Police Bhavan Kalaburagi

Police Bhavan Kalaburagi

Saturday, September 13, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 32/2014 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಇಂದು ದಿನಾಂಕ 12-09-2014 ರಂದು ಸಂಜೆ 4-30 ಗಂಟೆಗೆ ಮಹ್ಮದ್ ಮುಸ್ತಾಪಾ ತಂದೆ ಮಹ್ಮದ ಗಯಾಸುದ್ದೀನ ವಯಸ್ಸು 13 ಇತನು ಸೈಕಲ್ಲ ತಗೆದುಕೊಂಡು ವಡ್ಡರಹಟ್ಟಿ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನ ಚವರಲೇಟ ಬೀಟ ಕಾರ ನಂ ಕೆ.ಎ. 37-3879 ನೇದ್ದನ್ನು ಗಂಗಾವತಿ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಾಂಗ್ ಸೈಡ್ ಬಂದು ಮಹ್ಮದ ಮುಸ್ತಫಾ ಇತನ ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮಹ್ಮದ ಮುಸ್ತಾಪಾ ಇತನಿಗೆ ಗದ್ದಕ್ಕೆ, ಬಲಗಾಲು ಮೋಣಕಾಲಿಗೆ, ರಕ್ತಗಾಯವಾಗಿದ್ದು ಮತ್ತು ತಲೆಯ ಬಲಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಆರೋಪಿತನು ಅಪಘಾತ ಮಾಡಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ.
2) ಯಲಬುಗಾð ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 121/2014 ಕಲಂ. 279, 338, 304(ಎ) ಐ.ಪಿ.ಸಿ ಮತ್ತು 187 ಕಾಯ್ದೆ:.
ದಿನಾಂಕ: 12-09-2014 ರಂದುg ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತ ವಿಜಯಮಹಾಂತೇಶ ತಂದೆ ಬಸಪ್ಪ ಬಾರಕೇರ ಸಾ- ಸೂಡಿ ಇತನು ಮಂಜುನಾಥ ಅಕ್ಕಣ್ಣವರ ಸಾ- ದ್ಯಾಮಹುಣಸಿ ಇತನೊಂದಿಗೆ ಮೋಟಾರ್ ಸೈಕಲ್ ನಂ. ಕೆಎ-37/ಕೆ-7994 ನೇದ್ದನ್ನು ತೆಗೆದುಕೊಂಡು ಸೂಡಿ ಗ್ರಾಮದಿಂದ ಗಜೇಂದ್ರಗಡಕ್ಕೆ ಹೋಗಿ ಅಲ್ಲಿ ಟ್ರ್ಯಾಕ್ಟರ್ ದುರಸ್ಥಿಯ ಸಲುವಾಗಿ ಬಿಡಿ ಭಾಗಗಳನ್ನು ತೆಗೆದುಕೊಂಡು ಮರಳಿ ಗಜೇಂದ್ರಗಡ-ರೋಣ ರಸ್ತೆಯ ಮೇಲೆ ಬರುವ ಕಾತ್ರಾಳ ಸೀಮಾದಲ್ಲಿ ಕಳಕಪ್ಪ ಸಂಗಳದ ವರ ಹೋಲದ ಹತ್ತಿರ ಮೃತನು ಸದರಿ ಮೋಟಾರ್ ಸೈಕಲ್ ಹಿಂದುಗಡೆ ಮಂಜುನಾಥನಿಗೆ ಕೂಡಿಸಿಕೊಂಡು ಸೂಡಿ ಗ್ರಾಮಕ್ಕೆ ಸಂಜೆ 7-30 ಗಂಟೆ ಸುಮಾರಿಗೆ ಹೋಗುತಿದ್ದಾಗ ಅದೇ ಸಮಯಕ್ಕೆ ಅವನ ಎದುರುಗಡೆಯಿಂದ ಅಂದರೆ ರೋಣ ಕಡೆಯಿಂದ ಗಜೆಂದ್ರಗಡ ಕಡೆಗೆ ಯಾವದೋ ಒಂದು ವಾಹನ ಚಾಲಕನು ತಾನು ನಡೆಯಿಸುತ್ತಿದ್ದ ವಾಹನವನ್ನು ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮೋಟಾರ್ ಸೈಕಲ್ಲಿಗೆ ಮತ್ತು ಅದರ ಸವಾರನಾದ ವಿಜಯಮಹಾಂತೇಶನಿಗೆ ಹಾಗೂ ಮಂಜುನಾಥನಿಗೆ ಅಪಘಾತ ಪಡಿಸಿದ್ದರಿಂದ ವಿಜಯಮಹಾಂತೇಶ ತಲೆಗೆ ಭಾರಿ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅದರಂತೆ ಮಂಜುನಾಥ ಇತನಿಗೂ ಕೂಡ ಭಾರಿ ಸ್ವರೂಪದ ಗಾಯವಾಗಿರುತ್ತದೆ. ಸದರಿ ವಾಹನ ಚಾಲಕನು ಅಪಘಾತ ಮಾಡಿದ ನಂತರ ವಾಹನ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 90/2014 ಕಲಂ. 498(ಎ), 304(ಬಿ), 302 ಐ.ಪಿ.ಸಿ ಹಾಗೂ 3 & 4 ಡಿ.ಪಿ. ಕಾಯ್ದೆ:

ಮೃತ ಸರಸ್ವತಿ ಇವಳ ಮದುವೆಯು ದಿನಾಂಕ: 01.03.2014 ರಂದು ಆರೋಪಿ ವೀರೇಶ ತಂದೆ ಬಾಲಪ್ಪ ಹಳ್ಳಿ ನೇದ್ದವನೊಂದಿಗೆ ಆಗಿದ್ದು, ಮದುವೆ ಕಾಲಕ್ಕೆ ಮೃತ ಸರಸ್ವತಿ ಇವರ ತವರುಮನೆಯವರು ಆರೋಪಿತರಿಗೆ ವರದಕ್ಷಿಣೆ ನೀಡಿದ್ದು, ಮದುವೆಯಾದ ಸ್ವಲ್ಪ ದಿನಗಳ ನಂತರ ಆರೋಪಿತರು ಮೃತ ಸರಸ್ವತಿ ಇವಳಿಗೆ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡುತ್ತಿದ್ದು, ಈ ವಿಷಯವನ್ನು ಮೃತ ಸರಸ್ವತಿ ಇವಳು ತನ್ನ ತವರು ಮನೆಯವರಿಗೆ ತಿಳಿಸುತ್ತಿದ್ದು ಅವರು ಅವಳಿಗೆ ಸಮಾಧಾನ ಮಾಡುತ್ತಿದ್ದು, ದಿನಾಂಕ: 11.09.2014 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 12.09.2014 ರ ಬೆಳಗಿನ ಜಾವ 5 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರೆಲ್ಲರೂ ಸರಸ್ವತಿ ಇವಳಿಗೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ ತಾಳಕೇರಿಯ ತಮ್ಮ ಮನೆಯಲ್ಲಿ ಯಾವುದೋ ವಸ್ತುವಿನಿಂದ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದು ಇರುತ್ತದೆ, ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದರ ಮೇಲಿಂದ ಮೇಲಿಂನಂತೆ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

No comments: