Police Bhavan Kalaburagi

Police Bhavan Kalaburagi

Tuesday, November 11, 2014

Kalaburagi District Reported Crimes

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ  :
ನರೋಣಾ ಠಾಣೆ :  ಕುಮಾರಿ ಇವಳು 5 ನೇ ತರಗತಿಯಲ್ಲಿ ವಿದ್ಯಾಭಾಸ ಮಾಡುತ್ತಿದ್ದು 10 ವರ್ಷದೊಳಗಿರುತ್ತಾಳೆ, ದಿನಾಂಕ 10/11/2014 ರಂದು ತನ್ನ ತಮ್ಮನ ಜೋತೆ ತನ್ನ ಅಮ್ಮನನ್ನು ನೋಡಲು ಬಾಬು ಹಿರೆಂ ಶೆಟ್ಟಿಯವರ ಹೊಲದ ಪಕ್ಕದ ರಸ್ತೆಯಿಂದ ಗುಡ್ಡದ ಕಡೆ ಕಾಲನಡಿಗೆಯಿಂದ ಚಿನ್ನುವಾರ ನಾಲಾದ ಫೂಲ್ ಹತ್ತಿರ ರಸ್ತೆಯ ಮೇಲಿಂದ ಸಂಜೆ 05.00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಅಪರಿಚಿತ ವ್ಯಕ್ತಿಯು ಮೋಟಾರ ಸೈಕಲನ್ನು ತಳ್ಳಿಕೊಂಡು ಹಿಂದುಗಡೆಯಿಂದ ಬಂದು ತಮ್ಮ  ಹಾಗೂ ಅಕ್ಕಳಿಗೆ  ತಡೆದು ನಿಲ್ಲಿಸಿ ಅವನ ಮೋಟಾರ ಸೈಕಲನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಬಾಯಿ ಒತ್ತಿ ಹಿಡಿದು ಅವಳನ್ನು ಎತ್ತಿಕೊಂಡು ನಾಲಾದಲ್ಲಿ ತೆಗೆದುಕೊಂಡು ಹೋಗಿ ಅವಳನ್ನು ಕೆಳಗೆ ಹಾಕಿ ಅವಳ ಮೈ ಮೇಲಿನ ಬಟ್ಟೆ ತೆಗೆದು ನಂತರ ಅವನ ಪ್ಯಾಂಟ ಹಾಗೂ ಚಡ್ಡಿ ಕಳೆದು ಒತ್ತಾಯಪೂರ್ವಕವಾಗಿ ಅವಳ ಮೇಲೆ ಬಿದ್ದು ಸಂಭೋಗ ಮಾಡುತ್ತಿರುವಾಗ ನನ್ನ ಅಕ್ಕ ಮತ್ತು ನಾನು ಒಂದೆ ಸಮನೆ ಚೀರಾಡುತ್ತಿರುವಾಗ ಹೊಲದಿಂದ ಊರ ಕಡೆಗೆ ಬರುತ್ತಿರುವ ಹೆಣ್ಣು ಮಕ್ಕಳು ಹೋಗಿ ಬಿಡಿಸುವಷ್ಟರಲ್ಲಿ ಆ ವ್ಯಕ್ತಿಯು ಆತನ ಮೋಟಾರ ಸೈಕಲನ್ನು ಅಲ್ಲೆ ಬಿಟ್ಟು ನಲವೇರಿ ಓಡಿ ಹೋಗಿರುತ್ತಾನೆ ಆ  ವ್ಯಕ್ತಿಯು ಸುಮಾರು 21 ರಿಂದ 26 ವರ್ಷದವನಿದ್ದು ತೆಳುವಾದ ಮೈಕಟ್ಟು ಹೊಂದಿದ್ದು ಸಾದಾಗಪ್ಪು ಬಣ್ಣ ಉಳ್ಳವನಾಗಿರುತ್ತಾನೆ ಅವನು ತಂದಿರುವ ಮೋಟಾರ ಸೈಕಲ್ ನಂ ಎಪಿ 28 ಸಿ 3216 (ಟಿವಿಎಸ್ ಕಂಪನಿ) ಅಂತಾ ಗೊತ್ತಾಯಿತು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 11-11-2014 ರಂದು ಘತ್ತರಗಾ ಗ್ರಾಮದ ಅಂಬೆಡ್ಕರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಹೇಶ ತಂದೆ ವಸಂತ್ರಾವ ಕುಲಕರ್ಣಿ ಸಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1160/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: