ಅ ಸ್ವಾಭಾವಿಕ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಅಶೋಕ ತಂ ರಾಮಚಂದ್ರ ಸಂಗೀತಕರ್ ಸಾ|| ಅಂಕ್ಕಲಗಿ ತಾ||ಜಿ|| ಗುಲಬರ್ಗಾ ಇವರು ದಿನಾಂಕ:
8/06/14 ರಂದು ಸಾಯಂಕಾಲ 5.00 ಪಿ,ಎಮ್,ಕ್ಕೆ ತಮ್ಮ ಹಳೆ ಅಂಕ್ಕಲಗಿ ಗ್ರಾಮಕ್ಕೆ 5.30 ಪಿ,ಎಮ್,ಕ್ಕೆ
ಮರಳಿ ಹೊಸ ಅಂಕ್ಕಲಗಿ ಬರುತ್ತಿರುವಾಗ ನಮ್ಮೂರಿನ ಲಕ್ಷ್ಮಣರಾವ ಕುಲಕರ್ಣಿ ಇವರ ಹೋಲದ ಹತ್ತಿರದಿಂದ
ಬರುತ್ತಿರುವಾಗ ರೋಡಿನ ಬಲಗಡೆ ಇದ್ದ ತೆಗ್ಗಿನಲ್ಲಿ ಜಾಲಿ ಗೀಡದ ಕೆಳಗೆ ಯಾವುದೋ ಒಬ್ಬ
ಗಂಡು ಮನುಷ್ಯ ಮಲಗಿದ ಹಾಗೆ ಕಂಡು ಬಂತು ನಂತರ ನಾನು ಸಮೀಪ ಹೋಗಿ ನೋಡಲಾಗಿ ಆತ
ಎಡಮಗ್ಗಲಾಗಿ ಬಿದ್ದಿದ್ದು ಆತನ ಮೈ ಮೇಲ ಒಂದು ಬೀಳಿ ಬಣ್ಣದ ಶಾಂಡೊ ಬನೀನ ಮತ್ತು ಹಳೆಯ ನೀಲಿ
ಬಣ್ಣದ ಅಲ್ಲಲ್ಲಿ ಹರೀದಿದ್ದ ಜಿನ್ಸ ಪ್ಯಾಂಟ ಕಂಡು ಬಂತ್ತು ನಾನು ಸಮೀಪ ಹೋಗಿ ನೋಡಲಾಗಿ ಆತ
ಮೃತಪಟ್ಟಿದ್ದು ಕಂಡು ಬಂದಿದ್ದು ಅಂದಾಜು 25 ರಿಂದ 28 ವರ್ಷ ವಯಸ್ಸಿನವನಾಗಿದ್ದು ಈಗ ಸೂಮಾರ 3-4
ದಿವಸಗಳಿಂದ ಹಳೆಯ ಮತ್ತು ಹೋಸ ಅಂಕ್ಕಲಗಿ ಗ್ರಾಮದಲ್ಲಿ ಅಲ್ಲಲ್ಲಿ ಹುಚ್ಚನಂತೆ ಓಡಾಡುತಿದ್ದು
ನನಗೆ ನೆನಪಿಗೆ ಬಂತ್ತು ಆತನ ಕುಂಡಿಯ ಮೇಲೆ ಜೀನ್ಸ್ ಪ್ಯಾಂಟ ಹರಿದು ಹೋಗಿದ್ದು ಆತ ಇಂದು
ಬೆಳಗ್ಗೆ 11.00 ಗಂಟೆಯಿಂದ 5.00 ಪಿ,ಎಮ,ದ ಮದ್ಯದ ಅವಧಿಯಲ್ಲಿ ನಮ್ಮೂರಿನ ಲಕ್ಷ್ಮಣರಾವ
ಕುಲಕರ್ಣಿ ಇವರ ಹೋಲದ ಹತ್ತಿರ ರೋಡಿನ ಬದುವಿನಲ್ಲಿ ಇದ್ದ ಜಾಲಿ ಗಿಡದ ಕೆಳಗೆ ಬಿದ್ದು ಆತನಿಗೆ
ನೀರಡಿಕೆ ವಗೈರೆ ಆಗಿ ಬೀಸಿಲಿನ ದಾಹ ತಾಳಲಾರದೆ ಅಲ್ಲೆ ಬಿದ್ದು ಮೃತ ಪಟ್ಟಿರುತ್ತಾನೆ ಆತನ ಮೈ
ಮೇಲೆ ಯಾವುದೆ ಗಾಯ ವಗೈರೆ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಜುಳಾ ಗಂಡ ನೀಲಕಂಠಪ್ಪಗೌಡ ಪೊಲೀಸ್ ಪಾಟೀಲ ಸಾ: ದುಗನೂರ ಇವರು ದಿನಾಂಕ 07-06-14 ರಂದು ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಮಾವನಾದ
ಸಿದ್ದಣ್ಣಗೌಡ ಹಾಗು ಅತ್ತೆಯಾದ ಜಗದೇವಿ ಇಬ್ಬರೂ
ತಾಂಡೂರಿಗೆ ಹೋಗಿ ಬರುತ್ತೇವೆ ಅಂತಾ ಹೇಳಿ
ಹೋದರು. ಅವರು ಹೋದ ಬಳಿಕ ಮನೆಯಲ್ಲಿ ನನು ಮತ್ತು
ನನ್ನ ಗಂಡ ನಿಲಕಂಠಪ್ಪಗೌಡ ಇಬ್ಬರೆ ಮನೆಯಲ್ಲಿ ಇದ್ದೇವು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ
ಗಂಡನು ನನಗೆ ಹಾಲು ಕಾಸಿ ಕೊಡು ಅಂತ
ಅಂದಿದನು ಆಗ ನಾನು ಸಾಯಾಂಕಾಲ ಕಾಯಿಸಿ
ಕೊಡುತ್ತೆನೆ ಅಂತ ಅಂದೆನು ಆಗ ಅವರು ಏ ರಂಡಿ ನಾ ಹೇಳಿದ್ದು ಕೇಳಬೇಕು ಇಲ್ಲದೆ ಹೋದರೆ ನಿನಗೆ
ಖಲಾಸ ಮಾಡ್ತಿನಿ ಅಂತ ಅಂದರು
ಆಗ ನಾನು ಅದೇ ಹೆದರಿಕೆಯಿಂದ ಹಾಲು ಕಾಸಿ
ಕೊಡಬೇಕು ಅಂತ ಸ್ಟೋವಗೆ ಸೀಮೆ ಎಣ್ಣೆ ಹಾಕಬೇಕೆಂದು
ಮಾಡದಲ್ಲಿದ್ದ ಸೀಮೆಣ್ಣೆ ತಗೆದುಕೊಳ್ಳುವಾಗ
ಆ ಡಬ್ಬಿ ಮುಚ್ಚಳಿಕೆ ಸರಿಯಾಗಿ ಕೂಡದ ಕಾರಣ
ಆಡಬ್ಬಿಯಲ್ಲಿ ಸೀಮೆ ಎಣ್ಣೆ ನನ್ನ ಮೈಮೇಲೆ ಬಿತ್ತು ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳು
ಎಣ್ಣೆಯಲ್ಲಿ ತೊಯ್ದಿದೆವು. ಇದನ್ನು ನೋಡಿ ನನ್ನ ಗಂಡನಾದ ನೀಲಕಂಠಪ್ಪಗೌಡ ತಂದೆ
ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಇತನು ಏರಂಡಿ ನೀನಗೆ ಹಾಲು ಕಾಯಿಸಲು ಹೇಳಿದರೆ ನೀನು ಸೀಮೆ ಎಣ್ಣೆ ಮೈಮೇಲೆ ಚಲ್ಲಿ ಕೊಂಡಿದೀ ನಿನಗೆ
ಯಾವ ಕೆಲಸ ಬರುವುದಿಲ್ಲಾ ಅಂತ ಅಂದವನೆ ನನಗೆ
ಖಲಾಸ ಮಾಡಲು ಇದೆ ಸಮಯ ಅಂತ ಬೈದು ಅಲ್ಲಿಯೆ ಇದ್ದ
ಕಡ್ಡಿ ಪೆಟ್ಟಿಗೆ ತಗೆದುಕೊಂಡು ಕಡ್ಡಿ ಕೊರೆದು ಆ ಕಡ್ಡಿಯನ್ನು ನನ್ನ ಮೈಮೇಲೆ ಒಗೆದನು. ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳಿಗೆ ಉರಿ
ಹತ್ತಿ ನನ್ನ ಮೈ ಸುಡಹತ್ತಿದ್ದು ಆಗ ನಾನು
ಚಿರಾಡಿದಾಗ ಅಕ್ಕಪಕ್ಕದ ಮನೆಯವರು ಓಡಿ ಬಂದು ನೀರು ಹಾಕಿ ಉರಿಯನ್ನು ಆರಿಸಿದರು.ಈ ಘಟನೆಯಿಂದ ನನ್ನ
ಮುಖಕ್ಕೆ, ಕುತ್ತಿಗೆಗೆ, ಎರಡು ಕೈಗಳಿಗೆ,ಎದೆಗೆ, ಹೊಟ್ಟೆಗೆ, ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ
ಅಲ್ಲಲ್ಲಿ ಸುಟ್ಟು ತೊಗಲು ಸುಟ್ಟಿರುತ್ತದೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ: 8-06-2014 ರಂದು ಶ್ರೀ ಬಸವರಾಜ ತಂ.
ಗುರಪ್ಪ ಕುಂಬಾರ ಸಾ: ಕಿಣ್ಣಿ ಸಡಕ್ ರವರು ಗ್ರಾಮದ ಸಲೀಮನ ಹಿಟ್ಟಿನ ಗಿರಣಿ ಎದುರುಗಡೆಯ ರೋಡಿನ
ಮೇಲೆ ಹೊಗುತ್ತಿದ್ದಾಗ ಅವರ ತಂದೆ ಗುರಣ್ಣಾ ಮತ್ತು ಮಲತಾಯಿ ಮಕ್ಕಳಾದ ಮಲ್ಲಿನಾಥ ಮತ್ತು
ಸತೀಷಕುಮಾರ ಇವರು ಆಟೋ ನಂ. ಕೆಎ:32,
ಎ:2064 ನೇದ್ದರಲ್ಲಿ ಬಂದು ತನಗೆ ತಡೆದು ನಿಲ್ಲಿಸಿ, ಅವಾಚ್ಯ
ಶಬ್ದಗಳಿಂದ ಬಯ್ಯುತ್ತಾ ಹೊಲ ಬಿಡು ಅಂತ ತಕರಾರು ಮಾಡಿ, ಜಗಳ ತೆಗೆದು ಎಲ್ಲರೂ ಕೈಗಳಿಂದ ಹೊಡೆಯ ತೊಡಗಿದರು.
ನಂತರ ಮಲ್ಲಿನಾಥ ಈತನು ಅಲ್ಲೇ ಬಿದ್ದಿರುವ ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದನು. ಆಗ ಹಿಟ್ಟಿನ ಗಿರಣಿಯ ಸಲೀಂ, ನಾಗಪ್ಪಾ ತಂದೆ ಹಾಲಪ್ಪಾ ಹಲಗಿ ಇವರು ಬಂದು ಜಗಳ
ಬಿಡಿಸಿದ್ದು ನನ್ನ ತಂದೆ ಮತ್ತು ಮಲ್ಲಿನಾಥ
ಮತ್ತು ಸತೀಷಕುಮಾರರು ನನಗೆ ಹೊಲದ ಬಗ್ಗೆ ಕೇಳಿದರೆ, ಜೀವ ಹೊಡೆಯುವದಾಗಿ ಜೀವದ ಬೇದರಿಕೆ ಹಾಕಿ ಹೋದ ಬಗ್ಗೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ ಗುಲಬರ್ಗಾ:
ದಿನಾಂಕ:-07/06/2014 ರಂದು ಸಂಜೆ 07:00 ಗಂಟೆಸುಮಾರಿಗೆ ನಾಗಯ್ಯಾ ಸಾ: ಭೀಮಳ್ಳಿಯವರೊಂದಿಗೆ ಹೋಲದ ಬಂದಾರಿಯ ವಿಷಯದ ಸಂಬಂದ ಅದೇ ಗ್ರಾಮದ 1)ಶರಣಪ್ಪ
ತಂದೆ ಹಣಮಂತ ಪೂಜಾರಿ 2) ಶಿವರಾಜ ತಂದೆ ಹಣಮಂತ ಪೂಜಾರಿ 3) ಅಣ್ಣಪ್ಪ ಪೂಜಾರಿ 4) ಸುರೇಶ ತಂದೆ
ಪಾಂಡು ಪೂಜಾರಿ 5) ಪಾಂಡು ಪೂಜಾರಿ 6) ತಿಪ್ಪಮ್ಮಾ ಪೂಜಾರಿ 7) ಸಂತೋಷ ಪೂಜಾರಿ ಸಾ:ಎಲ್ಲರೂ
ಬೀಮಳ್ಳಿ ತಾ:ಜಿ:ಗುಲಬರ್ಗಾ ಇವರು ಬೀಮಳ್ಳಿ ಗ್ರಾಮದ ಮಲ್ಲಪ್ಪ ಸಮಗಾರ ಇವರ ಮನೆಯ ಹತ್ತಿರ ಜಗಳ
ತೆಗೆದು ಬಡಿಗೆ ಕಲ್ಲು ಮತ್ತು ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಶ್ರೀಮತಿ
ಶಾಮಬಾಯಿ ಗಂಡ ನಾಗಯ್ಯಾ ಗುತ್ತೆದಾರರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಕೀಣ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment