ಕಿರುಕಳ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಪೂಜಾ ಗಂಡ ವಿಜಯಕುಮಾರ ರಾಠೋಡ ಸಾ: ಕಾನೂ ನಾಯಕ ತಾಂಡಾ ನಂದೂರ (ಬಿ) ತಾ:ಜಿ: ಗುಲಬರ್ಗಾ ರವರನ್ನು 2 ವರ್ಷಗಳ ಹಿಂದೆ ಕಾನು ನಾಯಕ ತಾಂಡಾದ ವಿಜಯಕುಮಾರ ತಂದೆ ನಾರಾಯಣ ರಾಠೋಡ ಇತನಿಗೆ ಮದುವೆ
ಮಾಡಿಕೊಟ್ಟಿದ್ದು. ಲಗ್ನವಾದ ನಂತರ ನಾನು
ಒಂದುವರೆ ವರ್ಷದವರೆಗೆ ನನ್ನ ತಾಯಿಯ ಮನೆಯಾದ ಖಣದಾಳ ತಾಂಡಾದಲ್ಲಿ ಉಳಿದಿರುತ್ತೇನೆ. ಈಗ ಸುಮಾರು 3 ತಿಂಗಳ ಹಿಂದೆ ನಾನು ನನ್ನ ಗಂಡನ ಮನೆಗೆಬಂದು ವಾಸವಾಗಿರುತ್ತೇನೆ. ನನ್ನ ಗಂಡ ನನಗೆ ಒಂದು ತಿಂಗಳವರೆಗೆ ಸರಿಯಾಗಿ ನೋಡಿಕೊಂಡಿದ್ದು. ನಂತರ ನನ್ನ ಗಂಡ, ಅತ್ತೆ ಶಾಣಾಬಾಯಿ, ಮಾವ ನಾರಾಯಣ, ಭಾವ ಭೋಜು, ನೇಗೆಣಿ ಶೀಲಾ ಎಲ್ಲರೂ ನನಗೆ ಅಡುಗೆ ಮಾಡಲು ಬರುವದಿಲ್ಲ ನೀನು ಸರಿಯಾಗಿಲ್ಲ ಅಂತಾ ಮಾನಸಿಕ ಹಾಆಗೂ ದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ
ಆದರೂ ನಾನು ತಾಳಿಕೊಂಡು
ಬಂದಿರುತ್ತೇನೆ ದಿನಾಂಕ: 05-06-2014 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡ, ಅತ್ತೆ, ಮಾವ, ಭಾವ,ನೇಗೆಣಿ ಎಲ್ಲರೂ ನನ್ನ ಹತ್ತಿರ ಬಂದು ನೀನು ನೋಡಲಿಕ್ಕೆ ಸರಿಯಾಗಿಲ್ಲ ಅಡುಗೆ ಮಾಡಲು ಬರುವದಿಲ್ಲ ರಂಡಿ
ಭೋಸಡಿ ಅಂತಾ ಬೈದು ನನಗೆ ನನ್ನ ಗಂಡ ಕೈಯಿಂದ
ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದನು. ಅತ್ತೆ ಶಾಣಾಬಾಯಿ ಮತ್ತು ನಗೆಣಿ ಶೀಲಾ ಇಬ್ಬರು ನನಗೆ ಗಟ್ಟಿಯಾಗಿ ಹಿಡಿದರು ಮಾವ ನಾರಾಯಣ ಕೈಯಿಂದ ಬೆನ್ನಿಗೆ
ಗುದ್ದಿದನು ಮತ್ತು ಮಾವ ಭೋಜು ಇತನು
ಕೈಯಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಮಲಕಪ್ಪ ಚಿಕ್ಕರೇವೂರ ಸಾ||
ಸಿದನೂರ
ಇವರ ಮಗನಾದ ಮಲ್ಕಪ್ಪ ತಂದೆ ಗುರುಶಾಂತಪ್ಪಾ ಚಿಕ್ಕರೇವೂರ ಸಾ ಸಿದನೂರ ರವರು ದಿನಾಂಕ 06-06-2014 ರಂದು ಬೆಳಿಗ್ಗೆ 11:00 ನನ್ನ ಮಗ ಹಣಮಂತ ಈತನ ಮದುವೆಯ ಕಾರ್ಡಗಳನ್ನು
ಕೊಡಲು ನಮ್ಮ ಮೋಟಾರ ಸೈಕಲ ನಂ ಎಮ್.ಹೆಚ್-11 ಬಿಇ-8702 ನೇದ್ದರ ಮೇಲೆ ಬಳೂರ್ಗಿ ಗ್ರಾಮಕ್ಕೆ
ಹೋಗಿದ್ದು ದಿನಾಂಕ 06-06-2014 ರಂದು ಸಾಯಂಕಾಲ
4:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಬಳೂರ್ಗಿ ಗ್ರಾಮದಿಂದ ನನ್ನ ಅಳಿಯ ರಮೇಶ
ತಂದೆ ಶರಣಪ್ಪ ನಾಟೀಕಾರ ಸಾ|| ಬಳೂರ್ಗಿ ಈತನು ನನ್ನ
ಮೋಬೈಲಗೆ ಕರೆ ಮಾಡಿ ನಿಮ್ಮ ಮಗನು ಮದುವೆ ಕಾರ್ಡಗಳನ್ನು ಕೊಟ್ಟು ಬಳೂರ್ಗಿ ಗ್ರಾಮದಿಂದ ಅಫಜಲಪೂರ
ಕಡೆಗೆ ಹೊಗುತ್ತಿದ್ದಾಗ ಅಂದಾಜು 4:00 ಗಂಟೆ ಸುಮಾರಿಗೆ ಮಾದಾಬಾಳ ತಾಂಡಾದ ಹತ್ತಿರ ರೋಡಿನ ಮೇಲೆ
ಮೋ/ಸೈ ಸ್ಕೀಡ ಆಗಿ ಮೋ/ಸೈ ದೊಂದಿಗೆ ಬಿದ್ದು ಗಾಯಗಳು ಮಾಡಿಕೊಂಡಿ ರುತ್ತಾನೆ,
ನಾನು
ನನ್ನ ಮೋ/ಸೈ ಮೇಲೆ ಅಫಜಲಪೂರಕ್ಕೆ ಹೋಗುತ್ತಿದ್ದೆನು. ಈಗ ಅವನನ್ನು ಉಪಚಾರ ಕುರಿತು ಗುಲಬರ್ಗಾದ
ಚಿರಾಯು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆವೆ ಅಂತಾ ತಿಳಿಸಿದ್ದರ ಮೇಲೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಮರಣ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 04/06/2014 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ
ಕರುಣೇಶ್ವರ ನಗರ ಬಸ್ ಸ್ಟಾಫ್ ಒಳಗಡೆ ಅಂದಾಜು 60 ರಿಂದ 70 ವಯಸ್ಸಿನ ಅಪರಿಚಿತ ವ್ಯಕ್ತಿ ಯಾವುದೂ ಕಾಯಿಲೆಯಿಂದ ಬಳಲುತ್ತಾ ಮೃತ ಪಟ್ಟಿದ್ದು
ಸದರಿಯವನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಮರಚರಿ ಕೊಣೆಯಲ್ಲಿ ಕಾಯ್ದು ಇಡಲಾಗಿದೆ.ಕಾರಣ ಸದರಿ
ಮೃತ ವ್ಯಕ್ತಿಯ ಹೆಸರು ವಿಳಾಸ ಮತ್ತು ರಕ್ತ
ಸಂಬಂಧಿಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಶೋಕ ನಗರ ಪೊಲೀಸ್ ಠಾಣೆಗೆ ಅಥವಾ ಕಟ್ರೋಲ್ ರೂಮ್
ಗುಲಬರ್ಗಾಕ್ಕೆ ತಿಳಿಸಬೇಕಾಗಿ ಕೊರಲಾಗಿದೆ.
No comments:
Post a Comment