Police Bhavan Kalaburagi

Police Bhavan Kalaburagi

Friday, August 1, 2014

Koppal District Crimes



ªÀÄĤgÁ¨ÁzÀ  ¥Éǰøï oÁuÉ UÀÄ£Éß £ÀA§gÀ 145/2014 PÀ®0 279, 338  L¦¹
ದಿನಾಂಕ. 30-07-2014 ರಂದು 10-45 ಪಿ.ಎಂ.ಕ್ಕೆ ಫಿರ್ಯಾದಿದಾರರ ತಂದೆಯಾದ ವೆಂಕಟೇಶ್ವರಗೌಡ ಇವರು ತಮ್ಮ ಮೋ.ಸೈ. ನಂ. ಕೆ.ಎ.34/ವಿ.9913 ನೇದ್ದರಲ್ಲಿ  ಹಿಟ್ನಾಳ ಕ್ರಾಸ್ ದಿಂದ ಹೊಸಪೇಟೆಗೆ ಬರುವಾಗ ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲೆ ಶ್ರೀನಿವಾಸ ಡಾಬಾದ ಹತ್ತಿರ ಮೋ.ಸೈ.ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ಡಾಗಿ ಮೋ.ಸೈ. ಸಮೇತ ಬಿದ್ದು ತಲೆಗೆ, ಗದ್ದಕ್ಕೆ ಎದೆಗೆ ಭಾರಿ ಗಾಯ ಪೆಟ್ಟುಗಳಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
¸ÀÀAZÁj ¥Éưøï oÁuÉ, UÀAUÁªÀw  ಗುನ್ನೆ ನಂ 24/2014 ಕಲಂ 279 ಐಪಿಸಿ 187 ಐಎಮ್.ವಿ ಆಕ್ಟ
ದಿನಾಂಕ 31-07-2014 ರಂದು ರಾತ್ರಿ 20-00 ಗಂಟೆ ಸುಮಾರಿಗೆ  ಪಿರ್ಯಾದಿದಾರನು ತನ್ನ ಕಾರ್ ನಂ ಕೆ ಎ 37-9974 ಟಾಟಾ ಇಂಡಿಕಾ ಡಿ ಎಲ್ ಎಸ್ ನೇದ್ದನ್ನು ಚಲಾಯಿಸಿಕೊಂಡು ಎ.ಪಿ.ಎಮ್.ಸಿ ಫಸ್ಟ್ ಗೇಟ್ ನಿಂದ ಸಿ ಬಿ ಸರ್ಕಲ್ ಕಡೆಗೆ ಹೊರಟಿದ್ದಾಗ ಲಾರಿ ನಂ ಕೆ ಎ 34 ಎ-6560 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಪಿರ್ಯಾಧಿಯ ಕಾರಿನ ಬಲಗಡೆ ಟಕ್ಕರ್ ಕೊಟ್ಟಿದ್ದರಿಂದ ಕಾರ್ ನ ಬಲಗಡೆ ಡೊರ್ ಬಂಪರ್ ಮತ್ತು ಹೆಡ್ ಲೈಟ್ ಹೊಡೆದು ಲುಕ್ಷಾನ್ ಆಗಿರುತ್ತದೆ. ಅಂತಾ ಮತ್ತು ಅಪಘಾತದ ನಂತರ ಲಾರಿ ಚಾಲಕ ಓಡಿಹೊಗಿದ್ದಾನೆ ಅಂತಾ ಇದ್ದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
ಯಲಬುರ್ಗಾ ಪೊಲೀಸ್ ಠಾಣಾ ಯು.ಡಿ.ಆರ್. ನಂ. 13/2014 ಕಲಂ 174 ಸಿ.ಆರ್.ಪಿ.ಸಿ
ಮೃತ ಅಮರೇಶ ತಂದೆ ಆದೇಪ್ಪ ಗುಳಗುಳಿ ಈತನು ಈಗ್ಗೆ 2-3 ವರ್ಷಗಳಿಂದ ಅಮವಾಸ್ಯೆ, ಹುಣ್ಣಿಮೆ ಬಂದಾಗಲೆಲ್ಲಾ ಮಾನಸಿಕ ಅಸ್ವಸ್ಥ ರೀತಿಯಲ್ಲಿ ಇರುತ್ತಿದ್ದ. ಯಾರೂ ಏನೆ ಹೇಳಿದರು ಕೇಳುತ್ತಿರಲಿಲ್ಲ. ಕ್ರಮೇಣ ದಿನಕಳೆದಂತೆ ಗುಣಮುಖನಾಗುತ್ತಿದ್ದ. ಇಂದು ದಿನಾಂಕ 31-07-2014 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಮೃತ ಅಮರೇಶ ಈತನು ತನ್ನ ಹೆಂಡತಿಯಾದ ಪಿರ್ಯಾದಿ ಚೇತನಾ ಈಕೆಗೆ ಫೊನ್ ಮಾಡಿ ಮಲಕ ಸಮುದ್ರ ಸೀಮಾದಲಲ್ಲಿಯ ನಮ್ಮ ಹೊಲದಲ್ಲಿ ಬೇಳೆಗೆ ಹೊಡೆಯುವ ಕ್ರಿಮಿನಾಶಕವನ್ನು ಕುಡಿದಿದ್ದೆನೆ ಅಂತಾ ತಿಳಿಸಿದನು. ನಂತರ ಪಿರ್ಯಾದಿ ಚೇತನಾ ಮತ್ತು ಆಕೆಯ ತಂದೆ ಕೆಂಚನಗೌಡ್ರ ಇಬ್ಬರೂ ಸೇರಿ ಯಲಬುರ್ಗಾದ ಮಹೇಶ ಹುಬ್ಬಳ್ಳಿ, ಮತ್ತು ಬಸವರಾಜ ಲಾಡಿ ಇವರಿಗೆ ಪೋನ್ ಮಾಡಿ ಮೃತ ಅಮರೇಶ ಈತನು ವಿಷ ಕುಡಿದ ಬಗ್ಗೆ ವಿಷಯ ತಿಳಿಸಿದ್ದು ಸದರಿಯವರು ಹೊಲಕ್ಕೆ ಹೋಗಿ ಅಮರೇಶ ಈತನನ್ನು ಮೋಟಾರ್ ಸೈಕಲ್ ಮೇಲೆ ಯಲಬುರ್ಗಾಕ್ಕೆ ಕರೆದುಕೊಂಡು ಬಂದು ನಂತರ ಅಂಬುಲೆನ್ಸನಲ್ಲಿ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇಲಾಜು ಪಡೆಯುತ್ತಿದ್ದಾಗ ಮದ್ಯಾಹ್ನ 3-00 ಗಂಟೆಗೆ ಉಪಚಾರ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್. ನಂ. 13/2014 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÉÆ¥Àà¼À £ÀUÀgÀ ¥Éưøï oÁuÉ ಠಾಣೆ ಗುನ್ನೆ ನಂ 164/2014 ಕಲಂ: 379 ಐಪಿಸಿ
ದಿನಾಂಕ 31-07-2014 ರಂದು ಸಂಜೆ 6-45ಗಂಟೆಗೆ ಫಿರ್ಯಾದಿದಾರರಾದ ಶರಣಪ್ಪ ತಂದೆ ಬಸಪ್ಪ ಸುರಾಳ ಸಾ// ಭಾಗ್ಯನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಂಶವೇನೆಂದರೆ ದಿನಾಂಕ 24-07-2014 ರಂದು ಕೊಪ್ಪಳ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ತನ್ನ ಹೀರೂ ಹೊಂಡಾ ಸಿಡಿ ಡಿಲೆಕ್ಸ್  ಸೈಕಲ್  ಮೋಟಾರ್ ನಂ KA 32 U 5948 ನೇದ್ದನು ಬೆಳಗ್ಗೆ  8-00 ಗಂಟೆಗೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಾನು ಕುಷ್ಟಗಿಗೆ ಹೋಗಿದ್ದು .ಸಂಜೆ 6-00 ಗಂಟೆಗೆ ವಾಪಸ ಬಂದು ನೋಡಲಾಗಿ ತನ್ನ ಸೈಕಲ್ ಮೋಟಾರ ಕಾಣಲಿಲ್ಲಾ . ನಂತರ ತಾನು ಸುತ್ತ ಮುತ್ತಾ ಹೋಡುಕಾಡಿದರು ಎಲ್ಲಿಯೂ ಕಂಡುಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು   ಕಾರಣ  ಮಾನ್ಯರವರು ತನ್ನ ಕಳ್ಳತನವಾದ ಸೈಕಲ್ ಮೋಟಾರನ್ನು ಪತ್ತೆ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಹಾಗು ತಾನು ಕಳ್ಳತನವಾದಾಗಿನಿಂದ ಇಲ್ಲಿಯವರೆಗೆ ತನ್ನ ಸೈಕಲ್ ಮೋಟಾರನ್ನು ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆಂದು ಇರುವ ಫಿರ್ಯಾದಿ ಸಾರಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು
 ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ:94/14 ಕಲಂ;279, 338 ಐಪಿಸಿ
ದಿನಾಂಕ:31-07-2014 ರಂದು ನಾನು ಕದ್ರಳ್ಳಿ ಗ್ರಾಮ ಭೇಟಿ ಕುರಿತು ಹೊರಟಾಗ ಬೆಳಿಗ್ಗೆ 10-45 ಗಂಟೆಗೆ ಪೊಲೀಸ್ ಠಾಣೆಯಿಂದ ಫೋನ್ ಮುಖಾಂತರ ಶಿರೂರ ಸೀಮಾದ ಬ್ರಿಡ್ಜ ಸಮೀಪ ವಾಹನ ಅಪಘಾತವಾಗಿಕದ್ದು, ಗಾಯಾಳುಗಳು ಸರ್ಕಾರೀ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ.  ಕೂಡಲೇ ಭೇಟಿ ನೀಡಲು ತಿಳಿಸಿದ್ದರಿಂದ ನಾನು ಅಪಘಾತ ಸ್ಥಳಕ್ಕೆ ಭೆಇ ನೀಡಿ, ನಂತರ ಕುಕನೂರ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಶಿವಪ್ಪ ಹರಿಜನ ಿವರ ಹೇಳಿಕೆ ದೂರನ್ನು 11-45 ಎಎಂದಿಂದ 12-45 ಪಿಎಂದವರೆಗೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ತಾನು ಹಸುವಿನ ಖರಿದಿ ವಿಷಯವಾಗಿ ಕವಳಕೇರಿ ಗ್ರಾಮಕ್ಕೆ ಹೋಗಿ ಹಸುವಿನ ಖರೀದಿ ಮುಗಿಯದ್ದರಿಂದ ಕವಳಕೇರಾದಿಂದ ಕುಕನೂರ ಕಡೆಗೆ ಮೈಲಾರಗೌಡ ಹೊಸಳ್ಳಿ ಸಾ:ತೊಂಡಿಹಾಳ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಂ:ಕೆಎ-25 ಇಕೆ-8970 ನೇದ್ದರಲ್ಲಿ ಕಲ್ಲನಗೌಡ ಜವಳಿ ಸಾ:ತೊಂಡಿಹಾಳ ಇವರೊಂದಿಗೆ ಕುಳಿತುಕೊಂಡು ಶಿರೂರು ಗ್ರಾಮದ ಬ್ರಿಡ್ಜ್ ಹತ್ತಿರ  ಬರುತ್ತಿರುವಾಗ ಕರ್ವಿಂಗ್ ದಲ್ಲಿ ಎದುರುಗಡೆಯಿಂದ ಅಂದರೆ ಕುಕನೂರ ಕಡೆಯಿಂದ ಕಾರ್ ನಂ:ಕೆಎ-37 ಎಂ-6455 ನೇದ್ದರ ಚಾಲಕ ತನ್ನ ಕಾರ್ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ದಲ್ಲಸಿ ತಮಗೆ ಮೂರು ಜನರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು ಅದೆ ಅಂತಾ ಮುಂತಾಗಿ ಇದ್ದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 1-00 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು



No comments: