Police Bhavan Kalaburagi

Police Bhavan Kalaburagi

Thursday, September 11, 2014

Gulbarga District Reported Crimes

ಅನಧೀಕೃತವಾಗಿ ಪಡಿತರ ಧಾನ್ಯಗಳನ್ನು ಸಂಗ್ರಹಿಸಿದವರ ಬಂಧನ :
ಆಳಂದ ಠಾಣೆ : ದಿನಾಂಕ 10/09/14 ರಂದು ಸಾಯಂಕಾಲ ಆಳಂದ ಪಟ್ಟಣದ ಸುಲ್ತಾನಪೂರಗಲ್ಲಿಯಲ್ಲಿರುವ ಶ್ರೀಮತಿ ಹಮೀದಾ ಬೇಗಂ ಗಂಡ ರಹಿಮಾನಸಾಬ ಮುಲ್ಲಾವಾಲೆ ಇವರ ಮನೆಯಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಗೋದಿ ಸಂಗ್ರಹಿಸಿರುವ ಬಗ್ಗೆ  ಖಚಿತ ಬಾತ್ಮಿ ಮೇರೆಗೆ ಶ್ರೀ ದತ್ತಪ್ಪಾ ತಂದೆ ಸಿದ್ದಪ್ಪಾ ಆಹಾರ ಶಿರಸ್ತೆದಾರರು ಆಳಂದ ಮನೆಗೆ ಭೇಟಿ ನೀಡಿ ಪರೀಶೀಲಿಸಲಾಗಿ ಪಡಿತರ ಚೀಟಿದಾರರಿಗೆ ವಿತರಿಸುವ 8 ಕ್ವಿಂಟಾಲ್ ಅಕ್ಕಿ (16 ಚೀಲಗಳು) ಹಾಗೂ 0.30 ಕೆಜಿ ಗೋಧಿ ಅನದಿಕೃತವಾಗಿ ಸಂಗ್ರಹಿಸಿರುವದು ಕಂಡು ಬಂದಿದ್ದರಿಂದ ಸದರಿ ದಾಸ್ತಾನನ್ನು ಅವಶ್ಯಕ ವಸ್ತುಗಳ  ಕಾಯಿದೆ 1955 ರ 3 & 7 ಅಡಿಯಲ್ಲಿ ಪಂಚರ ಸಮಕ್ಷಮ್ದಲ್ಲಿ ನಮ್ಮ ವಶಕ್ಕೆ ತೆಗೆದುಕೊಂಡು ಕೆಎಫ್‌ಸಿಎಸ್‌ಸಿ ಉಗ್ರಾಣ ವ್ಯವಸ್ಥಾಪಕರ ವಶಕ್ಕೆ ನೀಡಲಾಗಿದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 10/09/2014 ರಂದು ಮರಗುತ್ತಿ ಗ್ರಾಮದ ಕರೆಯ ಹೊಡ್ಡಿನ ಮೇಲಿರುವ ಆಲದ ಮರದ ಕೆಳಗೆ  ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ,ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದು 1. ತಿಪ್ಪಣ್ಣ ತಂದೆ ಅಂಬರಾಯ ಮಾಲಿ ಪಾಟೀಲ್  2. ವಿಜಯಕುಮಾರ ತಂದೆ ಕಮಲಾಕರ ಜಾಧವ  3. ಸಂಜೀವ ತಂದೆ ಪ್ರಭು ಚವ್ಹಾಣ 4. ಅನೀಲ ತಂದೆ ಲೋಕು ಚವ್ಹಾಣ   5. ಮಲ್ಲಪ್ಪಾ ತಂದೆ ಕಲ್ಲಪ್ಪಾ ಸಣ್ಣಮನಿ 6. ಸೇವಲಾಲ ತಂದೆ ಲಕ್ಷ್ಮಣ ಚವ್ಹಾಣ  ಸಾ; ಎಲ್ಲರು ಮರಗುತ್ತಿ ತಾಂಡ  ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು  ಸದರಿಯವರಿಂದ ನಗದು ಹಣ 5850 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕಮಲಾಪೂರ ಠಾಣೆ : ದಿನಾಂಕ: 10/09/2014 ರಂದು ಪಟವಾದ ಗ್ರಾಮದ ಹತ್ತಿರ ಇರುವ ಮುಲ್ಲಾ ಮಾರಿಹಳ್ಳದ ಸೇತುವೆ ಹತ್ತಿರ  ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ಕಮಲಾಪೂರ,ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ- ಬಹಾರ  ಇಸ್ಪೀಟ್ ಜೂಜಾಟವಾಡುತ್ತಿದ್ದ 1. ಅರುಣಕುಮಾರ ತಂದೆ ಕಾಶಿನಾಥ ರಾಮ ಸಾ; ಪಟವಾದ  2. ಶಕೀಲ ತಂದೆ ಯಾಶೀನಸಾಬ ಚಿಂದಿ ಫ್ರರೋಶ ಸಾ; ಸೊಂತ 3. ಶಿವಾಜಿ ತಂದೆ ಪರಶುರಾಮ ಚವ್ಹಾಣ ಸಾ; ಮಳಸಾಪೂರ ತಾಂಡ 4. ಮಹ್ಮದ ಜಾಫರ ತಂದೆ ಬಾಷಾಮಿಯಾ ಮುಜಾವರ ಸಾ; ಚೇಂಗಟಾ 5. ದಿಲೀಪ ತಂದೆ ಶಂಕರೆಪ್ಪಾ ಚೆಟ್ ಸಾ; ಪಟವಾದ  6. ಶಿವರಾಜತಂದೆ ಮನಶೆಟ್ಟಿ ಖಾನಾಪೂರ ಸಾ; ಪಟವಾದ ತಾ: ಜಿ: ಗುಲಬರ್ಗಾ ಇವರುಗಳಿಗೆ  ದಸ್ತಗಿರಿ ಮಾಡಿಕೊಂಡು ಸದರಿಯವರಿಂದ ಇಸ್ಪೀಟ್  ಜೂಜಾಟಕ್ಕೆ  ಸಂಭಂದಿಸಿದ  ನಗದು ಹಣ 19550 =00 ರೂಪಾಯಿ  ಮತ್ತು 52  ಇಸ್ಪೀಟ್  ಎಲೆಗಳನ್ನು ಜಪ್ತು ಪಡಿಸಿಕೊಂಡು ಜಪ್ತು ಪಡಿಸಿಕೊಂಡ  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 03/12/2013 ರಂದು ಶ್ರೀ ಮಹಾದೇವಪ್ಪ ತಂದೆ ಮಲ್ಲಪ್ಪ ಶೇಟ್ಟಿ ಸಾ|| ಬಡದಾಳ ತಾ|| ಅಫಜಲಪೂರ ಇವರು  ಹೈಕೋರ್ಟ ಮುಂದುಗಡೆಯಿಂದ ನಡೆದುಕೊಂಡು ಹೋಗುವಾಗ ಯಾವುದೋ ವಾಹನ ಚಾಲಕನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಆತನಿಗೆ ತಲೆಯ ಹಿಂದೆ ಭಾರಿ ರಕ್ತ ಗಾಯ ಬಲಗಾಲ ಮೊಳಕಾಲ ಮೇಲೆ, ಮೊಳಕೈಗೆ , ಎಡಗೈ ತೋರು ಬೆರಳಿಗೆ ತರಚಿದ ಗಾಯವಾಗಿ ಉಪಚಾರ ಕುರಿತು, ಬಸವೇಶ್ವರ ಆಸ್ಪತ್ರೆ ಹಾಗೂ ಚಿರಾಯು ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಎಮ್,ಎಸ್, ರಾಮಯ್ಯಾ ಆಸ್ಪತ್ರೆ ಬೆಂಗಳುರುದಲ್ಲಿ ಸೇರಿಕೆಯಾಗಿ ಉಪಚಾರ ಫಲಕಾರಿಯಾಗದೆ ದಿನಾಂಕ: 13.08.2013 ರಂದು 10.45 ,ಎಮದ ಸುಮಾರಿಗೆ ಮೃತ ಪಟ್ಟಿರುತ್ತಾರೆ ಅಂತಾ  ಸಿದ್ರಾಮಪ್ಪ ತಂದೆ ಮಹಾದೇವಪ್ಪ ಶೇಟ್ಟಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಹೆರುಂಡಿ ಸಾ: ಶಾಂತಿ ನಗರ ಗುಲಬರ್ಗಾ ಇವರು ದಿನಾಂಕ 10-09-2014 ರಂದು ಬೆಳಿಗ್ಗೆ 9-50 ಗಂಟೆ ಸುಮಾರಿಗೆ ತನ್ನ ಕಾರ ನಂಬರ ಕೆಎ-28 ಎನ್-2930 ನೇದ್ದನ್ನು ಶಾಂತಿ ನಗರದಿಂದ ಆರ್.ಪಿ. ಸರ್ಕಲ ಕಡೆಗೆ ಬರುತ್ತಿದ್ದಾಗ ಕೇಂದ್ರ ಬಸ ನಿಲ್ದಾಣದ ಎದುರಿನ ರೋಡ ಮೇಲೆ ಕೇಂದ್ರ ಬಸ ಸ್ಟ್ಯಾಂಡ ಒಳಗಡೆಯಿಂದ ಎನ್.ಈ.ಕೆ.ಎಸ.ಆರ್.ಟಿ.ಸಿ ಬಸ್ ನಂಬರ ಕೆಎ-32 ಎಫ-1907 ರ ಚಾಲಕ ಅಲ್ಲಾವುದ್ದಿನ ಇತನು ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿನ ಬಲಗಡೆ ಸೈಡಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಡ್ಯಾಮೇಜ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: