ಕಳವು ಪ್ರಕರಣ :
ಆಳಂದ ಠಾಣೆ :ಶ್ರೀ ಮಹ್ಮದ ಸುಲೇಮಾನ
ತಂದೆ ಅಬ್ದುಲ ರಹೇಮನ ಮುಗುಟ ಸಾ: ಬಾಹರ ಪೇಟೆ ಆಳಂದ ರವರಿಗೆ ಸೇರಿದ ಪಿಕಪ್ ವಾಹನ ಇದ್ದು ಸದರಿ
ವಾಹನವನ್ನು ನನ್ನ ಸ್ವಂತ ಕೆಲಸಕ್ಕಾಗಿ ಹಾಗು ಬಾಡಿಗೆಗಾಗಿ ಹೊಡೆಯುತ್ತೇನೆ. ದಿನಾಂಕ 24/07/2014
ರಂದು ಸಾಹಾಂಕಾಲ 6 ಗಂಟೆಗೆ ಪರಚುಟನ್ ಸಾಮಾನುಗಳನ್ನು (ಕಿರಾಣಿ ಸಾಮಾನುಗಳು) ತರಲು ನಮ್ಮ ಪಿಕಪ್
ವಾಹನ ತಗೆದುಕೊಂಡು ಚಾಲಕನಾದ ಬಸವರಾಜ ತಂದೆ ಯಶ್ವಂತರಾವ ರಾಮಶೇಟ್ಟಿ ಸಂಗೋಳಗಿ ಹಾ:ವ: ಆಳಂದ ಇತನು
ಗುಲಬರ್ಗಾಕ್ಕೆ ಹೋಗಿ ಪರಚುಟನ್ ಟ್ರಾನ್ಸಪೊರ್ಟ ಮಾಲು ತುಂಬಿಕೊಂಡು ಮರಳಿ ಆಳಂದಕ್ಕೆ ರಾತ್ರಿ
ಅದೆ ದಿವಸ 11;45 ಪಿಎಮ್‌ಕ್ಕೆ ಬಂದು ನನ್ನ ಮನೆಯ
ಮುಂದೆ ನಿಲ್ಲಿಸಿ ಸದರಿ ವಾಹನ ಕೀಲಿ ಕೈಯನ್ನು ಕೊಟ್ಟು ಮನೆಗೆ ಹೋಗಿದ್ದು ಇರುತ್ತದೆ. ನಂತರ ಮದ್ಯ
ರಾತ್ರಿಯ ವೇಳೆ ಅಂದರೆ ದಿನಾಂಕ 25/07/2014 ರಂದು 3;30 ಎಎಮ್‌ಕ್ಕೆ ನನ್ನ ತಮ್ಮನು ರಂಮಜಾನ ಶಹರಿ ಮಾಡುವದಕ್ಕಾಗಿ ಎದ್ದು
ಹಲ್ಲು ಉಜ್ಜುತ್ತಾ ಸದರಿ ವಾಹನ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಲಾಗಿ ಪರಚುಟನ್‌ಗೆ ಕಟ್ಟಿದ
ಹಗ್ಗವನ್ನು ತುಂಡಾಗಿದ್ದು ಕಂಡು ನನ್ನ ತಮ್ಮನಾದ ನೀಸಾರ ಅಹ್ಮದ ಬಂದು ನನಗೆ ಹೇಳಿದೆನಂದರೆ
ಯ್ಯಾಕೊ ವಾಹನದ ಹಗ್ಗ ಕಡಿದ ಹಾಗೆ ಕಾನುತ್ತಿದೆ ಬರಲು ಹೇಳಿದ ಮೇರೆಗೆ ನಾನು ಹೋಗಿ ನೋಡಲಾಗಿ ಸದರಿ
ಪಿಕ್‌ಪ್ ವಾಹನದಲ್ಲಿ ಇದ್ದ ಪಾರಚುಟನ್ ಸಾಮಾನುಗಳಿಗೆ ತಾಡ ಪತ್ರಿಗೆ ಹಗ್ಗ ಹಾಕಿ ಕಟ್ಟಿದ್ದು
ಕಟ್ಟಿದ ಹಗ್ಗವನ್ನು ಕತ್ತರಿಸಿ ತಾಡ ಪತ್ರಿಯನ್ನು ಹರಿದು ಅದರ ಒಳಗಡೆ ಇದ್ದ ಪರಚುಟನ್
ಸಾಮಾನುಗಳು ಯ್ಯಾರೋ ಕಳ್ಳರು ರಾತ್ರಿ 2:30 ರಿಂದ 3:30 ರ ಒಳಗಡೆ ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅವುಗಳ ಅ.ಕಿ. 1,20,846/- ರೂ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾತ್ಮಾ ಬಸವೇಶ್ವರ
ನಗರ ಠಾಣೆ : ಶ್ರೀ ಜಿತೇಂದ್ರ
ತಂದೆ ಜಗನ್ನಾಥ ಕಾಂಬಳೆ ಸಾಃ ಬಾಚಪಳ್ಳಿ ತಾಃ ಔರಾದ ಜಿಃ ಬೀದರ ಜಯನಗರ ಗುಲಬರ್ಗಾ ರವರು ದಿನಾಂಕಃ
04/08/2014 ರಂದು 01:30 ಪಿ.ಎಂ. ಸುಮಾರಿಗೆ ಎಣ್ಣೆ ತರಲು ಜಯನಗರ ಕ್ರಾಸ್ ಎದರುಗಡೆ ಇರುವ ಕಿರಾಣಿ
ಅಂಗಡಿಗೆ ಹೋಗಬೇಕೆಂದು ಜಯನಗರ ಕ್ರಾಸ್ ಹತ್ತಿರ ನಿಂತಾಗ ಅದೇ ವೇಳೆಗೆ ಸೇಡಂ ಕಡೆಯಿಂದ ಮೋಟಾರ
ಸೈಕಲ ನಂ. ಕೆ.ಎ 36 ಎಸ್ 7555 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು
ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಬಲಗಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಗಾಲಿಗೆ
ಭಾರಿ ಒಳಪೆಟ್ಟಾಗಿದ್ದು, ಕೆಳತುಟಿ ಹರಿದು ರಕ್ತ ಬರುತ್ತಿತ್ತು ಮತ್ತು ಬಲಗೈ ಮೊಳಕೈ ಹತ್ತಿರ
ಮತ್ತು ಬಲಗಾಲಿನ ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ
ವಾಹನ ಕಳವು ಪ್ರಕರಣ :
ಸ್ಟೇಷನ ಬಝಾರ ಠಾಣೆ : ಶ್ರೀ ಸಂಗಮನಾಥ ತಂದೆ ದತ್ತಪ್ಪಾ ಕಣ್ಣಿ ಸಾಃ ಚೌಡೆಶ್ವರ ಕಾಲೋನಿ
ಬ್ರಹ್ಮಪೂರ ಗುಲಬರ್ಗಾ ಇವರು ದಿನಾಂಕ 06-07-2014 ರಂದು 4 ಪಿ.ಎಮ್ ಸುಮಾರಿಗೆ ರೈಲ್ವೆ
ಸ್ಟೇಷನ ಹತ್ತಿರ ಇರುವ ಜನತಾ ರಿಫ್ರೆಶಮೆಂಟ ಹೊಟೇಲ್ ಮುಂದೆ ತನ್ನ ಟಿ.ವಿ.ಎಸ್ ಸ್ಕೂಟಿ ನಂ. ಕೆಎ 32 ಎಲ್ 9751 ಸಿಲ್ವರ ಕಲರ ಅ.ಕಿ 15000/- ನೇದ್ದನ್ನು
ಕೀಲಿ ಹಾಕಿ ನಿಲ್ಲಿಸಿ ಹೊಟೇಲ್ ದಲ್ಲಿ ಹೋಗಿ ನಾಷ್ಟಾ ಮಾಡಿ
ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಸ್ಕೂಟಿ ಕಳ್ಳತನ ಮಾಡಿಕೊಂಡು ಹೋಗಿದ್ದು
ಇಂದಿನ ವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಅದರ ಇಂಜಿನ ನಂ.K803HM898486, ಚೆಸ್ಸಿ ನಂ.KO3HF912776 ಇರುತ್ತದೆ. ಅಂಥಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment