Police Bhavan Kalaburagi

Police Bhavan Kalaburagi

Saturday, July 26, 2014


ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
ಮಟಕಾ ಜೂಜಾಟದ ಪ್ರಕರಣಗಳು
1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 93/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ 25-07-2014 ರಂದು ಸಂಜೆ 4-00 ಗಂಟೆಗೆ ವೀರಣ್ಣ ಎಸ್. ಮಾಗಿ ಪಿ.ಎಸ್.ಐ. ಕನಕಗಿರಿ ರವರು ಜಪ್ತ ಮಾಡಿದ ಮಾಲು ಮತ್ತು ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದು ವರದಿ ಮತ್ತು ಜಪ್ತಿ ಪಂಚನಾಮೆ ಕೊಟ್ಟಿದ್ದು ಸದರ ವರದಿಯ ಸಾರಾಂಶವೇನೆಂದರೆ ದಿನಾಂಕ 25-07-2014 ರಂದು ಮದ್ಯಾಹ್ನ 2-15 ಗಂಟೆಯಿಂದ 3-15 ಗಂಟೆಯವರೆಗೆ ನವಲಿ ಗ್ರಾಮದ ಪಶು ಆಸ್ಪತ್ರೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ 6 ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಅಂದರಬಾಹರ ಎಂಬ ನಸೀಬದ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ.,ಹಾಗೂ ಅವರೊಂದಿಗೆ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ ರೂ. ರೂ.1230=00 ಗಳು ಹಾಗೂ ಜೂಜಾಟ ದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 224/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು 2-30 ಗಂಟೆಗೆ ಶ್ರೀ. ಉದಯ ರವಿ ಪಿ.ಎಸ್.ಐ ಕಾರಟಗಿರವರು  ಮಟ್ಕಾ ಜೂಜಾಟ ದಾಳಿಯ ಪಂಚನಾಮೆ ಹಾಗೂ ಲಿಖಿತ ಪಿರ್ಯಾದಿ ಮತ್ತು ಮಟ್ಕಾ ಜೂಜಾಟದಲ್ಲಿ ತೋಡಗಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿಯನ್ನು ಹಜರ ಪಡಿಸಿದ್ದು  ಅದರ ಸಾರಾಂಶವೆನಂದರೆ ಇಂದು ದಿನಾಂಕ-25-07-2014 ರಂದು ಮಾಹಿತಿ ಬಂದ ಮೆರೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ಠಾಣಾ ವ್ಯಾಪ್ತಿಯ ಯರಡೋಣ ಗ್ರಾಮಕ್ಕೆ ಹೋಗಿ ಅಲ್ಲಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಬಸವರಾಜ ತಂದಿ ಮೆಳ್ಳಪ್ಪ ವಯಾ: 48 ವರ್ಷ ಸಾ. ಯರಡೋಣ ಇತನ ಮೇಲೆ ದಾಳಿ ಮಾಡಿಕೊಂಡು ಇತನಿಂದ  ಮಟ್ಕಾ ನಂಬರ ಬರೆದ ಪಟ್ಟಿ, 1 ಬಾಲ್ ಪೆನ್ ಹಾಗೂ ನಗದು ಹಣ ರೂ 1130-00 ರೂಪಾಯಿಗಳನ್ನು ಹಾಜರಿದ್ದ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಯಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯ ಮೇಲೆ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                                        
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 225/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 5-00 ಗಂಟೆಗೆ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ಗ್ರಾಮದಲ್ಲಿ ನೀರಿನ ಕೇನಾಲ್ ಹತ್ತಿರ ಇರುವ ಉಣ್ಣಿ ಬಸವೇಶ್ವರ ದೇವಸ್ಥಾನದ ಹತ್ತಿರ  1) ಗಣೇಶ ತಂದಿ ಜಿ. ಸತ್ಯ ನಾರಾಯಣ ವಯಾ: 28 ವರ್ಷ ಜಾ: ಕಾಪುಲು : ಮೆಷನ್ ಸಾ. ಬಸವಣ್ಣಕ್ಯಾಂಪ್ 2) ಬಾಷಾ ತಂದಿ ರಾಜಾ ಸಾಬ ವಯಾ: 21 ಜಾ: ಮುಸ್ಲಿಂ ಕೆಲಸ : ಮೇಕ್ಯಾನಿಕ್ ಕೆಲಸ ಸಾ. ಮುದಗಲ್ 3) ರಾಜಮೊಹವ್ಮ್ಮದ ತಂದಿ ಹುಸೇನ್ ಸಾಬ ವಯಾ: 21 ವರ್ಷಜ ಜಾ: ಮೇಷನ್ ಕೆಲಸ ಸಾ. ಸಿಂದನೂರು 4) ತಾಯಪ್ಪ ತಂದಿ ಆದಪ್ಪ ಅಯ್ಯಾಳ ವಯಾ: 24 ವರ್ಷ ಜಾ: ಕುರಬರು : ಒಕ್ಕಲುತನ ಸಾ. ವಿರುಪಾಪೂರ ತಾ: ಸಿಂದನೂರು 5) ಬಂಡೆಪ್ಪ ತಂದಿ ನರಸಪ್ಪ ಸಂತೆರ ವಯಾ: 24 ವರ್ಷ ಸಾ. ವೀರುಪಾಪೂರ ತಾ: ಸಿಂದನೂರು 6) ಪಂಪಾಪತಿ ತಂದಿ ಈರಪ್ಪ ವಡ್ಡರ ವಯಾ: 38 ವರ್ಷ ಜಾ: ವಡ್ಡರ : ಮೇಷನ್ ಕೆಲಸ ಸಾ. ಸೋಮಲಾಪೂರ ತಾ: ಸಿಂದನೂರು 7)  ಗಾದಿಲಿಂಗಪ್ಪ ತಂದಿ ಲಕ್ಷ್ಮೀಪತಿ ಭಟ್ಟರ ವಯಾ: 36 ವರ್ಷ ಜಾ: ಕ್ಷೆತ್ರೀಯ : ಕಲ್ಲು ಹೊಡೆಯುವ ಕೆಲಸ ಸಾ. ಸೋಮಲಾಪೂರ ತಾ: ಸಿಂದನೂರು 8) ವೆಂಕೋಬ ತಂದಿ ಈರಣ್ಣ ಈಳಿಗೇರ ಸಾ. ಬಸವಣ್ಣ ಕ್ಯಾಂಪ ಕಾಲಂ ನಂ 7 ರಲ್ಲಿ ನಮೂದು ಮಾಡಿ ಆರೋಪಿ ನಂ 1 ನೆದ್ದವನು ಮಟ್ಕಾ ನಂಬರ ಗಳನ್ನು ಬರೆದುಕೊಳ್ಳುತ್ತಿದ್ದಾಗ್ಗೆ ಮತ್ತು ಆರೋಪಿ ನಂ 2 ರಿಂದ 7 ನೆದ್ದವರು ಮಟ್ಕಾ ನಂಬರಗಳನ್ನು ಬರೆಸುತ್ತಿರುವಾಗ್ಗೆ ಮತ್ತು ಆರೋಪಿ ನಂ 8 ನೆದ್ದವನು ಸಾರ್ವಜನಿಕ ದಾರಿಯಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆಯುತ್ತಿರುವಾಗ್ಗೆ  ಶ್ರೀ. ಉದಯ ರವಿ ಪಿ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಲಾಗಿ ಆರೋಪಿ ನಂ 8 ನೆದ್ದವನು ಓಡಿ ಹೋಗಿದ್ದು ಉಳಿದ 7 ಜನ ಆರೋಪಿತು ಸಿಕ್ಕಿ ಹಾಕಿಕೊಂಡಿದ್ದು  ಸಿಕ್ಕಿಬಿದ್ದ ಆರೋಪಿತರ ಕಡೆಯಿಂದ ನಗದು ಹಣ ರೂ. 14450=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                          
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 226/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಸಿದ್ದಾಪೂರ  ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಶಿವಕುಮಾರ ತಂದಿ ಬಸಪ್ಪ ವಯಾ: 30 ವರ್ಷ ಜಾ: ಲಿಂಗಾಯತ ಸಾ. ಸಿದ್ದಾಪೂರ ಇವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ  ಶ್ರಿ ಮೋನಯ್ಯ ಎ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ. 390=00  ಗಳನ್ನು ಜಪ್ತ ಮಾಡಿಕೊಂಡು ಬಂದು ಪಿರ್ಯಾದಿ ನೀಡಿದ್ದರ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                          
5) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 227/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಹಗೇದಾಳ ಗ್ರಾಮದ ತೊಂಡಿಹಾಳ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಪ್ರಭುರಾಜ ತಂದಿ ದೇವೀದ್ರಪ್ಪ ದೇಸಾಯಿ ವಯಾ: 46 ವರ್ಷ ಜಾ: ಲಿಂಗಾಯತ ಸಾ. ಹಗೇದಾಳ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ರೂ 4250=00 ಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 228/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕಾರಟಗಿ ಪೊಲೀಸ ಠಾಣಾ ವ್ಯಾಪ್ತಿಯ ಕಾರಟಗಿ ಗ್ರಾಮದ ನವಲಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಸಿದ್ದರಾಮ ತಂದಿ ಕೆಂಚಪ್ಪ ಮುಕುಂದಿ ವಯಾ: 42 ವರ್ಷ ಜಾ: ಲಿಂಗಾಯತ ಸಾ. ಕಾರಟಗಿ  ಇವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ  ಶ್ರಿ ಮೋನಯ್ಯ ಎ.ಎಸ್.ಐ ಕಾರಟಗಿರವರು ಮತ್ತು ಸಿಬ್ಬಂದಿಯವರು ಹಾಜರಿದ್ದ ಇಬ್ಬರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದುಕೊಂಡು ಸದರಿ ಆರೋಪಿತನ ಕಡೆಯಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಹಾಗೂ ನಗದು ಹಣ ರೂ. 1100=00  ಗಳನ್ನು ಜಪ್ತ ಮಾಡಿಕೊಂಡು ಬಂದು ಪಿರ್ಯಾದಿ ನೀಡಿದ್ದರ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   

No comments: