ಸರಗಳ್ಳರ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ;
19/07/2014 ರಂದು ಮದ್ಯಾನ್ಹ ಶ್ರೀಮತಿ ಕಾವೇರಿ ಗಂಡ ಚಂದ್ರಕಾಂತ ಮಾಹೂರಕರ ಸಾ : ಗಣೇಶ ನಗರ ಗುಲಬರ್ಗಾ ಇವರು ಸಿದ್ದಿವಿನಾಯಕ ಗುಡಿ
ಹತ್ತಿರ ಬರುತ್ತಿರುವಾಗ ಅಪರಿಚಿತರು ದ್ವಿಚಕ್ರ ವಾಹನದ ಮೇಲೆ ಇಬ್ಬರು ಅಪರಿಚಿತರು ಬಂದು ವಿಳಾಸ ಕೆಳುವ ನೆಪದಲ್ಲಿ ಕೊರಳಲ್ಲಿಯ 2 ತೋಲಿ
ಬಂಗಾರದ ಮಂಗಳ ಸೂತ್ರ ಹಾಗು ಹವಳ ಮುತ್ತು ಪೊಣಿಸಿದ ಅರ್ದತೋಲಿ ಬಂಗಾರದ ಕಂಠಿಸರ ಕಿತ್ತಿಕೊಂಡ ಹೊಗಿದ್ದರ
ಬಗ್ಗೆ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾನ್ಯ ಎಸ್ ಪಿ ಸಾಹೇಬರು, ಹೆಚ್ಚುವರಿ ಎಸ್ ಪಿ ಸಾಹೇಬರು
ಹಾಗು ಡಿಎಸ್ ಪಿ “ಎ” ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ
ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಹಾಗು ಸಿಬ್ಬಂದಿಯವರು
ಕಾರ್ಯಾಚರಣೆ ನಡೆಸಿ ರೇಲ್ವೆ ಸ್ಟೇಷನ ಹತ್ತಿರ ದಾಳಿ
ಮಾಡಿ ಆರೋಪಿತರಾದ 1) ಸಚಿನ ತಂದೆ ಶಾಹೀದ ಪಾಟೀಲ ವಯ|| 23 ವರ್ಷ ಜಾ|| ಮಂಗರವಾಡಿ ಉ|| ವಿದ್ಯಾರ್ಥಿ ಸಾ||
ಭಾಪುನಗರ ಗುಲಬರ್ಗಾ 2) ಪ್ರೇಮ ತಂದೆ ವಿಷ್ಣು ಉಪಾದ್ಯ ವಯ|| 22 ವರ್ಷ ಜಾ|| ಮಂಗರವಾಡಿ ಉ||
ಮುನ್ಸಿಪಾರ್ಟಿ ಕೆಲಸ ಸಾ|| ಬಾಪುನಗರ ಗುಲಬರ್ಗಾ ಇವರನ್ನು ದಿನಾಂಕ;
26/07/2014 ರಂದು ಸಾಯಂಕಾಲ ಬಂದಿಸಿ ಬಂದಿತರಿಂದ ಸುಮಾರು 60.000 ರೂಪಾಯಿ ಕಿಮ್ಮತ್ತಿನ 2 ತೋಲಿ
ಬಂಗಾರದ ಮಂಗಳ ಸೂತ್ರ ಹಾಗು ಅರ್ದತೋಲಿ ಬಂಗಾರದ
ಕಂಠಿಸರ ಜಪ್ತಿ ಮಾಡಿಕೊಂಡಿಕೊಂಡಿರುತ್ತಾರೆ.
ಜಾತಿ ನಿಂದನೆ
ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪ್ರಭು ತಂದೆ ಶಿವರಾಯ ಕಾಂಬಳೆ ಸಾ:ಮಳನಿ ತಾಜಿ:ಗುಲಬರ್ಗಾ ಇವರು ದಿನಾಂಕ: 24/7/14 ರಂದು ಸಾಯಂಕಾಲ 5:30
ಗಂಟೆಯ ಸುಮಾರಿಗೆ ನಮ್ಮೂರಾದ ಮಳನಿ ಗ್ರಾಮದಲ್ಲಿ ಬೆಳ್ಳಿಂಗರಾಯ ದೇವರ ಜಾತ್ರೆ ಸಮೇತ ನಾನು ನನ್ನ
ಹಂಡತಿ ಮತ್ತು ನನ್ನ ತಮ್ಮ ನನ್ನ ತಂಗಿಯರು ಜೋತೆ ದೆವಸ್ತಾನಕ್ಕೆ ಹೋಗಿದ್ದಾಗ ನಮ್ಮ ಊರಿನವರೆ ಆದ
ಭಿಮಾಶಂಕರ ತಂದೆ ಪರಮೇಶ್ವರ ದೊಡ್ಡಮನಿ, ಸಂಜು ತಂದೆ ಅರ್ಜುನ ದೊಡ್ಡಮನಿ, ರಾಜು ತಂದೆ ಅರ್ಜುನ ದೊಡ್ಡಮನಿ, ಪಂಡಿತ ತಂದೆ ಹಣಮಂತ ದೊಡ್ಡಮನಿ, ನಿಂಗಪ್ಪ ತಂದೆ ನಾಗಪ್ಪ ಜಮಾದಾರ, ಹಣಮಂತ ತಂದೆ ನಾಗಪ್ಪ ,ಇವರೆಲ್ಲರೂ ನಮ್ಮುರಿನವರೆ ಆಗಿದ್ದು ಇವರಲ್ಲರು ಕೂಡಿಮಗನೆ ಪ್ರಬ್ಯಾ ಸುಳಿ ನಮಕ್ಕಳೆ
ನೀವು ಹೊಲೆಯರು ನೀನು ನಿನ್ನ ಹೆಂಡತಿ ಯಾರು ಈ ದೆವರ ಗುಡಿಗೆ ಬರಬಾರದು ಮಕ್ಕಳೆ ನೀವು ಯಾಕೆ
ಬಂದಿರೋ ಅಂತಾ ಅಂದವರೆ ಸಂಜು ತಂದೆ ಅರ್ಜುನ ದೊಡ್ಡಮನಿ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು
ಕೆಳಗೆ ಹಾಕಿ ಕೈ ಮುಷ್ಟಿಯಿಂದ ಹೊಟ್ಟೆಯ ಮೇಲೆ ಹೊಡೆಯುತ್ತಿರುವಾಗ ಆಗ ನನ್ನ ಹೆಂಡತಿ ರೇಷ್ಮಾ ಗಂಡ
ಪ್ರಭು ಬಿಡಿಸಲು ಬಂದಾಗ ಬೀಮಾಶಂಕರ ತಂದೆ ಪರಮೇಶ್ವರ ಎ ರಂಡಿ ನೀನು ಇಲ್ಲಿಗೆ ಬಂದಿಯಾ ಅನ್ನುತ್ತಾ
ನನ್ನ ಹೆಂಡತಿಗೂ ಕೈ ಮುಷ್ಟಿ ಯಿಂದ ಎದೆಯ ಮೇಲೆ ಹೊಡೆದು ಗುಪ್ತ ಗಾಯ ಮಾಡಿ ಜಾತಿ ನಿಂದನೆ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ
:
ಅಫಜಲಪೂರ ಠಾಣೆ : ಶ್ರೀ ಸುಭಾಶ ತಂದೆ ಮಾರುತ್ತಿ ಇಂಗಳೆ ಸಾ : ಮಣೂರ ರವರು ದಿನಾಂಕ 26-07-2014 ರಂದು ರಾತ್ರಿ 8;30 ಗಂಟೆ ಸುಮಾರಿಗೆ ಮನೆಯಿಂದ ನಾನು ಕಿರಾಣಿ ಅಂಗಡಿಗೆ ಹೋಗುತ್ತಿರುವಾಗ ನಮ್ಮ ಮನೆಯಿಂದ ಸ್ವಲ್ಪ ದೂರು ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದಾಗ ಇಬ್ಬರು ಬಂದು ನನಗೆ ತಡೆದು ನಿಲ್ಲಿಸಿದರು, ಅವರನ್ನು ನೋಡಲು ಒಬ್ಬನು ಲಕ್ಷ್ಮಣ ನನ್ನವರೆ ಇನ್ನೊಬ್ಬನು ಮನೋಜ ನನ್ನವರೆ ಇದ್ದರು ಯಾಕೆ ನನಗೆ ತಡೆದು ನಿಲ್ಲಿಸಿರಿ ಅಂತಾ ಕೇಳಿದಾಗ ಲಕ್ಷ್ಮಣ ಇವನು ಏ ಸುಳಿ ಮಗನಾ ನಿನಗ ಎಷ್ಟುಸಲ ಹೇಳಿದರು ನೀನು ಚೇಡಿ ಮಾಡಿಸುವುದು ಬಿಡುತ್ತಿಲ್ಲ ಇವತ್ತ ನಿನಗ ಖಾಲಸ ಮಾಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ತಲೆಯ ಹಿಂದೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ಮನೋಜ ಇವನು ನನಗೆ ನೆಲದ ಮೇಲೆ ಕೆಡವಿ ಒಂದು ಚೂಪಾದ ಕಲ್ಲಿನಿಂದ ನನ್ನ ಬಲಗೈ ಮಣಿ ಕಟ್ಟಿ ಹತ್ತಿರ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 15/07/2014 ರಂದು 8-40 ಪಿಎಮ್ ಕ್ಕೆ ಶ್ರೀ ಮಹೇಂದ್ರಕುಮಾರ ತಂದೆ ಭೀಮಶ್ಯಾ ಭರತನೂರ
ಸಾ: ಸಾವಳಗಿ (ಬಿ) ತಾ:ಜಿ:ಗುಲಬರ್ಗಾ ಇವರ ತಮ್ಮನಾಧ ಅನೀಲಕುಮಾರ ಇತನು ಹೀರೊಹೊಂಡಾ ಸ್ಪ್ಲೇಂಡರ್
ಪ್ಲಸ್ ಮೋಟರ ಸೈಕಲ ನಂ ಕೆಎ-32 ವಾಯ್-6813 ನೇದ್ದರ ಮೆಲೆ ಹೀರಾಪೂರ ಕ್ರಾಸದಿಂದ ತಮ್ಮೂರಿಗೆ ಹೋಗುವಾಗ
ಡಬರಾಬಾದ ಕ್ರಾಸ ಹತ್ತಿರ ಮಿಜಬಾನಗರ ಕಾಲೋನಿಯ ರಿಂಗರೋಡಿನ ಮೇಲೆ ಅತಿವೇಗ ಮತ್ತು ನಿಸ್ಕಾಳಜಿತನದಿಂದ
ಚಲಾಯಿಸಿ ಸ್ಕಿಡ್ ಆಗಿ ಬಿದ್ದು ಬೇಹೋಶ್ ಆಗಿದ್ದು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ
ಸೇರಿಕೆ ಮಾಢಿ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ಒಳಸಂಗಕರ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಉಪಚಾರ
ಪಡೆಯುತ್ತಾ ದಿನಾಂಕ: 17/07/2014 ರಂದು 2-30 ಎ.ಎಮ್ ಕ್ಕೆ ಮೃತಪಟ್ಟಿದ್ದು
ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರವಿ ತಂದೆ ಸೋಮನಾಥ ದಾಮಾ ಸಾ: ಕೆ.ಹೆಚ್.ಬಿ.ಕಾಲೋನಿ ಬೀದರ್ ಜಿಲ್ಲೆ ಇವರು ದಿನಾಂಕ: 26-07-2014 ರಂದು ಮಧ್ಯಾಹ್ನ 03-30 ಗಂಟೆಗೆ ಫಿರ್ಯಾದಿಯು ಗೋವಾ ಹೊಟೇಲ ದಿಂದ ಅಟೋರೀಕ್ಷಾ ನಂ: ಕೆಎ 32 ಬಿ 4791 ನೆದ್ದರಲ್ಲಿ ಕುಳಿತು
ಜಗತ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಯಲ್ಲಮ್ಮ ಟೆಂಪಲ್ ಎದುರಿನ ರೋಡ ಮೇಲೆ ಅಟೋರೀಕ್ಷಾ ಚಾಲಕನು
ಅತಿ ಜೋರಿನಿಂದ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ
ಅಟೋರೀಕ್ಷಾ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ಗಾಯಗೊಳಿಸಿ ಅಟೋರೀಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ರಾಮ ತಂದೆ ವಿರಣ್ಣಾ ರಾಯರಾಮ ಸಾ: ಪ್ಲಾಟ ನಂ 86 (ಎ) ಓಂನಗರ ಸೇಡಂ ರೋಡ ಗುಲಬರ್ಗಾ ಇವರು ದಿನಾಂಕ 25-07-2014 ರಂದು ಫಿರ್ಯಾದಿಯು
ರಾತ್ರಿ 9-20 ಗಂಟೆ ಸುಮಾರಿಗೆ ತನ್ನ ಮೋ/ಸೈಕಲ ನಂಬರ ಕೆಎ-32 ಟಿ.ಪಿ-5074 ರ ಮೇಲೆ ಜಿ.ಜಿ.ಹೆಚ್ ಸರ್ಕಲ ಮುಖಾಂತರ ಎಸ್.ಪಿ ಆಫೀಸ
ರೋಡ ಕಡೆಯಿಂದ ಮೋ/ಸೈಕಲ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಿದ್ದಿಪಾಶಾ ಕ್ರಾಸನಲ್ಲಿ ಒಬ್ಬ
ಮೋ/ಸೈಕಲ ಸವಾರನು ಹಿಂದಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಮೋ/ಸೈಕಲ ಸಮೇತ
ಕೆಳಗಡೆ ಬಿದ್ದಾಗ ಫಿರ್ಯಾದಿಗೆ ಭಾರಿಗಾಯಗೊಳಿಸಿ ಆರೋಪಿತನು ತನ್ನ ಮೋ/ಸೈಕಲ ಚಲಾಯಿಸಿಕೊಂಡು
ಹೋಗಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ
ಚಂದ್ರಶೇಖರ ಕೇಲಕೇರಿ ಸಾಃ ಡಾಃ ಅಂಬೇಡ್ಕರ ಶಾಲೆ ಹತ್ತಿರ ಅಶೋಕ ನಗರ ಗುಲಬರ್ಗಾ ಇವರು ದಿನಾಂಕಃ
26-07-2014 ರಂದು 01:30 ಪಿ.ಎಂ. ಸುಮಾರಿಗೆ ಫಿರ್ಯಾದಿ ಮತ್ತು ಆತನ ಗೆಳೆಯನಾದ ಸಿದ್ರಾಮ್
ಇಬ್ಬರೂ ಕೂಡಿಕೊಂಡು ಓಂ ನಗರದಲ್ಲಿರುವ ಗೆಳೆಯನಾದ ಅಶೋಕ ಇತನ ಮನೆಗೆ ನಡೆದುಕೊಂಡು
ಹೋಗುತ್ತಿರುವಾಗ ಓಂ ನಗರ ಗೇಟ್ ಹತ್ತಿರ ಹಿಂದಿನಿಂದ ಆಟೋ ರಿಕ್ಷಾ ನಂ. ಕೆ.ಎ 32 9877 ನೇದ್ದರ
ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ
ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಡಗಾಲಿಗೆ ಜೋರಾಗಿ ಒಳಪೆಟ್ಟು ಆಗಿರುತ್ತದೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ನಸಿರಿನ್ ಬೇಗಂ ಗಂಡ ಸಾಹೇಬ ಲಾಲ, ಸಾಃ ಅತ್ತರ ಕಂಪೌಂಡ ಗಾಜಿಪೂರ
ಗುಲಬರ್ಗಾ ರವರು ದಿನಾಂಕ 26-07-2014 ರಂದು 1-00 ಪಿ.ಎಮ್ ಸುಮಾರಿಗೆ ತನ್ನ ಮಗಳಾದ ಸಾನಿಯಾ ವಃ 3 ವರ್ಷ
ಇವಳನ್ನು ಕರೆದುಕೊಂಡು ಅಂಗಡಿಗೆ ಹೋಗುತ್ತಿದ್ದಾಗ ಡಾಃ ಶರಣಮ್ಮಾ ಇವರ ಮನೆಯ ಎದರುಗಡೆ ರೋಡಿನ
ಮೇಲೆ ಹೊಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇ.ಎ 7272 ನೇದ್ದರ
ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು
ಹೋಗುತ್ತಿದ್ದ ಫಿರ್ಯಾದಿ ಮಗಳಿಗೆ ಎದರುಗಡೆಯಿಂದ
ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಸಾನಿಯಾ
ಇವಳಿಗೆ ಬಾಯಿಗೆ ಮತ್ತು ತುಟಿಗೆ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 23-07-2014 ರಂದು 2.30 ಪಿ.ಎಮ್ ಕ್ಕೆ ಶ್ರೀ ವಿಠಲ ಜಾಧವ ಈತನ ಟ್ರ್ಯಾಕ್ಟರ್ ನಂ.ಎಮ್.ಹೆಚ್.14
-ಪಿ-9965 ಟ್ರಾಲಿ ನಂ.ಕೆ.ಎ-32 ಟಿ-4942 ನೇದ್ದರಲ್ಲಿ ಕಣಿಕೆ ತರಲು ಕೂಲಿಯಿಂದ ತಾಂಡಾದ ಇನ್ನು
ಕೆಲವು ಜನರ ಜೊತೆಗೆ ಟ್ರ್ಯಾಕ್ಟರ್ ದಲ್ಲಿ ಕುಳಿತು ಗುಂಡಗುರ್ತಿ ತಾಂಡಾದ ಹತ್ತಿರ ಗುಲಬರ್ಗಾ
ಸೇಡಂ ರಾಜ್ಯ ಹೆದ್ದಾರಿಯ ಬ್ರಿಡ್ಜ ದಿಂದ ಹೊರಟಿದ್ದಾಗ ಹಿಂದಿನಿಂದ ಬಸ್ಸನಂ.ಕೆ.ಎ-32 ಎಫ್.-1659
ನೇದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಹಾಗು ನಿಶ್ಕಾಳಜಿಯಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರಕ್ಕೆ
ಡಿಕ್ಕಿ ಪಡಿಸಿದ ಪರಿಣಾಮ ಟ್ರ್ಯಾಕ್ಟರ್ ದಿಂದ ಕೆಳಗೆ ಬಿದ್ದು ತಲೆಗೆ ಹಣೆಗೆ ರಕ್ತಗಾಯ ಹಾಗು
ಭಾರಿ ಗುಪ್ತಗಾಯ ಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಉಪಚಾರ
ಫಲಕಾರಿಯಾಗದೇ ಇಂದು ದಿನಾಂಕ: 26-07-2014 ರಂದು 11.45 ಎ.ಎಮ್ ಕ್ಕೆ ಮೃತ ಪಟ್ಟಿದ್ದು
ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment