ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 24-06-2014
ರಂದು 1-45 ಪಿಎಮ್ ದ ಸುಮಾರಿಗೆ ಮೃತ ವಾಜಿದ ಇತನು ತನ್ನ ಮೋಟಾರ್ ಸೈಕಲ್ ನಂ ಕೆಎ-34 ಎಸ್-7043ನೇದ್ದು ಆಳಂದ ಚೆಕ್ ಪೊಸ್ಟ್ ಕಡೆಯಿಂದ ಬಂದು ಆಟೋ ನಗರಕ್ಕೆ ಹೋಗುವ ಸಂಬಂಧ ರೋಡ ಕ್ರಾಸ್ ಮಾಡುವ ಕುರಿತು ಉಮಾಕಾಂತ ಅಮ್ಮಾನ ಇವರ ಮನೆಯ ಹತ್ತಿರ ರೋಡಿನ ಎಡಗಡೆ ಡಿವೈಡರ್ ಹತ್ತಿರ ನಿಂತಾಗ ಎದುರುಗಡೆಯಿಂದ ಹುಮನಾಬಾದ ರಿಂಗರೋಡ ಕಡೆಯಿಂದ ಆಳಂದ ಚೆಕ್ ಪೊಸ್ಟ್ ಕಡೆಗೆ ಕಮಾಂಡರ್ ಜೀಪ ನಂ ಕೆಎ-32 ಎಮ್ 2014 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ವಾಜೀದ ಈತನ ಮೋಟಾರ ಸೈಕಲಗೆ ಡಿಕ್ಕಿಹೋಡೆದು ಅಪಘಾತ ಪಡಿಸಿದ್ದರಿಂದ ಹಣೆಗೆ, ಬಲಗೈ ಮೋಳಕೈಗೆ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯ ಹಾಗೂ ತಲೆಗೆ ಎದೆಗೆ ಹೊಟ್ಟೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ²æà ಸಾಜೀದ್
ತಂದೆ ಅಲ್ಲಾಭಕ್ಷ ಅಬ್ದುಲ್ ಹೋಟೆಲ್ ವಾಲೆ ಸಾ:
ಎಮ್.ಎಸ್,ಕೆ ಮಿಲ್ ಜಿಲಾನಾಬಾದ ಶಹಾ ಜೀಲಾನಿ ದರ್ಗಾ ಹತ್ತಿರ ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ
ಠಾಣೆ : ಶ್ರೀ ರೇವಣಸಿದ್ದಪ್ಪಾ ತಂದೆ
ರೋಮಣ್ಣಾ ಪಾಟೀಲ ಗಿಲಕಿ ಸಾ ; ಜಂಬಗಾ (ಬಿ) ತಾ;ಜಿ;ಗುಲಬರ್ಗಾ. ಇವರು ದಿನಾಂಕ. 23-06-2014 ರಂದು ರಾತ್ರಿ 8-00
ಗಂಟೆಯ ಸುಮಾರಿಗೆ ನಮ್ಮ ಆಳು ಮನುಷ್ಯನಾದ ಸಿದ್ರಾಮಪ್ಪಾ ಸಾವಳಗಿ ಇತನು ನಾವು ಪಾಲಿಗೆ ಮಾಡಿದ
ಯಶ್ವಂತರಾವ ಕಾಳೆ ಇವರ ತೋಟದಲ್ಲಿ ನಮ್ಮ ಎರಡು
ಖಿಲಾರಿ ಎತ್ತುಗಳು ಅಕಿ.1,25,000/- ರೂಪಾಯಿ ಬೆಲೆಬಾಳುವವು ಕಟ್ಟಿ ಊರಲ್ಲಿ ಲಕ್ಷ್ಮೀ ಜಾತ್ರೆ
ಇದ್ದ ಪ್ರಯುಕ್ತ ಎಲ್ಲರೂ ಊರಲ್ಲಿ ಇದ್ದೇವು ಇಂದು ದಿನಾಂಕ. 24-06-2014 ರಂದು ಬೆಳಗ್ಗೆ
ನಾನು ಮತ್ತು ಸಿದ್ರಾಮಪ್ಪಾ ಸಾವಳಗಿ ಇಬ್ಬರು ಕೂಡಿಕೊಂಡು ತೋಟಕ್ಕೆ ಹೋಗಿ ನೋಡಲಾಗಿ ದಾವಣಿಗೆ
ಕಟ್ಟಿದ್ದ ನಮ್ಮ ಎರಡು ಎತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಶಿವಶರಣಪ್ಪ ತಂದೆ
ಭಗವಂತ್ರಾವ ಬಿರಾದಾರ ಮ್ಯಾನೇಜರ್ ಪಿ.ಎಲ್.ಡಿ ಬ್ಯಾಂಕ್ ಚಿತಾಪೂರ ಸಾ: ಗುಡುರು ತಾ: ಅಫಜಲಪೂರ
ಹಾವ: ಪ್ಲಾಟ್ ನಂಬರ್ 22, ಶರಣ ನಿವಾಸ ರಾಮತೀರ್ಥ ನಗರ ಆಳಂದ ರೋಡ ಗುಲಬರ್ಗಾ ಇವರ ಮೊಮ್ಮಗ
ಕು.ಬಿಪಿನ್ ತಂದೆ ವೀರ್‌ಕುಮಾರ್ ಈತನಿಗೆ ಆರಾಮ ಇಲ್ಲದ ಕಾರಣ ನೋಡಿಕೊಂಡು ಬರಲು ದಿನಾಂಕ:
21/06/2014 ರಂದು ಬೆಂಗಳೂರಿಗೆ ಹೋಗಿದ್ದು ಹೋಗುವಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೀಗ
ಹಾಕಿಕೊಂಡು ಹೋಗಿದ್ದು ನಿನ್ನೆ ದಿನಾಂಕ: 23/06/2014 ರಂದು ಮುಂಜಾನೆ 8-00 ಗಂಟೆಗೆ ಸುಮಾರಿಗೆ
ತನ್ನ ಸಡ್ಡಕನಾದ ಶ್ರೀ ಕಲ್ಯಾಣ ರಾವ್ ಬುರಡೆ ನಿವೃತ್ತ ಪಿ.ಎಸ್.ಐ ರವರು ಮೋಬೈಲ್ ಗೆ ಪೋನ್
ಮಾಡಿ ಯಾರೋ ಕಳ್ಳರು ಮನೆ ಕಳವು ಮಾಡಿರುತ್ತಾರೆ ಅಂತಾ ತಿಳಿಸಿದ ತಕ್ಷಣ ಬೆಂಗಳೂರಿನಿಂದ ಇಂದು
ಗುಲಬರ್ಗಾಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಇಂಟರ್ ಲಾಕ್
ಮಣಿಸಿ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರದ ಆಭರಣಗಳೂ, ಬೆಳ್ಳಿಯ ಸಾಮಾನುಳು ಮತ್ತು
ನಗದು ಹಣ ಸೇರಿದಂತೆ ಒಟ್ಟು 4,81,500/- ರೂ ಬೆಲೆ ಬಾಳುವುದನ್ನು ಕಳವು ಮಾಢಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಮರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ವಿಠಾಬಾಯಿ ಗಂಡ ಚಂದಪ್ಪ ತಳವಾರ
ಸಾ : ದೇವಣಗಾಂವ ತಾ : ಸಿಂದಗಿ ರವರ ಗಂಡ ಈಗ ಸುಮಾರು 25 ವರ್ಷದಿಂದ ಕುಷ್ಟರೋಗದಿಂದ ಬಳಲುತ್ತಿದ್ದನು. ಈ ಮೊಂಚೆ ನನ್ನೊಂದಿಗೆ ನನ್ನ ತವರೂರಾದ ದೇವಣಗಾಂವ ಗ್ರಾಮದಲ್ಲಿ ವಾಸವಿದ್ದು, ಈಗ ಸುಮಾರು 6 ವರ್ಷದಿಂದ ಆಸ್ಪತ್ರೆ ಸೌಲಭ್ಯದ ಸಲುವಾಗಿ ಅಫಜಲಪೂರದಲ್ಲಿ ಒಂದು ಜೋಪಡಿ ಹಾಕಿಕೊಂಡು ಒಬ್ಬರೆ ವಾಸವಾಗಿರುತ್ತಾರೆ. ನಮಗೆ ಯಾರು ಮಕ್ಕಳು ಇರುವುದಿಲ್ಲ. ನಾನು ವಾರಕ್ಕೊಮ್ಮೆ ಅಫಜಲಪೂರ ಪಟ್ಟಣ್ಣಕ್ಕೆ ಬಂದು ಅವರ ಯೋಗಕ್ಷೇಮ ನೋಡಿಕೊಂಡು ಹೋಗುತ್ತಿರುತ್ತೇನೆ. ದಿನಾಂಕ 24-06-2014 ರಂದು 6 ಪಿ.ಎಂ ಸುಮಾರಿಗೆ ಅಫಜಲಪೂರ ಪಟ್ಟಣದಿಂದ ಯಾರೋ ಒಬ್ಬರು ನನ್ನ ತಮ್ಮನಾದ ಲವಪ್ಪ ತಂದೆ ರಾಮಣ್ಣ ಕಲಬಾ ರವರಿಗೆ ಪೋನ ಮಾಡಿ ಕುಷ್ಟರೋಗದಿಂದ ಬಳಲುತ್ತಿದ್ದ ನಿಮ್ಮ ಮಾವ ಮೃತ ಪಟ್ಟಿರುತ್ತಾರೆ ಅಂತಾ ಹೇಳಿದರು, ಆಗ ನಾನು ಮತ್ತು ನಮ್ಮ ತಮ್ಮ ಹಾಗು ನನ್ನ ತಂಗಿ ಮಗ ವಿಠ್ಠಲ ತಂದೆ ಶಂಕರ ಯರಗಲ್ ರವರು ಕೂಡಿಕೊಂಡು ಒಂದು ಖಾಸಗಿ ವಾಹನದೊಂದಿಗೆ ಅಫಜಲಪೂರ ಪಟ್ಣಕ್ಕೆ ಬಂದು ನನ್ನ ಗಂಡ ಇದ್ದ ಜೋಪಡಿಗೆ ಹೋಗಿ ನೋಡಲು ನನ್ನ ಗಂಡ ಮೃತ ಪಟ್ಟು ಬಿದ್ದಿದನು. ನನ್ನ ಗಂಡ ಸುಮಾರು 25 ವರ್ಷದಿಂದ ಕುಷ್ಟರೋಗದಿಂದ ಬಳಲುತ್ತಿದ್ದರಿಂದ ಸದರಿ ರೋಗದ ಭಾದೆಯಿಂದಲೆ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment