ಕೊಲೆ
ಪ್ರಕರಣ :
ಕಾಳಗಿ ಠಾಣೆ : ಅರಣಕಲ ಗ್ರಾಮದ
ಸಿಮಾಂತರದಲ್ಲಿ ಹಣಮಂತರಾವ ಕಲ್ಲಾ ಇವರ ಮತ್ತು ಸಿದ್ದಪ್ಪ
ಕಲ್ಲಾ ಇವರ ಹೋಲದ ನಡುವಿನ ಬಾಂದಾರಿಯ ವಿಷಯದಲ್ಲಿ 2-3 ವರ್ಷಗಳಿಂದ ತಕರಾರು ಇದ್ದು ಈ ವಿಷಯದಲ್ಲಿ
15 ದಿವಸಗಳ ಹಿಂದೆ ನಮ್ಮ ತಂದೆ ಹಾಗೂ ದೊಡ್ಡಪ್ಪನ ಮಗನಾದ ಶಶಿಕಾಂತ ಕಲ್ಲಾ ಇವರು ಶಿವಕುಮಾರ
ಬ್ಯಾಲಹಳ್ಳಿ ಇವರ ಹತ್ತಿರ ಹೋಗಿ ಸಿದ್ದಪ್ಪನ ಬಗ್ಗೆ ತಿಳಿಸಿದ್ದು ಶಿವಕುಮಾರ ಬ್ಯಾಲಹಳ್ಳಿ ಇವರು
ಸಿದ್ದಪ್ಪನಿಗೆ ಕರೆಯಿಸಿ ತಿಳುವಳಿಕೆ ನೀಡಿದ್ದು ಇರುತ್ತದೆ. ಆದರೂ ದಿನಾಂಕ 01-08-14
ರಂದು 7-00 ಎ.ಎಂ ಸುಮಾರಿಗೆ ಅರವಿಬ್ಬರ ನಮ್ಮಿಬ್ಬರ ಹೋಲದ ನಡುವಿನ ಬಾಂದಾರಿಯನ್ನು
ಕೆದರುತ್ತಿದ್ದಾಗ ಹಣಮಂತರಾವ. ಶಶಿಕಾಂತ ಕಲ್ಲಾ ಮತ್ತು ಶಿವಮಕುಮಾರ ಬ್ಯಾಲಹಳ್ಳಿ ಕೂಡಿ ನಮ್ಮ
ಹೋಲಕ್ಕೆ ಹೋಗಿ ಸಿದ್ದಪ್ಪನಿಗೆ ಬಾಂದರಿ ಕೆದರುವುದು ಸರಿಯಲ್ಲ ನಿನಗೆ ಅನುಮಾನ ಇದ್ದರೆ ಅಳತೆ
ಮಾಡಿಸಿಕೊ ಅಂತಾ ಹೇಳಿದ್ದೆವು. ಅದಕ್ಕೆ ಸಿದ್ದಪ್ಪ ನಾನ್ಯಾಕೆ ಮಾಡಿಸಿಕೊಳ್ಳಲಿ ನೀವೆ ಮಾಡಿಸಿ
ಕೊಡಿರಿ ಅಂತಾ ಹೇಳಿ ಬಾಂದಾರಿ ಕೆದರ ಹತ್ತಿದ್ದನು ಆಗ ಅವರು ಕಾಂಪ್ಲೆಂಟ ಕೊಟ್ಟು ಬರುತ್ತೆವೆ
ಅಂತಾ ಹೇಳಿ ರೇವಗ್ಗಿ ಪೊಲೀಸ ಠಾಣೆಗೆ ನಮ್ಮ ಪ್ಯಾಷನ ಪ್ರೋ ಸೈಕಲ ಮೋಟರ ನಂ ಕೆ.ಎ 32 ಯು-5021
ನೇದ್ದರ ಮೇಲೆ ಹೋಗಿ ಇಬ್ಬರು ಮರಳಿ ರೇವಗ್ಗಿಯಿಂದ ಅರಣಕಲಗೆ ಬರುತ್ತಿದ್ದಾಗ ಆರೋಪಿತರು ಗ್ರಾಮದ
ಸಮೀಪ ಬೆಡಗು ಮತ್ತು ಕಲ್ಲಿನಿಂದ ತಲೆಗೆ ಹೊಡೆದು
ಭಾರಿ ಗಾಯ ಪಡಿಸಿದ್ದರಿಂದ ಹಣಮಂತರಾವನು ಸ್ಥಳದಲ್ಲೆ ಮೃತ ಪಟ್ಟು ಶಶಿಕಾಂತನು ಆಸ್ಪತ್ರೆಯಲ್ಲಿ
ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀ ಸಿದ್ದಣ್ಣ ತಂದೆ ಹಣಮಂತರಾವ ಕಲ್ಲಾ ಸಾ:
ಅರಣಕಲ ತಾ:ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಆಳಂದ ಠಾಣೆ : ದಿನಾಂಕ:30-07-2014
ರಂದು ರಾತ್ರಿ 10 ಗಂಟೆಗೆ ಶ್ರೀ ಮಹ್ಮದ ನಿಜಾಮೊದ್ದಿನ್ ತಂದೆ ಸಲಾವುದ್ದಿನ್ ಯಾದಗಿರಿ ಸಾ:ಆಳಂದ
ಇವರ ಹೊ ಸರ್ವೆ ನಂ 619/1 ರ ಜಮೀನಿಗೆ ಹತ್ತಿ ಬಂದಾರಿಯ ಇರುವ ಬೇವಿನ ಗೀಡಕ್ಕೆ ಯಾರೋ ಒಬ್ಬ ಅಪರಿಚಿತ ಗಂಡಸು ಊರಲು ಬಿದ್ದು ಹೆಣ
ಜೋತಾಡುತ್ತಿದ್ದು ನೋಡಲಾಗಿ ಸುಮಾರು 30-35 ವರ್ಷದ ಅಪರಿಚಿತ ಗಂಡಸು ಸತ್ತಿದ್ದು ಹೆಣವು ಕೊಳೆತು
ಸೋರುತ್ತಿದ್ದು ನೋಡಿದರೆ ಗುರುತು ಸಿಗುವಂತೆ
ಇರುವುದಿಲ್ಲಾ . ಸದರಿ ಘಟನೆಯು ದಿನಾಂಕ 25,26/07/2014 ಮದ್ಯದ ಅವದಿಯಲ್ಲಿ
ಆಗಿರಬಹುದು ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ. ಈತನ
ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ
ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಂಜುಳ ಗಂಡ ಶರಣಪ್ಪ ದಿನಾಂಕ: 01/08/2014 ರಂದು ಸಾಯಂಕಾಲ 5=40 ಗಂಟೆಗೆ ಫಿರ್ಯಾದಿಯು ತನ್ನ ಗಂಡನು ಚಲಾಯಿಸುತ್ತಿರುವ
ಮೋ/ಸೈಕಲ್ ನಂ: ಕೆಎ 32 ಜೆ 3450 ನೆದ್ದರ ಮೇಲೆ ಹಿಂದುಗಡೆ ಕುಳಿತು ಲಾಲಗೇರಿ ಕ್ರಾಸ್ ದಿಂದ ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ
ಅಗ್ನಿ ಶಾಮಕ ಠಾಣಾ ಎದುರಿನ ರೋಡ ಮೇಲೆ ಹಿಂದಿನಿಂದ ಕಾರ ನಂ: ಕೆಎ 32 ಎನ್ ಅಥವಾ ಎಮ್ 3801 ನೆದ್ದರ ಚಾಲಕನು ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋ/ಸೈಕಲ್ ಹಿಂದೆ ಕುಳಿತಿದ
ಫಿರ್ಯಾದಿಗೆ ಸಾದಾಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ವರದಕ್ಷಣೆ
ಕಿರುಕಳ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ದೂರನಾಗಮ್ಮ
ಗಂಡ ರಾಜಕುಮಾರ ದುರ್ಗೆ ಮು:ಅಂಬಲಗಾ ತಾ:ಆಳಂದ ಇವರನ್ನು ದಿನಾಂಕ 20/05/2009 ರಂದು ನಮ್ಮ ಗ್ರಾಮದ ರಾಜಕುಮಾರ ತಂದೆ ಚಂದ್ರಕಾಂತ ದುರ್ಗೆ
ಇವರೊಂದಿಗೆ ಸಾಂಪ್ರಾದಾಯಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಈಗ ಒಬ್ಬ ಗಂಡು ಮತ್ತು ಒಬ್ಬಳು ಹೆಣ್ಣು
ಮಗಳಿರುತ್ತಾಳೆ ನಮ್ಮ ತಂದೆ ತಾಯಿಗೆ ಕೇವಲ 3 ಜನ ಹೆಣ್ಣು ಮಕ್ಕಳು ಮಾತ್ರ
ಇದ್ದು 3 ಜನರಲ್ಲಿ ಹಿರಿಯ ಅಕ್ಕಳಾದ
ಸುನೀತಾ ಇವರು ಸುಮಾರು 7 ವರ್ಷಗಳ ಹಿಂದೆ ಮೃತ
ಪಟ್ಟಿರುತ್ತಾಳೆ ಅಲ್ಲದೆ ನಮ್ಮ ತಂದೆಯು ಸಹ ಮೃತ
ಪಟ್ಟಿರುತ್ತಾರೆ ನನ್ನ ಮದುವೆಯದ ಸುಮಾರು 2-3 ವರ್ಷಗಳವರೆಗೆ ನನಗೆ ನನ್ನ ಗಂಡ
ಹಾಗೂ ಅತ್ತೆ ಮಾವಂದಿರರು ನನ್ನನ್ನು ಚನ್ನಾಗಿ ನೋಡಿಕೊಂಡು ಇತ್ತಿತಲಾಗಿ ಸುಮಾರು 2 ವರ್ಷ ಗಳಿಂದ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ ಹಾಗೂ
ಅತ್ತೆಯಾದ ಸರಸ್ವತಿ ಇವರುಗಳೂ ಸೇರಿ ನನ್ನ ತಂದೆ ತಾಯಿಯ ಆಸ್ತಿಯನ್ನು ನನ್ನ ಗಂಡನ ಹೆಸರಿಗೆ
ನೊಂದಾಯಿಸಬೇಕು ಮತ್ತು ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಎಂದು ನನ್ನನ್ನು
ಪೀಡಿಸುತ್ತಾ ಮಾನಸಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ದಿನಾಂಕ 31/07/2014 ರಂದು ಸಂಜೆ 6-00 ಗಂಟೆಗೆ ಸುಮಾರಿಗೆ ನಾನು ನನ್ನ
ತಾಯಿಯದ ರಾಚಮ್ಮ ಗಂಡ ಕಲ್ಲಪ್ಪಾ ಗುತ್ತಿ ಹಾಗೂ ಅಕ್ಕಳಾದ ಅನೀತಾ ಗಂಡ ಶೆಶಿಕಾಂತ ಜಮಖಂಡೆ ಮೂರು
ಜನ ಕೂಡಿ ಮನೆಯಮುಂದೆ ಮಾತನಾಡುತ್ತಾ ಕುಳಿತ್ತಿರುವಾಗ ನನ್ನ ಗಂಡ ರಾಜಕುಮಾರ ಮಾವನಾದ ಚಂದ್ರಕಾಂತ
ದುರ್ಗೆ ಹಾಗು ಅತ್ತೆಯಾದ ಸರಸ್ವತಿ ಇವರುಗಳು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನಗೆ ಏ
ಬೋಸಡಿ ಹಾದರಕ್ಕೆ ಹುಟ್ಟಿದವಳು ನಾವು ತವರು ಮನೆಯಿಂದ ಹುಂಡಾ/ ಬಂಗಾರ ತೆಎದುಕೊಂಡು ಬಾ ಎಂದರೆ
ನೀನು ತರದೆ ಇಲ್ಲೆ ಇದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ನನ್ನ ತಾಯಿಗೆ ಹಾಗು ನಮ್ಮ
ಅಕ್ಕಳಿಗೆ ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ರಕ್ತಗಾಯ ಗುಪ್ಪಗಾಯ ಪಡಿಸಿರುತ್ತಾರೆ ಅಂತಾ ಶ್ರೀಮತಿ
ನಾಗಮ್ಮ ಗಂಡ ರಾಜಕುಮಾರ ದುರ್ಗೆ ಸಾ: ಅಂಬಲಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಮಾನ ಮಾಡಿದ ಪ್ರಕರಣ
ಅಫಜಲಪೂರ ಠಾಣೆ : ದಿನಾಂಕ 03-02-2014 ರಂದು 5.30 ಪಿಎಮ್ ಕ್ಕೆ ಗೌರ(ಕೆ) ಗ್ರಾಮದ ಹೊಲ ಸರ್ವೇ ನಂ 140 ನೇದ್ದರ ಹೊಲದ ವಿಷಯದ ಸಂಬಂಧ ಸಂದಿಯಾ ಸುತ್ತಾನ ಎಕ್ಸ ಚೀಫ
ಎನಕ್ಯೂಯರಿ ಆಫೀಸರ ಬೆಂಗಳೂರ ಸಂಗಡ 12 ಜನರು ಕುಡಿಕೊಂಡು ಸರಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ ಶ್ರೀ
ಶಾಹಾನಾಜ ಬೇಗಂ ಗಂಡ ಖಾಜಾ ಮೈನೊದ್ದೀನ ಇವರಿಗೆ ಅವಮಾನ ಮಾಡಿದ ಬಗ್ಗೆ ದೂರು ಸಲ್ಲಿಸಿದ ಸದರಿ ದುರಿನ ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ
:
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಂತೋಷ ತಂದೆ
ವೀರಣ್ಣ ಮಾನ್ವಿಕರ್ ಸಾ : ಹೆರೂರ್ (ಕೆ) ತಾಃ ಚಿತಾಪೂರ್ ಸಾಃ ಸಂತೋಷ್ ಮಲಕರ್ ಮನೆ ಗುಬ್ಬಿ
ಕಾಲೋನಿ, ಹನುಮಾನ್ ಮಂದಿರ್ ಹಿಂದುಗಡೆ ಗುಲಬರ್ಗಾ ಇವರು ದಿನಾಂಕಃ 01-08-2014 ರಂದು ಸಾಯಂಕಾಲ
07.00 ಪಿ.ಎಂ. ಕ್ಕೆ ತನ್ನ ಮನೆಯಿಂದ ನಡೆದುಕೊಂಡು ಹನುಮಾನ ಮಂದಿರ ಪಕ್ಕದ ರಸ್ತೆಯ ಮೇಲೆ
ಹೋಗುತ್ತಿರುವಾಗ, ಫಿರ್ಯದಿದಾರನನ್ನು ನೋಡಿ ಕಾಯುತ್ತಾ ನಿಂತ ತನ್ನ ಹೆಂಡತಿ ಶೈಲಜಾ, ಅತ್ತೆಯಾದ
ಭಾರತೀಬಾಯಿ, ಹಾಗೂ ಭಾರತೀಬಾಯಿ ಇವರ ಮಕ್ಕಳಾದ ಶರಣಪ್ಪ, ಮಲ್ಲಿನಾಥ ಇವರೆಲ್ಲರು ಕೂಡಿ ಬಂದವರೆ
ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆಲ್ಟಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದರಿಂದ
ತಲೆಗೆ ರಕ್ತಗಾಯವಾಗಿದ್ದು, ಮುಖದ ಮೇಲೆ ಗುಪ್ತ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment