Police Bhavan Kalaburagi

Police Bhavan Kalaburagi

Sunday, August 3, 2014

Koppal District Crimes



ºÀ£ÀªÀĸÁUÀgÀ ¥Éưøï oÁuÉ. UÀÄ£Éß £ÀA 95/2014 PÀ®A: 279,337,338, 304(J) L.¦.¹
ದಿನಾಂಕ:02-08-2014 ರಂದು ಸಾಯಂಕಾಲ 4-45 ಗಂಟೆಗೆ ಪಿರ್ಯಾಧಿದಾರರಾದ ಚಂದಪ್ಪ ಕುದರಿ ಸಾ: ಹನಮಸಾಗರ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:02-08-2014 ರಂದು ಸಾಯಂಕಾಲ 4 ಗಂಟೆಯ ಸುಮಾರು ಪಿರ್ಯಾದಿದಾರನು  ತನ್ನ ಕೆಲಸದ ನಿಮಿತ್ಯ  ಎ.ಪಿ.ಎಂ.ಸಿ ಹತ್ತಿರ  ಕೃಷ್ಣಪ್ಪ ಗೊಲ್ಲರ ರವರ ಮನೆಯ ಮುಂದೆ ಹನಮಸಾಗರ-ಕುಷ್ಟಗಿ ರೋಡ ಎಡಗಡೆ ನಡೆದುಕೊಂಡು ಹೊರಟಾಗ ತನ್ನ  ಎದರುಗಡೆಯಿಂದ  ಅಂದರೆ  ಹೈಸ್ಕೂಲ ಕಡೆಯಿಂದ ಒಬ್ಬ ತನ್ನ ಮೋಟಾರ ಸೈಕಲ್ ನಂ: ಕೆ.ಎ-29 ಡಬ್ಲೂ- 7663 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ತನ್ನ ಮುಂದೆ ರೋಡಿನ ಎಡಗಡೆ ಹೊರಟ ಒಬ್ಬ ಟಿ.ವಿ.ಎಸ್. ಸುಪರ ಎಕ್ಸೆ.ಎಲ್ ನಂ:ಕೆ.ಎ-37 ಯು-5278 ನೇದ್ದರ ಸವಾರನು ಕುಷ್ಟಗಿ ಕಡೆಗೆ ಹೊರಟವನಿಗೆ  ಟಕ್ಕರಕೊಟ್ಟು ಅಪಘಾತ ಮಾಡಿದ್ದು ಕೂಡಲೇ ಪಿರ್ಯಾದಿ ಮತ್ತು ರೋಡಿನ ಬಾಜು ಇರುವ ಅಂಗಡಿಯವರಾದ ಸಂಗಮೇಶ ಚಿತ್ತರಗಿ ರವರು ಓಡಿ ಬಂದು ಅಪಘಾತದಿಂದ ಬಿದ್ದವರನ್ನು ಎಬ್ಬಸಿ ನೋಡಲು ಅದರಲ್ಲಿ ಟಿ.ವಿ.ಎಸ್. ಸೂಪರ ಎಕ್ಷ.ಎಲ್. ಸವಾರನಾದ ತನ್ನ ಹೆಸರು ಹುಸೇನ ತಂದೆ ಜಿಂಕೆಪ್ಪ ಮಾದರ ಅಂತಾ ಹೇಳಿದ್ದು ಅಪಘಾತದಿಂದ ಆತನ ಮೇಲಿನ ತುಟಿ ಹರಿದು ಬಾರಿ ರಕ್ತ ಬರುತ್ತಿದ್ದು ಹಾಗೂ ಮೂಗಿನಿಂದ ರಕ್ತ ಬರುತ್ತಿದ್ದು ಇನ್ನೋಬ್ಬ  ಡಿಸ್ಕವರಿ ವಾಹನ ಸವಾರನ ಹೆಸರು ವಿಚಾರಿಸಲು ಅವನ ಹೆಸರು ಚಂದಪ್ಪ ಚೌವ್ಹಣ ಅಂತಾ ಇದ್ದು ಅವನಿಗೆ ನೋಡಲು ಆತನು ರೋಡಿನಲ್ಲಿ ಬಿದ್ದಿದ್ದು ಆತನಿಗೆ ಬಲಗಡೆ ತಲೆಗೆ ಭಾರಿ ರಕ್ತ ಗಾಯವಾಗಿ ರಕ್ತ ಸೋರುತ್ತಿದ್ದು ಕೂಡಲೇ ಅಲ್ಲಿಗೆ ಬಂದ 108 ವಾಹನದಲ್ಲಿ ಇಬ್ಬರು ಇಲಾಜು ಕುರಿತು ಸರಕಾರಿ ಆಸ್ಪತ್ರೆ ಹನಮಸಾಗರಕ್ಕೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ಡಿಸ್ಕವರಿ  ಮೋಟಾರ ಸೈಕಲ್ ಸವಾರನಾದ ಚಂದಪ್ಪ ಚೌವ್ಹಣ ಆರೋಪಿತನು ತನ್ನ ಮೋಟಾರ ಸೈಕಲ್ ನ್ನು  ಅತೀವೇಗ , ಅಲಕ್ಷತನದಿಂದ ನಡೆಸಿ ಹುಸೇನನಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ಸವಾರ ಚಂದಪ್ಪ ಚೌವ್ಹಣ ಇತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಪಿರ್ಯಾದಿ ಇದೆ.
PÉÆ¥Àà¼À £ÀUÀgÀ ¥Éưøï oÁuÉ ಗುನ್ನೆ ನಂ: 168/2014 PÀ®A: 379 IPC  
ದಿನಾಂಕ: 02-08-2014 gÀAzÀÄ ¸ÀAeÉ 7-30 UÀAmÉUÉ ಫಿರ್ಯಾದಿದಾರರಾದ ವಿರೂಪಾಕ್ಷಪ್ಪ ತಂದೆ ವೀರಭದ್ರಪ್ಪ ಕೊರ್ಲಳ್ಳಿ ಸಾ: ರಾಘವೇಂದ್ರ ಮಠದ ಹಿಂದೆ ಬನ್ನಿ ಕಟ್ಟಿ ಏರಿಯಾ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 18-07-2014 ರಂದು ರಾತ್ರಿ 9-30 ಗಂಟೆಗೆ ಕೆಲಸ ಮುಗಿಸಿಕೊಂಡು ವಾಪಸ ಮನೆಗೆ ಬಂದು ಮನೆಯ ಬಾಜು ಇರುವ ಖಾಲಿ ಜಾಗದಲ್ಲಿ ತಮ್ಮ ಮೋಟಾರ್ ಸೈಕಲ್ ನಂ: KA 37/Q 3506 ನೇದ್ದನ್ನು  ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಮಲಗಿ. ದಿನಾಂಕ: 19-07-2014 ರಂದು ಬೆಳಿಗ್ಗೆ 8-00 ಗಂಟೆಗೆ ತಾನು ನಿಲ್ಲಿಸಿದ್ದ ಮೋಟಾರ್ ಸೈಕಲ್  ಕಾಣಲಿಲ್ಲಾ ಕೂಡಲೇ ತಾನು ಗಾಭರಿಯಾಗಿ ಮನೆಯ ಸುತ್ತಾ ಮುತ್ತಾ, ಬನ್ನಿ ಕಟ್ಟಿ ಏರಿಯಾ, ಬಸ್ ನಿಲ್ದಾಣ, ಹಾಗೂ ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಕಂಡು ಬರಲಿಲ್ಲಾ. ನಂತರ ಫಿರ್ಯಾದಿದಾರರಿಗೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದು ಕಳ್ಳತನವಾದ ತಮ್ಮ ಮೋಟಾರ್ ಸೈಕಲನ್ನು ಪತ್ತೇ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಹಾಗೂ ತಾನು ಅಂದಿನಿಂದ ಇಲ್ಲಿಯವರೆಗೆ  ತಮ್ಮ ಮೋಟಾರ ಸೈಕಲ್ ಹುಡುಕಾಡಿ ಸಿಗದೇ ಇರುವುದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿರುತ್ತೇನೆ ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA: 167/2014 PÀ®A: 3 & 7  E. C  Act 1955
ಇಂದು ದಿ: 02/08/2014 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಲ್ಲಪ್ಪ ಹಳ್ಯಾಳ ಆಹಾರ ನಿರೀಕ್ಷಕರು, ತಹಶೀಲ್ದಾರ ಕಾರ್ಯಾಲಯ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ: 01-08-14 ರಂದು ಮಧ್ಯಾಹ್ನ 12-00 ಗಂಟೆಗೆ ಕೊಪ್ಪಳ ನಗರದ ಗಂಜ್ ಏರಿಯಾದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಪಡಿತರ ಆಹಾರ ಸಗಟು ಮಳಿಗೆಗೆ ಮಾನ್ಯ ಅಪರ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರ, ಉಪನಿರ್ದೇಶಕರು ಆಹಾರ ಕೊಪ್ಪಳ, ಆಹಾರ ಶಿರಸ್ತೇದಾರರು ಕೊಪ್ಪಳ ಇವರೊಂದಿಗೆ ಭೇಟಿ ನೀಡಿ ಪಡಿತರ ಆಹಾರ ಧಾನ್ಯ ಎತ್ತುವಳಿ ಹಾಗೂ ದಾಸ್ತಾನದ ಬಗ್ಗೆ ಪರಿಶೀಲನೆಯನ್ನು ಪಂಚರ ಸಮಕ್ಷಮ ಮಾಡಲಾಯಿತು. ಮಳಿಗೆಯಲ್ಲಿ ಗೋದಾಮ ವ್ಯವಸ್ಥಾಪಕರಾದ ಏಕನಾಥ ಇವರು ಹಾಜರಿದ್ದರು. ಅಲ್ಲದೇ ಜಿಲ್ಲಾ ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ ಇವರು ಸಹ ಹಾಜರಿದ್ದರು.    ಸಗಟು ಮಳಿಗೆಯಲ್ಲಿ ನಿರ್ವಹಿಸಿರುವ ದೈನಂದಿನ ದಾಸ್ತಾನು ತಖ್ತೆಯೊಂದಿಗೆ ಗೋದಾಮಿನಲ್ಲಿ ಭೌತಿಕವಾಗಿ ಇರುವ ಅಕ್ಕಿ ಮತ್ತು ಗೋದಿಯ ಪ್ರಮಾಣದ ಬಗ್ಗೆ ಏಣಿಕೆ ಮಾಡಲಾಯಿತು. ಪರಿಶೀಲನೆಯಿಂದ 4929.55 ಕ್ವಿಂಟಾಲ್ ಅಕ್ಕಿ ಹಾಗೂ 1662.36 ಕ್ವಿಂಟಾಲ್ ಗೋದಿ ಭೌತಿಕ ದಾಸ್ತಾನು ಇರುವುದು ಕಂಡುಬಂದಿತು. ಅದರಂತೆ 2014 ನೇ ಅಗಷ್ಟ ಮಾಹೆಗೆ ಪಡಿತರ ಚೀಟಿದಾರರಿಗೆ ವಿತರಿಸಲು ಸದರಿ ಮಾಹೆಗೆ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಿದ ಅಕ್ಕಿ ಮತ್ತು ಗೋದಿಯನ್ನು ಕಂಪ್ಯೂಟರ್ ಬಿಲ್ಲಿಂಗ್ದಲ್ಲಿ ಹಂಚಿಕೆಯಾದ ಪೂರ್ಣ ಪ್ರಮಾಣದ ಅಕ್ಕಿ ಗೋದಿಗೆ ಬಿಲ್ ಹಾಕಿದ್ದು, ಆದರೆ ಟನ್ನೇಜ್ ಪ್ರಕಾರ ಲಾರಿಗಳಿಗೆ ನಿಗದಿಪಡಿಸಿದ ಪ್ರಮಾಣದಂತೆ ಬಿಲ್ ದಲ್ಲಿ ಹಾಕಿದ ಅಥವಾ ತಿಳಿಸಿದ ಅಕ್ಕಿ ಗೋದಿ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಅಕ್ಕಿ ಗೋದಿಯನ್ನು ನ್ಯಾಯ ಬೆಲೆ ಅಂಗಡಿಯವರಿಗೆ ವಿತರಣೆ ಮಾಡುತ್ತಿರುವದು ಕಂಡುಬಂದಿರುತ್ತದೆ. ಈ ಬಗ್ಗೆ ಪರಿಶೀಲಿಸಿದಾಗ ನ್ಯಾಯ ಬೆಲೆ ಅಂಗಡಿಯವರಿಗೆ ಇನ್ನೂ ಕಳುಹಿಸಬೇಕಾದ ಅಕ್ಕಿ 1260.06 ಕ್ವಿಂಟಾಲ್ ಹಾಗೂ ಗೋದಿ 1816.14 ಕ್ವಿಂಟಾಲ್ ದಾಸ್ತಾನು ಗೋದಾಮಿನಲ್ಲಿರುತ್ತದೆ.  ಈ ದಾಸ್ತಾನುವಿನ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿರುವುದಿಲ್ಲ. ಈ ಮೇಲೆ ತಿಳಿಸಿದ 1260.06 ಕ್ವಿಂಟಾಲ್ ಅಕ್ಕಿ ಹಾಗೂ 1816.14 ಕ್ವಿಂಟಾಲ್ ಗೋದಿಯನ್ನು ಇನ್ನು ನ್ಯಾಯಬೆಲೆ ಅಂಗಡಿಯವರಿಗೆ ಕಾರ್ಡದಾರರ ಹಿತದೃಷ್ಟಿಯಿಂದ ಕಳುಹಿಸಬೇಕಾಗಿರುವದನ್ನು ಗಣನೆಗೆ ತೆಗೆದುಕೊಂಡಾಗ ಇನ್ನೂ ಕೆ.ಎಫ್.ಸಿ.ಎಸ್.ಸಿ ಆಹಾರ ಸಗಟು ಮಳಿಗೆಯಲ್ಲಿ 20.72 ಕ್ವಿಂಟಾಲ್ ಅಕ್ಕಿ ಹಾಗೂ 16.67 ಕ್ವಿಂಟಾಲ್ ಗೋದಿ ಹೆಚ್ಚಿಗೆ ದಾಸ್ತಾನು ಇರುತ್ತದೆ. ಗೋದಾಮ ವ್ಯವಸ್ಥಾಪಕರಿಗೆ ಲಾರಿ ಟನ್ನೇಜ್ ಸಮಸ್ಯೆಯಿದ್ದರೆ ನ್ಯಾಯ ಬೆಲೆ ಅಂಗಡಿಯವರಿಗೆ ಆಯಾ ತಿಂಗಳ ಹಂಚಿಕಯೆ ಪ್ರಕಾರ ಆಹಾರ ಧ್ಯಾನ್ಯಗಳನ್ನು ಹೆಚ್ಚುವರಿ ನೀಡುವಾಗ ಎಷ್ಟು ಪ್ರಮಾಣದ ಅಕ್ಕಿ ಗೋದಿಯನ್ನು ನ್ಯಾಯಬೆಲೆ ಅಂಗಡಿಯವರಿಗೆ ಕಳುಹಿಸಲಾಗುತ್ತದೆ. ಅಷ್ಟಕ್ಕೆ ಬಿಲ್ ಹಾಕಿ ಹೀಗೆ 2-3 ಬಿಲ್ ಹಾಕಲು ಅವಕಾಶವಿದ್ದರೂ ಒಂದೇ ಬಿಲ್ದಲ್ಲಿ ಪೂರ್ಣ ಪ್ರಮಾಣದ ದಾಸ್ತಾನು ಕಳುಹಿಸಿದ ಬಗ್ಗೆ ತೋರಿಸಿರುವುದರಿಂದ ಮತ್ತು ಕಳುಹಿಸಬೇಕಾದ ದಾಸ್ತಾನು ಗೋದಾಮಿನಲ್ಲಿ ಇಟ್ಟುಕೊಂಡಿರುವುದು ಕಾನೂನು ಬಾಹಿರವಾಗಿರುತ್ತದೆ. ಮತ್ತು ದಾಸ್ತಾನನ್ನು ಅನಧಿಕೃತವಾಗಿ ಗೋದಾಮಿನಲ್ಲಿಟ್ಟುಕೊಂಡು ಅದನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಹೊಂದಿರುವದು ಕಂಡುಬಂದಿರುತ್ತದೆ. ದಾಸ್ತಾನಿನ ಬಗ್ಗೆ ದಿ: 16-07-2014 ರ ವರೆಗೆ ಮಾತ್ರ ಲೆಕ್ಕಪತ್ರ ನಿರ್ವಹಿಸಿದ್ದಾರೆ. ದಿ: 17-07-2014 ರಿಂದ ಈವರೆಗೆ ಲೆಕ್ಕಪತ್ರ ನಿರ್ವಹಿಸಿರುವುದಿಲ್ಲ. ಈ ಕ್ರಮದಿಂದಾಗಿ ಸದರಿ ಗೋದಾಮ ವ್ಯವಸ್ಥಾಪಕರು, ಕರ್ನಾಟಕ ಅಗತ್ಯ ವಸ್ತುಗಳ [ಸಾವಿಪ] ನಿಯಂತ್ರಣ ಆದೇಶ 1992 ರ ಕ್ಲಾಸ್ 14 ನ್ನು ಉಲ್ಲಂಘಿಸಿದ್ದಾರೆ. ಮತ್ತು ಗೋದಾಮಿನಲ್ಲಿ ಹೆಚ್ಚಿಗೆ ಇರುವ 20.72 ಕ್ವಿಂಟಾಲ್ ಅಕ್ಕಿ ಹಾಗೂ 16.67 ಕ್ವಿಂಟಾಲ್ ಗೋದಿ ಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಆದೇಶ ವಾಗುವವರೆಗೆ ತಾಲ್ಲೂಕಾ ಅಗ್ರಿಕಲ್ಚರಲ್ ಕೋ ಆಪರೇಟಿವ್ ಅಸೋಸಿಯೇಶನ್ ನ್ಯಾಯಬೆಲೆ ಅಂಗಡಿ ಕೊಪ್ಪಳ ರವರಲ್ಲಿ ಇಡಲಾಗಿದೆ. ಏಕನಾಥ ಡಿಪೋ ಮ್ಯಾನೇಜರ್ ಕೆ.ಎಫ್.ಸಿ.ಎಸ್.ಸಿ ಮಳಿಗೆ ಕೊಪ್ಪಳ ಇವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಸನ್ 3 ಸಹಿತ 7 ಕೆಳಗೆ ಅಗತ್ಯ ಕ್ರಮ ಜರುಗಿಸಲು ವಿನಂತಿಸಲಾಗಿದೆ. ನಾನು ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 167/2014 ಕಲಂ: 3 ಸಹಿತ 7 ಅಗತ್ಯ ವಸ್ತುಗಳ ಕಾಯ್ದೆ - 1955 ನೇದ್ದರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ

No comments: