Police Bhavan Kalaburagi

Police Bhavan Kalaburagi

Monday, November 3, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 134/2014 ಕಲಂ. 87 ಕೆ.ಪಿ. ಕಾಯ್ದೆ:.  

ದಿನಾಂಕ:03-11-2014 ರಂದು 01-30 ಗಂಟೆಗೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ಸರ್ಕಾರೀ ತರ್ಫೆ ವರದಿಯನ್ನು ದಾಳಿ ಪಂಚನಾಮೆ ಲಗತ್ತಿಸಿ, 7 ಜನ ಆರೋಪಿತರನ್ನು, ಮುದ್ದೆಮಾಲನ್ನು ಹಾಜರಪಡಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ, ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ  ಇಬ್ಬರೂ ಪಂಚರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಸರ್ಕಾರೀ ವಾಹನದಲ್ಲಿ ದಿನಾಂಕ:02-11-2014 ರಂದು 11-30 ಪಿಎಂಕ್ಕೆ ಠಾಣೆಯಿಂದ ಹೊರಟು 00-05 ಎ.ಎಂಕ್ಕೆ ಸ್ಥಳವನ್ನು ತಲುಪಿ ಮರೆಗೆ ನಿಂತು ನೋಡಲು ಮಸಬಹಂಚಿನಾಳ ಗ್ರಾಮದ ಮಸೀದಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ 7 ಜನರು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ದಾಳಿ ಮಾಡಿ, 7 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಾಟದ ಹಣ 1850=00 ರೂ., 52 ಇಸ್ಪೀಟ್ ಎಲೆ, ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಜಪ್ತ ಪಡಿಸಿಕೊಂಡು ಜಪ್ತ ಪಂಚನಾಮೆ ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಲಂ:87 ಕೆ.ಪಿ. ಅಕ್ಟ್ ಪ್ರಕಾರ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇದ್ದುದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 135/2014 ಕಲಂ. 87 ಕೆ.ಪಿ. ಕಾಯ್ದೆ:.  
ದಿನಾಂಕ:03-11-2014 ರಂದು 4-15 ಎಎಂಕ್ಕೆ  ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ಸರ್ಕಾರೀ ತರ್ಫೆ ವರದಿಯನ್ನು ದಾಳಿ ಪಂಚನಾಮೆ ಲಗತ್ತಿಸಿ, 8 ಜನ ಆರೋಪಿತರನ್ನು, ಮುದ್ದೆಮಾಲನ್ನು ಹಾಜರಪಡಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ, ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಸರ್ಕಾರೀ ವಾಹನದಲ್ಲಿ ದಿನಾಂಕ:03-11-2014 ರಂದು 1-30 ಎಎಂಕ್ಕೆ ಠಾಣೆಯಿಂದ ಹೊರಟು 2-15 ಎ.ಎಂಕ್ಕೆ ಸ್ಥಳವನ್ನು ತಲುಪಿ ಮರೆಗೆ ನಿಂತು ನೋಡಲು ತಳಬಾಳ ಗ್ರಾಮದ ಮಸೀದಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ 8 ಜನರು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದನ್ನು ಕಂಡು ದಾಳಿ ಮಾಡಿ, 8 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಾಟದ ಹಣ 2100=00 ರೂ., 52 ಇಸ್ಪೀಟ್ ಎಲೆ, ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಜಪ್ತ ಪಡಿಸಿಕೊಂಡು ಜಪ್ತ ಪಂಚನಾಮೆ ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಲಂ:87 ಕೆ.ಪಿ. ಅಕ್ಟ್ ಪ್ರಕಾರ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇದ್ದುದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 186/2014 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 02-11-2014 ರಂದು ಸಂಜೆ 07-15 ಗಂಟೆಗೆ  ಆಸ್ಪತ್ರೆಯಿಂದ ಎಂಎಲ್ ಸಿ ಬಂದ ಮೇರೆಗೆ ಆಸ್ಪತ್ರೆ ಬೇಟ್ಟಿಕೊಟ್ಟು ಗಾಯಾಳು ಸುಚಾತ ತಂದೆ ಪ್ರಕಾಶ ಕೆಂಚನಗುಡ್ಡ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ತವರು ಮನೆ ಸುರುಪುರ ತಾಲೂಕಿನ ದೇವಪುರ ಗ್ರಾಮವಿದ್ದು  ಈ ದಿವಸ ಬೆಳಿಗ್ಗೆ 10-00 ಗಂಟೆಗೆ ತನ್ನ ಗಂಡ ಪ್ರಕಾಶ ಕೆಂಚನಗುಡ್ಡ ಇವರ ಮೋಸೈ ನಂ ಕೆಎ-17-ಇಎಲ್ -9613 ನೇದ್ದರಮೇಲೆ ಹೊರಟಿದ್ದು ಸಂಜೆ 06-00 ಗಂಟೆಗೆ ಕುಷ್ಟಗಿಗೆ ಬಂದು ನೀರು ಚಹ ಕುಡಿದು ಸಂಜೆ 06-20ಕ್ಕೆ ಕುಷ್ಟಗಿ ಬಿಟ್ಟು ತಾವರಗೇರಾ ಕಡೆಗೆ ಹೊಗುತ್ತಿದ್ದಾಗ ಕುಷ್ಟಗಿ ಯಿಂದ 02 ಕೀಮಿ ದೂರದಲ್ಲಿ ನಮೋದಿತ ಆರೋಪಿ ವಾಹನವನ್ನು ಅತೀವೇಗ ಅಲಕ್ಷತದಿಂದ ಓಡಿಸಿಕೊಂಡು ಒಂದು ರಸ್ತೆಯ ಕುಣಚಿಗೆ ವಾಹನವನ್ನು ಹಾಕಿದ್ದರಿಂದ ವಾಹನದ ಹಿಂದೆ ಕುಳಿತ ಫಿರ್ಯಾದಿ ತೆಲೆಗೆ ತೀವ್ರಸ್ವರೂಪದ ಗಾಯವಾಗಿದ್ದು ಹಾಗೂ ಎಡಗಣ್ಣಿಗೆ ಗಾಯವಾಗಿ ಗುಮ್ಮಟಿಯಾಗಿದ್ದು ಅಂತಾ ವಗೈರೆ  ಫಿರ್ಯಾದಿಯಿಂದಾ ಠಾಣೆಗೆ 08-15 ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

No comments: