Police Bhavan Kalaburagi

Police Bhavan Kalaburagi

Thursday, November 27, 2014


// ¥ÀwæPÁ ¥ÀæPÀluÉ //

                        ದಿನಾಂಕ 28-10-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಗಂಗಾವತಿ ನಗರದ ಎ.ಪಿ.ಎಂ.ಸಿ. ಜಾಗೆಯಲ್ಲಿ ಅಂ. 30 ರಿಂದ  32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಕುತ್ತಿಗೆ ಕೊಯ್ದು ದೇಹದಿಂದ ರುಂಡವನ್ನು ಬೇರೆ ಮಾಡಿದ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/14 ಕಲಂ. 302, 201 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರ ಪತ್ತೇಗಾಗಿ ತಂಡದ ನೇಮಕ :-  ಸದರಿ ಘಟನೆಯಿಂದ ಸುತ್ತ-ಮುತ್ತಲಿನ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿತ್ತು, ಅಪರಾಧ ಮಾಡಿದ ಕೃತ್ಯ ಸ್ಥಳದಲ್ಲಿ ಯಾವುದೇ ಆರೋಪಿತನ ಬಗ್ಗೆ ಸುಳಿವು ನೀಡುವಂತಹ ಕುರುಹುಗಳನ್ನು ಬಿಟ್ಟಿರಲಿಲ್ಲ.   ಮೇಲಾಗಿ ಮೃತಳ ಹೆಸರು & ವಿಳಾಸದ ಬಗ್ಗೆ ಸಹಿತ ಯಾವುದೇ ಮಾಹಿತಿ ಇರಲಿಲ್ಲ.  ಮೃತಳ ಬಗ್ಗೆ ಮತ್ತು ಆರೋಪಿಯ ಬಗ್ಗೆ ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಒಂದು ಸವಾಲು ಆಗಿತ್ತು, ಇದನ್ನು ಒಂದು ಸವಾಲು ಆಗಿ ಸ್ವೀಕರಿಸಿ ಸದರಿ ಪ್ರಕರಣದಲ್ಲಿಯ ಆರೋಪಿತರ ಪತ್ತೇಗಾಗಿ ಶ್ರೀ ಡಾ::ಟಿ.ಡಿ. ಪವಾರ್, ಮಾನ್ಯ ಜಿಲ್ಲಾ ಪೊಲೀಸ್  ಅಧೀಕ್ಷಕರು ಕೊಪ್ಪಳ ಹಾಗೂ ಶ್ರೀ ವಿನ್ಸೆಂಟ್ ಶಾಂತಕುಮಾರ, ಮಾನ್ಯ ಡಿವೈಎಸ್ ಪಿ ಗಂಗಾವತಿ ರವರ ಮಾರ್ಗದರ್ಶನದಲ್ಲಿ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರಾದ ಸಿಪಿಸಿ 66 ಮರಿಯಪ್ಪ, ಸಿಪಿಸಿ 100 ಮಹಿಬೂಬ,  ಸಿಪಿಸಿ 190 ವಿಶ್ವನಾಥ,  ಸಿಪಿಸಿ 402 ಡಿ.ಕೆ. ನಾಯ್ಕ್, ಸಿಪಿಸಿ 428 ರವಿ  ರವರ ಒಂದು ತಂಡವನ್ನು ರಚಿಸಿದ್ದು ಇರುತ್ತದೆ.  ಸದರಿ ಅಪರಿಚಿತ ಮಹಿಳೆಯು ಶ್ರೀಮತಿ ನಿರ್ಮಲ ಗಂಡ ದಿ: ಶ್ರೀನಿವಾಸ ಸಾ: ಗಂಗಾವತಿ ಅಂತಾ ಸದರಿಯವಳನ್ನು ಗುರ್ತಿಸಿದ್ದು ಇರುತ್ತದೆ.  ಈ ಕೃತ್ಯವನ್ನು ಎಸಗಿದ ಆರೋಪಿತರ ಬಗ್ಗೆ  ಸಾಕ್ಷಾಧಾರಗಳಿಂದ ಮತ್ತು ವೈಜ್ಞಾನಿಕ ವಿಧಾನಗಳಿಂದ ತನಿಖೆ ಮಾಡಿದಾಗ ರಾಜಶೇಖರ @ ರಾಜೇಶ @ ಮಲ್ಲಯ್ಯ ತಂದೆ  ಪಂಪಣ್ಣ ವಯ 35 ವರ್ಷ ಜಾ: ಬಣಜಿಗ ಸಾ: ಮೌಲಾಲಿ ಝಂಡಾಕಟ್ಟೆ ಹತ್ತಿರ ಇಸ್ಲಾಂಪುರ, ಗಂಗಾವತಿ ಎಂಬುವವನು ಸದರಿ ಕೃತ್ಯ ಎಸಗಿದ ಬಗ್ಗೆ ಬಲವಾದ ಸಾಕ್ಷಾಧಾರಗಳು ಕಂಡು ಬಂದಿದ್ದು,  ಸದರಿಯವನು ಮೃತ  ನಿರ್ಮಲಳಿಗೆ ಪಿ.ಯು.ಸಿ. ಯಲ್ಲಿ ಸಹಪಾಟಿ ಇದ್ದು,  ಮೂರು ವರ್ಷದ ಹಿಂದೆ ನಿರ್ಮಲ ಇವಳು ರೇಷನ್ ಕಾರ್ಡ ಮಾಡಿಸಲೆಂದು ಆರೋಪಿಯ ಹತ್ತಿರ ಹೋದಾಗ ನಿರ್ಮಲಳ ಗಂಡ ತೀರಿಕೊಂಡಿದ್ದರಿಂದ ಸದರಿಯವನು ಈಕೆಗೆ ಹತ್ತಿರವಾಗಿ ಆಕೆಯ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ನಡೆದುಕೊಂಡು, ಬರಬರುತ್ತಾ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ವೈಮನಸ್ಸುಗಳಾಗಿ ಸಂಬಂಧ ಸರಿ ಇರಲಿಲ್ಲ.  ಮೇಲಾಗಿ ಸದರಿ ರಾಜೇಶನು ಹಲವು ದುಶ್ಚಟಗಳಿಗೆ ಈಡಾಗಿ ಗಂಗಾವತಿಯಲ್ಲಿ ಅನೇಕ ಜನರಿಂದ ಸಾಲ ಮಾಡಿಕೊಂಡಿದ್ದು ಆ ಸಾಲವನ್ನು ತೀರಿಸಲು ಸದರಿ ಮೃತ ನಿರ್ಮಲಳಿಗೆ ಬ್ಯಾಂಕಿನಿಂದ ಒಂದು ಲಕ್ಷ ರೂಪಾಯಿ ಲೋನ ಪಡೆದು ತನಗೆ ಹಣ ನೀಡುವಂತೆ ಒತ್ತಾಯ ಮಾಡುತ್ತಾ ಬಂದಿದ್ದು, ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸದರಿ ರಾಜೇಶನು ಆಕೆಯನ್ನು ಎ.ಪಿ.ಎಂ.ಸಿ.ಯಲ್ಲಿಯ ನಿರ್ಜನ ಪ್ರದೇಶಕ್ಕೆ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗೋಣವೆಂದು ಪ್ರೇರೇಪಿಸಿ ಆಕೆಯನ್ನು ನಿಸ್ಸಾಹಯಕ ಸ್ಥಿತಿಯಲ್ಲಿಟ್ಟು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ ನಂತರ ಗಂಗಾವತಿಯಿಂದ ಪರಾರಿಯಾಗಿದ್ದು ಇರುತ್ತದೆ. ಅದನ್ನು ಪತ್ತೆ ಹಚ್ಚಲು ಸವಾಲಾಗಿ ಸ್ವೀಕರಿಸಿದ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಠಾಣೆ ರವರು ತಮ್ಮ ಸಿಬ್ಬಂದಿ ತಂಡದೊಂದಿಗೆ ಮಾನ್ಯ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಆರೋಪಿಯ ಜಾಡುಹಿಡಿದು  ಪತ್ತೆ ಹಚ್ಚಿ ನಿನ್ನೆ ದಿನಾಂಕ 26-11-2014 ರಂದು ಸಿಂಧಗಿಯಲ್ಲಿ ದಸ್ತಗಿರಿ ಮಾಡಿದ್ದು ಇರುತ್ತದೆ.  ಸದರಿಯವನು ಈ ಅಪರಾಧ ಮಾಡಿದ ನಂತರ ಗಂಗಾವತಿಯಿಂದ ಪರಾರಿಯಾಗಿ ಯಾವುದೇ ತನ್ನ ಹಳೆಯ ಮೊಬೈಲ್ ಮತ್ತು ಸಿಮ್ ಗಳನ್ನು ಬಳಸದೆ ದಿನದಿಂದ ದಿನಕ್ಕೆ ಊರುಗಳನ್ನು ಬದಲಾವಣೆ ಮಾಡುತ್ತಾ ಯಾದಗಿರಿ, ಶಹಪುರ, ಹೈದ್ರಾಬಾದ, ಸಿಕಂದರಬಾದ, ವಿಶಾಖಪಟ್ಟಣಂ, ಕೋಲ್ಕತ್ತಾ, ಭುವನೇಶ್ವರ, ಪುರಿ, ಕೋನಾರ್ಕ, ಮಹಿಬೂಬ ನಗರ, ಗುಲಬರ್ಗ, ಹೀಗೆ ಹಲವಾರು ಕಡೆ ಅಲೇದಾಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.  ಸದರಿ ಆರೋಪಿಯ ಬಂಧನದಿಂದ ಗಂಗಾವತಿ ನಗರದಲ್ಲಿ ಈ ಕೊಲೆಯ ಬಗ್ಗೆ ಎದ್ದಿರುವ ಹಲವಾರು ಊಹಾಪೋಹಗಳಿಗೆ ತೆರೆಬಿದ್ದಿರುತ್ತದೆ.  ತನಿಖಾ ತಂಡದ ಈ ಕಾರ್ಯವನ್ನು ಶ್ಲಾಘಿಸಿದ ಮಾನ್ಯ ಎಸ್.ಪಿ. ಸಾಹೇಬರು ತನಿಖಾ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.

No comments: