ಎಂ.ಬಿ.ನಗರ ಪೊಲೀಸ್ ಠಾಣೆ:
ಫಿರ್ಯಾದಿ ಶ್ರೀ ಶರಣಪ್ಪ ತಂದೆ ಲಕ್ಷ್ಮಣ ಇವರು ಠಾಣೆಗೆ
ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷೀಪ್ತ ಸಾರಾಂಶವೇನಂದರೆ, ರಾಜೇಂದ್ರ ಕೋಕಟೆ
ಇವರು ಮಿಲಟರಿಯಲ್ಲಿ ಇದ್ದು ಸೇವೆಯಲ್ಲಿ ಮೃತ ಪಟ್ಟಿರುತ್ತಾರೆ. ಅವರ ಹೆಂಡತಿ ನಿರ್ಮಲ ಇದ್ದು
ಆಕೆಗೆ ಸುಹಾಸಿನಿ ಅಂತಾ ಮಗಳಿದ್ದು ನಿರ್ಮಲ ಇವಳಿಗೆ ನಾನು ಪ್ರೇಮಿಸಿ ರೆಜಿಸ್ಟರ
ಮದುವೆಯಾಗಿರುತ್ತೇನೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ರಾಜೇಂದ್ರ ಇವರು ಮೃತ
ಪಟ್ಟಿದ್ದರಿಂದ ಸರಕಾರ ದವರು ಬಡೆಪೂರ ವಿದ್ಯಾನಗರ ಏರಿಯಾದಲ್ಲಿ ಮನೆ ಕಟ್ಟಿಸಿಕೊಟ್ಟಿದ್ದು
ಇರುತ್ತದೆ. ನಿರ್ಮಲಾ ಇವಳು ತೀರಿಕೊಂಡ ನಂತರ ಆ ಮನೆಯಲ್ಲಿ ನಾನೇ ವಾಸವಾಗಿರುತ್ತೇನೆ. ಸುಹಾಸಿನಿ
ಇವಳು ಬೇರೆ ಮನೆ ಮಾಡಿಕೊಂಡು ಇದ್ದು ಮನೆ ಖಾಲಿ ಮಾಡು ಅಂತಾ ಆಗಾಗ ನನ್ನೊಂದಿಗೆ ತಂಟೆ ತರಕಾರು
ಮಾಡುತ್ತಿರುತ್ತಾಳೆ. ಹೀಗಿದ್ದು ಮುಂಜಾನೆ ಸುಮಾರಿಗೆ ಸುಹಾಸಿನಿ ಇವಳು ಮನೆಗೆ ಬಂದು ನಿರ್ಮಲಾ
ಇವರ ಭಾವಚಿತ್ರ ತೆಗೆಯುತ್ತಿದ್ದಾಗ ನಾವು ಪೂಜಕ್ಕೆ ಇಟ್ಟಿದ್ದೇವೆ ತೆಗೆಯಬೇಡ ಅಂತಾ ಹೇಳಿದರೂ
ಕೇಳದೇ ಮನೆಯ ಸಾಮಾನುಗಳು ಚೆಲ್ಲಾಪಿಲ್ಲಿ ಮಾಡಿ ಇದು ನನ್ನ ಮನೆ ಇದೆ ಖಾಲಿ ಮಾಡಿರಿ ನಿಮಗೆ ಬಹಳ
ಸೊಕ್ಕು ಬಂದಿದೆ ಅಂತಾ ನನ್ನ ಅಕ್ಕ ತಾಯಮ್ಮಾ, ಮಗಳು ಲತಾಗೆ ಹೊಡೆ ಬಡೆ ಮಾಡಿದ್ದು ಅಲ್ಲದೇ ಮನೆ
ಖಾಲಿ ಮಾಡಿರಿ ಇಲ್ಲದಿದ್ದರೇ ನಿಮ್ಮನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಬ್ಯಾಗದಲ್ಲಿದ್ದ ಸೀಮೆ
ಎಣ್ಣೆ ಬಾಟಲಿ ತೆಗೆದು ನಮ್ಮ ಮೈಮೇಲೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವಾಗ ನಾನು
ತಪ್ಪಿಸಿಕೊಂಡು ಹೊರಗೆ ಬಂದಿರುತ್ತೇನೆ. ಇಲ್ಲದಿದ್ದರೇ ನಮಗೆ ಕೊಲೆ ಮಾಡುತ್ತಿದ್ದಳು ಅಂತಾ ವಗೈರೆ
ಅರ್ಜಿಯ ಸಾರಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
C¥sÀd®¥ÀÆgÀ oÁu:
ಫಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತ ಅರ್ಜಿ ಸಲ್ಲಿಸಿದರ ಸಾರಂಶವೆನೆಂದರೆ ಸುಮಾರಿಗೆ ಫಿರ್ಯಾದಿ ಮಗಳು ಕಾವೇರಿ ವ||20 ವರ್ಷ ಹಾಗೂ ಫಿರ್ಯಾದಿ ಅಣ್ಣನ ಮಗಳು ವ||21 ವರ್ಷ ಇಬ್ಬರು ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದರ್ಶನಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ, ಮಾದಾಬಾಳ ತಾಂಡದ ಹತ್ತಿರ ಜರಮಬನಸಿಂಗ್ ಬಾಯಸ್ ರವರ ಹೊಲದ ಬಾವಿಯಲ್ಲಿ 2 ಹೆಣ್ಣು ಮಕ್ಕಳ ಶವ ತೆಲುತಿವೇ ಅಂತ ಗೊತ್ತಾಗಿ ಫಿರ್ಯಾದಿ ಹೋಗಿ ನೋಡಲಾಗಿ ಫಿರ್ಯಾದಿಯ ಮಗಳು ಕಾವೇರಿ ಹಾಗೂ ಫಿರ್ಯಾದಿ ಅಣ್ಣನ ಮಗಳು ಅನಿತಾ ಇವರ ಶವ ಇರುತ್ತವೆ ಸದರಿಯವರು ಯಾವುದೋ ಉದ್ದೇಶದಿಂದ ಬಾವಿಯ ನೀರಿನಲ್ಲಿ ಉಸಿರು ಗಟ್ಟಿ ಮೃತಪಟ್ಟಿದ್ದು ಇರುತ್ತದೆ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿ ಲಿಖಿತ ಸಾರಂಶದ ಮೇಲಿಂದ ಠಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೆನು.
ನಿಂಬರ್ಗಾ ಪೊಲೀಸ ಠಾಣೆ:
ಫೀರ್ಯಾದಿಯು
ಠಾಣೆಗೆ ಬಂದು ಹೇಳಿಕೆ ಫೀರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ತಂದೆಯಾದ ಭೀಮಶಾ ತಂದೆ ಲಾಲಪ್ಪ
ಮಾಂಗ ವಯ: 65 ವರ್ಷ ಜಾ: ಮಾಂಗ ಉ: ಒಕ್ಕಲುತನ ಸಾ: ಭೂಸನೂರ ಇವರು ಜೇವರ್ಗಿ
ತಾಲೂಕಿನ ಕೂಡಿ ಬಾಬಾಸಾಹೇಬ ದರ್ಗಾಕ್ಕೆ ಹೋಗಿ ಬರುತ್ತೇನೆ ಅಂತಾ ಹೋಗಿ ನಂತರ ಹಸರಗುಂಡಗಿ
ಗ್ರಾಮಕ್ಕೆ ಹೋಗಿ ಮುಕ್ಕಾಮ ಮಾಡಿ ನನ್ನ ಅತ್ತೆಯಾದ ಶ್ರೀಮತಿ ನಾಗಮ್ಮ ಇವಳನ್ನು ಬೇಟಿ ಆಗಲು
ದುದನಿಗೆ ಹೋಗುವಾಗ ಮಾಡಿಯಾಳ ದಿಂದ ಒಂದು ಟಂ-ಟಂ ದಲ್ಲಿ ಕುಳಿತುಕೊಂಡು
ಹೊರಟಾಗ ಟಂ-ಟಂ ಚಾಲಕನು ಮಾಡಿಯಾಳ ಗ್ರಾಮ ದಾಟಿ ಒಂದು ಕೀ.ಮೀಟರ ಅಂತರದಲ್ಲಿ ತನ್ನ ಟಂ-ಟಂ ಅನ್ನು
ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸುತ್ತಾ ಹೋಗಿದ್ದರಿಂದ ಹಿಂದೆ ಕುಳಿತಂತಹ ನನ್ನ ತಂದೆಯು
ಡಾಂಬರ ರೋಡಿನ ಮೇಲೆ ಟಂ-ಟಂ ದಿಂದ ಬಿದ್ದು ತಲೆಗೆ ಗಂಭೀರ ರಕ್ತಗಾಯವಾಗಿದ್ದರಿಂದ ಮೃತಪಟ್ಟಿದ್ದು
ಟಂ-ಟಂ ಚಾಲಕನು ತನ್ನ ಟಂ-ಟಂ ಅನ್ನು ನಿಲ್ಲಿಸದೇ ಹೋಗಿರುತ್ತಾನೆ ಸದರಿಯವನ ಮೇಲೆ ಸೂಕ್ತ ಕಾನೂನು
ಕ್ರಮ ಕೈಕೊಳ್ಳಲು ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಳ್ಳಲಾಗಿದೆ.
No comments:
Post a Comment