ಚಿಂಚೋಳಿ ಠಾಣೆ : ಚಿಂಚೋಳಿ ಪಟ್ಟಣದ ಚಂದಾಪುರದ ನಿವಾಸಿಗಳಾದ 1]ಯಲ್ಲಪ್ಪ ತಂದೆ ಪೆಂಟಪ್ಪ ಕಲ್ಲಕುಟಗೇರ ಸಾ|| ಚಂದಾಪುರ ಇತನ ಹೆಂಡತಿಯಾದ ಸತ್ಯಮ್ಮ ಗಂಡ ಯಲ್ಲಪ್ಪ ಕಲ್ಲಕುಟಗೇರ ಹಾಗು ಇವರ ಸಾಕು ಮಗನಾದ ಭೋಜರಾಜ ತಂದೆ ಯಲ್ಲಪ್ಪ ಕಲ್ಲಕುಟಗೇರ ಸಾ|| ಇಲ್ಲರು ಚಂದಾಪುರ ಇವರು ದಿನಾಂಕ: 23-10-2014 ರ ರಾತ್ರಿ 09:00 ಗಂಟೆಯಿಂದ ದಿನಾಂಕ: 24-10-2014 ರ ಬೆಳಗಿನ ಜಾವ 06:00 ಗಂಟೆಯ ಅವಧಿಯಲ್ಲಿ ತಮ್ಮ ಮನೆಯ ಮುಂದೆ ಹೊರಸಿನ ಮೇಲೆ ಮಲಗಿಕೊಂಡಾಗ ಯಾರೊ ದುಷ್ಕರ್ಮಿಗಳು ಬಂದು ಈ ಮೂರು ಜನರಿಗೆ ಯಾವುದೊ ಉದ್ದೇಶದಿಂದ ಕಟ್ಟಿಗೆಯಿಂದ ಹೊಡೆದು ಭಾರಿ ಗಾಯಗಳು ಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದು ಈ ಬಗ್ಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿತರನ್ನು ಪತ್ತೆ ಮಾಡಲು ಶ್ರೀ ಅಮಿತ್ ಸಿಂಗ್ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಶ್ರೀ ಬಿ.ಮಹಾಂತೇಶ ಮಾನ್ಯ ಅಪರ ಪೊಲೀಸ್ ಅಧೀಕ್ಷಕರು ಕಲಬುರಗಿ ಹಾಗು ಶ್ರೀ ರವಿಕುಮಾರ.ಎನ್.ಪಾಟೀಲ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಂಚೋಳಿರವರ ಮಾರ್ಗದರ್ಶನದಲ್ಲಿ ತನಿಖಾಧೀಕಾರಿಗಳಾದ ಶ್ರೀ ಸಿದ್ದೇಶ್ವರ ಸಿ.ಪಿ.ಐ ಚಿಂಚೋಳಿರವರ ನೇತ್ರ್ರತ್ವದಲ್ಲಿ ಶ್ರೀ ಮುರುಳಿ.ಎಮ್.ಎನ್ ಪಿ.ಎಸ್.ಐ ಚಿಂಚೋಳಿ ಪೊಲೀಸ್ ಠಾಣೆ, ಶ್ರೀ ರಾಘವೆಂದ್ರ ಪಿ.ಎಸ್.ಐ ಮಿರಿಯಾಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು, ಸಿ.ಪಿ.ಐ ಚಿಂಚೋಳಿರವರು ತಂಡದೊಂದಿಗೆ ಪತ್ತೆ ಕಾರ್ಯವನ್ನು ಮುಂದುವರೆಸಿ. ಸದರ ಪ್ರಕರಣದಲ್ಲಿ ಕೃತ್ಯ ವೆಸಗಿ ತೆಗೆದುಕೊಂಡು ಹೋಗಿದ್ದ ಸೆಲ್ ಫೋನ್ ನೆದ್ದರ ಕಾಲ ಡಿಟೆಲ್ಸ್ ವರದಿಯ ಆಧಾರದ ಮೇಲಿಂದ ಸದರಿ ಮೊಬೈಲ್ ಹ್ಯಾಂಡಸೆಟ್, ಸಂಗಮ್ ಕಲಾನ್(ತೆಲಂಗಾಣ ರಾಜ್ಯ)ದಲ್ಲಿ ಉಪಯೋಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಸಂಗಮ್ ಕಲಾನ್(ತೆಲಂಗಾಣ ರಾಜ್ಯ) ಗ್ರಾಮಕ್ಕೆ ಇಂದು ದಿನಾಂಕ: 14-11-2014 ರಂದು ಮುಂಜಾನೆ ತಮ್ಮ ತಂಡದೊಂದಿಗೆ ಭೇಟಿಕೊಟ್ಟು ಪರಿಶೀಲಿಸಿರುತ್ತಾರೆ. ಮೃತರ ಮೊಬೈಲ್ನಲ್ಲಿ ಹಾಕಿರುವ ಸಿಮ್ ಅಂಬಿಕಾ ಗಂಡ ಗೈಬಪ್ಪ ಭಕ್ತಂಪಳ್ಳಿ ಇವರ ಹೆಸರಿನಲ್ಲಿದ್ದು, ಸದರಿಯವರಿಗೆ ವಿಚಾರಿಸಲಾಗಿ ಸದರಿ ಮೊಬೈಲ್ ತನ್ನ ಗಂಡನಾದ ಗೈಬಪ್ಪ ತಂದೆ ನರಸಪ್ಪ ಭಕ್ತಂಪಳ್ಳಿ, ಇತನು ಉಪಯೋಗ ಮಾಡುತ್ತಿದ್ದ ಬಗ್ಗೆ ಮಾಹಿತಿ ಕೊಟ್ಟಿದ್ದರಿಂದ ಇದೇ ಆಧಾರದ ಮೇಲೆ ಗೈಬಪ್ಪನಿಗೆ ವಿಚಾರಿಸಿದಾಗ ಇತನು ತಮ್ಮ ಗ್ರಾಮದ ಶ್ರೀನಿವಾಸ@ಶೀನು ತಂದೆ ನರಸಪ್ಪ ಇತನಿಂದ 200 ರೂಗಳಿಗೆ ಖರೀದಿ ಮಾಡಿರುವುದಾಗಿ ತಿಳಿಸಿರುತ್ತಾನೆ. ಶ್ರೀನಿವಾಸ@ಶೀನು ತಂದೆ ನರಸಪ್ಪ ಇತನಿಗೆ ವಿಚಾರಿಸಲು ಸದರಿಯವನು ತಾನು ಮತ್ತು ತಮ್ಮ ಗ್ರಾಮದ ರಾಜು ತಂದೆ ಅಂತಪ್ಪ ಕರಣಕೋಟ, ಹಾಗು ವೆಂಕಟಪ್ಪ ತಂದೆ ನರಸಪ್ಪ ಭಕ್ತಂಪಳ್ಳಿ, ಮೂವರು ಕೂಡಿ ರಾಜುವಿನ ಹೀರೊಹೊಂಡಾ ಬೈಕ್ ನಂ. ಎಪಿ10 ಎಬಿ 0609 ನ್ನೆದ್ದರ ಮೇಲೆ ದಿನಾಂಕ: 23-10-2014 ರಂದು ಸಾಯಂಕಾಲ ಸಂಗಮ ಕಲಾನ್(ತೆಲಂಗಾಣ ರಾಜ್ಯ) ದಿಂದ ಹೊರಟು ಚಿಂಚೋಳಿಗೆ ಬಂದು ನಂತರ ದಿನಾಂಕ: 24-10-2014 ರಂದು ಬೆಳಗಿನ ಜಾವ 02:00 ಗಂಟೆ ಸುಮಾರಿಗೆ ಚಂದಾಪುರದಲ್ಲಿ ಇರುವ ಕೊಲೆಗೀಡಾದ ಯಲ್ಲಪ್ಪನ ಮನೆಗೆ ಹೋಗಿ ತಾವು ಮೂರು ಜನರು ಕೂಡಿಕೊಂಡು ತಮ್ಮ ಮೋಜು ಮಸ್ತಿ ಲಾಭಕ್ಕಾಗಿ ಮೃತರ ಮನೆಯಲ್ಲಿ ಹೆಚ್ಚು ಹಣ ಇರಬಹುದು ಎಂದು ಊಹಿಸಿ ಮನೆಯಲ್ಲಿದ್ದ 3000=00 ರೂ.ಗಳು ನಗದು ಹಣ ಹಾಗು ಒಂದು ಮೊಬೈಲ್ ಫೋನ್ ತೆಗೆದುಕೊಂಡು ಮನೆಯಿಂದ ಹೊರಗೆ ಬರುವ ಕಾಲಕ್ಕೆ ಮನೆಯ ಮುಂದೆ ಹೊರಸಿನ ಮೇಲೆ ಮಲಗಿಕೊಂಡಿದ್ದ ಹೆಣ್ಣುಮಗಳು ಎಚ್ಚರವಾಗಿದ್ದನ್ನು ನೋಡಿ, ಇವಳು ಚೀರಾಡುತ್ತಾಳೆ ಅಂತಾ ಅಲ್ಲಿಯೆ ಇದ್ದ ಕಟ್ಟಿಗೆಯನ್ನು ತೆಗೆದುಕೊಂಡು ಮಲಗಿದ್ದ ಮೂರು ಜನರಿಗೆ ತಾವು ಮೂರು ಜನರು ಕೂಡಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಮೊಬೈಲ್ ಮತ್ತು ಹಣ ತೆಗೆದುಕೊಂಡು ಪರಾರಿಯಾಗಿರುವುದಾಗಿ ಕೃತ್ಯ ಎಸೆಗಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಹಾಗು ಸಾಕ್ಷ್ಯಾಧಾರಗಳ ಮೇಲಿಂದ ಕೊಲೆ ಮಾಡಿ ಪರಾರಿಯಾದ ಮೂರು ಜನ ಆರೋಪಿತರಾದ 1] ಶ್ರೀನಿವಾಸ@ಶೀನು ತಂದೆ ನರಸಪ್ಪ ಭಕ್ತಂಪಳ್ಳಿ ಸಾ|| ಸಂಗಮ ಕಲಾನ್, ತಾ|| ತಾಂಡೂರ (ತೆಲಂಗಾಣ ರಾಜ್ಯ), 2] ರಾಜು ತಂದೆ ಅಂತಪ್ಪ ಕರಣಕೊಟ ಸಾ|| ಸಂಗಮ ಕಲಾನ್, ತಾ|| ತಾಂಡೂರ(ತೆಲಂಗಾಣ ರಾಜ್ಯ), 3] ವೆಂಕಟಪ್ಪ ತಂದೆ ನರಸಪ್ಪ ಭಕ್ತಂಪಳ್ಳಿ ಸಾ|| ಸಂಗಮ ಕಲಾನ್, ತಾ|| ತಾಂಡೂರ(ತೆಲಂಗಾಣ ರಾಜ್ಯ) ಇವರಿಗೆ ಇಂದು ದಿನಾಂಕ: 14-11-2014 ರಂದು ಮುಂಜಾನೆ ಆರೋಪಿ ನಂ. 1 & 2 ನ್ನೆದ್ದವರನ್ನು ಸಂಗಾಮ ಕಲಾನದ ಗ್ರಾಮದಲ್ಲಿ ಪತ್ತೆ ಮಾಡಿಕೊಂಡು ಹಾಗು ಆರೋಪಿ ನಂ. 3 ನ್ನೆದ್ದವರಿಗೆ ಅವನು ಕೆಲಸ ಮಾಡುವ ಕರಣಕೊಟ ರಸ್ತೆಯಲ್ಲಿರುವ ರಿಜ್ವಾನ ಮಾಲಿಕರ ಪಾಲಿಷ ಮಶೀನದಲ್ಲಿ ಪತ್ತೆ ಮಾಡಿಕೊಂಡು ವಶಕ್ಕೆ ತೆಗೆದುಕೊಂಡು ಚಿಂಚೋಳಿ ಠಾಣೆಗೆ ತಂದು ಮೂರು ಜನ ಆರೋಪಿತರಿಗೆ ದಸ್ತಗಿರಿ ಕ್ರಮ ಜರುಗಿಸಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕುರಿತು ಮಾನ್ಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಮೊನಮ್ಮ ಗಂಡ ಅರವಿಂದ ಸಣ್ಣಿಂಗೇರ ಸಾ: ಹಂದರಕಿ ಗ್ರಾಮ ಇವರನ್ನು ‘4’ ವರ್ಷಗಳ ಹಿಂದೆ ನಮ್ಮ ತಂದೆ-ತಾಯಿಯವರು ಹಂದರಕಿ ಗ್ರಾಮದ ಅರವಿಂದ ತಂದೆ ದೇವಿಂದ್ರಪ್ಪ ಸಣ್ಣಿಂಗೇರ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ವರೋಪಚಾರ ಮಾಡಿ ಒಂದು ಲಕ್ಷ ರೂಪಾಯಿ, ಒಂದು ಮೋಟಾರು ಸೈಕಲ್, ಅರ್ಧ ತೊಲೆ ಬಂಗಾರ ಕೊಟ್ಟು ನಮ್ಮೂರ ಹುಳಗೋಳ ಗ್ರಾಮದಲ್ಲಿ ಮದುವೆ ಮಾಡಿದ್ದು. ಮದುವೆಯಾದ ಒಂದು ವರ್ಷದವರೆಗೆ ನನಗೆ ನನ್ನ ಗಂಡ ಮತ್ತು ಅತ್ತೆಯಾದ ಸಾಬಮ್ಮ ಇಬ್ಬರೂ ಸರಿಯಾಗಿ ನೋಡಿಕೊಂಡು ನಂತರ ನಮ್ಮ ಗೌರವಕ್ಕೆ ತಕ್ಕಂತೆ ವರದಕ್ಷಿಣೆ ಕೊಟ್ಟಿಲ್ಲ ಅಂತ ಇನ್ನೂ ಒಂದು ಲಕ್ಷ ರೂಪಾಯಿ ಎರಡು ತೊಲೆ ಬಂಗಾರ ನಿಮ್ಮ ತವರು ಮನೆಯಿಂದ ತೆಗೆದುಕೊಂಡುಬಾ ಅಂತ ಕಿರಕಿರಿ ಮಾಡಿ ಆಗಾಗ ಹೊಡೆಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ಈ ವಿಷಯ ನಮ್ಮ ತಂದೆ-ತಾಯಿಗೆ ತಿಳಿಸಿದ್ದು ಅವರು ಬುದ್ದಿವಾದ ಹೇಳಿ ಅನುಕೂಲವಾದಗ ಕೊಡುತ್ತೇವೆ ಅಂತ ಸಮಾಧಾನ ಮಾಡಿದ್ದರು. ಆದರೂ ಸಹಾ ಹಾಗೇಯೆ ಕಿರುಕುಳ ನೀಡುತ್ತಾ ಬಂದು ದಿ:13-11-2014 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಅತ್ತೆ ಇಬ್ಬರೂ ಕೂಡಿ ಜಗಳತೆಗೆದು “ ಏ ಭೋಸಡಿ ನಾವು ಹೇಳಿದ್ದಂಗ ನೀನು ಕೇಳುತ್ತಾ ಇಲ್ಲ ನಿನಗೆ ಕೊಂದು ಹಾಕುತ್ತೇವೆ” ಅಂತ ನನ್ನ ಗಂಡ ಕುತ್ತಿಗೆ ಹಿಡಿದು ಹಿಚಿಕಿ ಸಾಯಿಸಲು ಪ್ರಯತ್ನಿಸಿದ್ದು ನಾನು ಬಿಡಿಸಿಕೊಂಡಿದ್ದು ಆಗ ಕಾಲಿನಿಂದ ಒದ್ದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು ಇರುತ್ತದೆ. ನಮ್ಮ ಅತ್ತೆ ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು ಅವರಿಬ್ಬರೂ ನನಗೆ ಸಾಯಿಸಲು ಕುತ್ತಿಗೆಗೆ ಹಗ್ಗ ಬಿಗಿದು ಉರಲು ಹಾಕಿ ಸಾಯಿಸಲು ಪ್ರಯತ್ನಿಸಿದ್ದು ಅವರಿಂದ ಬಿಡಿಸಿಕೊಂಡು ಚೀರಾಡುತ್ತಿದ್ದಾಗ ಅಕ್ಕಪಕ್ಕದ ಮನೆಯವರು ಬಂದು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಮಹ್ಮದ ಮಹಿಮೂದ ತಂದೆ ಮಹ್ಮದ ಯೂಸುಫ್ @ ಖಮರ ಸಾ|| ಕಾರಂಜಾ ಕ್ಯಾಂಪ್ ಭಾಲ್ಕಿ ಈತನು ಕುಃ ಶೇಖಶೀಫಾ ಇವಳ ಅಕ್ಕಳಾದ ಜೈಬುನ್ನೀಸಾ ಇವಳೊಂದಿಗೆ ಮದುವೆಯಾಗಿದ್ದು, ಆತನು ಅವಳಿಗೆ ಕಿರುಕುಳ ಕೊಡುತ್ತಿರುವುದರಿಂದ ವಿವಿ ಠಾಣೆ ಗುಲಬರ್ಗಾದಲ್ಲಿ ಪ್ರಕರಣ ದಾಖಲಾಗಿದ್ದು, ಆದ್ದರಿಂದ ಕುಃ ಶೇಖಶೀಫಾ ಇವಳಿಗೆ ದಿನಾಂಕ: 13/11/14 ರಂದು ಬೆಳಿಗ್ಗೆ 9-30 ಗಂಟೆಯಿಂದ ಮಧ್ಯಾಹ್ನ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಗುಲಬರ್ಗಾ ನಗರದ ರಿಂಗ ರೋಡಿನ ಮಿಲತ ನಗರದ ಟಿಪ್ಪುಸುಲ್ತಾನ ಯೂನಾನಿ ಕಾಲೇಜದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಶ್ರೀ ಯಕ್ಬಾಲ ಶೇಖ ಹುಸೇನ್ ತಂದೆ ಶೇಖ ಹುಸೇನ್ ಸಾ|| ಸಭಾ ಫಂಕ್ಷನ್ ಹಾಲ್ ಹತ್ತೀರ ಹಾಗರಗಾ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಳಖೇಡ ಠಾಣೆ : ದಿನಾಂಕ: 15-11-2014 ರಂದು ಬೆಳಗಿನ ಜಾವ 00-45 ಎ.ಎಂದ ಸುಮಾರಿಗೆ ನನ್ನ ಮೊಬೈಲಗೆ ಕರೆ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗ ಮಹ್ಮದ ಸದ್ದಾಮ ಇವನಿಗೆ ರಸ್ತೆ ಅಪಘಾತ ಸಂಭವಿಸಿದೆ ಇವನಿಗೆ ಮಳಖೇಡ ಆಸ್ಪತ್ರೆಗೆ ಸೇರಿಸಲಾಗಿದೆ ತಕ್ಷಣ ಬನ್ನಿ, ಅಂತಾ ತಿಳಿಸಿದಾಗ ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗನ ತಲೆಗೆ ಬಲವಾದ ಒಳಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಸ್ಪತ್ರೆಯಲ್ಲಿದ್ದ, ಸೇಡಂ ನಿವಾಸಿಯಾದ ಮಹೇಬೂಬ ತಂದೆ ಉಸ್ಮಾನಸಾಬ ತರಕಾರಿವಾಲೆ ಇವರನ್ನು ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ತಾವು ತಮ್ಮ ಟಾಟಾ ಪಿಕಪ್ ವಾಹನ ನಂಬರ ಕೆಎ/32-ಎ-6409 ನೇದ್ದನ್ನು ಪ್ರತಿ ದಿನದಂತ್ತೆ ತರಕಾರಿ ತರಲು ಗುಲಬರ್ಗಾಕ್ಕೆ ಹೋಗವಾಗ ಮಳಖೇಡ ಇನ್ನೂ ಸ್ವಲ್ಪ ದೂರ ಇರುವಾಗಲೆ ನಮ್ಮ ಗಾಡಿಯ ಡೀಸೆಲ್ ಮುಗಿದಿದ್ದರಿಂದ ನಮ್ಮ ಗಾಡಿ ರಸ್ತೆಯ ಪೂರ್ಣ ಎಡಬದಿಗೆ ರೋಡಿನ ಕೆಳಗೆ ನಿಲ್ಲಿಸಿ ಅದರ ಸುತ್ತ ಕಲ್ಲುಗಳನ್ನೀಟ್ಟು ನನ್ನ ತಾಯಿ ಮನ್ನಾಬಿ ಇವರನ್ನು ಕರೆದುಕೊಂಡು ಡೀಸೇಲ್ ಕ್ಯಾನ ಜೋತೆಗೆ ಮಳಖೇಡಕ್ಕೆ ಬಂದು ಮಳಖೇಡ ಗೇಟ ಹತ್ತಿರ ಇರುವ ತಾಜ್ ಹೋಟಲ್ ಹತ್ತಿರ ನಿಂತಿರುವ ಮಹ್ಮದ ಸದ್ದಾಮ್ ನನಗೆ ಪರಿಚಯದವನಿದ್ದು, ಸದರಿಯವನಿಗೆ ಸಂಗತಿ ತಿಳಿಸಿ ಡೀಸೆಲ್ ಕೂಡಿಸಲು ವಿನಂತಿಸಿದಾಗ ತನ್ನ ಮೊಟಾರ ಸೈಕಲ ಮೇಲೆ ನನಗೆ ಕೂಡಿಸಿಕೊಂಡು ಡೀಸೆಲ್ ತುಂಬಿಕೊಂಡು ಬಂದು ನನ್ನ ತಾಯಿಜೋತೆಗೆ ತಮ್ಮ ಪಿಕಪ್ ಗಾಡಿ ಹತ್ತಿರ ಹೋಗಿ ಡೀಸೆಲ್ ಹಾಕುತ್ತಿದ್ದಾಗ, ಸೇಡಂ ಕಡೆಯಿಂದ ಗುಲಬರ್ಗಾ ಕಡೆಗೆ ಅತೀ ವೇಗ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಹೋಗುತ್ತಿದ್ದ ಕ್ರುಜರ್ ಜೀಪ ನಂಬರ ಕೆಎ/32-ಎ-3036 ನೇದ್ದರ ಚಾಲಕ ತನ್ನ ವಾಹನವನ್ನು ಪೂರ್ತಿಯಾಗಿ ಎಡ ಬದಿಗೆ ರೋಡ ಬಿಟ್ಟು ನಮ್ಮ ಗಾಡಿ ಹತ್ತಿರ ಬಂದು ಸದರಿ ನಮ್ಮ ಪಿಕಪ್ ಗಾಡಿಗೆ ಅಲ್ಲದೆ ಪಿಕಪ್ ವಾಹನ ಹತ್ತಿರ ನಿಂತ ಮಹ್ಮದ ಸದ್ದಾಮ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಆಗ ಸುಮಾರು 00-30 ಎ.ಎಂ ಆಗಿತ್ತು. ಸದ್ದಾಮನಗೆ ತಲೆಗೆ ಗಂಭೀರ ಸ್ವರೂಪದ ಒಳಪೆಟ್ಟಗಿ ಮಾತಾಡುತ್ತಿರಲಿಲ್ಲಾ. ಅಲ್ಲದೆ ನನಗೂ ಸಹ ತಲೆ ಬಲಯ ಬಾಗಕ್ಕೆ ಎದೆಗೆ, ಬಲ ಮೋಳಕೈಗೆ ರಕ್ತಗಾಯಗಳಾಗಿರುತ್ತವೆ. ಆಗ ನಾನು ಬೆರೊಂದು ಖಾಸಗಿ ವಾಹನ ಹಿಡಿದು ಮಳಖೇಡ ಸರಕಾರಿ ದವಾಖಾನೆಗೆ ತಂದು ಸೇರಿಕೆ ಮಾಡಿರುತ್ತೇವೆ. ಅಂತಾ ತಿಳಿಸಿದನು. ಆಗ ನಾನು ಅಂಬುಲೆನ್ಸ ಮೂಲಕ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ ನನ್ನ ಮಗ ಮಹ್ಮದ ಸದ್ದಾಮ ಇವನಿಗೆ ಕ್ರೋಜರ್ ಜೀಪ ನಂಬರ ಕೆಎ/32-ಎ-3036 ನೇದ್ದರ ಚಾಲಕ ಅತಿ ವೇಗ ಮತ್ತು ನಿಷ್ಕಾಳಜೀತನದಿಂದ ನಡೆಸಿಕೊಂಡು ಡಿಕ್ಕಿಹೊಡೆದು ಅಪಘಾತಪಡಿಸಿ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಮಹ್ಮದ ಇಬ್ರಾಹಿಮ್ ತಂದೆ ಜಾನಿಮಿಯ ಇನಾಮದಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಕುಮಾರಿ ಅನುರಾಗ ತಂದೆ ಕಾಶಿನಾಥ ಬಿರಾದಾರ ಸಾ: ಜೈನಗರ ಸೇಡಂ ರೋಡ ಗುಲಬರ್ಗಾ ದಿನಾಂಕ: 14-11-2014 ರಂದು ರಾತ್ರಿ 8 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 2562 ನೆದ್ದನ್ನು ಆರ್.ಟಿ.ಓ. ಕ್ರಾಸ್ ದಿಂದ ಜಿ.ಜಿ.ಹೆಚ್.ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮೋ/ಸೈಕಲ್ ನಂ: ಕೆಎ 32 ಕ್ಯೂ 5941 ರ ಸವಾರನು ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಯಾವುದೆ ಸನ್ನೆ ಮಾಡದೆ ,ಇಂಡಿಕೇಟರ ಹಾಕದೆ ಒಮ್ಮೇಲೆ ವಿರೇಶ ನಗರ ಕಡೆಗೆ ಹೋಗುವ ಕುರಿತು ಅಡ್ಡವಾಗಿ ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಎಡಗೈ ಮುಂಗೈ ಹತ್ತಿರ ರಕ್ತಗಾಯ ಎಡಗಾಲು ಮೊಳಕಾಲಿಗೆ ರಕ್ತಗಾಯ, ಬಲಗಾಲು ಮೊಳಕಾಲ ಕೆಳಗೆ ತರಚೀದಗಾಯ, ಎಡ ಪಕ್ಕೆಗೆ ಗುಪ್ತ ಪೆಟ್ಟು ,ಎಡಗೈ ಹಸ್ತದ ಹಿಂದುಗಡೆ ತರಚೀದಗಾಯಗಳು ಮಾಡಿ ತಾನು ಸಹ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment