ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಡಾ||
ವಿರುಪಾಷಯ್ಯ ತಂದೆ ಶಿವಲಿಂಗಯ್ಯ ಸಾ|| ಮನೆ ನಂ 10-934/18 & 19/16 ಶಿವಕೃಪಾ ನಿಲಯ ಮಹಾಲಕ್ಷ್ಮೀ ಲೇಔಟ ಬ್ರಹ್ಮಪೂರ
ಗುಲಬರ್ಗಾ ಇವರು ದಿನಾಂಕ|| 07-09-2014 ರಂದು 9.00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ
ಬೆಂಗಳೂರಿಗೆ ಹೋಗುವಾಗ ನಮ್ಮ ಮನೆಯಲ್ಲಿ ಹಿಂದಿನ ಕೋಣೆಗಳಲ್ಲಿ ಬಾಡಿಗೆ ಇದ್ದ ಮನೋಹರ ಜೈನ ಇವರಿಗೆ ನಮ್ಮ ಮನೆ ಕಡೆ ನಿಗಾ ಇಡುವಂತೆ ಹೇಳಿ
ನಮ್ಮ ಮನೆಯ ಸಿಟ್ಟೌಟ್ ನಲ್ಲಿ ಬೋರವೆಲ್ ಸ್ಟಾರ್ಟರ್
ಇರುವದರಿಂದ ಕೀಲಿ ಕೈ ಕೊಟ್ಟು ಹೊಗಿರುತ್ತೆನೆ
ನಾವು ಬೆಂಗಳೂರಿನಲ್ಲಿದ್ದಾಗ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಮನೋಹರ ಜೈ ಇವರು ದಿನಾಂಕ
26-09-2014 ರಂದು ಬೆಳಗ್ಗೆ 6-00 ಗಂಟೆಗೆ ನನಗೆ
ಮೋಬೈಲ್ ಫೋನನಿಂದ ತಿಳಿಸಿದೇನೆಂದರೆ ನಿನ್ನೆ ದಿನಾಂಕ|| 25-09-2014 ರಂದು ರಾತ್ರಿ 10-30 ಗಂಟೆಗೆ
ಸಿಟ್ಟೌಟ್ ಕೀಲಿ ತೆಗೆದು ಬೋರವೆಲ್ ಚಾಲು ಮಾಡಿ ಅಂದಾಜು 10 ನಿಮಿಷ ದಲ್ಲಿ ಬಂದು ಮಾಡಿ ಮತ್ತೆ ಬೀಗ್ ಹಾಕಿ
ಹೋಗಿದ್ದು ಇಂದು ಬೆಳಗ್ಗೆ 06-00
ಗಂಟೆಗೆ ನೋಡಲು ಮುಖ್ಯ ಬಾಗಿಲಕೊಂಡಿ ಮುರಿದಿದ್ದು
ಮತ್ತು ಒಳಗಿನ ಬಾಗಿಲ ಕೀಲಿ ಮುರಿದಿದ್ದು ಕಾಣುತ್ತಿದೆ
ಎಂದು ಕೇಳಿದಾಗ ನೀವು ಒಳಗೆ ಹೋಗಿ
ನೋಡಿರಿ ಎನಾಗಿದೆ ಮತ್ತು ಬಾಗಿಲ ಕೊಂರಿ ರಿಪೇರಿ
ಮಾಡಿಸಿರಿ ಎಂದು ಹೇಳಿದಾಗ ಅವರು ತಿಳಿಸಿದೇನೆಂದರೆ ಮನೆಯಲ್ಲಿದ್ದ ಎಲ್ಲಾ ಅಲ್ಮಾರಿಗಳು ತೆರೆದಿದ್ದು ಎಲ್ಲಾ ಸಾಮಾನುಗಳು ಚಿಲ್ಲಪಿಲ್ಲಿಯಾಗಿ ಬಿದ್ದಿರುತ್ತದೆ
ಅಂತಾ ತಿಳಿಸಿದ್ದಾರೆ ನಾನು ಮತ್ತು ನನ್ನ ಹೆಂಡತಿ
ಬೆಂಗಳೂರಿನಿಂದ ನಿನ್ನೆ ದಿನಾಂಕ || 29-09-2014 ರಂದು ಬೆಳಗ್ಗೆ 09-30 ಗಂಟೆಗೆ ಗುಲಬರ್ಗಾಕ್ಕೆ ಬಂದು ನಮ್ಮ ಮನೆಯನ್ನು ನೋಡಲು ನಮ್ಮ ಮನೆಯ ಕೀಲಿ ಮುರಿದಿದ್ದು ಮನೆಯ ಒಳಗಡೆ ಹೋಗಿ ನೋಡಲು ಬೆಡ್ ರೂಮಿನಲ್ಲಿಯ ನಾಲ್ಕು
ಅಲ್ಮಾರಿಗಳ ಕೀಲಿ ಮುರಿದಿದ್ದು ಎಲ್ಲಾ ಸಮಾನುಗಳು
ಚಿಲ್ಲಪಿಲ್ಲಿಯಾಗಿದ್ದು ಅಲ್ಮಾರಿದಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ
ಆಭರಣಗಳು ಒಟ್ಟು 810000/- ರೂ.
ಬೆಲೆ ಬಾಳುವವನ್ನು
ಯಾರೋ ಅಪರಿಚಿತ ಕಳ್ಳರು ದಿನಾಂಕ||
25-09-2014 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ|| 26-09-2014 ರ ಬೆಳಗಿನ ಜಾವ 6 ಗಂಟೆಯ ಅವಧಿಯಲ್ಲಿ ಮನೆಯ ಬಾಗಿಲು
ಕೊಂಡಿ ಹಾಗು ಕೀಲಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ
ಅಲ್ಮಾರಗಳ ಕೀಲಿ ಮುರಿದು ಕಳವು ಮಾಡಿಕೊಂಡು
ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟ ನಿರತ
ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 29-09-2014 ರಂದು ಸ್ಥಳಿಯ
ದೇವಲಗಾಣಗಾಪೂರ ಗ್ರಾಮದ ಲಾಡ್ಲೇಮಶಾಕ ದರ್ಗಾದ
ಹತ್ತಿರ ನಾಲ್ಕು ಜನರು ದುಂಡಾಗಿ ಕುಳಿತು ಹಣ ಪಟಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ
ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು
ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1] ಶಾಬುದ್ದೀನ ತಂದೆ ಅಲ್ಲಾಬಾಷಾ
ಜೋಗೂರ 2] ಮಹ್ಮದ್ ಹಾಜಿ ತಂದೆ ಹುಸೇನಸಾಬ ಸೌದಾಗಾರ 3] ಕಲ್ಲಪ್ಪ ತಂದೆ ಯಲ್ಲಪ್ಪ ಪೂಜಾರಿ 4] ಅಂಬಾಜಿ ತಂದೆ ತುಕರಾಮ ಯಂಕಂಚಿ, ಸಾ|| ಎಲ್ಲರೂ ದೇವಲಗಾಣಗಾಪೂರ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 1220-00 ರೂ
ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಮರಳಿ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಲಕ್ಷ್ಮಣ ತಂದೆ ತುಳಸಿರಾಮ ಚವ್ಹಾಣ ಸಾ|| ಮಾದಾಬಾಳ ತಾಂಡಾ ಇವರು ದಿನಾಂಕ 29-09-2014 ರಂದು ಸಾಯಂಕಾಲ 4:15 ಗಂಟೆ ಸುಮಾರಿಗೆ ನಮ್ಮ ತಾಂಡಾದ ಆನಂದ ತಂದೆ ಲಕ್ಷ್ಮಣ ಚವ್ಹಾಣ ಎಂಬಾತನು ಬಳೂರ್ಗಿ ಕಡೆಯಿಂದ ತನ್ನ ಟಂ ಟಂ ತಗೆದುಕೊಂಡು ಬಂದು ನನಗೆ ತಿಳಿಸಿದ್ದೇನೆಂದರೆ ಅಫಜಲಪೂರ ಬಳೂರ್ಗಿ ರೋಡಿಗೆ ಎಲ್.ಎಸ್. ಜಮಾದಾರ ರವರ ಹಳೆ ಕಂಕರ ಮಶೀನ ಹತ್ತಿರ ನಾನು ನನ್ನ ಟಂ ಟಂ ತಗೆದುಕೊಂಡು ದುಧನಿ ಕಡೆಯಿಂದ ನಮ್ಮ ತಾಂಡಾಕ್ಕೆ ಸಾಯಂಕಾಲ 4:00 ಗಂಟೆಯ ಸುಮಾರಿಗೆ ಬರುತ್ತಿದ್ದೆನು, ನನಗಿಂತ ಸ್ವಲ್ಪ ಮುಂದೆ ನಿಮ್ಮ ತಂದೆ ಕುರಿಗಳನ್ನು ಹೊಡೆದುಕೊಂಡು ತಾಂಡಾದ ಕಡೆಗೆ ಬರುತ್ತಿದ್ದನು. ಅದೆ ಸಮಯಕ್ಕೆ ಅಫಜಲಪೂರದ ಕಡೆಯಿಂದ ಬಳೂರ್ಗಿ ಕಡೆಗೆ ಒಂದು ಹಿರೋ ಪ್ಯಾಶನ ಪ್ರೋ ಮೋಟಾರ ಸೈಕಲ ಬರುತ್ತಿದ್ದು ಸದರಿ ಮೋ/ಸೈ ಸವಾರನು ತನ್ನ ಮೋ/ಸೈ ನ್ನು ಅತಿವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ಬರುತ್ತಿದ್ದ ನಿಮ್ಮ ತಂದೆಗೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿರುತ್ತಾನೆ. ಆಗ ಮೋ/ಸೈ ಅಫಘಾತ ಸ್ಥಳದಲ್ಲೆ ಬಿದ್ದಿದ್ದು ಅವನು ಮೋ/ಸೈ ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ನಾನು ನನ್ನ ಟಂ ಟಂ ನಿಲ್ಲಿಸಿ ನಿಮ್ಮ ತಂದೆಯು ಬಿದ್ದಲ್ಲಿ ಹೋಗಿ ನೋಡಿದಾಗ ಆತನ ತಲೆಯ ಬಲಭಾಗದಲ್ಲಿ ಬಾರಿ ಒಳಪೆಟ್ಟಾಗಿ ಬಲ ಕಿವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಬಲಗಾಲಿನ ಮೋಳಕಾಲು ಕೇಳಬಾಗದಲ್ಲಿ, ಏಡಗಾಲಿನ ಹೆಬ್ಬರಳಿಗೆ ಮತ್ತು ಬಲ ಮುಂಗೈಗೆ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ ನಾನು ಮೋ/ಸೈ ನಂಬರ ನೋಡಲು ಎಮ್ ಹೆಚ್-11 ಬಿಪಿ-4727 ಹಿರೋ ಪ್ಯಾಶನ ಪ್ರೋ ಕಂಪನಿಯ ಕೆಂಪು ಬಣ್ಣದ ಮೋ/ಸೈ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂ ಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ಸಿದ್ರಾಮಪ್ಪಾ ತಂದೆ ಮಲ್ಲಣ್ಣಗೌಡ ಪಾಟೀಲ ಸಾ: ರಾಜೀವ ಗಾಂದಿ ನಗರ ಗುಲಬರ್ಗಾ ಇವರನ್ನು ವಿಚಾರಿಸಲು
ಮಾತನಾಡಿ ಹೇಳಿಕೆ ನಿಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ತಂಗಿಯಾದ ಶ್ರೀಮತಿ
ಅನ್ನಪೂರ್ಣ ಇವರನ್ನು ವಿಚಾರಿಸಲು. ದಿನಾಂಕ 29-09-2014
ರಂದು
ಬೆಳಿಗ್ಗೆ 9-45 ಗಂಟೆ ಸುಮಾರಿಗೆ ನನ್ನ ಅಣ್ಣನಾದ
ಸಿದ್ರಾಮಪ್ಪಾ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32 ವಾಯಿ-9087 ನೇದ್ದನ್ನು ಚಲಾಯಿಸಿಕೊಂಡು ಜಿ.ಜಿ.ಹೆಚ್ ಸರ್ಕಲ ಕಡೆಯಿಂದ ಆರ್.ಟಿ.ಓ
ಕ್ರಾಸ ಕಡೆಗೆ ಹೋಗುವಾಗ ಬಾಳು ಹೋಟಲ ಎದುರಿನ ರೋಡ ಮೇಲೆ ಹಿಂದಿನಿಂದ ಯಾವುದೊ ಒಂದು ಮೋಟಾರ ಸೈಕಲ
ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಅಣ್ಣನ ಮೋಟಾರ ಸೈಕಲಕ್ಕೆ
ಡಿಕ್ಕಿ ಪಡಿಸಿ ಅಪಘಾತ ಮಾಡಿ ತಲೆಯ ಹಿಂದುಗಡೆ ಭಾರಿರಕ್ತಗಾಯ, ಮುಗಿನ
ಮೇಲೆ ರಕ್ತಗಾಯ, ಬಲಹಣೆಗೆ ತರಚಿದ ಗಾಯಗೊಳಿಸಿ ಮೋ/ಸೈಕಲ
ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment