ಕಳವು
ಪ್ರಕರಣ :
ಮಾಹಾಗಾಂವ
ಠಾಣೆ : ಶ್ರೀ ಚಂದ್ರಕಾಂತ ತಂ ಭೋಜಪ್ಪ ಸುರಶೆಟ್ಟಿ ಸಾ: ಕಟ್ಟೊಳ್ಳಿ ಹಾ:ವ: ಮಹಾಗಾಂವ ಕ್ರಾಸ ಇವರು ದಿನಾಂಕ
02-06-2014 ರ ರಾತ್ರಿ 11.30 ಪಿ,ಎಮ್,ದಿಂದ ದಿನಾಂಕ 03-06-2014 ರ ಬೆಳಗ್ಗಿನ ಜಾವ 6.30 ಎ,ಎಮ್,ದ ಮದ್ಯದ ಅವಧಿಯಲ್ಲಿ ಮಹಾಗಾಂವ ಕ್ರಾಸದಲ್ಲಿರುವ ತನ್ನ ಓಂ ಸಾಯಿ ಕಿರಾಣ ಅಂಗಡಿಯ
ಶಟರ್ 2 ಮೂಲೆಗೆ ಯಾವುದೊ ವಸ್ತುವಿನಂದ ಮಣಿಸಿ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 99,700=00 ರೂ ಕಿಮ್ಮತ್ತಿನ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತಳನ್ನು
ಅಪಹರಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ
ಠಾಣೆ : ಶ್ರೀ ತಿಪ್ಪಣ್ಣಾ
ತಂದೆ ಭಾಗಣ್ಣಾ ಹೊಸಮನಿ ಸಾ: ಎಮ್.ಜಿ ರೋಡ ಬಸವೇಶ್ವರ ಕಾಲೋನಿ ಗುಲಬರ್ಗಾ ಇವರ ಮಗಳಾದ ಕುಮಾರಿ ವಯಸ್ಸು
17 ವರ್ಷ ಇವಳಿಗೆ ತಮ್ಮ ಗ್ರಾಮದವನಾದ
ರಮೇಶ ತಂದೆ ಸಿದ್ದಪ್ಪಾ ಮಾವನೂರ ಎಂಬುವನು ದಿನಾಂಕ 20-05-2014 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ತಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ತನ್ನ ಮಗಳಿಗೆ
ಅಪಹರಿಸಿಕೊಂಡು ಹೋಗಿರುತ್ತಾನೆಂದು ಸಲ್ಲಿಸಿದ ದೂರು ಸಾರಾಂಶದ ಮೇಲೆ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಸದರಿ ಪ್ರಕರಣದಲ್ಲಿ ಅಪಹರಣಕ್ಕೆ ಒಳಗಾದ ಕುಮಾರಿ ಇವಳು ದಿನಾಂಕ 03-06-2014 ರಂದು ಪತ್ತೆಯಾಗಿದ್ದು, ರಮೇಶ ತಂದೆ ಸಿದ್ದಪ್ಪಾ ಮಾವನೂರ ಸಾ: ಜನಿವಾರ ತಾ:
ಜೇವರ್ಗಿ ಇವನು ಅಪಹರಿಕೊಂಡು ಹೋಗಿ ಜಬರಿ ಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ
ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಬ್ರಹ್ಮಪೂರ
ಠಾಣೆ : ಡಾ|| ಸುನೀಲ ಕುಮಾರ ಎಸ್ ವೈದ್ಯಾಧಿಕಾರಿಗಳು
ರಾಷ್ಟ್ರೀಯ
ಆನೆ ಕಾಲು ರೋಗ ನಿಂತ್ರಣ ಘಟಕ ಗುಲಬರ್ಗಾ ಇವರು ದಿನಾಂಕ: 03/06/2014 ರಂದು ಮದ್ಯಾಹ್ನ 1:00
ಗಂಟೆಗೆ ನಾನು ಮತ್ತು ಸಿಬ್ಬಂದಿಯವರು ಎಮ್.ಡಿ.ಎ ರಾಷ್ಟ್ರೀಯ ಕಾರ್ಯಕ್ರಮದ ಕೆಸಲ ಕಾರ್ಯಗಳು
ನಿರ್ವಹಿಸುತ್ತಿರವಾಗ ನಮ್ಮ ಘಟಕದಲ್ಲಿ ಕೆಲಸ ಮಾಡುವ ಶ್ರೀ ಗೌಸಖಾನ ಗ್ರೂಫ್ ಡಿ ನೌಕರ ಇವನು
ಕೂಡಿದ ಅಮಲಿನಲ್ಲಿ ಬಂದು ಕೆಲಸ ಮಾಡುವ ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ಜೋರಾಗಿ ಬೈಯುತ್ತಿದ್ದಾಗ ಈ ಸಮಯದಲ್ಲಿ ಇದೆ ಕಛೇರಿ
ಸಿಬ್ಬಂದಿ ಚಂದ್ರಕಾಂತ ಏರಿ ಇವರು ಕೂಡಿದು ಬೈಯಬಾರದು ಎಂದು ಹೇಳಿದಾಗ ಏ ಭೋಸಡಿ ಮಗನೆ ಛಿನಾಲಿ
ಮಗನೆ ಎಂದು ಅವರ ಎದೆಗೆ ಕೈಯಿಂದ ಹೋಡೆದಿದ್ದು ಅಲ್ಲದೆ ಜೀವದ ಬೇದರಿಕೆ ಹಾಕಿ ಸರಕಾರಿ
ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ
:
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಪುಷ್ಪಾ ಗಂಡ ವಿಶ್ವನಾಥ ಅವಂಟಿ ಸಾ||
ಪ್ರಶಾಂತ ನಗರ (ಎ) ಗುಲಬರ್ಗಾ ಇದ್ದು ದಿನಾಂಕ 03.06.2014 ರಂದು ರಾತ್ರಿ 10.00 ಪಿಎಮ್ ಕ್ಕೆ
ನಾನು ನನ್ನ ಗಂಡ ವಿಶ್ವನಾಥ ಅವಂಟಿ ಇಬ್ಬರು ಕೂಡಿಕೊಂಡು ನಮ್ಮ ಮನೆಯಿಂದ ಮುಂದಿನ ಕ್ರಾಸ
ವರೆಗೆ ಊಟ ಮಾಡಿಕೊಂಡು ವಾಕಿಂಗ ಮಾಡುತ್ತಾ ಇದ್ದೇವು ಒಂದು ರೌಂಡ ಹಾಕಿಕೊಂಡು ಇನ್ನೊಂದು ರೌಂಡ
ಹಾಕುತ್ತಿರುವಾಗ ನಮ್ಮ ಮನೆಯಿಂದ ಸ್ವಲ್ಪ
ದೂರದಲ್ಲಿ ನಡೆಯುತ್ತಾ ಹೊರಟಾಗ ನಮ್ಮ ಎದುರಿನಿಂದ ಒಬ್ಬ ಮೋಟಾರ ಸೈಕಲ ಸವಾರನು ವೇಗದಲ್ಲಿ ಬಂದು
ಸ್ವಲ್ಪ ನಿಲ್ಲಿಸಿದಂತೆ ಮಾಡಿ ನನ್ನ ಕೊರಳಲ್ಲಿ ಕೈ ಹಾಕಿ ಕೊರಳಲ್ಲಿ 4 ತೊಲೆ ಬಂಗಾರದ ತಾಳಿ
ಸಾಮಾನು ಅಂದಾಜ ಕಿಮ್ಮತ್ತು 95000/- ರೂ
ಕಿಮ್ಮತ್ತಿನದು ಕಿತ್ತುಕೊಂಡು ಹೋಗಿದ್ದು ವ್ಯೆಕ್ತಿಯ ಅಂದಾಜ 20-25 ವಯಸ್ಸಿನ ಹಡುಗನಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment