ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:
ನಾನು ಜಗತ ಸರ್ಕಲ ಹತ್ತಿರ ಪೆಟ್ರೊಲಿಂಗ ಕರ್ತವ್ಯದ ಮೇಲೆ
ಇರುವಾಗ ಠಾಣಾ ಎಸ್,ಹೆಚ್,ಓ ಹೆಚ್,ಸಿ 263 ರವರು ಪೊನ ಮಾಡಿ
ವಿವೇಕ ತಂದೆ ಬಮ್ಮನ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಪಿ.ಜಿ. ಶಹಾ ಆಸ್ಪತ್ರೆಗೆ
ಬಂದಿರುತ್ತಾರೆ ಅಂತಾ ಆಸ್ಪತ್ರೆಯ ಸಿಬ್ಬಂದಿಯವರು ಪೊನ ಮಾಡಿ ತಿಳಿಸಿದ್ದಾರೆ ಅಂತಾ ನನಗೆ
ತಿಳಿಸಲು ನಾನು ನೇರವಾಗಿ ಪಿ.ಜಿ ಶಹಾ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ವಿವೇಕ ವಯಾ: 5 ವರ್ಷ
ದವನು ಇದ್ದುದರಿಂದ ಅವರ ಜೊತೆಯಲ್ಲಿದ್ದ ಅವರ ತಾಯಿಯಾದ ತಿರುಪತಾ ಇವರನ್ನು ವಿಚಾರಿಸಲು ಅವರು
ಕೊಟ್ಟ ಹೇಳಿಕೆವೆನೆಂದರೆ. ನಾನು ಮತ್ತು ನನ್ನ ಗಂಡನಾದ
ಬಮ್ಮನ ಇಬ್ಬರು ಕೂಲಿ ಕೆಲಸಕ್ಕೆ ನನ್ನ ಮಗನಾದ ವಿವೇಕ ಇತನಿಗೆ ಕರೆದುಕೊಂಡು ಹೋಗುವಾಗ ಬಾಬಾಹೌಸ
ಸ್ಕ್ಯಾನಿಂಗ ಸೆಂಟರ ಎದುರಿನ ರೊಡ ಮೇಲೆ ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂಬರ
ಕೆಎ-32 ಇಜಿ-6114 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಹಿಂದಿನಿಂದ ವಿವೇಕ ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲಗಾಲು ತೊಡೆಗೆ ಭಾರಿಗುಪ್ತಪೆಟ್ಟು, ಬೆನ್ನಿಗೆ ತರಚಿದಗಾಯ ಹಾಗು ಎಡಗಲ್ಲಕ್ಕೆ ತರಚಿದಗಾಯಗೊಳಿಸಿ ಮೋ/ಸೈಕಲ
ಸಮೇತ ಓಡಿ ಹೋದವನ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.
No comments:
Post a Comment