ಅನೈತಿಕ ಸಂಬಂಧ
ಹಿನ್ನಲೆಯಲ್ಲಿ ವ್ಯಕ್ತಿ ಕೊಲೆ,
ಇಬ್ಬರ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 26-05-2014 ರಂದು ರಾತ್ರಿ ವೇಳೆಯಲ್ಲಿ ದುಳಪ್ಪಾ ಕುಂಬಾರ ಈತನಿಗೆ ತಮ್ಮ ಅನೈತಿಕ
ಸಂಬಂಧ ಮುಚ್ಚಿ ಹಾಕುವ ಉದ್ದೇಶದಿಂದ ವಿಜಯಕುಮಾರ ಹಾಗು ಆತನ ಪ್ರೆಯಸಿ ಸೇರಿ ಇ.ಎಸ್.ಐ ಆಸ್ಪತ್ರೆ
ಹಿಂದುಗಡೆ ರೋಡಿನ ಮೇಲೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಈ ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್.ಐ.ಪಿ.ಎಸ್. ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾ ರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ಮತ್ತು ಶ್ರೀ ಸಂತೋಷ ಬಾಬು.ಐ.ಪಿ.ಎಸ್. ಸಹಾಯ ಪೊಲೀಸ್ ಅಧೀಕ್ಷಕರು ಗ್ರಾಮಾಂತ ಉಪ
ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ತೇಲಿ ಸಿ.ಪಿ.ಐ ಎಂ.ಬಿ ನಗರ ವೃತ್ತ,
ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ ಎಂ.ಬಿ ನಗರ ಠಾಣೆ,
ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು ಸಿಬ್ಬಂದಿಯವರಾದ
ಶಂಕರ ಹೆಚ್.ಸಿ, ಅಜರ್ುನ ಎ.ಹೆಚ್.ಸಿ, ಮೊಯಿಜೂದ್ದಿನ ಸಿ.ಪಿ.ಸಿ, ಮಲ್ಲಿಕಾಜರ್ುನ ಸಿ.ಪಿ.ಸಿ, ಸಿದ್ರಾಮಯ್ಯ ಸಿ.ಪಿ.ಸಿ, ಅಶೋಕ ಮುಧೋಳ ಸಿ.ಪಿ.ಸಿ, ಅಶೋಕ ಹಳಿಗೋದಿ ಸಿ.ಪಿ.ಸಿ, ಚನ್ನಬಸಯ್ಯ ಸ್ವಾಮಿ ಸಿ.ಪಿ.ಸಿ, ಬಲರಾಮ ಸಿಪಿಸಿ, ಸುಧಾ ಮಪಿಸಿ ರವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು,
ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 28-05-2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ
ಯಶಸ್ವಿಯಾಗಿರುತ್ತಾರೆ.
1. ವಿಜಯಕುಮಾರ ತಂದೆ ನಿಂಗಪ್ಪಾ ಕಾಳೆ ಸಾ :
ಹತ್ತಿಕುಣಿ ತಾ :ಜಿಲ್ಲಾ ಯಾದಗಿರಿ ಹಾಲಿ ವಸ್ತಿ ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ಶೇಡ್ಡಿನ ಕ್ವಾಟರ್ಸ ಸೇಡಂ ರೋಡ್ ಗುಲಬರ್ಗಾ
2. ಲಕ್ಷ್ಮಿಬಾಯಿ ಗಂಡ ಮಹಾದೇವ ಕುಂಬಾರ ಸಾ: ಬೊಳೆವಾಡ ಹಾಲಿ ವಸ್ತಿ ಸಿದ್ದೇಶ್ವರ ಕಾಲೋನಿ ಗುಲಬರ್ಗಾ
ಈ ಕೊಲೆಗೆ ಕಾರಣ ಆರೋಪಿ ವಿಜಯಕುಮಾರ ಈತನು ಲಕ್ಷ್ಮಿಬಾಯಿ
ಈತಳ ಸಂಗಡ ಕಳೆದ 4 ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಸದರಿ ಅನೈತಿಕ ಸಂಬಂಧ ವಿಷಯ ಲಕ್ಷ್ಮಿಬಾಯಿ
ಈತಳ ಭಾವನ ಮಗನಾದ ಧೂಳಪ್ಪ ತಂದೆ ಮಲ್ಲಣ್ಣ ಕುಂಬಾರ ಈತನಿಗೆ ಗೊತ್ತಾಗಿ ತನ್ನ ಮನೆಯವರಿಗೆ ತನ್ನ
ಅನೈತಿಕ ಸಂಬಂಧ ಬಗ್ಗೆ ಹೇಳುತ್ತಾನೆ ಅಂತಾ ಅಂದುಕೊಂಡು ಆತನಿಗೆ ಕೊಲೆ ಮಾಡಿಸಿದರೆ ತಮ್ಮ ಅನೈತಿಕ
ಸಂಬಂಧ ಬಗ್ಗೆ ಮನೆಯಲ್ಲಿ ಗೊತ್ತಾಗುವದಿಲ್ಲ ಅಂತಾ ಭಾವಿಸಿ ಲಕ್ಷ್ಮಿಬಾಯಿ ಈತಳು ವಿಜಯಕುಮಾರ ಈತನ
ಮುಖಾಂತರ ತನ್ನ ಭಾವನ ಮಗನಾದ ಧೂಳಪ್ಪ ಕುಂಬಾರ ಈತನಿಗೆ ಸಂಚು ಮಾಡಿ ಸೆಂದಿ ಕುಡಿಯಲು ಹೋಗೋಣಾ ಬಾ
ಅಂತಾ ವಿಜಯಕುಮಾರ ಈತನು ಮನೆಯಿಂದ ಕರೆದುಕೊಂಡು ಬಂದು ಇ.ಎಸ್.ಐ ಆಸ್ಪತ್ರೆ ಹಿಂದುಗಡೆ ಇರುವ ವಿಶ್ವವಿದ್ಯಾಲಯ ಆವರಣದಲ್ಲಿರುವ ಕಾಮರ್ಸ ಡಿಪಾರ್ಟಮೆಂಟ
ಕಡೆಗೆ ಹೋಗುವ ರೋಡಿನ ಹತ್ತಿರ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಸದರಿ
ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೊಪಿತರನ್ನು
ಮೇಲ್ಕಂಡ ತನಿಖಾ ತಂಡವು ಬೇದಿಸುವಲ್ಲಿ ಮತ್ತು ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಶ್ಲಾಘಿಸಿರುತ್ತಾರೆ.
ಅಪಘಾತ
ಪ್ರಕರಣಗಳು :
ಫರತಾಬಾದ ಠಾಣೆ : ಪೀರೋಜಾಬಾದ ಗ್ರಾಮದ ಶಬ್ಬೀರ ಮತ್ತು ಹಸನ ಇವರು ದಿನಾಂಕ 25-05-2014 ರಂದು ರಾತ್ರಿ 1130
ಗಂಟೆಯ ಸುಮಾರಿಗೆ ನಾವಿಬ್ಬರು ದರ್ಗಾದಲ್ಲಿದ್ದಾಗ ದರ್ಗಾದ ಹತ್ತಿರ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ವಾಹನಗಳು
ಡಿಕ್ಕಿಯಾದ ಸಪ್ಪಳ ಕೇಳಿ ನಾವು ಅಲ್ಲಿಗೆ ಹೋಗಿ ನೋಡಲಾಗಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಒಂದು
ಟಿಪ್ಪರ ನಿಲ್ಲಿಸಿದ್ದು ಅದರ ನಂಬರ ಜಿಜೆ-07 ವ್ಹಿ ಡಬ್ಲೂ-4793 ಅಂತಾ ಇದ್ದು ಸದರ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು
ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಯಾವುದೇ ಡಿಕೇಟರ ವೈಗೆರೆ ಹಾಕದೇ,ಅಲಕ್ಷತನ ಮತ್ತು ಬೇಜಾವಬ್ದಾರಿತನದಿಂದ ನಿಲ್ಲಿಸಿ
ಹೋಗಿದರಿಂದ ಜೇವರ್ಗಿ ಕಡೆಗೆ ಹೊರಟ ಮೋಟಾರ ಸೈಕಲ ಸವಾರನು ಹೆದ್ದಾರಿ ಮೇಲೆ ಇಂಡಿಕೇಟರ ಹಾಕದೇ
ನಿಲ್ಲಿಸಿದ ಟಿಪ್ಪರ ನಂ ಜಿಜೆ-07 ವ್ಹಿಡಬ್ಲೂ-4793 ನೆದ್ದಕ್ಕೆ ಹಿಂದೆ ಡಿಕ್ಕಿಪಡಿಸಿದರಿಂದ ಸದರಿಯವನ ತಲೆಗೆ,ಬಲಗೈ ಮತ್ತು ಬಲಗಾಲಿಗೆ ಭಾರಿ ರಕ್ತಗಾಯವಾಗಿದ್ದು
ಇರುತ್ತದೆ. ಸದರಿಯವನ ಹೆಸರು ಹೀರು ತಂದೆ ರಾಮು ಚವ್ಹಾಣ ಸಾ||ಮುದ್ದವಾಳ
ತಾ|| ಜೇವರ್ಗಿ ಅಂತಾ ತಿಳಿಸಿದ್ದರ ಸಾರಾಂಶದ ಮೇರೆಗೆ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 29-05-2014 ರಂದು ಬೆಳಿಗ್ಗೆ 08-30 ಗಂಟೆಗೆ ಶ್ರೀ ಕೌಶಿಕ ತಂದೆ ದಿಲೀಪ ಕೌಲಗಿಕರ್ ಸಾ: ಸರಸ್ವತಿ ಗೋದಾಮ
ಜಗತ ಪೊಸ್ಟ ಆಫೀಸ್ ಎದುರು ಗುಲಬರ್ಗಾ ರವರು ತನ್ನ ಕಾರ ನಂ: ಕೆಎ 32 ಎನ್ 3992 ನೆದ್ದನ್ನು ಕೇಂದ್ರ ಬಸ್
ನಿಲ್ದಾಣ ದಿಂದ ಆರ್.ಜಿ.ನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಹ್ಮದಿ ಚೌಕ ದಾಟಿ ರಿಹಾನ ತಾರಿ ಹೊಟೇಲ ಎದುರು ರೋಡ ಮೇಲೆ
ಆರ್.ಜಿ.ನಗರ ಕಡೆಯಿಂದ ಸ್ಕಾರ್ಫಿಯೋ ಕಾರ ನಂ: ಕೆಎ 32 ಎನ್ 2866 ರ ಚಾಲಕನು ಅತಿವೇಗ ಮತ್ತು ಅಲಕ್ಷತನ ದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಡ್ಯಾಮೇಜ ಮಾಡಿದ್ದು
ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ
ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ವಂದನಾ ಗಂಡ ಉಜ್ವಲ್ ಸಿಂಗ್ ಹಜಾರಿ ಸಾ:
ಖಾದ್ರಿ ಚೌಕ ಗುಲಬರ್ಗಾ ಇವರನ್ನು ದಿನಾಂಕ: 06.12.2007 ರಂದು ತಂದೆ ತಾಯಿಯವರು ಬೀದರದ
ಉಜ್ವಲ್ ಸಿಂಗ್ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಮಾತನಾಡಿದ
ಪ್ರಕಾರ 01 ಲಕ್ಷ ವರದಕ್ಷಿಣೆ 10 ತೊಲೆ ಬಂಗಾರ ಕೊಡಬೇಕಾಗಿತ್ತು. ಆದರೆ
ನಾವು ನಮ್ಮ ತಂದೆ ತಾಯಿಯವರು ಮದುವೆಯಲ್ಲಿ 75 ಸಾವಿರ ರೂ 8 ತೊಲೆ ಬಂಗಾರ ಕೊಟ್ಟಿರುತ್ತಾರೆ. ಮದುವೆಯಾದ ಮೂರು ತಿಂಗಳು ಗಂಡ ಹಾಗೂ ಗಂಡ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು ನಂತರ
ದಿನಾಲೂ ಇನ್ನು ಉಳಿದ ವರದಕ್ಷಿಣೆ ಹಣ & ಬಂಗಾರ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ
ನೀಡಲು ಪ್ರಾರಂಬಿಸಿದರು . ಅವರು ಕೊಡುವ ಹಿಂಸೆ ತಾಳಲಾರದೆ ಈಗ ಸುಮಾರು ಒಂದು ವರ್ಷದಿಂದ
ಗುಲಬರ್ಗಾದ ಖಾದ್ರಿ ಚೌಕ ನಬಿ ಕಾಲೋನಿಯಲ್ಲಿ ನಮ್ಮ ತಾಯಿಯೊಂದಿಗೆ ವಾಸವಾಗಿರುತ್ತೇನೆ . ಆದರು
ಕೂಡ ನನ್ನ ಗಂಡ ಉಜ್ವಲ್ ಸಿಂಗ ಇತನು ಫೋನ ಮುಖಾಂತರ ಅವಾಚ್ಯಶಬ್ದಗಳಿಂದ ಬೈಯುತ್ತಿದ್ದನು .
ದಿನಾಂಕ: 29.05.2014 ರಂದು ಬೆಳಗ್ಗೆ 9.00 ಗಂಟೆಗೆ ನನ್ನ ಗಂಡ ಉಜ್ವಲ್ ಸಿಂಗ್ ಅತ್ತೆ,
ಪುಷ್ಪಾಬಾಯಿ, ಮಾವ ಬಾಬುಸಿಂಗ್, ಮೈದುನ ಪ್ರಕಾಶ ,ನಾದಿನಿ ನೀತು ಸಿಂಗ್ , ಇವರೆಲ್ಲರೂ
ಕೂಡಿಕೊಂಡು ನಮ್ಮ ತವರು ಮನೆಗೆ ಬಂದು ರಂಡಿ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂದರೆ
ತವರು ಮನೆಯಲ್ಲಿ ಕುಳಿತ್ತಿರುವಿಯಾ ನಿಮ್ಮ ತಾಯಿಗೆ ಖಲಾಸ ಮಾಡಿದರ ನಿನಗೆ ಯಾರು ನೊಡಿಕೊಳ್ಳಲು
ಇರುವುದಿಲ್ಲಾ ಈಗ ನಿಮ್ಮ ತಾಯಿಯಿಂದ 50 ಸಾವಿರ ರೂ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಂದರೆ
ನಮ್ಮ ಮನೆಯಲ್ಲಿ ನಿನಗೆ ಜಾಗ ಕೊಡುತ್ತೇವೆ ಇಲ್ಲವಾದರೆ
ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಗಂಡ ಉಜ್ವಲ್ ಸಿಂಗ ಇತನು ಕೈಯಿಂದ ಹೊಡೆದನು ನನ್ನ
ನಾದಿನಿ ಕೈ ಹಿಡಿದು ಜಗ್ಗಾಡಿದಳು ಅತ್ತೆ, ಮಾವ, ಮೈದುನ ಎಲ್ಲರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment