ಅಂತರ ಜಿಲ್ಲಾ ಕಳ್ಳರ ಬಂಧನ :
ಗ್ರಾಮೀಣ ಠಾಣೆ : ದಿನಾಂಕ:-25/05/2014
ರಿಂದ ದಿನಾಂಕ:-16/08/2014 ರ ಅವದಿಯಲ್ಲಿ ಮಹಗಾಂವ ಪೊಲೀಸ ಠಾಣೆ ಮತ್ತು ಕಮಲಾಪುರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ
ಪೊಟೋ ಸ್ಟಡಿಯೋ , ಕಿರಾಣಾ ಅಂಗಡಿ ಮತ್ತು ವೈನಶಾಪಗಳಲ್ಲಿ ಕಳ್ಳತನ ಆಗಿರುವ
ಹಿನ್ನಲೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದು ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾ , ಮಾನ್ಯ
ಅಪರ ಎಸ್.ಪಿ ಸಾಹೇಬರು ಗುಲಬರ್ಗಾ ಮತ್ತು ಎ.ಎಸ್.ಪಿ ಗ್ರಾಮಾಂತರ ಉಪವಿಬಾಗ ಗುಲಬರ್ಗಾ ರವರ
ಮಾರ್ಗದರ್ಶನದಲ್ಲಿ ಮಾನ್ಯ ಶ್ರೀ ಡಿ.ಜಿ. ರಾಜಣ್ಣ ಸಿಪಿಐ ಗ್ರಾಮೀಣ ವೃತ್ತ ಇವರ ನೇತ್ವತ್ವದಲ್ಲಿ
ಶ್ರೀ ಬಾಪುಗೌಡ ಪಿಎಸ್.ಐ ಮಹಾಗಾಂವ ಪೊಲೀಸ ಠಾಣೆ ಮತ್ತು ಶ್ರೀ ಸಿದ್ರಾಮಪ್ಪ ಎ.ಎಸ್.ಐ ಕಮಲಾಪುರ
ಠಾಣೆ ಸಿಬ್ಬಂದಿ ಜನರಾದ ಕೃಷ್ಣಾರೆಡ್ಡಿ, ವೆಂಕಟ ರೆಡ್ಡಿ, ಖತಲಶಾ, ಸೋಮಶೇಖರ, ಮತ್ತು
ದತ್ತಾತ್ರೇಯನ್ನೊಳಗೊಂಡ ತಂಡ ರಚಿಸಿದ್ದು ಸದರಿ ತಂಡವು ನಿನ್ನೆ ದಿನಾಂಕ:-28/08/2014 ರಂದು
ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 1) ಮಾಣಿಕ ತಂದೆ ರಾಮಲು ಸಿಣಗೇರಿ 2) ಬಾಬು ತಂದೆ
ರಮೇಶ ರೆಡ್ಡಿ, 3) ಅಶೋಕ ತಂದೆ ಮಾದುರಾವ ದೋಬಿ ಎಂಬುವರನ್ನು ವಿಚಾರಣೆಗೆ
ಒಳಪಡಿಸಿದ್ದು ಆರೋಪಿತರು ಕಳ್ಳತನ ಮಾಡಿದ 1) ಒಂದು ವಿಡಿಯೋ ಕ್ಯಾಮರಾ 2) ಒಂದು ಕಂಪ್ಯೂಟರ್
ಮಾನಿಟರ್, ಒಂದು ಸಿಪಿಯು 3)
ಎರಡು ನಿಕ್ಕನ ಪೊಟೋ ಕ್ಯಾಮರಾ 4) ಕಿರಾಣಿ ಅಂಗಡಿಯಲ್ಲಿ ಕಳ್ಳತನ ಮಾಡಿದ ಸಿಗರೇಟ 400
ಡಬ್ಬಿಗಳು ಸೇರಿದಂತೆ ಸದರಿ ಆಪಾದಿತರಿಂದ 2,16,000/-ರೂ
ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ
:
ರೋಜಾ ಠಾಣೆ : ಗುಲಬರ್ಗಾ ನಗರದ ನೂರ ಬಾಗ್ ಪ್ರದೇಶದಲ್ಲಿ ಈ ಹಿಂದೆ ಕಲ್ವರ್ಟ
ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ದಿನಾಂಕ: 28/08/2014, 27/08/2014 ಮತ್ತು 28/08/2014 ರಂದು ಭಾರಿ ಮಳೆಯಾಗಿದ್ದರಿಂದ ನೂರ ಬಾಗ ಪ್ರದೇಶದಲ್ಲಿ
ಕಲ್ವರ್ಟ ಪರಿವೀಕ್ಷಣೆ ಮಾಡುವ ಸಮಯದಲ್ಲಿ 3 ದಿವಸದಿಂದ ಭಾರಿ ಮಳೆಯಿಂದ ಪ್ರಭಾವ ಉಂಟಾಗಿರುವ ಪ್ರಯುಕ್ತ
ನೂರಬಾಗ ಬಡಾವಣೆಯಲ್ಲಿ ಮಳೆಯ ನೀರು ಮನೆಗೆ ನುಗ್ಗುವ ಸಂಬವ ಇರುವದನ್ನು ಪರಿಗಣಿಸಿದ ಇಂದು
ದಿನಾಂಕ: 29/08/2014 ರಂದು 11:00 ಎಎಮ್ ಸುಮಾರಿಗೆ ಪಾಲಿಕೆಯ ಸಿಬ್ಬಂದಿಗಳಾದ ಶ್ರೀ ಆರೀಫ ಹುಸೇನ
ಕಿರಿಯ ಅಭಿಯಂತರರು, ಶ್ರೀ ಪೀರಪ್ಪಾ ಪೂಜಾರಿ ನೈರ್ಮಲ್ಯ ನಿರೀಕ್ಷಕರು, ಶ್ರೀ ಎಸ.ಬಿ. ಕಟ್ಟಿಮನಿ ಆಯುಕ್ತರು ಮಹಾನಗರ ಪಾಲಿಕೆ ಗುಲಬರ್ಗಾ ರವರು ಸದರಿ ಸ್ಥಳ
ಪರಿವೀಕ್ಷಣೆ ಮಾಡಲು ಹೋದಾಗ ಸ್ಥಗಿತಗೊಂಡ ಕಲ್ವರ್ಟನ್ನು ಒಡೆದು ನೀರು ಹರಿದು ಹೋಗಲು ಕಲ್ವರ್ಟ
ಒಡೆದಿರುವ ಬಗ್ಗೆ ವಿಚಾರಿಸಿದಾಗ ಬಡಾವಣೆಯ ನಂ.1] ಸೈಯ್ಯದ ಖುಬುಲುಲ್ಲಾ ಹುಸೇನಿ @ ಸಾಜೀದ 2] ಹನ್ನಾ ಪಟೇಲ 3] ಕಮ್ಮು ತಂದೆ ಸೈಯ್ಯದ ಖುಬುಲುಲ್ಲಾ ಹುಸೇನಿ 4] ಅರ್ಶದ ಪಟೇಲ ಈ ನಾಲ್ಕು ಜನ ಪಾಲಿಕೆಯ ಸಿಬ್ಬಂದಿಗಳಿಗೆ ಹಾಗೂ ಆಯುಕ್ತರವರುಗಳಿಗೆ ಅವಾಚ್ಯ
ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೆಲಸದಲ್ಲಿ ಅಡೆತಡೆ ಉಂಟು ಮಾಡಿರುತ್ತಾರೆ. ಅಂತಾ ಶ್ರೀ ಮಹ್ಮದ ಹಾಜಿ
ತಂದೆ ಮಹ್ಮದ ಇಬ್ರಾಹಿಮ ವಲಯ ಆಯುಕ್ತರು ಮಹಾನಗರ ಪಾಲಿಕೆ ಗುಲಬರ್ಗಾ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಮಸಣಪ್ಪ ಪರೀಟ ಸಾ: ಧಂಗಾಪೂರ ಇವರು ಸುಮಾರು 6 ತಿಂಗಳ ಹಿಂದೆ ಬಸವನಗೌಡ ತಂದೆ ಮಲ್ಲಣಗೌಡ ಪಾಟೀಲ @ ನಾಗೂರ ಸಾ: ಧಂಗಾಪೂರ ಇವರ ಆಕಳು ನಮ್ಮ ಹೊಲದಲ್ಲಿ ನುಗ್ಗಿದ
ಬಗ್ಗೆ ವಿಚಾರಿಸಿದ್ದಕ್ಕೆ ಜಗಳವಾಗಿದ್ದು ಅದೇ ದ್ವೇಷ ಕಟ್ಟಿಕೊಂಡು ಸದರಿ ಆರೋಪಿತನು ದಿನಾಂಕ 28-08-2014
ರಂದು ರಾತ್ರಿ 10 ಗಂಟೆಗೆ ಫೀರ್ಯಾದಿ ಹಾಗೂ ಆಕೆಯ ಕೇರಿಯವರು ಶ್ರೀ ಮಲ್ಲಿಕಾರ್ಜುನ ದೇವರ ಗುಡಿಯಲ್ಲಿ ಭಜನೇ
ಮಾಡುತ್ತಿದ್ದಾಗ ಸದರಿ ಆರೋಪಿತನಾದ ಬಸವನಗೌಡ ತಂದೆ ಮಲ್ಲಣಗೌಡ ಪಾಟೀಲ @ ನಾಗೂರ ಇತನು ಫೀರ್ಯಾದಿಗೆ ಏ ರಂಡಿ ನಿನಗೆ ಸೊಕ್ಕು ಬಹಳ
ಬಂದಿದೆ
ಅಂತಾ ಅವಾಚ್ಯ ಶಬ್ದಗಳಿಂದ ಬೈದು
ಸಿದ್ದಣ್ಣ ತಂದೆ ಬಸಣ್ಣ ಆಳಂದ ಇವರ ಹತ್ತಿರ ಇದ್ದ ತಬಲಾ ತಗೆದುಕೊಂಡು ಕುದಲು ಹಿಡಿದು ಜಗ್ಗಾಡಿ
ಫೀರ್ಯಾದಿಯ ತಲೆಯ ಮೇಲೆ ಹೊಡೆದು ಗುಪ್ತ
ಗಾಯ ಮಾಡಿ ಜೀವದ ಬೇದರಿಕೆ
ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಶಾಹೀದ ಕರೀಮಖಾನ ತಂದೆ
ಸರ್ದಾರ ಕರೀಮಖಾನ, ಸಾಃ ಮ. ನಂ. 7-798, ಮಿಜಗುರಿ ನಯಾಮುಲ್ಲಾ ಗುಲಬರ್ಗಾ ರವರ ಮಹಿಂದ್ರಾ
ಸೆಂಟ್ರೊ ಮೋಟಾರ ಸೈಕಲ ಇದ್ದು ದಿನಾಂಕ 29-08-2014 ರಂದು ಬೆಳಗ್ಗೆ ತನ್ನ ಮಗ ಓಯಿಜ ಅಹ್ಮದ ಖಾನ ವಃ 16 ಈತನು ಮನೆಯಿಂದ ಯಾರಿಗೂ ಹೇಳದೆ ಮನೆಯಿಂದ ಹೊಸ ಮಹಿಂದ್ರಾ ಸೆಂಟ್ರೊ ಮೋಟಾರ ಸೈಕಲ ಟ್ಯೂಷನಕ್ಕೆ ತೆಗೆದುಕೊಂಡು ಹೋಗಿ 8-30 ಎ.ಎಮ್ ಕ್ಕೆ ಬಿ.ಬಿ ಕಾಲೇಜ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಿಂದ
ತಾನು ಬಿದ್ದು ಗಾಯ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಳೆ ನೀರಿನಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾದ ಪ್ರಕರಣ :
ಮುಧೋಳ ಠಾಣೆ : ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖಂಡೇರಾಯನಪಲ್ಲಿ ಗ್ರಾಮದ ಸುತ್ತಮುತ್ತಲು
ದಿನಾಂಕ: 28-08-14 ರಂದು 4:30 ಪಿ ಎಮ್ ಸುಮಾರಿಗೆ ಧಾರಕಾರವಾಗಿ ಭಾರಿ ಪ್ರಮಾಣದಲ್ಲಿ ಮಳೆ
ಸುರಿದ ಪರಿಣಾಮ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಪ್ರವಾಹ ಬಂದು ಗ್ರಾಮದಲ್ಲಿ
ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳು ಹಾಗೂ ಹೊಟೇಲಗಳು ಹಾಗೂ ಗ್ರಾಮಸ್ಥರ ಮನೆಗಳಲ್ಲಿ ನೀರು
ಹೋಗಿ ಮನೆಯಲ್ಲಿದ್ದ ದವಸ ದಾನ್ಯಗಳು ಹಾಗೂ ಇನ್ನಿತರ ಬೆಲೆ ಬಾಳುವ ಸಾಮಾನುಗಳು ಮಳೆ ನೀರಿನಿಂದ
ಹಾನಿಗಿಡಾಗಿ ಲುಕಸಾನ ಆಗಿದ್ದು ಇದರ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಮುಧೋಳ ಠಾಣೆಯ
ಸಿಬ್ಬಂದಿಯವರು ಕೂಡಿ ಸದರಿ ಸ್ಥಳಕ್ಕೆ ಬೇಟಿ ಕೊಟ್ಟಿದ್ದು ಹಾಗೂ
ಚಿಂಚೋಳಿ ಉಪ ವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಂಚೋಳಿ ರವರು ಕೂಡ ಬೇಟಿ
ಕೊಟ್ಟಿರುತ್ತಾರೆ. ಮತ್ತು ಕಂದಾಯ ಇಲಾಖೆಯ ಮಾನ್ಯ
ಸಹಾಯಕ ಆಯುಕ್ತರು ಸೇಡಂ ರವರು ಹಾಗೂ ಮಾನ್ಯ ತಹಸೀಲ್ದಾರರೂ ಸೇಡಂ ರವರು ಹಾಗೂ ಅವರ ಸಿಬ್ಬಂದಿಯವರು
ಕೂಡ ಸ್ಥಳಕ್ಕೆ ಆಗಮಿಸಿ ಜನರ ಆಸ್ತಿಗೆ ಹಾಗೂ ಪ್ರಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗದಂತೆ
ಪರಿಹಾರ ಉಪಾಯಗಳನ್ನು ಮಾಡಿ ಸೌರಂಕ್ಷಣೆ ಮಾಡಿದ್ದು ಹಾಗೂ ಸದರಿ ಸ್ಥಳಕ್ಕೆ ಮಾನ್ಯ ಶರಣಪ್ರಕಾಶ
ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಇವರು ಕೂಡ ಸ್ಥಳಕ್ಕೆ ಬೇಟಿ
ನೀಡಿರುತ್ತಾರೆ. ಸದರಿ ಘಟನೆಯಲ್ಲಿ ಒಟ್ಟು 35 ಜನರ ಆಸ್ತಿ ಪಾಸ್ತಿಗೆ ಹಾಗೂ ದವಸ ಧಾನ್ಯಗಳಿಗೆ
ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿರುತ್ತದೆ.
No comments:
Post a Comment