ಮಾಂಗಲ್ಯ ಸರ
ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀಮತಿ ಸಾಯಲಿ ಗಂಡ ಪಾರ್ಶ್ವನಾಥ್ ಬೆಳಕೇರಿ ಸಾಃ ಪ್ಲಾ.ನಂ. 11 ಅರಿಹಂತ ನಗರ, ಸೇಡಂ
ರೋಡ್ ಗುಲಬರ್ಗಾ ಇವರು ದಿನಾಂಕ : 02-06-2014 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಜಯನಗರದಲ್ಲಿರುವ
ಫಿರ್ಯಾದಿದಾರರ ಸಂಬಂಧಿಕರಾದ ಪ್ರಕಾಶ ಜೈನ್ ಇವರ ಮನೆಯಲ್ಲಿ ಕಾರ್ಯಕ್ರಮವಿದ್ದ ಪ್ರಯುಕ್ತ
ಫಿರ್ಯಾದಿದಾರರು ಮತ್ತು ಪದ್ಮಾವತಿ ಹಾಗೂ ಶೋಭಾ ಎಲ್ಲರು ಕೂಡಿಕೊಂಡು ಕಾರ್ಯಕ್ರಮಕ್ಕೆ ಹೋಗಿ
ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಮನೆಗೆ ಎಲ್ಲರು ಬರುತ್ತಿರುವಾಗ ಜಯನಗರ ಕ್ರಾಸ್ ಹತ್ತಿರವಿರುವ
ಸುಮನ್ ಡಿ.ಟಿ.ಪಿ ಜೆರಾಕ್ಸ್ ಅಂಗಡಿಯ ಮುಂದೆ ರೋಡಿನ ಮೇಲೆ ನಡೆದುಕೊಂಡು ಬರುತ್ತಿರುವಾಗ ಫಿರ್ಯಾದಿದಾರರ
ಎದುರುಗಡೆಯಿಂದ ಅಂದರೆ, ಜಯನಗರ ಕ್ರಾಸದಿಂದ ಒಂದು ಮೋಟಾರ್ ಸೈಕಲ್ ಮೇಲೆ ಇಬ್ಬರು ಕೂಡಿಕೊಂಡು
ಬಂದವರೆ ಫಿರ್ಯಾದಿದಾರರ ಕೊರಳಿಗೆ ಮೋಟಾರ್ ಸೈಕಲ್ ಮೇಲೆ ಹಿಂದೆ ಕುಳಿತವನು ಕೈ ಹಾಕಿ
ಕೊರಳಲ್ಲಿದ್ದ 40 ಗ್ರಾಂ ಬಂಗಾರದ ಮಂಗಳ ಸೂತ್ರ ಅಃಕಿಃ
1,00,000/- ರೂ ಬೆಲೆ ಬಾಳುವುದನ್ನು
ಜಬರದಸ್ತಿಯಿಂದ ಕಿತ್ತುಕೊಂಡು ಅದೆ ಮೋಟರ ಸೈಕಲ ಮೇಲೆ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ. ಸುಧಾಕರ ತಂದೆ ಪರಮೇಶ್ವರ
ಕಂಬಾರ ಸಾ: ಮುತ್ಯಾನ ಬಬಲಾದ (ಐ.ಕೆ ) ತಾ:ಜಿ: ಗುಲಬರ್ಗಾ ಇವರು ದಿನಾಂಕ:
25-06-2014 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ
ಸಂಜುಕುಮಾರನು ನಮ್ಮ ಮನೆಗೆ ತನ್ನ ಮೋಟರ್ ಸೈಕಲನ್ನು ತೆಗೆದುಕೊಂಡು ಬಂದು ಕಮಲಾಪೂರದಲ್ಲಿ
ಪಾಸಪೋರ್ಟ ಏಜೆಂಟಗೆ ಭೇಟಿಯಾಗಿ ಬರೋಣ ನಡೆ ಅಂತಾ ನನ್ನನ್ನು ತನ್ನ ಮೋಟರ್ ಸೈಕಲ ಮೇಲೆ
ಕೂಡಿಸಿಕೊಂಡು ಹೊರಟಿದ್ದು, ಮಧ್ಯಾಹ್ನ 01-00 ಗಂಟೆಯ
ಸುಮಾರಿಗೆ ನಾವು ಕಮಲಾಪೂರಕ್ಕೆ ಬಂದು ತಲುಪಿದೆವು. ಇಲ್ಲಿ ಪಾಸಪೋರ್ಟ ಏಜೆಂಟನಿಗಾಗಿ ಹುಡುಕಾ ಡಲಾಗಿ
ಆತನು ಸಿಗಲಿಲ್ಲ. ಮತ್ತೆ ಸಂಜುಕುಮಾರನು ಮರಳಿ ಊರಿಗೆ ಹೋಗೋಣ ನಡೆ ಅಂತಾ ನನ್ನನ್ನು ತನ್ನ ಮೋಟರ್
ಸೈಕಲ ಮೇಲೆ ಕೂಡಿಸಿಕೊಂಡು ಸಂಜುಕುಮಾರನೇ ಮೋಟರ್ ಸೈಕಲ್ ಚಲಾಯಿಸಿಕೊಂಡು ಹುಮನಾಬಾದ - ಗುಲಬರ್ಗಾ
ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಮುಖಾಂತರ ನಮ್ಮ ಗ್ರಾಮಕ್ಕೆ ಹೋಗುವಾಗ ಸಂಜುಕುಮಾರನು ತಾನು
ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದು, ನಾನು ನಿಧಾನವಾಗಿ ಮೋಟರ್ ಸೈಕಲ್ ಚಲಾಯಿಸು ಅಂತಾ ಹೇಳಿದ್ದನ್ನು ಕೇಳದೇ ಹಾಗೇಯೇ
ಮುಂದುವರೆಸಿಕೊಂಡು ಹೋಗಿ ನಾವದಗಿ ಸೇತುವೆ ಹತ್ತಿರ ಇರುವ ತಿರುವಿನಲ್ಲಿ ತನ್ನ ನಿಯಂತ್ರಣ
ಕಳೆದುಕೊಂಡು ರೋಡಗಾರ್ಡ ಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು. ಆಗ ನಾವು ಮೋಟರ್
ಸೈಕಲದಿಂದ ಕೆಳಗೆ ಬಿದ್ದೆವು. ನನಗೆ ಮೈ-ಕೈಗಳಿಗೆ ತರಚಿದ ಗಾಯವಾಗಿದ್ದು, ಸಂಜುಕುಮಾರನಿಗೆ ತೆಲೆಗೆ, ಮೂಗಿಗೆ, ಬಾಯಿಗೆ ರಕ್ತಗಾಯವಾಗಿದ್ದು ಅಲ್ಲದೇ ಮತ್ತು ಬಲ ಕಪಾಳ ಹಾಗೂ ಬಲ ಮೆಲಕಿನ ಹತ್ತಿರ ತರಚಿದ
ರಕ್ತಗಾಯಗಳಾಗಿ ಸಂಜುಕುಮಾರನು ಬೇಹೋಷ ಆಗಿದ್ದನು. ಆಗ ನಾವು ಮೋಟರ್ ಸೈಕಲ್ ನಂಬರ್ ನೋಡಲಾಗಿ ಅದು
ಹಿರೋಹೊಂಡಾ ಮೋಟರ್ ಸೈಕಲ್ ನಂಬರ್ ; ಎಂ.ಹೆಚ್. 14 – ಯು – 4947 ನೇದ್ದು ಇದ್ದು ಜಖಂಗೊಂಡಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment