ಹಲ್ಲೆ
ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ತಾನಾಜಿ ತಂದೆ ಗೋಪಾಲ ರಾಠೋಡ ಸಾ: ಗೋಗಿ[ಕೆ] ತಾಂಡಾ ತಾ:ಜಿ: ಗುಲಬರ್ಗಾ ಇವರು ದಿನಾಂಕ: 09-08-2014 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಮ್ಮ ತಾಂಡಾದ ತಿರುಪತಿ ಬಾಲಾಜಿ ದೇವರ ಗುಡಿಯಲ್ಲಿ ನಮ್ಮ ತಾಂಡಾದವರೆಲ್ಲರೂ ಕೂಡಿಕೊಂಡು
ದೇವರ ಖಾಂಡ ಮಾಡಿ ಭಜನೆ ಮಾಡುತ್ತಿದ್ದರು. ಎಲ್ಲರಂತೆ ನಾನು ಬಾಲಾಜಿ ದೇವಸ್ಥಾನದ ಹೊರಗಡೆ ಖುಲ್ಲಾ ಜಾಗದಲ್ಲಿ ಕುಳಿತುಕೊಂಡು ಭಜನೆ ಕೇಳುತ್ತಿದ್ದೇನು. ನಂತರ ಎಲ್ಲರಂತೆ ನಾನು ಭಜನೆ ಮಾಡುವವರಿಗೆ ಆಹೇರಿ ಮಾಡಲು ಹಣ ಮಾಡಲು ಎದ್ದು ಹೋಗುವಾಗ ನಮ್ಮ ತಾಂಡಾದ ಗೋಮು ತಂದೆ ಠಾಕರು ರಾಠೋಡ ಈತನು ನನಗೆ ನಡೆಯುವಾಗ ಅಡ್ಡಗಾಲು ಹಾಕಿದ್ದು, ಆಗ ನಾನು ಆಯತಪ್ಪಿ ನೆಲದ ಮೇಲೆ ಬಿದ್ದಿದ್ದು, ನಂತರ ಎದ್ದು ಗೋಮು ರಾಠೋಡ ಈತನಿಗೆ ಯಾಕೆ ನನಗೆ ನೀನು ಅಡ್ಡಗಾಲು ಹಾಕಿದ್ದೀ ಅಂತಾ ಕೇಳಿದ್ದು, ಆಗ ಗೇಮು ಈತನು ರಂಡಿ ಮಗನೇ ತಾನ್ಯಾ ನೀನೇ ನನ್ನ ಕಾಲು ತುಳಿದು ನನಗೆ ಎದುರು ಮಾತನಾಡುತ್ತೀ ಅಂತಾ ಅವಾಚ್ಯ ಶಬ್ದ್ಗಳಿಂದ ಬೈಯ್ಯುತ್ತಾ, 1. ಗೋಮು ತಂದೆ ಠಾಕರು ರಾಠೋಡ 2. ಭೀಮು ತಂದೆ ಠಾಕರು ರಾಠೋಡ 3. ಗೋಪಾಲ ತಂದೆ ಠಾಕರು ರಾಠೋಡ 4. ವಿಠಲ ತಂದೆ ಠಾಕರು ರಾಠೋಡ 5. ಮಾರುತಿ ತಂದೆ ಮನ್ನು ರಾಠೋಡ 6. ಏಮನ ತಂದೆ ಮನ್ನು ರಾಠೋಡ
7. ಅರವಿಂದ ತಂದೆ ಮನ್ನು ರಾಠೋಡ 8. ರಮೇಶ ತಂದೆ ವಿಠಲ ರಾಠೋಡ 9. ಕೃಷ್ಣಿಬಾಯಿ ಗಂಡ ವಿಠಲ ರಾಠೋಡ ಮತ್ತು 10. ಹೀರಿಬಾಯಿ ಗಂಡ ಗೋಪಾಲ ರಾಠೋಡ ಸಾ: ಎಲ್ಲರೂ ಗೋಗಿ[ಕೆ] ತಾಂಡಾ ತಾ;ಜಿ: ಗುಲಬರ್ಗಾ ಇವರುಗಳು ಕೂಡಿಕೊಂಡು ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದವರೆ ಬಾಲಾಜಿ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಈಗ ತಾಂಡಾದಲ್ಲಿಯೂ ನಮ್ಮೊಂದಿಗೆ ತಕರಾರು ಮಾಡುತ್ತಿದ್ದೀಯಾ ಇವತ್ತು ನಿನಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಬಡಿಗೆಯಿಂದ ನನ್ನ ತೆಲೆಯ ಮೇಲೆ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಲ್ಲಪ್ಪ ಪೂಜಾರಿ ಸಾ||
ಕುದಮುಡ, ತಾ|| ಆಳಂದ ಇವರು ಮತ್ತು ಆತನ ಮಾವನಾದ ಭರತ ತಂದೆ ಬೀರಪ್ಪ ಇಬ್ಬರೂ ಸೇರಿ ದಿನಾಂಕ
09/08/2014
ರಂದು ತಮ್ಮೂರಿನಿಂದ ತನ್ನ ಹೊಸ ಹಿರೋ
ಹೊಂಡಾ ಮೋಟಾರ ಸೈಕಲ ಅದಕ್ಕೆ ಇನ್ನು ನಂಬರ ಬಂದಿರುವದಿಲ್ಲ, ಅದರ ಮೇಲೆ ದಂಗಾಪೂರ ಗ್ರಾಮಕ್ಕೆ ತನ್ನ ಸಣ್ಣಮ್ಮ ನಿಂಗಮ್ಮನ
ಹತ್ತಿರ ಬಂದು ಅವಳನ್ನು ಮಾತನಾಡಿಸಿ ಸಾಯಂಕಾಲ 05.00 ಪಿ.ಎಮ ಕ್ಕೆ ಮರಳಿ ತಮ್ಮೂರಿನ ಕಡೆಗೆ ಹೋರಟಾಗ 05.15 ಪಿ.ಎಮ ಸುಮಾರಿಗೆ ದಂಗಾಪೂರ ಗ್ರಾಮ ದಾಟಿ 1-2
ಕೀ.ಮಿ ದಾಟಿ ಭೂಸನೂರ ಕಡೆಗೆ ಹೊರಟಾಗ
ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ ನಂ. ಕೆ.ಎ 32, ಎಫ – 1307 ನೇದ್ದರ ಚಾಲಕನು ಬಸ್ಸನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು
ಅಪಘಾತಪಡಿಸಿರುತ್ತಾನೆ. ಸದರಿ ಅಪಘಾತದಲ್ಲಿ ಫಿರ್ಯಾದಿಯ ಎರಡು ಕಾಲುಗಳಿಗೆ ಭಾರಿ ರಕ್ತಗಾಯ, ಬಲಗೈಗೆ ಭಾರಿ ರಕ್ತಗಾಯ, ಹಣೆಯ ಮೇಲೆ ತರಚಿದ ಗಾಯ, ಭರತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗಾಲಿಗೆ ಭಾರಿ
ರಕ್ತಗಾಯವಾಗಿರುತ್ತವೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment