ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ: 10-08-14 ರಂದು
9 ಎಎಂದ ಸುಮಾರಿಗೆ ಶ್ರೀ ಪ್ರಶಾಂತ ತಂದೆ ಸಿದ್ದಣ್ಣ ರವರು ಮಗಳಿಗೆ ಟೆಂಗಳಿ ಕ್ರಾಸ ಹತ್ತಿರ ಬಿಟ್ಟು ಬರುತ್ತೇನೆ
ಅಂತ ತನ್ನ ಮೋಟರ ಸೈಕಲ ನಂ. ಕೆಎ 32 ವಾಯಿ 4001 ನೇದ್ದರ ಮೇಲೆ ಕರೆದುಕೊಂಢು ಹೋಗಿ ಮರಳಿ ಟೆಂಗಳಿ
ಕ್ರಾಸ ದಾಟಿ ವೇರ ಹೌಸ ಹತ್ತಿರ ಬರುತ್ತಿರುವಾಗ ಎದರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸ ನಂ. ಕೆಎ-
32 ಎಫ್ 1876 ನೇದ್ದರ ಚಾಲಕ ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನಿಲುವ
ಯಾವ ಸೂಚನೆ ನೀಡದೆ ಒಮ್ಮೆಲ್ಲೆ ಬ್ರೇಕ ಹಾಕಿದ್ದರಿಂದ ಬಸ್ಸಿನ ಹಿಂದೆ ಮೋಟರ ಸೈಕಲ ಬರುತ್ತಿದ ನನ್ನ
ಮಗ ಪ್ರಶಾಂತನಿಗೆ ಬಸ್ಸ ಹತ್ತಿ ಹಣೆಗೆ ಭಾರಿ ರಕ್ತಗಾಯ ತಲೆಗೆ ಎದೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ
ಕಿವಿಯಿಂದ ರಕ್ತ ಬರುತ್ತಿದ್ದು 2 ಕಾಲು ಕೈಗಳಿಗೆ ರಕ್ತಗಾಯವಾಗಿ ಮಾತನಾಡುವ ಸ್ಥಿರಿಯಲ್ಲಿರದೆ ಘಟನೆಯನ್ನು
ನಮ್ಮ ಗ್ರಾಮದ ಯಶವಂತರಾವ ಬೊಮ್ಮ ಹಾಗೂ ಇತರರೂ ನೋಡಿದ್ದು ಘಟನೆ ನಡೆದಾಗ ಇಂದು ದಿನಾಂಕ:
10-08-14 ರಂದು 9-30 ಎಎಂ ಆಗಿರಬಹುದು ಬಸ್ಸ ಚಾಲಕ ತನ್ನ ಬಸ್ಸನ್ನು ಅಲೇ ಬಿಟ್ಟು ಓಡಿ ಹೋಗಿದ್ದು
ಜಿ.ವಿ.ಆರ್ ಅಂಬುಲೇನ್ಸದಲ್ಲಿ ಮಗನಿಗೆ ಉಪಚಾರ ಕುರಿತು ಹಾಕಿಕೊಂಡು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ
ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಶೋಭಾ ಗಂಡ ಸಿದ್ದಣ್ಣಾ ಅಂಕಲಗಿ ಸಾ: ಮಲಕೂಡ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 16-08-2014 ರಂದು 9-00 ಪಿ.ಎಮ್ ಕ್ಕೆ ಶ್ರೀ ಆಶೀಫ ಪಟೇಲ ತಂದೆ ಜಾಫರ ಪಟೇಲ, ಸಾಃ ಕುನ್ನುರ, ತಾಃ ಚಿತ್ತಾಪೂರ ರವರು ಇಸ್ಲಾಮಾಬಾದ ಕಾಲೂನಿಯಲ್ಲಿರುವ ತನ್ನ ಅಣ್ಣನ
ಮನೆಗೆ ಹೋಗಬೇಕೆಂದು ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ 5152 ನೇದ್ದನ್ನು ಚಲಾಯಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಡೆಯಿಂದ ಸೇಡಂ ರಿಂಗ
ರೋಡ ಕಡೆಗೆ ಹೋಗುತ್ತಿದ್ದಾಗ ವನಿತೇಶ ಬಾರ & ರೆಸ್ಟೊರೆಂಟ ಎದರುಗಡೆ ರೋಡಿನ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಮನೋಹರ ಈತನು
ತನ್ನ ಬಸ್ಸನ್ನು ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿ
ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಬಲಗಣ್ಣಿನ ಹುಬ್ಬಿನ ಹತ್ತಿರ, ಬಾಯಿ ಮೇಲತುಟಿ ಸೀಳಿ
ರಕ್ತಗಾಯವಾಗಿದ್ದು ಅಲ್ಲದೇ ಎದೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜಾತಿ ನಿಂನೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಚಿನ ಕುಮಾರ ತಂದೆ ಶ್ರೀಮಂತ ಹೊಟಕರ ಇವರು ವಿಜಯಕುಮಾರ ತಂದೆ
ಮಲ್ಲಿಕಾರ್ಜುನ ಇತನಿಗೆ ಹೋದ ವರ್ಷ ಆತನ ಮನೆಯ ಅಡಚಣೆಗೋಸ್ಕರ ಆತನಿಗೆ 1,40000/-ರೂಗಳು ಸಾಲವಾಗಿ
ಕೊಟ್ಟಿರುತ್ತೇನೆ. ಆತನು ವಾಗ್ದಾನ ಮೂಲಕ ಈ ವರ್ಷ ಜೂನ 10ನೇ ತಾರೀಖಿನಂದು ಕೊಟ್ಟಿರುವ ಹಣವನ್ನು ಮರಳಿ
ಕೊಡುವದಾಗಿ ಮಾತುಕತೆಯಾಗಿರುತ್ತದೆ. ಅದರಂತೆ ಇದೆ ವರ್ಷ ಜೂನ ತಿಂಗಳಿನಲ್ಲಿ ಹಣ ಕೇಳಲು ಹೋದಾಗ ನನಗೆ
1 ತಿಂಗಳ ಕಾಲ ಅವಕಾಶ ಬೇಕೆಂದು ವಿನಂತಿಸಿಕೊಂಡಿರುತ್ತಾನೆ. ಅದೆ ರೀತಿ 100/-ರೂ ಸ್ಟಾಂಪ ಮೇಲೆ ಬರೆದುಕೊಟ್ಟಿರುತ್ತಾನೆ.
ಮತ್ತು ಅದನ್ನು ನೋಟರಿ ಮಾಡಿಸಿರುತ್ತೇನೆ ಆ ಸಾಲದ ಪತ್ರದ ಪ್ರಕಾರ ಜುಲೈ ತಿಂಗಳಿನಲ್ಲಿ ಕೊಡುತ್ತೇನೆಂದು
ಬರೆದುಕೊಟ್ಟಿರುತ್ತಾನೆ. ಅದರಂತೆ ನಾನು ಮತ್ತು ನನ್ನ ಗೆಳೆಯ ಅನಿಲ ಕೂಡಿಕೊಂಡು ಸದರಿ ಸಾಲದ ವಿಚಾರಕ್ಕಾಗಿ
ಅವರ ಮನೆಗೆ ದಿನಾಂಕ:25/06/2014 ರಂದು 7.30 ಪಿಎಂಕ್ಕೆ ಕೂಡಿಕೊಂಡು ಸದರಿ ಸಾಲದ ವಿಚಾರಕ್ಕಾಗಿ ಅವರ
ಮನೆಗೆ ಹೋಗಿರುತ್ತೇವೆ. ಮತ್ತು ಕರಾರು ಪತ್ರ ಅನುಸಾರ ಅವರು ಚಕ ಕೊಡುತ್ತೇವೆ ಅಂತಾ ಬರೆದುಕೊಟ್ಟಿರುತ್ತಾರೆ.
ಅದನ್ನು ಕೇಳಿದಾಗ ವಿಜಯಕುಮಾರ ತಂದೆ ಮಲ್ಲಿಕಾರ್ಜುನ ಹಾಗೂ ಅವರ ತಾಯಿ ರೇಣುಕಾ ಹಾಗೂ ವಿಜಯಕುಮಾರ ಪಾಟೀಲ
ಇವರೆಲ್ಲರೂ ಕೂಡಿಕೊಂಡು ಸುಮ್ಮನೆ ನಮ್ಮ ಮನೆಗೆ ಯಾಕೆ ಬಂದಿರಿ ಭೋಸಡಿ ಮಕ್ಕಳೆ ನೀವು ಡೋರ ಹಾಗೂ ಲಂಬಾಣಿ
ಸಮಾಜದವರು ಇದ್ದೀರಿ ನೀವು ನಮ್ಮ ಮನೆಗೆ ಬರಬಾರದು
ಅಂತಾ ನಮಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದರು ಅವನ ತಾಯಿ ರೇಣುಕಾ, ಅಳಿಯ ವಿಜಯಕುಮಾರ ಪಾಟೀಲ ಇವರು ಕಟ್ಟಿಗೆ ಕಲ್ಲುಗಳಿಂದ ನನಗೆ ಹಾಗೂ
ನನ್ನ ಗೆಳೆಯ ಅನಿಲಗೆ ಹೊಡೆಬಡೆ ಮಾಡಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ: 17/08/2014 ರಂದು ಬೆಳಗಿನ ಜಾವ ಸುಮಾರು 01:00 ಗಂಟೆಗೆ ಕೆಲವು ಜನರು ಚಿರಾಡುವ ಸಪ್ಪಳ ಕೇಳಿ ನಾನು ಮತ್ತು ಗದಗಯ್ಯಾ ತಂದೆ ಶಾಂತಯ್ಯಾ ಹಿರೇಮಠ ಸಾ : ಮಲ್ಲಾಬಾದ ಹೆಂಡತಿ ಸಿದ್ದಮ್ಮ ಹಾಗೂ ನಮ್ಮ ತಮ್ಮ ಶ್ರೀ ಷ.ಬ್ರ.ರೇವಣಸಿದ್ದ ಶಿವಾಚಾರ್ಯರು ಮತ್ತು ನಮ್ಮ ಅಣ್ಣನ ಮಗ ರೇವಣಸಿದ್ದಯ್ಯ ಹಿರೇಮಠ ಹಾಗೂ ಅವನ ಹೆಂಡತಿ ರಾಜಶ್ರೀ ರವರೆಲ್ಲರು ಕೂಡಿ ಮನೆ ಹೊರಗೆ ಬಂದು ನೋಡಲಾಗಿ ಮಲ್ಲಾಬಾದ ಗ್ರಾಮದ ಸಾಯಬಣ್ಣ ಪೂಜಾರಿ ಸಂಗಡ ಕೆಲವರು ತಮ್ಮ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಂದು ನಮ್ಮ ಮನೆಯ ಕಡೆ ಚಿರಾಡುತ್ತಾ ಬರುತ್ತಿದ್ದರು ಆಗ ನಾವೆಲ್ಲರು ಹೆದರಿಕೊಂಡು ನಮ್ಮ ಕಬ್ಬಿನ ಹೊಲದಲ್ಲಿ ಅಡಗಿಕೊಂಡಿದ್ದೇವು ಎಲ್ಲರು ನಮ್ಮ ಮನೆಯ ಹತ್ತಿರ ಬಂದು ಇವತ್ತು ಈ ಸೂಳಿ ಮಕ್ಕಳಿಗೆ ಜೀವಂತ
ಬಿಡಬಾರದು ಇವರು ಸಿಕ್ಕರೆ ಖಲಾಸ ಮಾಡಿ ಬಿಡೋಣ ಅಂಥ ಅನ್ನುತ್ತಿದ್ದುದ್ದು ನಮಗೆ ಕೆಳಿಸುತ್ತಿತ್ತು ಅವರೆಲ್ಲರು ನಮ್ಮ ಮನೆಯ ಹತ್ತಿರ ನಮ್ಮನ್ನು ಹುಡುಕಾಡಿದ್ದು ನಾವು ಸಿಗದೆ ಇದ್ದ ಕಾರಣ ಸದರಿಯವರೆಲ್ಲರು ನಮ್ಮ ತೋಟದಿಂದ ಹೊದರು ನಮಗು ಮತ್ತು ಆರೋಪಿತರಿಗು ಮದ್ಯ ನಮ್ಮ ಹೊಲದ ವಿಷಯಕ್ಕೆ ಸಂಬಂಧ ತಕರಾರು ಆಗುತ್ತಾ ಬಂದಿದ್ದು ಇರುತ್ತದೆ ಇಂದು ನಮ್ಮನ್ನು ಹೊಡೆಯಲು ಅಕ್ರಮ ಕೂಟ ರಚಿಸಿಕೊಂಡು ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ರಿಮಾಂಡ ಹೋಮನಿಂದ ಪರಾರಿಯಾದ
ಪ್ರಕರಣ :
ಸ್ಟೇಷನ ಬಝಾರ ಠಾಣೆ : ಶ್ರೀ ವಿವೆಕಾನಂದ ತಂದೆ ರಾಮಚಂದ್ರ ಯಾದಗೀರಿ ಉಃ ರಿಮಾಂಡ ಹೋಮನಲ್ಲಿ ಪ್ಯೂನ್ ಕೆಲಸ ಸಾಃ ಖಾದರಿ ಚೌಕ ಆಳಂದ ರೋಡ ಗುಲಬರ್ಗಾ ಇವರು ದಿನಾಂಕ 16-08-2014 ರಂದು 7 ಪಿ.ಎಮ್ ಸುಮಾರಿಗೆ ರಿಮಾಂಡ ಹೋಮನಲ್ಲಿದ್ದ ಹುಡುಗರಿಗೆ ಊಟ ಕೊಡಲು ಹೋದಾಗ ರೀಮಾಂಡ ಹೋಮನಲ್ಲಿದ್ದ 1. ಚಂದ್ರ ತಂದೆ ರಾಮಣ್ಣ,
2. ಅಶೋಕ ತಂದೆ ತಿಮ್ಮಪ್ಪಾ,
3. ಭಿಮರಾಯ ತಂದೆ ಶಿಮಯೋಗಿ,
4. ಪಂಡಿತ ತಂದೆ
ಪ್ರಕಾಶ,
5. ಚಂದ್ರಕಾಂತ ತಂದೆ ಮಲ್ಲಪ್ಪಾ,
6. ಲಕ್ಷ್ಮಿಕಾಂತ ತಂದೆ ಶಿವಶರಣಪ್ಪಾ,
7. ರಾಮಣ್ಣ ತಂದೆ ಬಸವರಾಜ, 8. ಈರಣ್ಣ ತಂದೆ ಶಿವಪೂತ್ರಪ್ಪಾ ಇವರೆಲ್ಲರೂ ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ನನಗೆ ಕಣ್ಣಲ್ಲಿ ಖಾರಪೂಡಿ ಹಾಕಿ ಕೈಯಿಂದ ಎಳೆದಾಡಿ ಚಂದ್ರ ಇವನು ಕಟ್ಟಿಗೆಯಿಂದ ತಲೆಗೆ
ಎರಡು ಎಟು ಹೊಡೆದನು ಉಳಿದವರು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದರು. ಅಶೋಕ ಇವನು ನನ್ನಲ್ಲಿದ್ದ
ಕಿಲಿಗಳು ಮತ್ತು ನನ್ನ ಮೊಬೈಲ ತೆಗೆದುಕೊಂಡು ನನಗೆ 'ಎ ಭೋಸಡಿ ಮಗನೆ ಸದರಿ ವಿಷಯ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ'
ಅಂತಾ ಜೀವದ ಬೆದರಿಕೆ ಹಾಕಿದನು. ರಮೇಶ ಹಾಗು ಬೇರೆ
ಹುಡುಗರಿಗೆ ರೂಮ ಗಳಲ್ಲಿ ಹಾಕಿ ಮೇನ್ ಗೇಟ ಚಾವಿ ತೆಗೆದು ಓಡಿ ಹೋಗಿರುತ್ತಾರೆ. ನಂತರ ರಮೇಶ ಮತ್ತು
ಇತರ ಹುಡುಗರು ಬಂದು ನೋಡಿ ನನಗೆ ರಮೇಶ ಇವನು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment