ಮೊಬೈಲನಿಂದ ಕೊಟ್ಟಿ ಕರೆ ಮಾಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ ಸೈಯದ ನಿಸಾರ ಅಹ್ಮದ ವಜೀರ ತಂದೆ ಸೈಯದ ಇಬ್ರಾಹಿಂ
ಸಾಃ ಮನೆ ನಂ. 37, ಎಸ್.ವಿ.ಪಿ ಬಡಾವಣೆ ಜಿ.ಡಿ.ಎ ಲೇಔಟ ಸಂತ್ರಾಸವಾಡಿ ಗುಲಬರ್ಗಾ ದಿನಾಂಕಃ 08/08/2014 ರಂದು
ಶುಕ್ರವಾರ ಮದ್ಯಾನ್ಹ ಪ್ರಾರ್ಥನೆ ಮುಗಿಸಿಕೊಂಡು ತಮ್ಮ ಮನೆಯಿಂದ
ಕಛೇರಿಗೆ ತೆರಳುವಾಗ ಮನೆಯ ಮುಂದೆ ಸುಮಾರು ಮದ್ಯಾನ್ಹ 03 ಗಂಟೆಗೆ ನನ್ನ ಕಛೇರಿಯ
ತಹಸೀಲ್ದಾರರು ಆಗಿರುವ ಶ್ರೀ ಸುರೇಶ ಅಂಕಲಗಿ ಇವರು ತನ್ನ ಮೊಬೈಲ್ ಸಂಖ್ಯೆ 9901112994 ರಿಂದ ನನಗೆ
ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ ಕರೆ ಮಾಡಿದ್ದು ಮಿಸ್ ಕಾಲ್ ನೋಡಿ ತಕ್ಷಣ
ನಾನು ಅವರಿಗೆ ಪುನಃ ಮೊಬೈಲ್ ಮೇಲೆ ಸಂಪರ್ಕಿಸಿದ್ದು ಅವರು ನನಗೆ ತಿಳಿಸಿದ್ದೇನೆಂದರೇ, ನಿಮಗೆ
ಲೋಕಾಯುಕ್ತಾ ಎಸ್.ಪಿ ಸಾಹೇಬರು ತಕ್ಷಣ ಮೊಬೈಲ್ ಸಂಖ್ಯೆ 9731624416 ರ ಮೇಲೆ ಮಾತನಾಡಲು
ತಿಳಿಸಿರುತ್ತಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಖಮರುಲ್ ಇಸ್ಲಾಂ ಮಾನ್ಯ ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶ್ರೀ ಜಾಕಿರ ಇವರು ಸಹ ತಮ್ಮ ಮೊಬೈಲ್
ಸಂಖ್ಯೆ 9886693931 ರಿಂದ ನನ್ನ
ಸದರಿ ಮೊಬೈಲಗೆ ಫೋನ್ ಮಾಡಿ ಇದೇ ವಿಷಯ ತಿಳಿಸಿದರು. ಆಗ ನಾನು ನನ್ನ ಸದರಿ ಮೊಬೈಲನಿಂದ ತಕ್ಷಣ
ಮೊಬೈಲ್ ಸಂಖ್ಯೆ 9731624416 ಕ್ಕೆ ಫೋನ್ ಮಾಡಿರುತ್ತೇನೆ. ಆಗ ಸದರಿ ಫೋನಿನ ಮೇಲೆ ಆದ
ಸಂಭಾಷಣೆ ಏನೆಂದರೇ, ನಾನು ಎಸ್.ಪಿ ಲೋಕಾಯುಕ್ತ ಗುಲಬರ್ಗಾ ರವರಾದ ಚಿಪ್ಪಾರ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದಾಗ
ಸಾಹೇಬರೆ ನಾನು ನಿಮ್ಮ ಕಛೇರಿಗೆ ಬಂದು ಹಾಜರಾಗುತ್ತೇನೆಂದು ಹೇಳಿದೆ. ಆಗ ಅವರು ನನ್ನ ಕಛೇರಿಗೆ
ಬರುವುದು ಬೇಡ ಇಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ ಅಲ್ಲದೇ ಈಗ ನಮ್ಮ ಕಛೇರಿಗೆ ಅಡ್ವಕೇಟ್
ಜನರಲ್ ಬಂದಿದ್ದಾರೆ. ಈಗ ನನಗೆ ಫೋನ್ ಮಾಡಲಿಕ್ಕೆ ಸುರೇಶ ಹೇಳಿದ್ದಾರೆ ಅಥವಾ ಜಾಕಿರ ಅವರು
ಹೇಳಿದ್ದಾರೆ? ಎಂದು ಕೇಳಿದರು. ಆಗ ಸದರಿ ಇಬ್ಬರೂ ಕೂಡ ನಿಮ್ಮನ್ನು ಫೋನಿನ ಮೇಲೆ ಸಂಪರ್ಕಿಸಲು
ತಿಳಿಸಿದ್ದಾರೆಂದು ನಾನು ಹೇಳಿದೆ. ಆದಾದ ಮೇಲೆ ಅವರು ಹೇಳಿದ್ದೇನೆಂದರೇ, ನೋಡಿ ನಾನು
ಎಸ್.ಪಿ ಲೋಕಾಯುಕ್ತ ರಾಯಚೂರ ಇದ್ದೇನೆ ಹಾಗು ಗುಲಬರ್ಗಾಕ್ಕೆ ಇಂಚಾರ್ಜ ಇದ್ದೇನೆ. ದಿನಾಂಕಃ 16/07/2014 ರಂದು ನಿಮ್ಮ
ಮನೆಯ ಮೇಲೆ ಲೋಕಾಯುಕ್ತ ರವರಿಂದ ರೇಡ್ ಆಗಿದ್ದು ಅದರಲ್ಲಿ ನಿಮಗೆ ನಾನು ಸಹಾಯ ಮಾಡಬೇಕೆಂದು
ಬಯಸಿದ್ದೇನೆ. ಆದರೆ ಈ ವಿಷಯ ನೀವು ಯಾರೂ ಮುಂದೆ ಬಹಿರಂಗ ಪಡಿಸಬಾರದು ಇದು ನಿಮಗೆ ಮತ್ತು ನನಗೆ
ಇಬ್ಬರಿಗೆ ಗೊತ್ತಿರಬೇಕು. ಅಲ್ಲದೇ ನಿಮ್ಮ ಆರ್.ಸಿ. ಬಿಸ್ವಾಸ್ ಸಾಹೇಬರು ಕೂಡ ನಿಮಗೆ ಸಸ್ಪೆಂಡ್
ಮಾಡಲು ನಿಮ್ಮ ವಿರುದ್ದ ಕೂಡಲೇ ರಿಪೋರ್ಟ ಕೊಡಲು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಒಂದಿಲ್ಲ
ಒಂದು ನೆಪ ಹೇಳಿ ಮುಂದಕ್ಕೆ ಹಾಕುತ್ತಿದ್ದೇನೆ. ಒಂದು ವೇಳೆ ಅವರು ನಿಮಗೆ ಸಸ್ಪೆಂಡ್ ಮಾಡಿದ
ಕೂಡಲೇ ನಾವು ನಿಮ್ಮನ್ನು ಅರೆಸ್ಟ್ ಮಾಡುವುದು ಅನಿವಾರ್ಯವಾಗುತ್ತದೆ. ಈ ಬಗ್ಗೆ ನೀವು ನನಗೆ ನಾಳೆ
ಬೆಳಗ್ಗೆ 09:00 ಗಂಟೆಗೆ ಫೋನ್ ಮಾಡಿ ಎಂದು ತಿಳಿಸಿದರು. ದಿನಾಂಕಃ 09/08/2014 ರಂದು
ಬೆಳಗ್ಗೆ ಸುಮಾರು 09:40 ಗಂಟೆಗೆ ನಾನು ಸದರಿ ನನ್ನ ಮನೆಯಲ್ಲಿದ್ದಾಗ ಪುನಃ ಇದೇ ಮೊಬೈಲ್ ಸಂಖ್ಯೆ 9731624416 ರಿಂದ ನನಗೆ
ನನ್ನ ಮೊಬೈಲ್ ಸಂಖ್ಯೆ 9008119394 ನೇದ್ದಕ್ಕೆ 02 ಸಲ ಕರೆ ಬಂದಿದ್ದು ನಾನು
ಫೋನ್ ಲಿಫ್ಟ್ ಮಾಡಲಿಲ್ಲಾ. ನಂತರ ನಾನೇ ವಿಷಯ ತಿಳಿದುಕೊಳ್ಳಲು ಸದರಿಯವರಿಗೆ ಕರೆ ಮಾಡಿದಾಗ ಅವರು
ಹೇಳಿದ್ದೇನೆಂದರೇ, ನೋಡಿ ನಿಸಾರ ಅಹ್ಮದ ರವರೆ ನಿಮ್ಮ ಬಗ್ಗೆ ನಾನು ಎಲ್ಲಾ ರೀತಿಯ ವ್ಯವಸ್ಥೆ
ಮಾಡಿಕೊಂಡಿದ್ದೇನೆ ನಮ್ಮ ಲೋಕಾಯುಕ್ತ ಇಲಾಖೆಯಲ್ಲಿ ಎ, ಬಿ ಮತ್ತು ಸಿ ರಿಪೋರ್ಟ
ಮಾಡುವುದು ಇರುತ್ತದೆ. ಆದರೆ ನಿಮ್ಮ ಬಗ್ಗೆ ಸಿ ರಿಪೋರ್ಟ ಹಾಕುವ ಬಗ್ಗೆ ಫೈಲ್ ರೆಡಿ
ಮಾಡಿಕೊಂಡಿದ್ದೇನೆ. ಇದು ಬೆಂಗಳೂರ ಲೋಕಾಯುಕ್ತ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ
ಅಧಿಕಾರಿಗಳಾದ ಶ್ರೀ ರಿಯಾಜ್ ಸಾಹೇಬ ಅವರ ಕೈಯಲ್ಲಿ ಇರುತ್ತದೆ. ನಾನು ಅವರಿಗೂ ಸಹ ಎಲ್ಲಾ
ರೀತಿಯಿಂದ ಹೇಳಿಕೊಂಡಿದ್ದೇನೆ. ಸೋಮವಾರ ನಿಮ್ಮ ಫೈಲ್ ಅವರ ಟೇಬಲಿಗೆ ಹೋಗುವ ಹಾಗೆ ಮಾಡಿದ್ದೇನೆ.
ಈಗ ನಮ್ಮ ರಿಯಾಜ್ ಸಾಹೇಬ ರವರ ಮಗಳ ಮದುವೆ ರವಿವಾರ ಇದೆ. ಇದಕ್ಕೆ ನೀವು ವ್ಯವಸ್ಥೆ
ಮಾಡಬೇಕಾಗುತ್ತದೆ ಎಂದು ಹೇಳಿದರು. ಆಗ ನಾನು ಸರ್ ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದು
ಪುನಃ ಕೇಳಿದೆ. ಆಗ ಅವರು ಮತ್ತೆ ಇದೇ ರೀತಿ ಈ ಮೇಲಿನಂತೆ ಹೇಳುತ್ತಾ ನೀವು ನಮಗೆ ವ್ಯವಸ್ಥೆ
ಮಾಡಬೇಕಾಗುತ್ತದೆ ಎಂದು ಹೇಳುತ್ತಿರುವಾಗ ನನಗೆ ಯಾವುದೇ ರೀತಿಯ ಅರ್ಥ ಆಗದೇ ಇರುವುದರಿಂದ ನಾನು
ಫೋನ್ ಕಾಲನ್ನು ಕಟ್ ಮಾಡಿರುತ್ತೇನೆ. ಸದರಿಯವರೊಂದಿಗೆ ಈ 02 ದಿನಗಳ ಮೊಬೈಲ್
ಸಂಭಾಷಣೆಯಲ್ಲಿ ನಾನು ಯಾವುದೇ ರೀತಿಯ ಆಸೆ ಆಮೇಷಕ್ಕೆ ಒಳಗಾಗದೇ ಅವರೊಂದಿಗೆ ಯಾವುದೇ ವಾಗ್ದಾನ
(ಕರಾರು) ಮಾಡಿರುವುದಿಲ್ಲಾ. ಮೊದಲನೇ ದಿನವೇ ಅವರು ಶ್ರೀ ಸುರೇಶ ತಹಸಿಲ್ದಾರ, ಪ್ರಾದೇಶಿಕ
ಆಯುಕ್ತರ ಕಛೇರಿ ಗುಲಬರ್ಗಾ ಹಾಗು ಶ್ರೀ ಜಾಕಿರ (ಮಾನ್ಯ ಸಚಿವರ ಆಪ್ತ ಸಹಾಯಕರು) ನಂತರ
ನನ್ನೊಂದಿಗೆ ಈ ರೀತಿ ಸರಳವಾಗಿ ಫೋನಿನ ಮೇಲೆ ಮಾತನಾಡುತ್ತಿರುವುದನ್ನು ಗಮನಿಸಿದರೇ ಒಬ್ಬ ಹಿರಿಯ
ಪೊಲೀಸ್ ಅಧಿಕಾರಿಗಳು ಈ ಮಟ್ಟಕ್ಕೆ ಇಳಿದು ಎಲ್ಲರೊಂದಿಗೆ ಫೋನ್ ಮಾಡಿ ನನಗೆ ಸಹಾಯ
ಮಾಡುತ್ತೇನೆಂದು ಹೇಳುತ್ತಿರುವುದು ನನಗೆ ನಂಬಿಕೆ ಆಗಿರುವುದಿಲ್ಲಾ. ಆದಾದ ಮೇಲೆ 02 ನೇ ದಿನವೂ
ಸಹ ಅವರು ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿ ತಮ್ಮ ಬೇಡಿಕೆ ನನ್ನ ಮುಂದೆ ಇಟ್ಟಿದ ಮೇಲೆ ಇದು
ಖೊಟ್ಟಿ (ಬೋಗಸ್) ಫೋನ್ ಎಂದು ಮನವರಿಕೆ ಆದ ಕೂಡಲೇ ನಾನು ಅವರೊಂದಿಗೆ ಮೊಬೈಲ್ ಮೇಲೆ
ಮಾತನಾಡುವುದು ಕೂಡಲೇ ನಿಲ್ಲಿಸಿರುತ್ತೇನೆ. ನಂತರ ಲೋಕಾಯುಕ್ತ ಕಛೇರಿ ಗುಲಬರ್ಗಾಕ್ಕೆ ತೆರಳಿ
ಮಾನ್ಯ ಎಸ್.ಪಿ ಸಾಹೇಬರ ಮೊಬೈಲ್ ಫೋನ್ 9731624416 ಹೌದು / ಅಲ್ಲಾ ಎಂಬ
ಬಗ್ಗೆ ಖಚಿತ ಪಡಿಸಿಕೊಂಡು ಇದು ನಿಜಕ್ಕೂ ಸುಳ್ಳು ಫೋನ್ ಕರೆ ಆಗಿರುತ್ತದೆ
ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ವಿಶ್ವವಿದ್ಯಾಲಯ
ಠಾಣೆ : ಶ್ರೀ ಗಣೇಶ ತಂದೆ ಶಂಕರ ಪವಾರ ಸಾ: ನಂದೂರ ಫೈಲ ತಾಂಡಾ ತಾ:ಜಿ:ಗುಲಬರ್ಗಾ
ಇವರು ದಿನಾಂಕ: 09-08-2014 ರಂದು ಮದ್ಯಾಹ್ನ
1 ಗಂಟೆ ಸುಮಾರಿಗೆ ಇವರ ತಂದೆಯಾದ ಶಂಕರ ತಂದೆ ಭೀಮಲಾ ಪವಾರ ಇವರು ನನ್ನ ಮಗನಾದ ಸುನೀಲ ಇತನಿಗೆ ಮೈಯಲ್ಲಿ
ಆರಾಮವಿಲ್ಲದ ಕಾರಣ ಅವನಿಗೆ ಆಸ್ಪತ್ರೆಗೆ ತೋರಿಸಿಕೊಂಡು ಬರುವ ಕುರಿತು ನಂದೂರ(ಕೆ) ಗ್ರಾಮಕ್ಕೆ ಹೋಗಿದ್ದು.
ನಂತರ 04-15 ಪಿಎಮ ಸುಮಾರಿಗೆ ನನ್ನ ಮಗ ಸುನೀಲ ಇತನು ಪೋನ ಮಾಡಿ
ತಿಳಿಸಿದ್ದೆನೆಂದರೆ ನಾನು ಮತ್ತು ತಾತ ಶಂಕರ ಇಬ್ಬರು ನನಗೆ ಆಸ್ಪತ್ರೆಗೆ ತೋರಿಸುವ ಕುರಿತು ನಡೆಯುತ್ತಾ
ನಂದೂರ(ಕೆ) ಗ್ರಾಮದ ಶಿವಕುಮಾರ ಹಿರೇಗೌಡರ ಇವರ ಮೆಡಿಕಲ್ ಎದುರು ನಡೆಯುತ್ತಾ ಅಂದಾಜು 4
ಪಿಎಮ
ಸುಮಾರಿಗೆ ರಸ್ತೆಯ ಎಡಬದಿಗೆ ಹೊರಟಿದ್ದು. ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಂಟಂ ಚಾಲಕ ತನ್ನ ಟಂಟಂ
ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತ ಬದಿಗೆ ಹೊರಟಿದ್ದ ತಾತ ಶಂಕರ ಇವರಿಗೆ
ಡಿಕ್ಕಿಪಡಿಸಿ ಟಂಟಂ ಅನ್ನು ವೇಗದ ನಿಂಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿ ಬಿಳಿಸಿದನು.
ಇದರಿಂದಾಗಿ ಸದರಿ ಟಂಟಂದಲ್ಲಿದ್ದ ರಾಡಗಳಲ್ಲಿ ಕೆಲವು ರಾಡಗಳು ಶಂಕರನ ಎಡಗಣ್ಣಿಗೆ, ಎಡಗಣ್ಣಿನ ಮೇಲೆ
ಭಾರಿ ರಕ್ತಗಾಯ, ತಲೆಗೆ ರಕ್ತಗಾಯವಾಗುವ ಹಾಗೆ ಚುಚ್ಚಿದ್ದು ಮತ್ತು ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ.
ತಾತ ಶಂಕರ ಇವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬೇಗನೆ ಬನ್ನಿರಿ ಅಂತಾ ಹೇಳಿದಾಗ ನಾನು ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ
ತಂದೆ ಶಂಕರ ಇವರಿಗೆ ಈ ಮೇಲಿನಂತೆ ಭಾರಿ ರಕ್ತಗಾಯ, ಗುಪ್ತಗಾಯವಾಗಿ ಮೃತಪಟ್ಟಿದ್ದು. ಅಪಘಾತ ಪಡಿಸಿದ
ಟಂ.ಟಂ ಸ್ಥಳದಲ್ಲಿ ಪಲ್ಟಿಯಾಗಿ ಬಿದ್ದಿದ್ದು. ಅದರ ನಂಬರ ನೋಡಲು ಕೆಎ-32-ಎ-7230 ಇದ್ದು. ಸದರಿ ಟಂ.ಟಂ
ಚಾಲಕ ಓಡಿ ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಬಸವರಾಜ ಸಾ:
ಅಂಬಿಕಾ ಕಾಂಪ್ಲೆಕ್ಸ ಲಾಲಗೇರಿ ಕ್ರಾಸ್ ಹತ್ತಿರ
ಗುಲಬರ್ಗಾ ಇವರು. ದಿನಾಂಕ 09-08-2014 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ
ಲಾಲಗೇರಿ ಪಕ್ಕದಲ್ಲಿರುವ ಅರವಿಂದ ಮೇಡಿಕಲ ಸ್ಟೋರ ಎದುರಿನ ರೋಡ ಪಕ್ಕದಲ್ಲಿ ನಾನು ಮತ್ತು ಜಗದೀಪ
ಹಾಗು ದತ್ತಾತ್ರೇಯ ಮೂರು ಜನರು ನಿಂತು ಮಾತನಾಡುತ್ತಿರುವಾಗ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ
ನಂಬರ ಕೆಎ-32 ಎಕ್ಸ-7446 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ಮೋ/ಸೈಕಲ ಸಮೇತ
ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment