Police Bhavan Kalaburagi

Police Bhavan Kalaburagi

Saturday, June 28, 2014

Gulbarga District Reported Crimes

ಸರ್ಕಾರಿ  ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಿರಿಯಾಣ ಠಾಣೆ : ಶ್ರೀ ವಿಜಯಕುಮಾರ ಪಿ ಸಿ 691 ಮಿರಿಯಾಣ ಠಾಣೆ ರವರು ದಿನಾಂಕ : 27-06-2014 ರಂದು ನಾನು ಮಧ್ಯಾನ್ಹ ಸುಮಾರಿಗೆ ಠಾಣೆ ಪಹರೆ ಕರ್ತವ್ಯ ಮುಗಿಸಿಕೊಂಡು ನಾನು ಮತ್ತು ಗಣಪತರಾವ  ಪಿ ಸಿ 528 ಇಬ್ಬರು ಠಾಣೆಯಲ್ಲಿ ಸಮವಸ್ತ್ರದಲ್ಲಿ ಕುಳಿತುಕೊಂಡಾಗ ಮಧ್ಯಾನ್ಹ 3.30 ಗಂಟೆ ಸುಮಾರಿಗೆ ಗುಂಡಪ್ಪಾ ಎ ಎಸ್ ಐ ಮಿರಿಯಾಣ ಠಾಣೆಯ ರವರು ಮಾನ್ಯ ಪೊಲೀಸ್ ಉಪಾಧಿಕ್ಷಕರು ಚಿಂಚೋಳಿರವರು ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ತಿಳಿಸಿರುತ್ತಾರೆ. ನೀವು ಇಬ್ಬರು ನನ್ನೊಂದಿಗೆ ನಡಿರಿ ಅಂತಾ ತಿಳಿಸಿದ ಮೆರೆಗೆ ನಾನು ಮತ್ತು ಪಿ.ಸಿ 528 ಇಬ್ಬರು ಸದರಿ ಎ.ಎಸ್.ಐ ಅವರೊಂದಿಗೆ ಠಾಣಾ ಮುಂದಿನ ರೋಡಿನಲ್ಲಿ ನಿಂತು ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಕೇಸುಗಳು ಹಾಕಲು ಸುಮಾರು ವಾಹನಗಳನ್ನು ಚೆಕ್ ಮಾಡಿ ಕಾಗದ ಪತ್ರಗಳನ್ನು ಪರಿಶೀಲಿಸಿ ಬಿಡುತ್ತಿದ್ದಾಗ ಒಬ್ಬ ಲಾರಿ ಚಲಾಕ ತನ್ನ ಲಾರಿಯನ್ನು ಚಲಾಯಿಸಿಕೊಂಡು ಬಂದನು ಆಗ ನಾವು ಸದರ ಲಾರಿ ನಿಲ್ಲಿಸಲು ಕೈ ಮಾಡಿದರು ಕೂಡಾ ಆತ ತನ್ನ ಲಾರಿ ನಿಲ್ಲಿಸದೆ ಹಾಗೆ ಮುಂದೆ ತಗೆದುಕೊಂಡು ಹೊದನು. ಆಗ ನಾವು ಸದರ ಲಾರಿ ಬೆನ್ನು ಹತ್ತಿ ನಿಲ್ಲಿಸಿ ಲಾರಿ ನಂಬರ ನೋಡಲಾಗಿ GA 03 K 0334 ಇದ್ದು ಅದರ ಚಾಲಕನ ಮೇಲೆ ಮೋಟಾರ ವಾಹನ ಕಾಯ್ದೆ ಅಡಿಯಲ್ಲಿ ಎ ಎಸ್ ಐ ರವರು ದಂಡ ವಿಧಿಸಿರುತ್ತಾರೆ. ನಂತರ ಸ್ವಲ್ಪ ಸಮಯದ ಬಳಿಕ ಚಂದಾಪೂರ ಕಡೆಯಿಂದ ಪರಿಚಯದ ಮಹ್ಮದ ಇಸ್ಮಾಯಿಲ್ @ ನನ್ಯಾಭಾಯಿ ತಂದೆ ಅಬ್ದುಲ್ ರಹೀಮ ಸಾಬ ಸಾ|| ಚಂದಾಪೂರ ಇತನು ಠಾಣೆಗೆ ಬಂದವನೆ ಠಾಣೆಯ ಮುಂದೆ ನಿಂತ ನನ್ನಗೆ ನಿಮ್ಮ ಸಾಬ ಎಲ್ಲಿ ಅಂತಾ ಕೇಳಿದನು. ಆಗ ನಾನು ನಮ್ಮ ಸಾಬರು ಠಾಣೆಯಲ್ಲಿ ಇಲ್ಲಾ ಬೆರೆ ಕೆಲಸದ ಮೇಲೆ ಹೊರಗಡೆ ಹೊಗಿರುತ್ತಾರೆ ಅಂತಾ ಹೆಳಿದರು ಕೂಡಾ ನೀವು ನಮ್ಮ ಲಾರಿ ಯಾಕ ನಿಲ್ಲಿಸಿ ಕೇಸ ಹಾಕಿದ್ದಿರಿ ಸೂಳೆ ಮಕ್ಕಳ್ಯಾ ನಿಮ್ಮಗ ಲಾರಿ ಹಿಡ್ಯಾದು ಒಂದೆ ಕೆಲಸಾ ಅದಾ ಏನು ಅಂತಾ ಅವಾಚ್ಯ ಶಬ್ದಗಳಿಂದ ಬೈದನು. ಆಗ ನಾನು ಯಾಕ ಸುಮ್ಮನೆ ಬೈಯುತ್ತಿದ್ದಿ ಅಂತಾ ಕೆಳಿದಕ್ಕೆ ನನ್ನ ಬಲ ಗೈ ಹಿಡಿದು ತಿರುವಿ ಕೈ ಮಣಿಕಟ್ ಹತ್ತಿರ ಗುಪ್ತ ಪೇಟ್ಟು ಮಾಡಿ, ಸಮವಸ್ತ್ರ ಮೇಲಿದ್ದ ನನ್ನ ಎದೆಯ ಮೇಲಿನ ಶರ್ಟ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡೆತಡೆ ಉಂಟು ಮಾಡಿ ಎದೆಯ ಮೆಲಿನ ಬಟನಗಳು ಕಡಿದು ಹಾಕಿ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ಶ್ರೀ ಸತೀಶ ರವರ ತಂದೆಯಾದ ಬದ್ರಿನಾರಾಯಣ ನನಗೆ ಫೋನ ಮಾಡಿ ಹೇಳಿದ, ನನ್ನ ಮಗ ಸತೀಶನು ನಿಮ್ಮ ಹತ್ತೀರ ನೆಲೋಗಿಗೆ ತನ್ನ ಸೈಕಲ್ ಮೋಟಾರ್ ನಂ ಕೆಎ-28 ಇಇ-6242 ನೇದ್ದರ ಮೇಲೆ ಸಾಯಂಕಾಲ 06-30 ಗಂಟೆಗೆ ಬರುವಾಗ ಜೇರಟಗಿ ಇಳಕಲಿನಲ್ಲಿ ಎದುರಿನಿಂದ ಒಂದು ಸೈಕಲ್ ಮೋಟಾರ್ ನಂ ಕೆಎ-32 ಇಇ-4994 ನೇದ್ದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ. ಅವನಿಗೆ ತಲೆಗೆ, ಕಾಲುಗಳಿಗೆ ಅಲ್ಲಲ್ಲಿ ಭಾರೀ ಗಾಯಗಳಾಗಿದ್ದು, ಅವನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಗುಲಬರ್ಗಾ ದಲ್ಲಿ ಸೇರಿಕೆ ಮಾಡುವಷ್ಟರಲ್ಲಿ ರಾತ್ರಿ 10 ಗಂಟೆಗೆ ಮೃತ ಪಟ್ಟನು. ನನ್ನ ಅಳಿಯ ಸತೀಶನು ಸೈಕಲ್ ಮೋಟಾರಕ್ಕೆ ಢಿಕ್ಕಿ ಹೊಡೆದ ಸೈಕಲ್ ಮೋಟಾರ ಸವಾರನ ಹೆಸರು, ವಿಳಾಸ ಗೊತ್ತಿರುವದಿಲ್ಲಾ. ಅಂತಾ ಶ್ರೀ  ವೆಂಕಟರಾವ ತಂದೆ ವೀರ ರಾಘವಲು  ಸಾ: ನೆಲೋಗಿ  ತಾ- ಜೇವರ್ಗಿ ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 25-06-2014 ರಂದು 11-00 ಎ.ಎಮ್ ಕ್ಕೆ ಆಳಂದ ರೋಡಿನಲ್ಲಿ ಇರುವ ಕಲಶೆಟ್ಟಿ ರವರ ಮನೆಯ ಎದರುಗಡೆ ರೋಡಿನ ಮೇಲೆ ಆರೋಪಿ ತನ್ನ ಅಟೋರಿಕ್ಷಾ ನಂ. ಕೆ.ಎ 32 ಬಿ 7373 ನೇದ್ದರಲ್ಲಿ ಶ್ರೀ ರಾಜು ತಂದೆ ಶಿವಯ್ಯಾ ಸ್ವಾಮಿ, ಸಾಃ ಆಳಂದ ಚೆಕ್ ಪೊಸ್ಟ ಹತ್ತಿರ ಗುಲಬರ್ಗಾ ರವರನ್ನು ಹಾಗೂ ಬಾಲಾಜಿ ಎಂಬವರನ್ನು ಕೂಡಿಸಿಕೊಂಡು ಆಳಂದ ಚೆಕ್ ಪೊಸ್ಟ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಒಂದು ವಾಹನಕ್ಕೆ ಕಟ್ ಹೊಡೆದು ಅಟೋರಿಕ್ಷಾ ಪಲ್ಟಿ ಮಾಡಿದ್ದರಿಂದ ಅಟೋರಿಕ್ಷಾದಲ್ಲಿ ಕುಳಿತು ಹೋಗುತ್ತಿದ್ದ ಫಿರ್ಯಾದಿ ಬಲಗೈ ಹಸ್ತಕ್ಕೆ ರಕ್ತಗಾಯವಾಗಿದ್ದು ಅಲ್ಲದೆ ಫಿರ್ಯಾದಿಯನ್ನು ಆಸ್ಪತ್ರೆಗೆ ತೋರಿಸುವದಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 26-06-2014  ರಂದು 11.00 ಗಂಟೆಗೆ ಮಹಾಗಾಂವ ಕ್ರಾಸಿಗೆ ಬಂದು 2.00 ಪಿ,ಎಮ್,ದವರೆಗೆ ಬೇರೆ ಬೇರೆ ಅಂಗಡಿ ಮತ್ತು ಹೋಟೆಲಗಳಿಗೆ ತಿರುಗಾಡಿ ಹಣ ಸಂಗ್ರಹಿಸಿ ಪಿಗ್ಮಿ ಹಣವು ಪತ್ತಿನ ಸಹಾಕಾರ ಸಂಘದಲ್ಲಿ ಕಟ್ಟಿ ಮನೆಗೆ ಊಟಕ್ಕೆ ಹೋಗಬೇಕೆಂದು ಮಹಾಗಾಂವ ಕ್ರಾಸಲ್ಲಿ ಆಟೋ ದಾರಿ ಕಾಯುತ್ತಾ ನಿಂತ್ತಾಗ 2.15 ಪಿ,ಎಮ್,ಕ್ಕೆ ನನ್ನ ಪರಿಚಯದವನಾದ ದಮ್ಮೂರ ಗ್ರಾಮದ ರಮೇಶ ತಂ ಮಾಣೀಕಪ್ಪ ಪೂಜಾರಿ ಇವರ ಹೊಂಡಾ ಎಕ್ಟೀವ ದ್ವಿ ಚಕ್ರ ವಾಹನದ ಮೇಲೆ ಕುಳಿತು ದಮ್ಮೂರ ಅರ್,ಸಿ, ಕಡೆಯಿಂದ ಬಂದು ನನಗೆ ನೋಡಿ ವಾಹನ ನಿಲ್ಲಿಸಿ ನಾನು ಮಹಾಗಾಂವ ಕಡೆಗೆ ಹೊಗುತ್ತಿದ್ದೆನೆ ಅಲ್ಲಿ ನಿನಗೆ ಬಿಡುತ್ತೆನೆ ಬಾ ಹಿಂದೆ ಕೂಳಿತುಕೊ ಅಂದಾಗ ನಾನು ಆತನ ಮೋಟಾರ ಸೈಕಲ ಮೇಲ ಹಿಂದೆ ಕುಳಿತುಕೊಂಡೆ ಮಹಾಗಾಂವ ಕ್ರಾಸದಿಂದ ಸ್ವಲ್ಪ ಮುಂದೆ ಅರುಣಕುಮಾರ ವೀರಶೆಟ್ಟಿ ಇವರ ಹೋಲದ ಹತ್ತಿರ ಹೋದಾಗ ರಮೇಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡಿನ ಎಡಗಡೆ ಒಮ್ಮಲೆ ಮೋಟಾರ ಸೈಕಲ ಸ್ಕಿಡ ಮಾಡಿ ಅಪಘಾತಗೊಳಿಸಿದ್ದಾಗ ನಾನು ಎಡಗಡೆ ಕೆಳಗೆ ಬಿದ್ದಾಗ ಮೋಟಾರ ಸೈಕಲ ನನ್ನ ಎಡಗಾಲಿನ ಮೇಲೆ ಬಿದ್ದಾಗ ನನ್ನ ಎಡಗಾಲ ಮೋಳಕಾಲ ಕೆಳಗೆ ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಹೊಂಡಾ ಎಕ್ಟಿವಾ ನಂ ನೋಡಲಾಗಿ ಅದು ಕೆ,, 32 ವಾಯ 950 ಅಂತಾ ಇರುತ್ತದೆ ಅಂತಾ ಶ್ರೀ ಹಣಮಂತರಾವ ತಂ ಹೇಮಂತರಾವ ಸಾ|| ಮಹಾಗಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ. ರಾಮಬಾಯಿ ತಂದೆ ವೆಂಕಟಯ್ಯ ಪೋಟ್ಟಯ್ಯ ಸಾ; ಕೇಸಾರಾಮ ತಾ; ಸೂರ್ಯಪೇಟ್ ಜಿ; ನಾಲಗೊಂಡ (ಲೆತೆಲಗಾಂಣ) ಹಾ.ವ ಬೀದರ ರವರು ದಿನಾಂಕ 27-06-2014 ರಂದು ರಾತ್ರಿ 01-00 ಗಂಟೆಯ ಸುಮಾರಿಗೆ ನಾವು ಕುಳಿತು ಹೊರಟ ಟ್ರಾಕ್ಟರನ್ನು ನನ್ನ ಕಾಕ ಅತಿವೇಗದಿಂದ ಅಡ್ಡಾತಿಡ್ಡಿಯಾಗಿ ನೆಡಸುತ್ತಿದ್ದು, ನಾನು ನಮ್ಮ ಕಾಕನಿಗೆ ಟ್ರಾಕ್ಟರನ್ನು ನಿಧಾನವಾಗಿ ಚಲಾಯಿಸಲು ಹೇಳಿದ್ದು, ಅದನ್ನು ಕೇಳದೆ ನನ್ನ ಕಾಕ ರಮೇಶ ಇವರು ಹಾಗೆ ಟ್ರಾಕ್ಟರನ್ನು ನಡೆಸುಕೊಂಡು ಬಂದು ಹುಮನಾಬಾದ-ಗುಲಬರ್ಗಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಿಂದಿ ಬಸವಣ್ಣ ದೇವರ ಗುಡಿದಾಟಿ ಸ್ವಲ್ಪ ದೂರದಲ್ಲಿ ತಾನು ನಡೆಸುತ್ತಿದ್ದ ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರೋಡಿನ ಎಡಭಾಗಕ್ಕೆ ಟ್ರಾಕ್ಟರನ್ನು ಪಲ್ಟಿ ಮಾಡಿದಾಗ ನಾವು ಟ್ರಾಕ್ಟರ ಸಮೇತ ರೋಡಿನ ಕೆಳಗೆ ಬಿದ್ದೆವು, ನಂತರ ನಾನು ಟ್ರಾಕ್ಟರರಿಂದ ಹೊರಗಡೆ ಬಂದು ನೋಡಲು ನನಗೆ ತೆಲೆಯ ಮುಂಭಾಗಕ್ಕೆ ರಕ್ತಗಾಯವಾಗಿದ್ದು, ಎಡಗೈ ಹಸ್ತದ ಮೇಲ್ಭಾಗಕ್ಕೆ ರಕ್ತಗಾಯವಾಗಿದ್ದು ಸೊಂಟಕೆ ಹಾಗೂ ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು ಇರುತ್ತದೆ, ನಂತರ ನನ್ನ ಕಾಕ ರಮೇಶ ಇವರ ಹತ್ತಿರ ಹೋಗಿ ನೋಡಲು ನನ್ನ ಕಾಕನ ಎಡಗಡೆ ತೊಡೆಗೆ ರಕ್ತಗಾಯವಾಗಿದ್ದು ಮತ್ತು ಅದೆ ಕಾಲಿನ ಮೋಣಕಾಲ ಹತ್ತಿರ ರಕ್ತಗಾಯವಾಗಿರುತ್ತದೆ, ಬಲಗಾಲ ಮೋಣಕಾಲ ಕೆಳಗೆ ರಕ್ತಗಾಯ ಹಾಗೂ ತೆಲೆಯ ಎಡಭಾಗಕ್ಕೆ ರಕ್ತಗಾಯ ಹಾಗೂ ಅಲ್ಲಲ್ಲಿ ಗುಪ್ತಗಾಯಗಳಾಗಿರುತ್ತವೆ ನಾವು ಕುಳಿತು ಹೊರಟು ಟ್ರಾಕ್ಟರ ನಂ. ಎಪಿ-22-ಬಿ-4022 ನೇದ್ದು ಕೂಡ ಜಖಂಗೊಂಡಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಜಯಶ್ರೀ ಗಂಡ ಡಾ: ಸೋಮಯ್ಯ ಎಲ್ ಹಿರೇಮಠ ಸಾ : ಪ್ಲಾಟ ನಂ 61 ಮನೆ ನಂ 10-937/47 ಮಹಾಲಕ್ಷ್ಮೀ ನಗರ ಗುಲಬರ್ಗಾ ದಿನಾಂಕ: 27-06-2014 ರಂದು ನನಗೆ ಎಸ್.ಎಸ್ .ಎಲ್ ಸಿ ಸಪ್ಲಿಮೆಂಟರಿ ಪರೀಕ್ಷೆಯ  ಉತ್ತರ ಪತ್ರಿಕೆ ಮೌಲ್ಯಮಾಪಕರು ಅಂತಾ ನೇಮಿಸಿದ್ದರಿಂದ ಬೆಳಿಗ್ಗೆ 10-30 ನಾನು ಎಸ್.ಟಿ.ಬಿ.ಟಿ ಹತ್ತೀರ ಇರುವ ಪ್ರಜ್ಞಾ ಶಾಲೆಯಲ್ಲಿ ಮೌಲ್ಯಮಾಪನ ಕರ್ತವ್ಯ ಹಾಜರಾಗಿ ಮದ್ಯಾಹ್ನ 3-30 ಗಂಟೆಗೆ ಅಲ್ಲಿಂದ ಬಿಟ್ಟು ಮಹಾಲಕ್ಷ್ಮೀ ಔಟನಲ್ಲಿರುವ ನಮ್ಮ ಮನೆಗೆ ಆಟೋದಲ್ಲಿ ಲಾಲಗೇರೆ ಕ್ರಾಸ ವರೆಗೆ ಬಂದು ಅಲ್ಲಿಂದ ನಡೆದುಕೊಂಡು ಮನೆಗೆ ಹೊಗುತ್ತಿರುವಾಗ 4.00 ಗಂಟೆ ಸುಮಾರಿಗೆ ಅರುಣಕುಮಾರ ಪಾಟೀಲ ರವರ ಮನೆ ಸ್ವಲ್ಪ ಮುಂದುಗಡೆ ಇರುವ ಬ್ಯೂಟಿ ಪಾರ್ಲರ ಹತ್ತಿರ ಎರಡು ಹುಡುಗರು ಅಂದಾಜು ವಯಸ್ಸು 23-25 ವರ್ಷ ಎದುರುಗಡೆಯಿಂದ ಒಂದು ಮೋಟಾರು ಸೈಕಲ್ ಮೇಲೆ ಬಂದವರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಒಬ್ಬ ಹುಡುಗ ನನ್ನ ಕೊರಳಿಗೆ ಕೈಹಾಕಿ ಕೊರಳಿನಲ್ಲಿದ್ದ 29 ಗ್ರಾಂ ನ ಬಂಗಾರದ ಮಂಗಳ ಸೂತ್ರ ಅ.ಕಿ 79,000/- ರೂ ಬೆಲೆಬಾಳುವದನ್ನು ದೋಚಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ರಾಮಣ್ಣಾ ತಂದೆ ತಿಮ್ಮಣ್ಣಾ ಹಳಗುಂಡಕಿ ಸಾ: ಚಂದ್ರ ನಗರ ತಾ:ಜಿ: ಗುಲಬರ್ಗಾ ರವರು  ಹಣಮಂತ ಮತ್ತು ಯಂಕಣ್ಣಾ ಎಲ್ಲರೂ ಮಾತಾಡುತ್ತಾ  ಚಂದ್ರನಗರದ ವೆಂಕಟರಮಣ ಗುಡಿಯ ಮುಂದೆ  ಕುಳಿತಾಗ, ಆಗ  ಕಲ್ಯಾಣಿ ತಂದೆ ರೇವಪ್ಪ ಹಳಗುಂಡಕಿ  ಇತನು ಫಿರ್ಯಾದಿ ಹತ್ತಿರ  ಬಂದು ಫಿರ್ಯಾದಿಗೆ ಎ ರಾಮಣ್ಣಾ ನಡಿ ನಾವು ಶರಿ ಕುಡಿಯಲಿಕ್ಕೆ ಹೋಗೋಣಾ  ಅಂತಾ ಅಂದಾಗ, ಅದಕ್ಕೆ ಫಿರ್ಯಾದಿ ನನಗೆ ಮೈಯಲ್ಲಿ ಆರಾಮ ಇಲ್ಲಾ  ಬರುವುದಿಲ್ಲಾ ಅಂತಾ  ಅಂದಿದಕ್ಕೆ ಫಿರ್ಯಾದಿಗೆ ಕಲ್ಯಾಣಿ  ಇತನು ಭೋಸಡಿ ಮಗನೇ ನಾನು ಶರಿ ಕುಡಿಸುತ್ತೇನೆ ಅಂದರು ಬರುವುದಿಲ್ಲಾ ಅಂತಾ ಅಂದವನೇ ಅಲ್ಲೇ ಬಿದ್ದಿದ್ದ ಒಂದು ಕಲ್ಲು ತೆಗೆದುಕೊಂಡು ಫಿರ್ಯಾದಿ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದು  ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ.ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಪೂರ ಠಾಣೆ : ಶ್ರೀ,ಶರಣು ಭೀಮರಾವ ಅವಟಗಿ ಸಾ|| ಶರಣ ನಗರ.ಗುಲಬರ್ಗಾ ರವರ  ಮಾಲಕನಾದ ಅಶೋಕ ಮನೋಕರ ಇವರ ಗೆಳೆಯರಾದ ಶರಣು ಗಾಜರೆ ಇವರ ಹುಟ್ಟು ಹಬ್ಬವನ್ನು ಆಚರಿಸಲು ದಿನಾಂಕ: 26-06-2014 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು  ಮತ್ತು ಶರಣು ಗಾಜರೆ, ಗುಂಡಪ್ಪ ಸೀನ್ನೂರ, ಶಾಂತಪ್ಪ ಕಡ್ಲಾ ಎಲ್ಲರೂ ಕೂಡಿಕೊಂಡು ಬಹಮನಿ ಹೊಟೇಲಕ್ಕೆ ಊಟ ಮಾಡಲು ಹೋಗಿದ್ದೇವೆ ನಾನು ನನ್ನ ಅಟೋ ಸಂಗಡ ತಗೆದುಕೊಂಡು ಹೋಗಿದ್ದೆ ಎಲ್ಲರೂ ಕೂಡಿ ಬಹಮನಿ ಹೊಟೇಲ ಊಟ ಮಾಡಿ ಹೋರಗಡೆ ಬಂದೆವು ನಾನು ನನ್ನ ಅಟೋ ಹತ್ತಿರ ನಿಂತಿದೆನು ಶರಣು ಗುಂಡಪ್ಪ ಶಾಂತಪ್ಪ ಇವರು ಅಲ್ಲೆ ಪಕ್ಕದಲ್ಲಿರುವ ಪಾನ ಶಾಪದಲ್ಲಿ ಎಲೆ ಕಟ್ಟಿಸುತ್ತಾ ಇದ್ದರು ಅಂದಾಜು ರಾತ್ರಿ 11-30 ಗಂಟೆಯ ಸುಮಾರಿಗೆ ನನ್ನ ಹತ್ತಿರ ನನಗೆ ಪರಿಚಯದವರಾದ ಸಂತೋಷ ನಡುವಿನ ಮನಿ ಲಿಂಗರಾಜ ಕಟ್ಟಿಮನಿ ಶರಣು ವಗ್ಗರ, ಶ್ರೀಕಾಂತ @ ಶೇಕ್ಯಾ, ರಣಜೀತ ಸಿಂಧೆ ಇವರು ಬಂದು ನನಗೆ ಅಟೋ ತಗೆದುಕೊಂಡು ನಡಿ ನಮಗೆ ಬ್ರಹ್ಮಪೂರ ಬಡಾವಣೆಯಲ್ಲಿ ಬಿಟ್ಟು ಬಾ ಅಂತಾ ತಕರಾರು ಮಾಡಲು ಪ್ರಾರಂಭಿಸಿದರು ಆಗ ನಾನು ನನಗೆ ಮನೆಗೆ ಹೊಗಬೇಕಾಗಿದೆ ಮತ್ತು ನನ್ನ ಜೋತೆಯಲ್ಲಿ ಇದ್ದವರಿಗೆ ಕರೆದುಕೊಂಡು ಹೋಗಬೇಕಾಗಿದೆ ಎಂದು ಹೇಳಿದಾಗ ಎಲ್ಲರೂ ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಡೆ ಭೋಸಡಿ ಮಗನೆ ಯಾಕೆ ಬರುವದಿಲ್ಲಾ ಅಂತ ಕೈಯಿಂದ ನನ್ನ ಮೈಮೇಲೆ ಹೋಡೆಯುತ್ತಿದ್ದರು ಆಗ ನಾನು ಅವರಿಗೆ ನಿಮಗೇನು ಮಾಡಿದ್ದೆನೆ ನನಗೆ ಸಮ್ಮನೆ ಏಕೆ ಹೋಡೆಯುತ್ತಿರಿ ಅಂತಾ ಕೇಳಿದರೆ ಎಲ್ಲರೂ ಸೇರಿ ಇವನಿಗೆ ಕೊಲೆ ಮಾಡಿಯೆ ಬಿಡೋಣ ಅಂತಾ ಬಹಮನಿ ಹೊಟೇಲ ಆವರಣದಲ್ಲಿ ಇರುವ ಗಾರ್ಡನದಲ್ಲಿ ಒತ್ತಾಯ ಪೂರ್ವಕವಾಗಿ ಕರೆದುಕೊಂಉ ಹೋಗಿ ಇವರಲ್ಲಿ ಲಿಂಗರಾಜ ಈತನು ನನಗೆ ಕೋಲೆ ಮಾಡಿ ಬಿಡುತ್ತೇನೆ. ಅಂತ ಅಂದು ಅಲ್ಲೆ ಬಿದ್ದ ಕಲ್ಲು ತಗೆದುಕೊಂಡು ನನ್ನ ತಲೆ ಹೋಡೆದು ರಕ್ತ ಗಾಯ ಪಡಿಸಿದನು ಶರಣು ಈತನು ಕೂಡಾ ಕಲ್ಲಿನಿಂದ ನನ್ನ ಎಡಗಣ್ಣಿನ ಹುಬ್ಬಿನ ಮೇಲೆ ಹೋಡೆದಿರುವದರಿಂದ ಒಳಪೆಟ್ಟಾಗಿ ಕಣ್ಣಿನ ಭಾಗ ಕಪ್ಪು ಬಣ್ಣಾಗಿ ಕಂದುಗಟ್ಟಿರುತ್ತದೆ. ಮತ್ತು ಶ್ರೀಕಾಂತ ಇವನು ಕಲ್ಲು ತಗೆದುಕೊಂಡು ನನ್ನ ಬಾಯಿ ಮೇಲೆ ಹೋಡೆದಿರುವದರಿಂದ ತುಟಿ ಒಡೆದು ರಕ್ತಗಾಯವಾಗಿರುತ್ತದೆ. ಮತ್ತು ರಣಜೀತ ಇವನು ಅಲ್ಲೆ ಬಿದ್ದ ಬಡಿಗೆಯಿಂದ ನನ್ನ ಟೊಂಕದ ನಡುಭಾಗದಲ್ಲಿ ಮತ್ತು ಎಡಗಾಲ ಮೋಳಕಾಲ ಮೇಲೆ ಹೋಡೆದು ತರಚಿದ ರಕ್ತಗಾಯ ಪಡಿಸಿರುತ್ತಾರೆ ಅಂತರಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: