ಮಟಕಾ ಜೂಜಾಟದಲ್ಲಿ ನಿರತ
ವ್ಯಕ್ತಿಯ ಬಂಧನ :
ವಿಶ್ವವಿದ್ಯಾಲಯ
ಠಾಣೆ : ದಿನಾಂಕ: 02-06-2014 ರಂದು ಹಾಗರಗಾ ರೋಡ ಜಾನಿ ಹೊಟೇಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಿದ್ದಾನೆ ಎಂಬ ಖಚಿತ
ಬಾತ್ಮಿ ಮೆರೆಗೆ ಪಿ.ಎಸ್.ಐ. ವಿಶ್ವವಿದ್ಯಾಲಯ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ
ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ ಮಟಕಾ ಚೀಟಿ ಬರೆಯುಸುತ್ತಿದ್ದವರು ಓಡಿ ಹೋಗಿದ್ದು, ಮಟಕಾ ಚೀಟಿ
ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಬ್ದುಲ
ಮುನೀರ ತಂದೆ ಅಬ್ದುಲ ಘನಿ, ಸಾ|| ರಹೆಮಾನ ಕಾಲೋನಿ ಗುಲಬರ್ಗಾ
ಅಂತಾ ಹೇಳಿದ್ದು, ಆಗ ಸದರಿಯವನ ಕೈಯಲ್ಲಿ ಇದ್ದ
ಒಂದು ಮಟಕಾ ಚೀಟಿ ಮತ್ತು ನಗದು ಹಣ 1100/-, ಹಾಗೂ ಒಂದು ಬಾಲಪೆನ್ನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ
ಠಾಣೆಗೆ ಬಂದು ಸದರಿಯವನ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಹರಿಸಿ ಬಲತ್ಕಾರ
ಮಾಡಿದ ಪ್ರಕರಣ :
ಕಾಳಗಿ
ಠಾಣೆ : ಶ್ರೀಮತಿ ಪೀರಮ್ಮ ಹೊಸಮನಿ ಸಾ:ಡೊಣ್ಣುರ ಇವರು ಮಗಳಾದ ಕುಮಾರಿ ಇವಳನ್ನು
ಕೆಲ ದಿವಸಗಳ ಹಿಂದೆ ನಮ್ಮ ಸಮ್ಮಂದಿಕರೊಳಗೆ ನಿಶ್ಚಿತಾರ್ಥ ನೇಮಿಸಿದ್ದೆವು, ಹಿಗಿರುವಾಗ ನಮ್ಮ ಮನೆಯ
ಎದುರಿನ ಮನೆಯವನಾದ ಅಂಬ್ರೇಶ ಮೋಘಾ ಸಾ:ಡೊಣ್ಣುರ ಇವನು ನನ್ನ ಮಗಳಿಗೆ ನಾನು ನಿನಗೆ
ಪ್ರೀತಿಸಿದ್ದೆನೆ, ನಿನಗೆ ಲಗ್ನ ಮಾಡಿಕೊಳ್ಳುತ್ತೆನೆ, ಎಂದು ಇಲ್ಲಾ ಸಲ್ಲದ ಆಮೀಷೆ
ತೊರಿಸಿ ದಿನಾಂಕ 17-03-2014 ರಂದು ಸಾಯಾಂಕಾಲ 6 ಗಂಟೆಯ ಸುಮಾರಿಗೆ ಇತನು ನನ್ನ ಮಗಳನ್ನು ಅಪಹರಣ
ಮಾಡಿಕೊಂಡು ಹೋಗಿರುತ್ತಾನೆ, ಅಂಬ್ರೇಶ ಮತ್ತು ಅಪಹರಣಕ್ಕೊಳಾದ ಯುವತಿ
ಇವರನ್ನು ಪತ್ತೆಮಾಡಿ ಇವರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ
ವಿನಂತಿಸಿಕೊಂಡಿದ್ದು ಸದರ ಅರ್ಜಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 13/2014 ಕಲಂ 366 ಐಪಿಸಿ
ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಠಾಣೆಯ ಸಿಬ್ಬಂದಿಯವರಾದ ಶ್ರೀ
ಶರಣಪ್ಪ ಹೆಚ್.ಸಿ 375 ರವರು ಆರೋಪಿ ಮತ್ತು
ಅಪಹೃತಳಿಗೆ ದಿನಾಂಕ 02-06-2014 ರಂದು 8-30 ಎ,ಎಂ ಕ್ಕೆ ಠಾಣೆಗೆ ತಂದು ಹಾಜರ ಪಡಿಸಿದ್ದು, ಒಂದು ವರ್ಷದಿಂದ
ಅಂಬ್ರೇಶನು ನನಗೆ ಪ್ರೀತಿಸುತ್ತಿದ್ದನು ನಾನು ಮತ್ತು ಅಂಬ್ರೇಶ ಆಗಾಗ ಫೋನ ಮಾಡಿ
ಮಾತನಾಡುತ್ತಿದ್ದೆವು ಅಂಬ್ರೇಶನು ನಾನು ನಿನಗೆ ತುಂಬ ಪ್ರೀತಿಸುತ್ತೆನೆ ಮದುವೆ ಮಾಡಿಕೊಂಡರೆ
ನಿನಗೆ ಮಾಡಿಕೊಳ್ಳುತ್ತೆನೆ ಅಂತಾ ಫೋನ ಮಾಡುತ್ತಿದ್ದನು ದಿನಾಂಕ 17/03/14 ರಂದು ಸಾಯಂಕಾಲ 6-00
ಗಂಟೆಯ ಸುಮಾರಿಗೆ ನಾನು ಸಂಡಾಸಕ್ಕೆಂದು ಮನೆಯಿಂದ ಹೋದಾಗ ನನ್ನ ಹಿಂದೆಯೇ ಬಂದು ನಾನು ನಿನಗೆ
ತುಂಬಾ ಪ್ರೀತಿಸುತ್ತೆನೆ ಮತ್ತು ಲಗ್ನ ಮಾಡಿಕೊಳ್ಳುತ್ತೆನೆ ಇಬ್ಬರು ಕೂಡಿ ಎಲ್ಲಿಗಾದರೂ ಹೋಗೊಣ
ಅಂತಾ ಒತ್ತಾಯ ಮಾಡಿದನು ನಾನು ನಿರಾಕರಿಸಿದಾಗ, ನೀನು ನನ್ನ ಸಂಗಡ ಬರದೆ
ಇದ್ದರೆ ನಿನಗೆ ಕೋಲೆ ಮಾಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದನು ಇದರಿಂದ ನಾನು ಅಂಜಿ ಅವನ
ಸಂಗಡ ಹೋದೆನು ಇಬ್ಬರು ಕೂಡಿ ಡೋಣ್ಣುರದಿಂದ ಕಲಗುರ್ತಿಗೆ ಬಂದೆವು ಅಲ್ಲಿಂದ ಒಂದು ಯಾವುದೋ ಟಂಟಂ ದಲ್ಲಿ
ಅಶೋಕ ನಗರ ಕ್ರಾಸಿಗೆ ಬಂದು ಅಲ್ಲಿಂದ ಗುಲಬರ್ಗಾಕ್ಕೆ ಹೋದೆವು ಅದೇ ದಿವಸ ಅಂಬ್ರೇಶನು ಗುಲಬರ್ಗಾದ
ಶಹಾ ಬಜಾರದಲ್ಲಿರುವ ಅಂಬಾ ಭವಾನಿ ಗುಡಿಯಲ್ಲಿ ನನ್ನ ಕುತ್ತಿಗೆಗೆ ತಾಳಿ ಕಟ್ಟಿದ್ದನು ಅಲ್ಲಿಯೇ
ಶಹಾ ಬಜಾರ ದಲ್ಲಿರುವ ಅವರ ಸಂಬಂಧಿಕನಾದ ವಿಜಯಕುಮಾರ ರವರ ಮನೆಗೆ ಕರೆದುಕೊಂಡು ಹೋದನು ವಿಜಯಕುಮಾರ
ರವರಿಗೆ ಇವಳು ನನ್ನ ಹೆಂಡತಿ ಇರುತ್ತಾಳೆ ಅಂತಾ ತಿಳಿಸಿದನು ಮರು ದಿವಸ ವಿಜಯಕುಮಾರ ರವರಿಗೆ
ಸಂಬಂಧಿಸಿದ ಒಂದು ರೂಮ ಬಾಡಿಗೆಯಿಂದ ಪಡೆದು ಅಲ್ಲಿಯೇ ನನಗೆ ಇಟ್ಟು ನಾನು ಚಿಕ್ಕವಳು ಇದ್ದೆನೆ ಬೇಡವೆಂದರು ನನ್ನೊಂದಿಗೆ ಬಲಾತ ಸಂಭೋಗ ಮಾಡಿರುತ್ತಾನೆ, ಆನಂತರ ನನಗೆ ಅಲ್ಲಿ ಇಟ್ಟು, ನನ್ನ ಇಷ್ಟಕ್ಕೆ ವಿರುದ್ದವಾಗಿ ಪದೇ ಪದೇ ಸಂಭೋಗ ಮಾಡುತ್ತಾ ಬಂದಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಿರಿಯಾಣ ಠಾಣೆ : ಶ್ರೀ ನರಸಿಂಹಲು ತಂದೆ
ಝರಣಪ್ಪ ಟಪ್ಪ ಸಾ|| ರೋಡಕಲ್ಲೂರ ಇವರು ಪಾಲೀಷ
ಮತ್ತು ಕಲ್ಲು ಗಣಿಯಲ್ಲಿ ಹೇಡ್ ಮುನೀಮ್ ಅಂತಾ ಕೆಲಸ ಸುಮಾರು 10-12 ವರ್ಷದಿಂದ ಕೆಲಸ ಮಾಡುತ್ತಾ
ಬಂದಿರುತ್ತನೆ. ಪ್ರತಿ ದಿವಸದಂತೆ ಇಂದು ದಿನಾಂಕ 02-06-2014 ರಂದು ನಾನು ಮುಂಜಾನೆ ಮನೆಯಿಂದ
ನಮ್ಮ ಮಾಲೀಕರ ಗಣಿ ನೋಡಿಕೊಳ್ಳುವ ಕೆಲಸ ಸರ್ವೆ ನಂ. 35, 36 ರಲ್ಲಿ ಗಣಿಗೆ ಹೋಗಿದ್ದು, ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ 9:30 ಗಂಟೆ ಸುಮಾರಿಗೆ ನಮ್ಮ ಗಣಿಯಲ್ಲಿಯ ಕೆಬಲ ವೈಯರ
ಕಾಣಿಸಲಿಲ್ಲಾ. ಅತ್ತಾ ಇತ್ತ ಹುಡಕಾಡಿದ್ದು, ನಮ್ಮ ಗಣಿಯಲ್ಲಿ ಕೆಲಸ ಮಾಡುವವರಿಗೆ ವಿಚಾರಿಸಲಾಗಿ ತಿಳಿದು
ಬಂದಿಲ್ಲಾ. ನಾನು ಗಣಿ ಒಳಗಿಂದ ಮೇಲೆ ಬಂದಾಗ ನಮ್ಮ ಗಣಿಯ ಕುಚ್ಚದ ಹತ್ತಿರ ಯಾರೋ ಇಬ್ಬರು
ಮನುಷ್ಯರು ಅನುಮಾನಾಸ್ಷದ ರೀತಿಯಲ್ಲಿ ಆಯುವುದು, ಹುಡುಕಾಡುವುದು, ತಿರುಗಾಡುತ್ತಿದ್ದು, ಅವರಿಬ್ಬರ ಕೈಯಲ್ಲಿ
ಒಂದೋಂದು ಬೀಳಿಯ ಚೀಲಗಳು ಇದ್ದವು. ನಾನು ಅವರನ್ನು ವಿಚಾರಿಸುವ ಕುರಿತು ಅವರ ಸಮೀಪ
ಹೋಗುತ್ತಿದ್ದಂತ್ತೆ. ಅವರಿಬ್ಬರೂ ನನ್ನನ್ನು ನೋಡಿ ಮುಂದೆ-ಮುಂದೆ ಹೋಗುತ್ತಿದ್ದಾಗ ನಮ್ಮ ಗಣಿಯಲ್ಲಿ ಕೆಲಸ ಮಾಡಲು
ಬಂದಿದ್ದ ಭೀಮಯ್ಯ ವಡ್ಡರ, ಶರಣಪ್ಪ ವಡ್ಡರ ಕೂಗಿದಾಗ
ಕೂಡಲೆ ಅವರು ಓಡಿ ಬಂದರು. ಆಗ ನಾವೊಲ್ಲರು ಕೂಡಿ
ಸಂಶಾಯಾಸ್ಪದ ರೀತಿಯಲ್ಲಿ ವೇಷ್ಟ ಸಾಮನುಗಳನ್ನು ಆಯುತ್ತಾ ಹೋಗುತ್ತಿದ್ದವರನ್ನು ಹಿಡಿದು
ನಿಲ್ಲಿಸಿ, ವಿಚಾರಿಸಲಾಗಿ ಹಳೆಯ ಸಾಮನುಗಳು ಬೀಸಾಕಿದ ತುಕಡಿಗಳನ್ನು ಆಯ್ದುಕೊಳೂತ್ತಿದ್ದೆವು ಅಂತಾ
ಹೇಳಿದರು. ಅವರ ಹೆಸರು ಕೇಳಲಾಗಿ 1] ರವಿ@ದಾಹಿ ತಂದೆ ಚಂದೂನಾಥ ಮಿನಗಾರ ಸಾ: ಗಾಂದಿನಗರ ತಾಂಡೂರ 2]
ಸುನೀಲ ತಂದೆ ಗೋಪಾಲ@ಗೆಂಡೆನಾಥ ಮಿನಗಾರ ಸಾ:
ಗಾಂದಿನಗರ ತಾಂಡೂರ ಅಂತಾ ತಿಳಿಸಿದರು. ಸದರಿಯವರ ಇಬ್ಬರ ಹತ್ತಿರ ಒಂದೊಂದು ಬಿಳಿಯ ಪ್ಲಾಸ್ಟೀಕ ಚೀಲಗಳಿದ್ದು, ಅವುಗಳಲ್ಲಿ ನೋಡಲಾಗಿ
ಒಳಗಡೆ ಕೇಬಲ ವೈರ ಅಂದಾಜು 100 ಫೀಟುವುಳ್ಳದ್ದು ಇರುತ್ತವೆ. ಗಣಿಯಲ್ಲಿ ಯಾರೂ ಇಲ್ಲದ್ದರಿಂದ
ನಾವಿಬ್ಬರೂ ಸೇರಿ ಸುಮಾರು 200 ಫೀಟನಷ್ಟು ಕೇಬಲ ವಾಯರನ್ನು
ನಮ್ಮಲ್ಲಿದ್ದ ಕಟಿಂಗ ಪ್ಲೆಯರನಿಂದ ದಿನಾಂಕ: 02-06-14 ರಂದು ಬೆಳಿಗ್ಗೆ 08:30 ಗಂಟೆಗೆ ಕಟ್ ಮಾಡಿ ಕಳುವು
ಮಾಡಿರುತ್ತೇವೆ ಅಂತಾ ಒಪ್ಪಿಕೊಂಡರು. ಅವರಿಬ್ಬರನ್ನು ಮತ್ತು
ಮಾಲಿನೊಂದಿಗೆ ಠಾಣೆಗೆ ನಮ್ಮ ಮಾಲಿಕರಿಗೆ ಭೇಟಿ ಮಾಡಿಸಿ ವಿಷಯ ತಿಳಿಸಿ ಅವರಿಬ್ಬರನ್ನು
ಮಾಲಿನೊಂದಿಗೆ ಠಾಣೆಗೆ ಕರೆ ತಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ
ಕಿರುಕಳ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಪ್ರಿಯಾಂಕ ಗಂಡ ಮಲ್ಲಿಕಾರ್ಜುನ ಸಾ|| ಪ್ಲಾಟ ನಂ. 52 ಸಿದ್ದೇಶ್ವರ ಕಾಲೊನಿ ಗುಲಬರ್ಗಾ ರವನ್ನು 2003 ನೇ ಸಾಲಿನಲ್ಲಿ ಹುಮನಾಬಾದ ತಾಲ್ಲೂಕಿನ ಮಂಗಲಗಿ ಗ್ರಾಮದ ಗೈಬಣ್ಣ ಇವರ ಮಗನಾದ
ಮಲ್ಲಿಕಾರ್ಜುನ ಜಾಬನೂರ ಇತನೊಂದಿಗೆ ಬೌದ್ದ ಧರ್ಮದ ಸಂಪ್ರಾಯದಂತೆ ಮದುವೆ ಮಾಡಿಕೊಟ್ಟಿದ್ದು. ಇದರ
ಪ್ರತಿ ಫಲದಿಂದ ನನಗೆ 2 ಗಂಡು ಮಕ್ಕಳು ಹಾಗೂ ಎರಡು ಹೆಣ್ಣು ಮಕ್ಕಳು ಇರುತ್ತಾರೆ ಇಲ್ಲಿವರೆಗೆ
ನನ್ನ ಗಂಡ ಚೆನ್ನಾಗಿ ನೋಡಿಕೊಂಡಿರುತ್ತಾನೆ, ಇತ್ತಿತ್ತಲಾಗಿ ನನ್ನ ಗಂಡ ಕುಡಿಯುವ ಚಟಕ್ಕೆ ಬಿದ್ದು ನನಗೆ ಹೊಡೆಯುವದು ಬಡೆಯುವದು ಮಾನಸಿಕ
ಹಿಂಸೆ ನೀಡುವದು, ನೀನು ಸರಿಯಾಗಿಲ್ಲ, ನಿನಗೆ ಸರಿಯಾಗಿ ಅಡಿಗೆ ಮಾಡಲು ಬರುವದಿಲ್ಲಾ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ
ಬಂದಿರುತ್ತಾನೆ, ನನ್ನ ಗಂಡನು ಆರ್.ಎ.ಎಫ್. ಮೀಸಲು ಪಡೆ ಹೈದರಾಬಾದದಲ್ಲಿ ಹವಾಲ್ದಾರ ಅಂತ ಕೆಲಸ ಮಾಡುತ್ತಿದ್ದು ಆಗಾಗ ರಜೆ
ಪಡೆದುಕೊಂಡು ಸಿದ್ದೇಶ್ವರ ಕಾಲೊನಿಯಲ್ಲಿರುವ ನನ್ನ ತಾಯಿಯ ಮನೆಯಲ್ಲಿ ಇದ್ದಾಗ ಬಂದು ಮಾನಸಿಕ
ಹಿಂಸೆ ಕೊಟ್ಟು ದೈಹಿಕೆ ಹಿಂಸೆ ಕೊಟ್ಟು ಹೋಗುತ್ತಿದ್ದನು. ದಿ: 28.05.2014 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ರಜೆಯ ಮೇಲೆ ನನ್ನ ಗಂಡನು ನಾನು ನನ್ನ ತವರು ಮನೆಯಲ್ಲಿ ಇದ್ದಾಗ ಬಂದು ನನಗೆ
ನೀನು ನೋಡಲು ಸರಿಯಾಗಿಲ್ಲ ಮತ್ತು ನಿನಗೆ ಅಡಿಗೆ ಮಾಡಲು ಬರುವದಿಲ್ಲ ಅಂತ ಹೇಳಿ ಕುಡಿದ
ಅಮಲಿನಲ್ಲಿ ಬಂದು ಮನೆಯಲ್ಲಿ ಬಿದ್ದಿದ್ದ ಒಂದು ದಪ್ಪಾದ ಬಡಿಗೆಯಿಂದ ನನ್ನ ಬಲ ತೋಳಿನ ಮತ್ತು ಎಡ
ತೋಳಿನ ಮೇಲೆ ಬೆನ್ನಿನ ಮೇಲೆ ಜೋರಾಗಿ ಹೊಡೆದ ಅದರಿಂದ ನನಗೆ ಕಂದು ಗಟ್ಟಿದ ಗಾಯವಾಗಿರುತ್ತದೆ, ಮತ್ತು ಅದೇ ಬಡಿಗೆಯಿಂದ ನನ್ನ ಟೊಂಕದ ಮೇಲೆ ತೊಡೆಯ ಮೇಲೆ
ಮತ್ತು ಕೈಯಿಂದ ಕಪಾಳ ಮೇಲೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ, ಪುನಃ ಬಡಿಗೆಯಿಂದ ನನ್ನ ತಲೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿ
ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಹಾದೇವ ತಂದೆ ಭವನರಾವ
ಪಾಟೀಲ ಸಾ||ರಾಜೀವ
ಗಾಂಧಿ ನಗರ ಅಫಜಲಪೂರ ಇವರು ದಿನಾಂಕ 01-06-2014
ರಂದು ರಾತ್ರಿ 10;00 ಗಂಟೆ ಸುಮಾರಿಗೆ ಊಟಾ
ಮಾಡಿಕೊಂಡು ನಮ್ಮ ಮನೆಯ ಹತ್ತಿರ ಇದ್ದ ನಾರಾಯಣ ಬೇದಲಕರ್ ರವರ ಪಾನಶಾಪ ಅಂಗಡಿ ಮುಂದೆ ಟೇಬಲ್
ಮೇಲೆ ನಾನು ಮತ್ತು ನಮ್ಮ ನಗರದ ಪ್ರಕಾಶ ತಂದೆ ಶರಣಪ್ಪ ಚಾಂಬಕವಟೆ ರವರು ಮಾತಾಡುತ್ತಾ ಕುಳಿತಾಗ
ಅದೇ ಸಮಯಕ್ಕೆ ನಮ್ಮ ನಗರದ ಚನ್ನಪ್ಪ ತಂದೆ ವಿಜಯಕುಮಾರ ಕಲಶೆಟ್ಟಿ ಮತ್ತು ಅವರೊಂದಿಗೆ ಇನ್ನು 3 ಜನರು
ಬಂದು ಪಾನಶಾಪನಲ್ಲಿ ಸಿಗರೆಟ ತೆಗೆದುಕೊಂಡು ಸೇದುತ್ತಾ
ನನಗೆ ಚನ್ನಪ್ಪ ಇವನು ಯಾಕ ಟೇಬಲ್ ಅಳಗಾಡಸ್ತಿ ಸುಮ್ಮ ಕೋಡಲೆ ಮಗನಾ ಅಂತಾ ಅಂದನು ಆಗ
ನಾನು ಸ್ವಲ್ಪ ಮರಿಯಾದೆ ಕೊಟ್ಟು ಮಾತಾಡು ಅಂತಾ ಅಂದಿದಕ್ಕೆ ಚನ್ನಪ್ಪ ಮತ್ತು ಅವನೊಂದಿಗೆ
ಇದ್ದವರು ಎಲ್ಲರು ನನ್ನ ಮೈಮೇಲೆ ಬಂದು ಹೊಗದಂತೆ
ತಡೆದು ನಿಲ್ಲಿಸಿ ಅವರಲ್ಲಿ ಚನ್ನಪ್ಪ ಇವನು ನನಗೆ ಎದುರು ಮಾತಾಡತಿಯೇನಲೆ ಮಗನಾ ಅಂತಾ ಅಂದು
ಕೈಯಿಂದ ನನ್ನ ಕಪಾಳ ಮೇಲೆ ಹೊಡೆದು ನೆಲಕ್ಕ ಕೆಡವಿದನು ಆಗ ನಾನು ಕೆಳಗೆ ಬಿದ್ದಾಗ ನನ್ನ ಎರಡು
ಮೊಳಕಾಲು ಕೆತ್ತಿದವು, ಅವನೊಂದಿಗೆ
ಬಂದ ಇನ್ನು ಮೂರುಜನರು ನನಗೆ ಅವಾಚ್ಯವಾಗಿ ಬೈದು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದು ಜೀವದ
ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಚಂದ್ರಪ್ಪ ತಂದೆ ಸಾಯಬಣ್ಣಾ ಯಡ್ಡಳ್ಳಿ ಸಾ|| ಕುಕ್ಕುಂದಾ ರವರು ದಿನಾಂಕ ಮೋಟಾರು
ಸೈಕಲ್ ನಂ ಕೆ.ಎ-32 ಯು-1990 ನೇದ್ದರ
ಮೇಲೆ ಮಳಖೇಡ ದಿಂದ ಕುಕ್ಕುಂದಾ ಗ್ರಾಮಕ್ಕೆ ಹೋರಟಾಗ ಬೀಜನಳ್ಳಿ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ
ಟಾಟಾ ಸುಮೋ ನಂ ಕೆ.ಎ-32 ಎನ್-1984 ನೇದ್ದರ ಚಾಲಕನು ತನ್ನ ವಾಹನವನ್ನುಅತಿ ವೇಗ ಮತ್ತು
ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿ ಗಾಯಗೋಳಿಸಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment