ಕೊನ ಹಿಪ್ಪರಗಾ ಗ್ರಾಮದ ಆಸ್ತಿ ವಿವಾದ
ಹಿನ್ನಲೆಯಲ್ಲಿ ವಿಶ್ವರಾಜ ಮಲಬೋ ಈತನ ಕೊಲೆ, 6 ಜನರ ಬಂಧನ
ವಿಶ್ವವಿದ್ಯಾಲಯ ಠಾಣೆ : ದಿನಾಂಕ: 25-09-2013
ರಂದು ರಾತ್ರಿ ವೇಳೆಯಲ್ಲಿ ವಿಶ್ವರಾಜ ತಂದೆ ಬಾಬುರಾವ ಮಲಬೋ ಸಾ// ಕೊನಹಿಪ್ಪರಗಾ ಇವರು
ಕೊನ ಹಿಪ್ಪರಗಾ ಗ್ರಾಮದಲ್ಲಿ ಪರ್ವತಪ್ಪ ಹಾಲಕಾಯಿ ಇವರಿಂದ 5 ಎಕರೆ ಜಮಿನು ಖರಿಧಿಸಿದ್ದು
ಪರ್ವತಪ್ಪ ಹಾಲಕಾಯಿ ಈತನು ಮರಣ ಹೊಂದಿದ ನಂತರ ಆತನ ಆತನ ಮಕ್ಕಳು ಹಾಗೂ ಸಂಬಂಧಿಕರು ವಿಶ್ವರಾಜ
ಮಲಬೋ ಈತನಿಗೆ ಹೊಲ ರಜಿಸ್ಟರ ಮಾಡಿಕೊಡದೇ ಆತನ ಕಬ್ಜೆಯಿಂದ ಹೊಲ ಬಿಡಿಸಿಕೊಂಡು ತಕರಾರು
ಮಾಡಿದ್ದರಿಂದ ವಿಶ್ವರಾಜ ಈತನು ಕೊನಹಿಪ್ಪರಗಾ ಗ್ರಾಮ ಬಿಟ್ಟು ಜೇವರ್ಗಿ ತಾಲೂಕಿನ ರಾಮಪುರದಲ್ಲಿ
ವಾಸವಾಗಿದ್ದು ಇರುತ್ತದೆ. ವಿಶ್ವರಾಜ ಮಲಬೋ ಈತನಿಗೆ ಹೀಗೆ ಬಿಟ್ಟರೆ ಮತ್ತೆ ಜಮೀನು ತನ್ನ
ಹೆಸರಿಗೆ ರಜಿಸ್ಟರ ಮಾಡಿಕೊಡಬೇಕು ಅಂತಾ ಜಿದ್ದು ಸಾಧಿಸುತ್ತಿರುವದರಿಂದ ಅಂಬು ಹಾಲಕಾಯಿ ಹಾಗೂ
ಇತರರು ಕೂಡಿಕೊಂಡು ಗುಲಬರ್ಗಾ ನಗರದ ಸುಫಾರಿ ಹಂತರಕರಿಂದ ಮಾಲಗತ್ತಿ ಸಿಮಾಂತರದ ಕಚ್ಛಾ
ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿಸಿರುತ್ತಾರೆ ಈ ಬಗ್ಗೆ
ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೊಲೆ
ಪ್ರಕರಣದ ಗಂಭೀರತೆ ಮತ್ತು ಪತ್ತೆ ಮಾಡಲು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಕಾಶಿನಾಥ ತಳಕೇರಿ
ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ
ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯ ಪೊಲೀಸ್
ಅಧೀಕ್ಷಕರು ಗ್ರಾಮಾಂತ ಉಪ ವಿಭಾಗ ಗುಲಬಗರ್ಾ ರವರ ನೇತೃತ್ವದಲ್ಲಿ ಶ್ರೀ ಡಿ.ಜಿ ರಾಜಣ್ಣ ಸಿಪಿಐ
ಗ್ರಾಮೀಣ ವೃತ್ತ ಗುಲಬರ್ಗಾ, ಶ್ರೀ ಬಸವರಾಜ ತೇಲಿ ಸಿ.ಪಿ.ಐ
ಎಂ.ಬಿ ನಗರ ವೃತ್ತ ಗುಲಬರ್ಗಾ ಹಾಗೂ ಶ್ರೀ ಹಸೇನ ಬಾಷಾ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆ ಹಾಗು
ಸಿಬ್ಬಂದಿಯವರೆಲ್ಲರೂ ಕೂಡಿಕೊಂಡು ಕಾರ್ಯಚರಣೆ ನಡೆಸಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಿ, ದಿನಾಂಕ 30-05-2014 ರಂದು ಈ
ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಅರ್ಜುನ ತಂದೆ ಮರೇಪ್ಪ ಕೋಬಾಳ ಸಾ :
ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 2. ಖಾಸಿಂ ತಂದೆ ಫಕ್ರುದ್ದಿನ ಮುಜಾವರ ಸಾ:
ವಿದ್ಯಾ ನಗರ ವಿಶ್ವರಾದ್ಯ ಗುಡಿ ಹಿಂದುಗಡೆ ಜೇವರ್ಗಿ 3. ಅಂಬು ಅಲಿಯಾಸ ಅಬ್ರೀಶ ತಂದೆ ಪರ್ವತಪ್ಪ
ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 4. ಹಣಮಂತ್ರಾಯ ಅಲಿಯಾಸ ದೇಸಾಯಿ ತಂದೆ ಭೀಮರಾವ
ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 5. ದೇವಿಂದ್ರಪ್ಪಾ ಅಲಿಯಾಸ್ ದೇವು ತಂದೆ
ಪರ್ವತಪ್ಪ ಹಾಲಕಾಯಿ ಸಾ : ಕೊನಹಿಪ್ಪರಗಾ ತಾ : ಜೇವರ್ಗಿ 6. ಇಸಾಮೊದ್ದಿನ ತಂದೆ ಗೌಸೊದ್ದಿನ ಶೇಖ
ಸಾ: ಇಲಾಯಿ ಮಜ್ಜಿದ ಹತ್ತಿರ ಸಮತಾ ಕಾಲೋನಿ ಜಿಲಾನಾಬಾದ ಗುಲಬರ್ಗಾ ರವರನ್ನು ದಸ್ತಗೀರ ಮಾಡಿದ್ದು
ಈ ಕೊಲೆ ಪ್ರಕರಣದಲ್ಲಿ ಸುಫಾರಿ ಪಡೆದುಕೊಂಡು ಕೊಲೆ ಮಾಡಿರುವ ಆಆರೋಪಿತರಾದ 1. ನಾಸೀರ @ ಶೇಖ ನಾಸೀರ ತಂದೆ ಶೇಖ ಶಮರ್ುದ್ದೀನ್ ವಯಾ 24 ವರ್ಷ ಜಾ:ಮುಸ್ಲಿಂ ಉ:
ಆಟೋ ಚಾಲಕ ಸಾ: ಏಕಬಾಲ್ ಕಾಲೋನಿ ಎಂ.ಎಸ್.ಕೆ ಮಿಲ್ ಗುಲಬರ್ಗಾಮತ್ತು 2. ಸೈಯ್ಯದ ಸದ್ದಾಂ ತಂದೆ
ಬಾಬುಮಿಯಾ ವಯಾ 22 ವರ್ಷ ಜಾ: ಮುಸ್ಲಿಂ ಉ: ಗೌಂಡಿ ಕೆಲಸ ಸಾ: ಖದೀರ ಚೌಕ ಎಂ.ಎಸ್.ಕೆ ಮಿಲ್ ಗುಲಬರ್ಗಾ
ಇವರನ್ನು ದಿ: 28-11-2013 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು
ಇರುತ್ತದೆ. ಸದರಿ ಆರೋಪಿತರು ತನಿಖೆ ಕಾಲಕ್ಕೆ ತಮಗೆ ಸುಫಾರಿ ನೀಡಿರುವ ವ್ಯಕ್ತಿಗಳ ಹೆಸರು ಹೇಳದೆ
ಇರುವದರಿಂದ ಪ್ರಕರಣದಲ್ಲಿ ಸುಫಾರಿ ನೀಡಿದವರ ಪತ್ತೆ ಹಚ್ಚುವದು ಪೊಲೀಸರಿಗೆ ಸವಾಲಾಗಿತ್ತು. ಆದರೂ
ಯಶಸ್ವಿಯಾಗಿ ಈ ಪ್ರಕರಣದಲ್ಲಿ ವಿಶ್ವರಾಜ ಮಲಬೋ ಈತನಿಗೆ ಕೊಲೆ ಮಾಡಲು ಸುಫಾರಿ ನೀಡಿರುವ
ಆರೋಪಿತರನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿ ಸುಫಾರಿ ನೀಡಿದ ಆರೋಪಿತರನ್ನು ಪತ್ತೆ ಹಚ್ಚಿ
ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು
ಆರೊಪಿತರನ್ನು ಮೇಲ್ಕಂಡ ತನಿಖಾ ತಂಡವು ಭೇದಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ
ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ. ಇನ್ನೂ ಫರಾರಿ ಇರುವ ಆರೋಪಿತರ ಪತ್ತೆ ಕಾರ್ಯ
ಪ್ರಗತಿಯಲ್ಲಿರುತ್ತದೆ.
ಅನಾಥ ಮಗು ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 13-01-2014 ರಂದು ಗುಲಬರ್ಗಾ ನಗರದ ಬ್ರಹ್ಮಪೂರ ಬಡಾವಣೆಯ ಟೆಕ್ ಬರನಾ ದರ್ಗಾದ ಹತ್ತಿರ ಒಂದು ಅನಾಥ ಹೆಣ್ಣು ಮಗು ಒಂದು ದಿವಸದ ಯಾರೋ ಅಪರಿಚಿತರು ಇಟ್ಟು ಹೋಗಿದ್ದು ಆ ಮಗುವನ್ನು ಅಲ್ಲಿನ ಸಾರ್ವಜನಿಕರು ನೋಡಿ ಗುಲಬರ್ಗಾ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಆ ಮಗುವಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳವರೆಗೆ ಚಿಕಿತ್ಸೆ ಮಾಡಿಸಿ ಮಗುವನ್ನು ನಮ್ಮ ಅಮೂಲ್ಯ ಶಿಶುಗೃಹದಲ್ಲಿ ತೆಗೆದುಕೊಂಡು ಹೋಗಿ ಅದರ ಪಾಲನೆ ಪೋಷಣೆ ಮಾಡುತ್ತಾ ಬರುತ್ತಿದ್ದು ದಿನಾಂಕ: 26-05-2014 ರಂದು ರಾತ್ರಿ 10 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದ್ದು ಉಪಚಾರ ಕುರಿತು ನಾನು ಮತ್ತು ನಮ್ಮ ಅಮೂಲ್ಯ ಶಿಶುಗೃಹದ ಶುಶ್ರೂಷಿಕಿಯಾದ ಜಯಶ್ರೀ ಇಬ್ಬರೂ ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರ್ಪಡೆ ಮಾಡಿರುತ್ತೇವೆ. ಉಪಚಾರ ಪಡೆಯುತ್ತಾ ಮಗು ಉಪಚಾರದಲ್ಲಿ ಫಲಕಾರಿಯಾಗದೆ ದಿನಾಂಕ: 31-05-2014 ರಂದು ರಾತ್ರಿ 2 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತದೆ. ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಿರೇಮಠ ಅಧೀಕ್ಷಕರು ಪ್ರಭಾರಿ ಅಮೂಲ್ಯ ಶಿಶುಗೃಹ ಅಳಂದ ಕಾಲೋನಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಗ್ರಾಮೀಣ ಟಾಣೆ : ಶ್ರೀ
ನಾಗಪ್ಪ ತಂದೆ ಶಿವಪ್ಪ ಗೊಬ್ಬೂರಕರ ಸಾ: ತಾಜಸುಲ್ತಾನಪೂರ ಇವರ ಮಗನಾದ ಶಿವಪ್ರಕಾಶ ಗೊಬ್ಬೂರಕರ ವ: 22 ವರ್ಷ ಈತನು
ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳಾದ ಕುಮಾರಿ ಇವಳೊಂದಿಗೆ
ಈಗ ಸುಮಾರು 06 ತಿಂಗಳಿನಿಂದ ಪ್ರೀತಿಸುತ್ತಿದ್ದೂ, ಈ ವಿಷಯವಾಗಿ ಒಂದು ತಿಂಗಳ ಹಿಂದೆ ಸಿದ್ದರಾಮ
ಲಗಶೇಟ್ಟಿಯವರ ಮನೆಯವರು ನನ್ನ ಮಗ ಶಿವಪ್ರಕಾಶ ಈತನಿಗೆ ನೀವು ದಲಿತ ವರ್ಗದವರಿದ್ದು ನಾವು
ಲಿಂಗಾಯತ ಕೊಮಿಗೆ ಸೇರಿದವರಿರುವದರಿಂದ ತಮ್ಮ ಮಗಳ ಜೊತೆ ಮಾತನಾಡುವದಾಗಲಿ ಭೇಟಿಯಾಗುವದಾಗಲೀ
ಮಾಡಬೇಡವೆಂದು ತಂಟೆ ತಕರಾರು ಮಾಡಿರುತ್ತಾರೆ. ದಿನಾಂಕ 29-05-2014 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಮ್ಮ
ಮನೆಯವರೆಲ್ಲರೂ ಕೂಡಿಕೊಂಡು ಊಟ ಮಾಡಿ ನಾವು ಮನೆಯಲ್ಲಿ ಮಲಗಿದ್ದು ನನ್ನ ಮಗ ಶಿವಪ್ರಕಾಶ ಈತನು
ಮನೆಯ ಛತ್ತಿನ ಮೇಲೆ ಮಲಗಿಕೊಂಡಿದ್ದು, ದಿನಾಂಕ:
30-05-2014 ರಂದು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗ ಮನೆಯ
ಛತ್ತಿನ ಮೇಲೆ ಇರಲಿಲ್ಲ. ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ
ಪತ್ತೆಯಾಗಿರುವದಿಲ್ಲ. ನಮ್ಮ ಮಗ ಶಿವಪ್ರಕಾಶ ಈತನು ನಮ್ಮೂರ ಸಿದ್ದರಾಮ ಲಗಶೇಟ್ಟಿ ಇವರ ಮಗಳನ್ನು ಪ್ರೀತಿ ಮಾಡುತ್ತಿರುವದರಿಂದ ಅದೇ ವೈಮನಸ್ಸಿನಿಂದ ನಮ್ಮೂರ 1] ಸಿದ್ದರಾಮ ತಂದೆ ನಾಗಪ್ಪ ಲಗಶೇಟ್ಟಿ 2] ಗುರುಬಾಯಿ
ಗಂಡ ಸಿದ್ದರಾಮ ಲಗಶೇಟ್ಟಿ 3] ನಾಗರಾಜ ತಂದೆ
ಸಿದ್ದರಾಮ ಲಗಶೇಟ್ಟಿ 4] ಸುನಿತಾ ತಂದೆ
ಸಿದ್ದರಾಮ ಲಗಶೇಟ್ಟಿ 5] ಈರಣ್ಣಾ ತಂದೆ ಬಸವರಾಜ
ಹಾಗೂ ಇತರರು ಸಾ: ಎಲ್ಲರೂ ತಾಜಸುಲ್ತಾನಪೂರ ಇವರುಗಳು ದಿನಾಂಕ: 29-05-2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:30-05-2014 ರಂದು ಬೆಳಗಿನ ಜಾವ 6:00 ಗಂಟೆಯ ಮದ್ಯದ ಅವಧಿಯಲ್ಲಿ
ನನ್ನ ಮಗ ಶಿವಪ್ರಕಾಶ ಈತನಿಗೆ ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಶವವನ್ನು ಎಲ್ಲಿಯೋ
ಬಿಸಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ಅನಮೊಲ ತಂದೆ ರಾಜೇಶ ಗಾಯಕವಾಡ ಸಾ : ಗಂಜ ಪೇಠ ಗಲ್ಲಿ
ನಂ 01 ಪುಣೆ ರವರ ಗೆಳೆಯನಾದ ರಾಜೇಶ ಇವರು ಬಾಪನಪಳ್ಳಿ(ಎಪಿ)ಯಲ್ಲಿ
ತನ್ನ ಗೆಳೆಯನಾದ ಶಂಕರ ಭೋವಿನಾಳ ಈತನ ಮದುವೆ ಇದ್ದ ಕಾರಣ ಫಿರ್ಯಾದಿ ಹಾಗೂ ಅವನ ಗೆಳೆಯ ರಾಜೇಶ ಧನಗರ
ಇಬ್ಬರು ಕೂಡಿ ಪಲ್ಸರ ಮೊಟಾರ ಸೈಕಲ ನಂ. ಎಮ್.ಹೆಚ್.12 ಜೆಪಿ 1788ನೇದ್ದರ ಮೇಲೆ ಪುಣೆಯಿಂದ ದಿನಾಂಕ:-29/05/2014
ರಂದು ಬಂದು ನಿನ್ನೆ ಲಗ್ನ ಮುಗಿಸಿಕೊಂಡು ಮರಳಿ ಪುಣಾಕ್ಕೆ ಹೋಗಬೇಕು ಅಂತಾ ಸದರಿ ಮೊಟಾರ ಸೈಕಲ ಮೇಲೆ
ಇಂದು ದಿನಾಂಕ:-31/05/2014 ರಂದು 8 ಎ.ಎಮ್.ಕ್ಕೆ ಹೊರಟು ಸದರಿ ಮೊಟಾರ ಸೈಕಲ ನನ್ನ ಗೆಳೆಯ ರಾಜೇಶ
ಧನಗರ ಈತನು ನಡೆಸುತ್ತಿದ್ದು. 10.30 ಎ.ಎಮ್. ಸುಮಾರಿಗೆ ಮುಗಟಾ ಬಸ್ ನಿಲ್ದಾಣದ ಎದುರು ಹೋಗುತ್ತಿದ್ದಾಗ
ಬಸ್ ನಿಲ್ದಾಣ ಹತ್ತಿರ ನಿಂತಿದ್ದ ಒಂದು ಟಂ ಟಂ ಚಾಲಕನು ತನ್ನ ಟಂ ಟಂ ಅನ್ನು ಒಮ್ಮೇಲೆ ತಿರುಗಿಸಿ
ನಮ್ಮ ಮೊಟಾರ ಸೈಕಲಗೆ ಡಿಕ್ಕಿ ಪಡಿಸಿದ ನಾನು ನನ್ನ ಗೆಳೆಯ ರಾಜೇಶ ಕೆಳಗೆ ಬಿಳಲು ನನ್ನ ಬಲಗಾಲಿನ ಮೊಣಕಾಲ
ಕೆಳಗೆ ಭಾರಿ ರಕ್ತಗಾಯ ವಾಗಿ ಎರಡು ಕಪಾಳಕ್ಕೆ ಗುಪ್ತಗಾಯ ಮತ್ತು ತರಚಿದ ಗಾಯವಾಗಿದ್ದು. ನಂತರ ರಾಜೇಶನಿಗೆ
ನೋಡಲಾಗಿ ರಾಜೇಶನ ತಲೆ ಒಡೆದು ಮೆದುಳು ಹೊರಗೆ ಬಿದ್ದಿದ್ದು. ಹಾಗೂ ಅಲ್ಲೆ ಇದ್ದ ಯಾರೋ ಒಬ್ಬರು ಜಿ.ವಿ.ಆರ್.
ಅಂಬುಲೆನ್ಸ್ ಗೆ ಫೋನ ಮಾಡಿ ಬರಲು ತಿಳಿಸಿದರು. ನಂತರ ಸದರಿ ಟಂ ಟಂ ನಂ. ನೋಡನಾಗಿ ಕೆಎ 32 ಸಿ
1733 ಅಂತ ಇದ್ದು ಅದರ ಚಾಲಕ ಟಂ ಟಂ ಅಲ್ಲೆ ಬಿಟ್ಟಿ ಓಡಿ ಹೋದನು ಅವನು ನೋಡಿದರೆ ಗುರುತಿಸುತ್ತೇನೆ.
ಅಷ್ಟರಲ್ಲಿ ಜಿ.ವಿ.ಆರ್. ಅಂಬುಲೆನ್ಸ್ ಬರಲು ನನಗೂ ಹಾಗೂ ನನ್ನ ಗೆಳೆಯ ರಾಜೇಶನಿಗೆ ಅದರಲ್ಲಿ ಹಾಕಿಕೊಂಡು
ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲ್ಬರ್ಗಾಕ್ಕೆ ಸೇರಿಕೆ ಮಾಡಿದ್ದು. ಉಪಚಾರ ಕಾಲಕ್ಕೆ ನನ್ನ ಗೆಳೆಯ
ರಾಜೇಶ ಈತನು ಮೃತ ಪಟ್ಟಿದ್ದು ಇರುತ್ತದೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಬಾಬುರಾವ
ತಂದೆ ರೆವಣಪ್ಪ ಬುದ್ದಾ ಸಾ:ಮನೆನಂ.22-1 ಕಸ್ತೂರಿ ನಿವಾಸ ಘಾಟಗೆ ಲೇಔಟ ಗುಲಬರ್ಗಾ ಇವರು ದಿನಾಂಕ:01-06-2014
ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕಸ್ತೂರಿಬಾಯಿ ನನ್ನ ತಾಯಿ ಶರಣಮ್ಮ ಹಾಗೂ ಕಾರ ಚಾಲಕ
ಸಂಜುಕುಮಾರ ಬಿರಾದಾರ ಕೂಡಿಕೊಂಡು ನನ್ನ ಮಾರುತಿ ರಿಟ್ಜ ಶಿಲ್ವರ ಕಲರ ಕಾರ ನಂ ಕೆಎ-32 ಎನ-0437
ನೆದ್ದರಲ್ಲಿ ಗುಲಬರ್ಗಾದಿಂದ ಹೈದ್ರಾಬಾದಗೆ ಆಸ್ಪತ್ರೆಗೆ ಗುಲಬರ್ಗಾ
ಹುಮನಾಬಾದ ಎನ್.ಹೆಚ್. 218 ನೇದ್ದರ ರೋಡಿನ ಮುಖಾಂತರ ಹೊರಟಿದ್ದು. ಕಿಣ್ಣಿ ಸಡಕ ಗ್ರಾಮದ ಹತ್ತಿರ
ಬೆಳಿಗ್ಗೆ 09-00 ಗಂಟೆಯ ಸೂಮಾರಿಗೆ ಹೊಗುತ್ತೀದ್ದಾಗ ಹಿಂದಿನಿಂದ ಯಾವುದೋ ಒಬ್ಬ ವಾಹನದ ಚಾಲಕನು
ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ
ಹೋಡೆದು ಅಪಘಾತ ಪಡಿಸಿ ಓಡಿ ಹೋಗಿದ್ದರಿಂದ ನಮ್ಮ ಕಾರ ರೋಡಿನ ಎಡಭಾಗಕ್ಕೆ 2 ರಿಂದ 3 ಬಾರಿ
ಪಲ್ಟಿಯಾಗಿ ನಾಲ್ಕು ಗಾಲಿಗಳು ಮೇಲಾಗಿ ಬಿದ್ದಿದ್ದರಿಂದ ನಾವು ಕಾರನಿಂದ ಇಳಿದು ನೋಡಲಾಗಿ ನನಗೆ
ಎಡಗಾಲ ಮೋಣಕಾಲಿಗೆ ತರಚಿದ ರಕ್ತಗಾಯ ಎಡಪಾದದ ಮೇಲೆ ರಕ್ತಗಾಯ ಮತ್ತು ಅಲ್ಲಲ್ಲಿ ಗುಪ್ತ
ಗಾಯಗಳಾಗಿದ್ದು ನನ್ನ ಹೆಂಡತಿ ಕಸ್ತೂರಿಬಾಯಿ ಇವಳಿಗೆ ಬೆನ್ನಿಗೆ ಕುತ್ತಿಗೆಗೆ ಹಾಗೂ ಅಲ್ಲಲ್ಲಿ ಗುಪ್ತ
ಗಾಯಗಳಾಗಿದ್ದು ನನ್ನ ತಾಯಿ ಶರಣಮ್ಮ ಇವಳಿಗೆ ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು ನಮ್ಮ ಕಾರ
ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಈ ಅಪಘಾತದಲ್ಲಿನಮ್ಮ ಕಾರ ಜಖಂಗೊಂಡು
ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಗೋಪಾಲ
ತಂದೆ ಈರಣ್ಣಾ ಕಾವಳೆ ಸಾ : ಎರಂಡಗಿ ತಾ: ಬಸವಕಲ್ಯಾಣ ಜಿ: ಬೀದರ ರವರ ಮದುವೆಯು ದಿನಾಂಕ
09-06-2014 ರಂದು ನಿಶ್ಚಯವಾಗಿದ್ದರಿಂದ ದಿನಾಂಕ 31-05-2014 ರಂದು ಲಗ್ನ ಪತ್ರಿಕೆಯು ತನ್ನ ಸಂಬಂದಿಕರಿಗೆ ಕೊಡುವ ಸಂಬಂದ ತಮ್ಮೂರಿನ ತಮ್ಮ
ಪೈಕಿಯವನೆಯಾದ ವಿನೋದ ಹಾಗೂ ಪಿರ್ಯಾದಿದಾರ ಕೂಡಿಕೊಂಡು ಅದೆ ಊರಿನವನಾದ ವಾಲ್ಮಿಕ ತಂ ರಾಮಣ್ಣ ಬಾಲೆ ಇತನ ಹತ್ತಿರ ಇದ್ದ ಹೀರೊ ಹೊಂಡಾ
ಮೋಟಾರ ಸೈಕಲ ನಂ ಎಮ್,ಹೆಚ್, 03 ಎಕ್ಸ್, 613 ನೇದ್ದು ಆತನಿಗೆ ಕೇಳಿ ತೆಗೆದುಕೊಂಡು ಅದರ ಮೇಲೆ ಕುಳಿತು
ಅಲ್ಲಿಂದ 6.00 ಗಂಟೆಗೆ ಗುಲಬರ್ಗಾಕ್ಕೆ ಹೊರಟು ಗುಲಬರ್ಗಾಕ್ಕೆ ಬಂದು ಲಗ್ನ ಪತ್ರಿಕೆ
ಕೊಟ್ಟು ಮತ್ತೆ ಅದೆ ಮೋಟಾರ ಸೈಕಲ ಮೇಲ ಗುಲಬರ್ಗಾದಿಂದ 9.30 ಎ,ಎಮ್,ಕ್ಕೆ ಹೊರಟಿದ್ದು ಮೋಟಾರ ಸೈಕಲನ್ನು ವಿನೋದ ಗುಜ್ಜೆ ಇತನು ಚಲಾಯಿಸುತ್ತಿದ್ದು ತಾನು ಹಿಂದೆ ಕುಳಿತಿದ್ದೆ 10.00 ಎ,ಎಮ್,ಕ್ಕೆ ಮಹಾಗಾಂವ ಕ್ರಾಸ ದಾಟಿ ಹೋಗುತ್ತಿದ್ದಾಗ ವಿನೋದ ಇತನು ಮಹಾಗಾಂವ ಕ್ರಾಸ ಮುಂದೆ ಇದ್ದ ಡೈರಿ ಸೈನ್ಸ ಕಾಲೇಜ ಎದುರುಗಡೆ ಇದ್ದ ಒಂದು ಸಣ್ಣ ಬ್ರಿಡ್ಜ ಹತ್ತಿರ
ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿ ಬ್ರಿಡ್ಜ ಪಕ್ಕದಲ್ಲಿದ್ದ ಸೈನ ಬೋರ್ಡಿಗೆ ಜೋರಾಗಿ ಹೊಡೆದು ಅಪಘಾತ ಪಡಿಸಿದನು ಇದರಿಂದ ತನ್ನ ಎಡಗಾಲ
ಮೋಳಕಾಲ ಕೆಳಗೆ ಮುರಿದು ಹೋಗಿದ್ದು ಹೊಟ್ಟೆಯ ಮೇಲೆ ತರಚೀದ ಗಾಯಗಳಾಗಿರುತ್ತವೆ ವಿನೋದನಿಗೆ
ನೋಡಲಾಗಿ ಆತನ ಎಡಗಾಲು ಕೂಡಾ ಮೊಳಕಾಲ ಕೆಳಗೆ ಮುರದಿದ್ದು ಬಲಗಾಲಿನ ಹಿಂಬಡಿಯ ಹತ್ತಿರ ಭಾರಿ
ರಕ್ತಗಾಯವಾಗಿದ್ದು ಮೂಗಿನಿಂದ ರಕ್ತ ಸೋರಿದ್ದು ಎಡಗಲ್ಲ ಮತ್ತು ಅದರ ಕೆಳಗಡೆ ಉಬ್ಬಿದಂತೆ
ಆಗಿರುತ್ತದೆ,ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ದೊಚಿಕೊಂಡು ಹೋದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ
31-05-2014 ರಂದು ಸಂಜೆ 7-15
ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು
ನನ್ನ ಅತ್ತಿಗೆ ವಿಜಯಲಕ್ಷ್ಮಿ
ಕಮಲಾಪೂರ ಇಬ್ಬರು ನಮ್ಮ
ಭಾಗ್ಯವಂತಿ ನಗರದ ಮನೆಯಿಂದ ಕಿರಾಣಾ ಖರಿದಿಸಲು
ಮುಖ್ಯ ರಸ್ತೆಗೆ
ಇರುವ ಸದಗೂರು ಸುಪರ ಬಜಾರಕ್ಕೆ ಹೊಗುತ್ತಿರುವಾಗ ಹಳೇ
ಅಪರಾಜಿತಾ ಕಂಪ್ಯೂಟರ ಹತ್ತಿರ ರಸ್ತೆಯ ಮೇಲೆ ರಾಂಗ
ಸೈಡ ಎದರುಗಡೆಯಿಂದ ಒಂದು ಮೊಟರ ಸೈಕಲ ಮೇಲೆ ಇಬ್ಬರು
ಸವಾರರು ಬಂದವರೇ ಒಮ್ಮೇಲೆ ನನ್ನ ಕೊರಳಲ್ಲಿ ಕೈ ಹಾಕಿ 3 ವರೆ ತೊಲೆಯ ಬಂಗಾರದ ಮಂಗಳಸೂತ್ರ ಸರವನ್ನು ಕಿತ್ತುಕೊಂಡು ರಾಮ
ಮಂದಿರ ಕಡೆ ಹೊಗಿರುತ್ತಾರೆ. ಕತ್ತಲಲ್ಲಿ ಆ ಮೊಟರ ಸೈಕಲ ನಂಬರ ಕಾಣಿಸಿಲ್ಲಾ. ಕಳ್ಳ
ಕಳ್ಳಾ ಎಂದು ಚಿರಾಡಿದರು ಯಾರು ಹತ್ತಿರ
ಬರಲಿಲ್ಲ. ಮೊಟರ ಸೈಕಲ ಮೇಲೆ ಇಬ್ಬರು
ಸವಾರರು ಬಂದು ನನ್ನ ಕೊರಳಲ್ಲಿಂದ 3 ವರೆ
ತೊಲೆ ಬಂಗಾರದ ಮಂಗಳಸೂತ್ರ ಅದರ ಅಂದಾಜು ಕಿಮ್ಮತ್ತು 1 ಲಕ್ಷ
ರೂಪಾಯಿ ಕಿಮ್ಮತ್ತಿನದನ್ನು ಸುಲಿಗೆ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment