ಸುಲಿಗೆ ಪ್ರಕರಣ :
ಅಶೋಕ ನಗರ
ಠಾಣೆ : ಶ್ರೀ ಸಾಹೇಬಗೌಡ ತಂದೆ ರೇವಪ್ಪಾ ಬೋಗಡಿ ಮಾಜಿ ಮಹಾನಗರ
ಪಾಲಿಕೆಯ ಸದಸ್ಯರು ಸಾ: ಮಜ್ಜಿಗೆ ಲೇಔಟ ಸಾದ್ವಿಗಲ್ಲಿ
ಶಹಾಬಜಾರ ಗುಲಬರ್ಗಾ ರವರು ದಿನಾಂಕ
2-6-2014 ರಂದು ರಾತ್ರಿ 11-30 ಕ್ಕೆ ಒಂದು ಕೆಲಸದ ನಿಮಿತ್ಯ ಹೋಗಿ ರಾತ್ರಿ ಬರುವಾಗ ರಾಮಮಂದಿರ
ರಸ್ತೆಯಲ್ಲಿ ಮೂವರು ಅಪರಿಚಿತರು ಬಂದು ನನ್ನ ದ್ವಿಚಕ್ರ ವಾಹನವನ್ನು ಕೆಡವಿ ನನ್ನ ಮೇಲೆ ಹಲ್ಲೆ
ಮಾಡಿ ತಲೆಗೆ ಮತ್ತು ಮೊಳಕಾಲಿಗೆ ಹೊಡೆದು ನನ್ನನ್ನು ಜಬರನ್ ದ್ವಿಚಕ್ರ ವಾಹನದಲ್ಲಿ ಕುಳಿಸಿಕೊಂಡು
ಚೋರಗುಂಬಜ್ ರಸ್ತೆ ಕಡೆ ಹೋಗಿ ಮತ್ತೆ ಅಲ್ಲಿಯೂ ಸಹ ನನ್ನ ಮೇಲೆ ಹಲ್ಲೆ ಮಾಡಿ ನನ್ನಲ್ಲಿದ್ದ ರೂ
1100/- ನಗದು ಒಂದು ಪುಷ್ಪರಾಗ ಹಳ್ಳ ಇರುವ ಅರ್ಧ ತೊಲೆ
ಬಂಗಾರದ ಉಂಗುರು ಮತ್ತು ಒಂದು ಮುತ್ತು ಇರುವ ಬೆಳ್ಳಿ ಉಂಗುರ ಅಲ್ಲದೇ ನನ್ನ ಸುಮಾರು
ಒಳ್ಳೆ ಬೆಲೆ ಬಾಳುವ ಸಾಮಶ್ಯಾಂಗ ಮೋಬೈಲನ್ನು ನನ್ನಿಂದ ಹೊಡೆದು ಕಸಿದುಕೊಂಡು ಪರಾರಿಯಾಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ವಿಶ್ವವಿದ್ಯಾಲಯ
ಠಾಣೆ : ದಿನಾಂಕ: 03/06/14
ರಂದು
ಶ್ರೀನಿವಾಸ ಸರಡಗಿ ಗ್ರಾಮದ ರಾಮು ಅಡೆ ಇವರ ಹೋಟಲ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಅಂಕಿ ಸಂಕ್ಯೆಗಳ
ಚೀಟಿ ಬರೆದು ಕೊಳುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ.ಐ(ಕಾ.ಸು)
ವಿಶ್ವವಿದ್ಯಾಲಯ ಪೊಲೀಸ ಠಾಣೆ ಗುಲಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ
ದಾಳಿ ಮಾಡಿದಾಗ ಮಟಕಾ ಚೀಟಿ ಬರೆಸುತ್ತಿದ್ದವರು ಓಡಿಹೋಗಿದ್ದು ಚೀಟಿ ಬರೆದುಕೊಳ್ಳುತ್ತಿದ್ದವನಿಗೆ
ಹಿಡಿದು ವಿಚಾರಿಸಲು ಅವನು ತನ್ನ ಹೆಸರು ರಾಜು ತಂದೆ ಧನಶೆಟ್ಟಿ ರಾಠೋಡ ಸಾ : ಭರತನಗರ ತಾಂಡಾ
ತಿಳಿಸಿದ್ದು ಅವನ ಕೈಯಲ್ಲಿದ್ದ 950/- ರೂ ನಗದು ಹಣ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ
ಜಪ್ತಮಾಡಿಕೊಂಡು ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ವಿಶ್ವವಿದ್ಯಾಲಯ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ
ಸಂಚಾರಿ ಠಾಣೆ : ದಿನಾಂಕ 03-06-2014
ರಂದು ರಾತ್ರಿ 11-15 ಗಂಟೆ
ಸುಮಾರಿಗೆ ಸಿದ್ರಾಮ ಹೊಸ್ಮನಿ ಇತನು ತನ್ನ ಮೋಟಾರ ಸೈಕಲ ನಂ ಕೆಎ-32 ಜೆ-5783 ನೇದ್ದನ್ನು
ಜಗತ ಸರ್ಕಲ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕುಳಗೇರಿ ಕ್ರಾಸ್
ಕಡೆಗೆ ಹೋಗುವ ಕುರಿತು ಅನ್ನಪೂರ್ಣ ಕ್ರಾಸದಲ್ಲಿ ಮೋಟಾರ ಸೈಕಲ ಒಮ್ಮೆಲೆ ಕಟ್ಟ ಹೊಡೆದು
ತಿರುಗಿಸುವಾಗ ಎರಡು ನಾಯಿಗಳು ಬರುವದನ್ನು ನೋಡಿ ಕಟ್ಟ ಹೊಡೆದು ಒಮ್ಮೆಲೆ ಬ್ರೇಕ ಹಾಕಿ ಮೋಟಾರ
ಸೈಕಲ ಸ್ಕೀಡ ಮಾಡಿ ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದು ಭಾರಿಗಾಯ ಹೊಂದಿ ಮಾತನಾಡುವ ಪರಿಸ್ಥಿತಿ
ಇರುವದಿಲ್ಲಾ ಅಂತಾ ಶ್ರೀಮತಿ ಶಾಮಬಾಯಿ ಗಂಡ ಸಿದ್ರಾಮ ಹೊಸ್ಮನಿ ಸಾ: ಗುಲ್ಲಾಬವಾಡಿ ಗುಲಬರ್ಗಾ ಇವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment