ಹುಡುಗ ಕಾಣೆಯಾದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ
ಚಂದ್ರಶಾ ಪೂಜಾರಿ ಸಾಃ ಕೋತನ ಹಿಪ್ಪರಗಾ ತಾಃ ಆಳಂದ ಜಿಲ್ಲಾಃ ಗುಲಬರ್ಗಾ ರವರ ಹಿರಿಯ ಮಗ ಚಂದ್ರಕಾಂತ ಇವರಿಗೆ ಗುಲಬರ್ಗಾದ ಧರಂಸಿಂಗ ಕನ್ನಡ
ಪ್ರಾಥಮಿಕ ಶಾಲೆ ಅಂಬಿಕಾ ನಗರ ಗುಲಬರ್ಗಾದಲ್ಲಿ ಶಾಲೆ ಕಲಿಯಲು ಸೇರಿಕೆ ಮಾಡಿದ್ದು, ಈಗ 6 ನೇ ತರಗತಿಯಲ್ಲಿ
ಓದುತ್ತಿದ್ದಾನೆ ಮತ್ತು ಕರುಣೇಶ್ವರ ನಗರದಲ್ಲಿರುವ ಬಿ.ಸಿ.ಎಮ್ ಹಾಸ್ಟಲದಲ್ಲಿ ಇರುತ್ತಾನೆ. ಹೀಗಿರುವಾಗ
ದಿನಾಂಕ 19/08/2014 ರಂದು ಸಾಯಂಕಾಲ 06:00 ಪಿ.ಎಮ್ ಸುಮಾರಿಗೆ ಧರಂಸಿಂಗ ಶಾಲೆಯ ಶಾಂತಯ್ಯಮಠ ಮುಖ್ಯೋಪಾಧ್ಯಾಯರು
ಇವರು ಫೋನ್ ಮೂಲಕ ತಿಳಿಸಿದ್ದೆನೆಂದರೆ, ನನ್ನ ಮಗ ದಿನಾಂಕ 19/08/2014 ರಂದು 01:15 ಪಿ.ಎಮ್
ಸುಮಾರಿಗೆ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ
ಅಂತಾ ತಿಳಿಸಿದ್ದ, ನಾನು ಮತ್ತು ನಮ್ಮ ಮಾವ ಈರಪ್ಪಾ ಪೂಜಾರಿ ಕೂಡಿ ಶಾಲೆಗೆ
ಬಂದು ಶಾಂತಯ್ಯಮಠ ಇವರಿಗೆ ವಿಚಾರಿಸಿ ಗುಲಬರ್ಗಾ ನಗರದಲ್ಲಿ ಎಲ್ಲಾ ಕಡೆ ತಿರುಗಾಡಿ ವಿಚಾರಿಸಿದರು
ಕೂಡಾ ಸಿಕ್ಕಿರುವುದಿಲ್ಲಾ ನನ್ನ ಮಗ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀಮತಿ ಮರಲಿಂಗಮ್ಮ ಗಂಡ ನಾಗಪ್ಪ ಹೊನ್ನಪ್ಪನೋರ,ಸಾ:
ಕಲಕಂಬಾ ಗ್ರಾಮ, ಇವರ ಗಂಡ ನಾಗಪ್ಪ ಇವರು ದಿನಾಂಕ 23-08-2014 ರಂದು ಬೆಳಿಗ್ಗೆ ಮನೆಯಿಂದ
ಕ್ರುಜರ ಜೀಪ ನಡೆಸಲು ಅಂತಾ ಹೇಳಿ ಹೋಗಿ ರಾತ್ರಿಯಾದರೂ ನನ್ನ ಗಂಡ ಮನೆಗೆ ವಾಪಸ್ಸು ಬಂದಿರಲಿಲ್ಲ.
ರಾತ್ರಿ 11 ಗಂಟೆಯ ಸುಮಾರಿಗೆ ಸೇಡಂ ದಿಂದ ಸವೇರಾ ಹೊಟೆಲ ಮಾಲಿಕ ಯುನುಸ್ ಇವರು ಪೋನ ಮಾಡಿ ನನಗೆ
ತಿಳಿಸಿದ್ದೆನಂದರೆ, ದಿನಾಂಕ 23-08-2014 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಿನ್ನ ಗಂಡ
ನಾಗಪ್ಪ ಈತನು ನಮ್ಮ ಕ್ರುಜರ್ ಜೀಪ ಗುಲ್ಬರ್ಗಾ ದಿಂದ ಪ್ಯಾಸೆಂಜರ್ ಹಾಕಿಕೊಂಡು ಬಂದು ಸೇಡಂ ನ
ಬಸವೇಶ್ವರ ಹೊಟೆಲ ಮುಂದುಗಡೆ ಇರುವ ಟ್ಯಾಕ್ಸಿ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ನಡೆದುಕೊಂಡು ಸೇಡಂ
ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಗುಲ್ಬರ್ಗಾ ಕಡೆಯಿಂದ ಒಂದು ಕ್ರುಜರ್ ಜೀಪ ನಂಬರ
ಕೆಎ-32,ಬಿ-6552 ನೇದ್ದರ ಚಾಲಕ ಪ್ರಶಾಂತ ಇತನು ತನ್ನ ಕ್ರುಜರ್ ಜೀಪನ್ನು ಅತೀ ವೇಗ ಹಾಗು
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ನಾಗಪ್ಪ ಇತನಿಗೆ ಸೇಡಂನ ಐ
ಬಿ. ಎದುರುಗಡೆ ಮುಖ್ಯರಸ್ತೆಯ ಮೇಲೆ ಕ್ರುಜರ್ ಡಿಕ್ಕಿ ಪಡಿಸಿದ್ದರಿಂದ ನಾಗಪ್ಪ ಇತನು ಕೆಳಗೆ
ಬಿದ್ದನು ಆಗ ನಾನು ಮತ್ತು ಸಂಜು ನಾಮದಾರ,
ಕಾಲಜ್ಞಾನಮೂರ್ತಿ ಮತ್ತು ಶರಣಯ್ಯ ಗಣಾಚಾರಿ ಸಾ:ಸೇಡಂ ಎಲ್ಲರೂ ಅಫಘಾತವನ್ನು ನೋಡಿ ಹತ್ತಿರ ಹೋಗಿ
ನೋಡಲಾಗಿ ನಾಗಪ್ಪ ಇತನಿಗೆ ಅಫಘಾತದಲ್ಲಿ ಎಡಗೈ ಮೊಳಕೈಗೆ ರಕ್ತಗಾಯ, ಎಡಗೈ ಭುಜಕ್ಕೆ ಗುಪ್ತಗಾಯ
ಹಾಗು ತರಚಿದ ಗಾಯವಾಗಿದ್ದು ಎಡಗಡೆ ಎದೆಗೆ ಭಾರಿ
ಗುಪ್ತಗಾಯವಾಗಿ ಮೂಗಿನಿಂದ ರಕ್ತಸ್ರಾವ ವಾಗಿದ್ದು ನಾವು ನಾಗಪ್ಪ ಇತನಿಗೆ ಸೇಡಂ ಸರಕಾರಿ
ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡುವಷ್ಟರಲ್ಲಿ ವೈಧ್ಯರು ಪರೀಕ್ಷಿಸಿ ನಾಗಪ್ಪ ಇತನು ಮೃತ
ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು . ಕ್ರುಜರ ಚಾಲಕ ನಾಗಪ್ಪ ಇವರಿಗೆ ಅಫಘಾತ ಪಡಿಸಿದ ನಂತರ
ಕ್ರುಜರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನೀವು ಸೇಡಂ ಸರಕಾರಿ ಆಸ್ಪತ್ರೆಗೆ ಬರ್ರಿ” ಅಂತಾ ತಿಳಸಿದ್ದರಿಂದ ನಾನು ಮತ್ತು ನಮ್ಮ ಅತ್ತೆಯಾದ
ರತ್ನಮ್ಮ ಗಂಡ ಸಾಬಣ್ಣ ಹೊನ್ನಪ್ಪನೋರ ಇಬ್ಬರು ಕೂಡಿ ಸೇಡಂ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ
ನನ್ನ ಗಂಡ ನಾಗಪ್ಪ ಇವರು ಅಫಘಾತದಲ್ಲಿ ಗಾಯ ಹೊಂದಿ ಮೃತ ಪಟ್ಟಿದ್ದು ನಿಜಇರುತ್ತದೆ ಅಂತಾ
ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 22-08-2014 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಶ್ರೀ ತಾರಾಸಿಂಗ @ ಮೋಹನ ತಂದೆ ಶಂಕರ ಚವ್ಹಾಣ ಸಾ: ಪ್ಲಾಟ ನಂ 52 ಸಾಹಿ ಮಂದಿರ ಹಿಂದುಗಡೆ
ಭಾಗ್ಯಲಕ್ಷ್ಮಿ ನಗರ ಗುಲಬರ್ಗಾ ರವರು ತನ್ನ ಮೋ/ಸೈಕಲ್ ನಂ; ಕೆಎ 32 ಜೆ 2563 ನೆದ್ದರ ಮೇಲೆ ಸತೀಶ ಈತನಿಗೆ ಹಿಂದೆ ಕೂಡಿಸಿಕೊಂಡು ಸಿ.ಟಿ ಬಸ್
ನಿಲ್ದಾಣ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿರುವಾಗ ದಾರಿ ಮಧ್ಯದ ಮೈಕ್ರೋಟವಾರ ಹತ್ತಿರ ರೋಡಿನ
ಮೇಲೆ ಮೋ/ಸೈಕಲ್ ನಂ; ಕೆಎ 34 ವಿ 9537 ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲ್
ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ನನ್ನ ಬಲಗಾಲ ಮೊಳಕಾಲ ಕೆಳಗೆ ರಕ್ತ ಗಾಯ , ಬಲಗಾಲ ರಿಸ್ಟ ಹತ್ತಿರ ಭಾರಿ ರಕ್ತಗಾಯ ಹಾಗು ಎಡ ತಲೆಗೆ
ರಕ್ತಗಾಯವಾಗಿರುತ್ತದೆ. ಸತೀಶ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ .ಫಿರ್ಯಾದಿಗೆ
ಗಾಯಗೊಳಿಸಿ ಮೋ/ಸೈಕಲ್ ಅಲ್ಲಿಯೇ ಬಿಟ್ಟು ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ
ಶರಣು ಕುಮಾರ ತಂದೆ ಭೀಮಣ್ಣಾ ಇವರು ದಿನಾಂಕಃ 22/08/2014 ರಂದು ರಾತ್ರಿ 08:30 ಪಿ.ಎಂ. ನನ್ನ
ಡಿ.ಎಲ್ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಎಂದಿನಂತೆ ಕೀಲಿ ಹಾಕೊಮಡು ಮನೆಗೆ ಹೋಗಿದ್ದು ಬೆಳಗ್ಗೆ
ದಿನಾಂಕಃ 23/08/2014 ರಂದು 06:00 ಎ.ಎಂ. ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಆಕಾಶ
ಕ್ಷೌರ ಅಂಗಡಿಯ ಮಾಲಿಕರಾದ ಶ್ರೀಮಂತ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ
ಮೊಬೈಲ್ ಅಂಗಡಿಯ ಬಾಗಿಲು ತೆರೆದಿದೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಕೂಡಲೆ ನಾನು ಮೊಬೈಲ್
ಅಂಗಡಿಗೆ ಬಂದು ನೋಡಲಾಗಿ ಅಂಗಡಿಗೆ ಹಾಕಿದ ಕೀಲಿ ಮುರಿದಿದ್ದು ಅಂಗಡಿಯ ಬಾಗಿಲು ತೆರೆದಿದ್ದು
ಒಳಗಡೆ ಹೋಗಿ ನೋಡಲಾಗಿ ಅಂಗಡಿಯಲ್ಲಿದ್ದ ಮೊಬೈಲಗಳು ಮತ್ತು ಮೋಡಮ ಹಾಗು ನಗದು ಹಣ ಹೀಗೆ ಒಟ್ಟು
22,500/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment