆ ಇ.ಎಸ.ಐ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವಿಜಯಕುಮಾರ
ತಂದೆ ನಿಂಗಪ್ಪ ಕಬ್ಬಲಿಗೇರ ಇತನು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಕೆಲಸವಿದೆ ಬಾ ನಾನು ಊರಿಗೆ
ಹೋಗುತ್ತೇನೆ ಸಿಂಧಿ ಕುಡಿಯೋಣಾ ಬಾ ಅಂತಾ ಹೇಳಿ ಕರೆದುಕೊಂಡು ಹೋಗಿದ್ದು ದಿನಾಂಕ: 26-05-14 ರಂದು ರಾತ್ರಿ 00-15 ಎ.ಎಮ ವೇಳೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯ ಪೊಲೀಸರು ನಾನು, ನನ್ನ ಚಿಕ್ಕಮ್ಮ ಶರಣಮ್ಮ ಗಂಡ ಮಾರುತಿ ಇವರ ಮನೆಯಲ್ಲಿದ್ದಾಗ ನಮ್ಮ
ಮನೆಯ ಹತ್ತಿರ ಬಂದು ಪೊಲೀಸರು ನಿನ್ನ ಗಂಡ ಎಲ್ಲಿ ಇದ್ದಾನೆ ಅಂತಾ ಕೇಳಲು ದಿನಾಂಕ 25-05-2014
ರಂದು ಸಾಯಂಕಾಲ 5 ಪಿಎಮಕ್ಕೆ ವಿಜಯಕುಮಾರ ತಂದೆ
ನಿಂಗಪ್ಪ ಇತನ ಸಂಗಡ ಹೋದನು. ಮರಳಿ ಬಂದಿರುವದಿಲ್ಲ ಅವನ ದಾರಿ ಕಾಯುತ್ತಾ ಕುಳಿತಿದ್ದೆನೆ ಅಂತಾ
ಹೇಳಿದೆನು. ಆಗ ಪೋಲಿಸರು ನಿನ್ನ ಗಂಡನಿಗೆ ಗಾಯಗಳಾಗಿದ್ದು ಯಾರೋ ಹೊಡೆದಿದ್ದು. ಸದರಿ ಗಾಯದಿಂದ
ಮೃತಪಟ್ಟಿದ್ದು ನೀನು ನೋಡಲು ಬಾ ಅಂತಾ ಹೇಳಿ ನನಗೆ ಮತ್ತು ಚಿಕ್ಕಮ್ಮಳೊಂದಿಗೆ ಆಸ್ಪತ್ರೆಗೆ ಹೋಗಿ
ನೋಡಲು ಮೃತಪಟ್ಟವನು ನನ್ನ ಗಂಡ ಧೂಳಪ್ಪನಿದ್ದು. ಅವನ ತಲೆಗೆ ಭಾರಿ ರಕ್ತಗಾಯವಾಗಿದ್ದು.
ಬಲಗದ್ದದಿಂದ ಬಲಕಿವಿಯ ಹತ್ತಿರವರೆಗೆ ರಕ್ತಗಾಯವಾಗಿದ್ದು. ನನ್ನ ಗಂಡನಿಗೆ ಇ.ಎಸ.ಐ ಆಸ್ಪತ್ರೆಯ
ಲೇಬರ ಜನರು ವಾಸಿಸುವ ಕೋಣೆಯ ಪಕ್ಕದಲ್ಲಿ ಯಾವುದೊ ಆಯುಧದಿಂದ ಯಾವುದೊ ದುರುದ್ದೇಶದಿಂದ ಯಾರೋ
ಹೊಡೆದು ಭಾರಿ ಗಾಯಗಳು ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ. ಮಹಾದೇವ ತಂದೆ ಬಂಡಪ್ಪ ಕರಕನಳ್ಳಿ ಸಾ; ಭೂಂಯ್ಯಾರ ಗ್ರಾಮ ತಾ: ಜಿ: ಗುಲಬರ್ಗಾ ಇವರು ದಿನಾಂಕ: 25/05/2014
ರಾತ್ರಿ 08-00 ಗಂಟೆಯ ವರೆಗೆ ನಾನು ಕಮಲಾಪೂರದ ನನ್ನ ಫೋಟೋ ಸ್ಟುಡಿಯೋ
ದಲ್ಲಿ ಕೆಲಸ
ಮಾಡಿಕೊಂಡು ನನ್ನ ಅಂಗಡಿ ಬಂದ ಮಾಡಿಕೊಂಡು ಮನೆಗೆ ಹೋಗಿದ್ದು, ನನಗೆ
ಇಂದು ಮನ್ನಾಖೇಳ್ಳಿಯಲ್ಲಿ ಒಂದು ಮದುವೆಯ ಫೋಟೋ ತೆಗೆಯುವ ಆರ್ಡರ್ ಇದ್ದಿದ್ದರಿಂದ ನಾನು ಇಂದು ದಿನಾಂಕ: 26-05-2014
ರಂದು ಬೆಳೆಗ್ಗೆ 06-00 ಗಂಟೆಗೆ ಕಮಲಾಪೂರದ ನನ್ನ ಫೋಟೋ ಸ್ಟುಡಿಯೋಕ್ಕೆ ಬಂದು ನೋಡಲಾಗಿ ನನ್ನ ಅಂಗಡಿಯ ಶೇಟರನ್ನು ಯಾರೋ ಅಪರಿಚಿತ ಕಳ್ಳರು ಮುರಿದಿದ್ದು, ಆಗ ನಾನು ಗಾಬರಿಯಾಗಿ ನಾನು
ಬಾಡಿಗೆ ಇರುವ ಅಂಗಡಿಯ ಮಾಲಿಕರಾದ ಸೀತಾಬಾಯಿ ಗಂಡ ಕಲ್ಯಾಣಶೇಟ್ಟಿ ಕಲ್ಯಾಣ ಸಾ:ಕಮಲಾಪೂರ ಮತ್ತು ನನ್ನ ಸ್ನೇಹಿತನಾದ ಸಿದ್ದು ತಂದೆ ಶಿವಶರಣಪ್ಪ ಕೋಡ್ಲಿ ಸಾ: ಜೀವಣಗಿ ಮತ್ತು ಇವರಿಗೆ ಫೋನ್ ಮಾಡಿ ಕರೆಯಿಸಿ ನಂತರ ಕಮಲಾಪೂರ ಪೊಲೀಸ್ ಠಾಣೆಗೆ ಫೋನ್ ಮಾಡಿದ್ದು, ಪೊಲೀಸರು ಬಂದ ನಂತರ ನಾವು ನಮ್ಮ ಫೋಟೋ ಸ್ಟುಡಿಯೋದ ಒಳಗೆ ಹೋಗಿ ನೋಡಲಾಗಿ ನನ್ನ ಫೋಟೋ ಸ್ಟುಡಿಯೋದಲ್ಲಿದ್ದ 1. ಒಂದು ನಿಕಾನ್ ಕ್ಯಾಮೇರಾ ಡಿ-60
ಅ.ಕಿ. 35,000/- ರೂಪಾಯಿ 2. ಒಂದು ಎಸ್.ಪಿ - 22 ಫ್ಲಾಶ್ ಅ.ಕಿ. 18000/- ರೂಪಾಯಿ 3. ಒಂದು ಎಲ್.ಜಿ. ಕಂಪನಿಯ
ಕಂಪ್ಯೂಟರ ಅ.ಕಿ. 32000/- ರೂಪಾಯಿ ಹೀಗೆ ಒಟ್ಟು 85,000/-
(ಎಂಭತ್ತೈದು ಸಾವಿರ
ರೂಪಾಯಿ ) ವಸ್ತುಗಳನ್ನು ದಿನಾಂಕ: 25/05/2014 ರ ರಾತ್ರಿ 08-00 ಗಂಟೆಯಿಂದ ದಿನಾಂಕ;26/05/2014 ರ ಬೆಳಗಿನ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಫೋಟೋ ಸ್ಟುಡಿಯೋದ ಶೇಟರನ್ನು ಮುರಿದು ಕಳವು ಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಾಹಾಗಾಂವ
ಠಾಣೆ : ಶ್ರೀ ಮಾಹಾದೇವ ತಂದೆ ಬಸವಣಪ್ಪ
ದಸ್ತಾಪೂರ ಸಾ:ಮಾಹಾಗಾಂವ ಗ್ರಾಮ ರವರು ದಿನಾಂಕ 25-05-2014 ರಂದು ತನ್ನ ಅಂಗಡಿ ತೆರೆದು
ಮುಡಬಿ ಗ್ರಾಮಕ್ಕೆ ಮದುವೆಗೆ ಹೋಗಿ ಶೂಟ್ಟಿಂಗ ಮಾಡಿ ವಾಪಸ್ಸು ಅಂಗಡಿಗೆ ಬಂದು ವಿಡಿಯೋ ಕ್ಯಾಮರಾ
ಅಂಗಡಿಯಲ್ಲಿ ಇಟ್ಟು ಕ್ಯಾಸೆಟ ತರಲು ಗುಲಬರ್ಗಾಕ್ಕೆ
ಹೋಗಿದ್ದು, ಮಾಹಾಗಾಂವಕ್ಕೆ ಬರಲು
ತಡವಾಗಿದ್ದ ರಿಂದ ರಾತ್ರಿ 9-00 ಗಂಟೆಗೆ ತನ್ನ ಸಹಾಯಕ
ಧರ್ಮಣ್ಣಾ ಇತನು ಫಿರ್ಯಾದಿಗೆ ತಿಳಿಸಿ, ಅಂಗಡಿ ಬಂದ ಮಾಡುವುದಾಗಿ ತಿಳಿಸಿ ಶೆಟ್ಟರ ಕೀಲಿ ಹಾಕಿ ಮನೆಗೆ
ಹೋಗಿದ್ದು ಇರುತ್ತದೆ. ದಿನಾಂಕ 26-05-14 ರಂದು ಬೆಳಿಗ್ಗೆ 6-00 ಗಂಟೆಗೆ ಮನೆಯಲ್ಲಿದ್ದಾಗ ತಮ್ಮ ಅಂಗಡಿಯ ಬಾಜುದವರಾದ ನಿಖಿಲ್
ಕಟ್ಟೋಳಿ ಇವರು ಶೆಟ್ಟರ ಮೇಲೆ ಎತ್ತಿದ್ದು ನೋಡಿ ಪೋನ ಮಾಡಿ ತಿಳಿಸಿದಾಗ ಅಂಗಡಿ ಬಂದು ನೋಡಲಾಗಿ
ಯಾರೋ ಕಳ್ಳರು ದಿನಾಂಕ 26-05-14 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ 6-00 ಗಂಟೆಯ ಮಧ್ಯದ ಅವಧಿಯಲ್ಲಿ
ಶೆಟರ ಮಧ್ಯ ಭಾಗದಲ್ಲಿ ಭಾರವಾದ ವಸ್ತುವಿನಿಂದ ಮಣಿಸಿ ಮೇಲ ಎತ್ತಿ ಅಂಗಡಿಯೊಖೆಗೆ ಪ್ರವೇಶ ಮಾಡಿ
ಅಂಗಡಿಯಲ್ಲಿದ್ದ 1. ಪ್ಯಾನಾಸೋನಿಕ ಎಂ.ಡಿ. 9000 ವಿಡಿಯೋ ಕ್ಯಾಮರಾಅ:ಕಿ:70,000/-
2.ಒಂದು ನಿಕ್ಕಾನ-3100 ಪೋಟೋ ಕ್ಯಾಮರಾದ ಅ:ಕಿ: 30,000/- 3. ಪ್ಲಾಶ ನಿಕ್ಕಾನ ಎಸ್ಬಿ 600 ಅ:ಕಿ: 10,500/- 4. ಒಂದು 8 ಜಿ.ಬಿ.ಮತ್ತು ಒಂದು 4 ಜಿ.ಜಿ. ಪೆನ್ ಡ್ರಾವ್ಅ:ಕಿ:2400/- 5. ಒಂದು ಜಾಕೇಟ ಅ:ಕಿ:1000/-ರೂ. ಒಟ್ಟು 1,13,900/-
ರೂ. ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment