ಅಫಜಲಪೂರ ಠಾಣೆ:
ಜಾತಿ ನಿಂದನೆ ಮತ್ತು ಆತ್ಮ ಹತ್ಯೆಗೆ ಪ್ರೇರಣೆ
ಪ್ರಕರಣ:
ದಿನಾಂಕ 19/12/2014 ರಂದು ಶ್ರೀ ಶಿವಾನಂದ ತಂದೆ ರಾಮಚಂದ್ರ ಚಾಬುಕ್ಕಸರ ಸಾ|| ಆಳೂರ ಜಿ|| ವಿಜಯಪೂರ ಇವರು ಠಾಣೆಗೆ ಹಾಜರಾಗಿ ತನ್ನ ಮಗ ಅನೀಲಕುಮಾರ (ಕುಮಾರ) ಈತನು ಅಫಜಲಪೂರ ತಾಲೂಕಿನ ಮಂಗಳೂರ ಗ್ರಾಮದ ಚಿದಾನಂದ ತಂದೆ ಕಾಂತಪ್ಪ ಪೂಜಾರಿ ಇವರ ಟ್ಯಾಕ್ಟರನ್ನು ನಡೆಸಿಕೊಂಡು ಅವರ ಹತ್ತಿರವೆ ಇದ್ದು ದಿನಾಂಕ
16-12-2014 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಅನೀಲಕುಮಾರನು ಅಫಜಲಪೂರದ ಎಮ್.ಜಿ.ಎಮ್ ದಾಬಾದ ಮುಂದೆ ನಿಲ್ಲಿಸಿದ್ದ ನಡೆಸುತ್ತಿದ್ದ ಟ್ಯಾಕ್ಟರನ್ನು ಯಾರೊ ತಗೆದುಕೊಂಡು ಹೊಗಿದ್ದರಿಂದ ಟ್ಯಾಕ್ಟರ ಮಾಲಿಕ ಚಿದಾನಂದ ಮತ್ತು ಅವರ ತಮ್ಮ ಮಾಳಪ್ಪ ಪೂಜಾರಿ ಮತ್ತು ಇತರ 02 ಜನ ಕೂಡಿಕೊಂಡು ಮಗನೆ ಟ್ಯಾಕ್ಟರ ಎಲ್ಲಿಟ್ಟಿದಿ ಎನು ಮಾಡಿದಿ ಎಂದು ಅನೀಲಕುಮಾರನಿಗೆ ಜಾತಿ ಎತ್ತಿ ಬೈದು - ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ಕಿರುಕುಳ ಕೊಟ್ಟ ಬಗ್ಗೆ ನನಗೆ ದೂರವಾಣಿ
ಮೂಲಕ ತಿಳಿಸಿರುತ್ತಾನೆ. ಹೀಗಿರುವಾಗ ದಿನಾಂಕ 19-12-2014 ರಂದು ಮದ್ಯ ರಾತ್ರಿ 2:00 ಗಂಟೆ ಸುಮಾರಿಗೆ ಟ್ಯಾಕ್ಟರ ಮಾಲಿಕರಾದ ಚಿದಾನಂದ ಪೋನ ಮಾಡಿ ನಿಮ್ಮ ಮಗ ಟ್ಯಾಕ್ಟರ ವಿಷಯವಾಗಿ ಮಂಗಳೂರ ಗ್ರಾಮದ ನಮ್ಮ ಮನೆಯಲ್ಲಿ ತನ್ನ ಮೈಗೆ ನಮ್ಮ ಮನೆಯ್ಲಲಿಟ್ಟಿದ ಸೀಮೆ ಎಣ್ಣೆ ಮೈ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಆತನಿಗೆ ಗುಲಬರ್ಗಾದ ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿದ ಬಗ್ಗೆ ತಿಳಿಸಿದ್ದು.
ನಂತರ ಬೆಳಿಗ್ಗೆ ಬೆಳಿಗ್ಗೆ 7:00 ಗಂಟೆ ಮತ್ತೆ ಚಿದಾನಂದ ಇವರು ನಮಗೆ ಪೋನ ಮಾಡಿ ನಿಮ್ಮ ಮಗ ಉಪಚಾರದ ವೇಳೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಗುಲಬರ್ಗಾಕ್ಕೆ ಹೋಗಿ ಈಗ ತಡವಾಗಿ ಠಾಣೆಗೆ ಬಂದಿದ್ದು. ನನ್ನ ಮಗ ಅನೀಲಕುಮಾರನಿಗೆ (ಕುಮಾರ) ಅವನ ಟ್ಯಾಕ್ಟರ ಮಾಲಿಕ ಚಿದಾನಂದ ಪೂಜಾರಿ ಮತ್ತು ಮಾಳಪ್ಪ ಪೂಜಾರಿ ಇಬ್ಬರು ಹಾಗೂ ಇವರ ಜೋತೆಗೆ ಇನ್ನು 02 ಜನ ಕೂಡಿಕೊಂಡು ಟ್ಯಾಕ್ಟರ ವಿಷಯವಾಗಿ ಜಾತಿ ಎತ್ತಿ ಬೈದು, ಕೈಯಿಂದ ಹೊಡೆಯುವುದು ಮಾಡಿ ಅವನ ಮನಸ್ಸಿಗೆ ನೋವಾಗುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಹಾಗೂ ಆತ್ಮಹತ್ಯ ಮಾಡಿಕೊಳ್ಳಲು ದುಸ್ಪ್ರೇರಣೆ ಮಾಡಿದ್ದರಿಂದ ನನ್ನ ಮಗ ತನ್ನ ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾನೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ
ದಿನಾಂಕ 19-12-2014 ರಂದು 4-40 ಪಿ.ಎಮ್.ಕ್ಕೆ ಶ್ರೀ ಈಶ್ವರ @ ವಿಶ್ವರಾಥ್ಯ ತಂದೆ ಮಾನಪ್ಪ ಮೇಟಿ ಸಾ: ಪ್ರಗತಿ
ಕಾಲೋನಿ ಕಲಬುರಗಿ ಸರಕಾರಿ ಆಸ್ಪತ್ರೆಯ ಎದುರಿನ ರೋಡ ಮೇಲೆ
ಎಸ್.ಟಿ.ಬಿ.ಟಿ. ಕ್ರಾಸ ಕಡೆಗೆ ಹೋಗುವ ಸಲುವಾಗಿ ನಡೆದುಕೊಂಡು ರೋಡ ಕ್ರಾಸ ಮಾಡುತ್ತಿದ್ದಾಗ
ಆರ್.ಟಿ.ಓ ಕ್ರಾಸ ಕಡೆಯಿಂದ ಬರುತ್ತಿದ್ದ ಮೋ/ಸೈಕಲ
ನಂಬರ ಕೆಎ-34 ಡಬ್ಲೂ-1539 ರ ಸವಾರನು ತನ್ನ ಮೋ/ಸೈಕಲ ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಶ್ರೀ ಈಶ್ವರ @ ವಿಶ್ವರಾಥ್ಯ ನಿಗೆ ಅಪಘಾತ ಮಾಡಿದ್ದರಿಂದ ಶ್ರೀ
ಈಶ್ವರ @ ವಿಶ್ವರಾಥ್ಯನ ಬಲಗಡೆ
ತಲೆಗೆ ಗುಪ್ತಪೆಟ್ಟು, ಬಲಗಾಳು ಪಾದಕ್ಕೆ ಮೇಲ್ಬಾಗದಲ್ಲಿ ರಕ್ತಗಾಯ, ಎಡಗಾಲು ಮೊಳಕಾಲ ಕೆಳಗೆ ತರಚೀದಗಾಯ ಹಾಗು ಬಲಗೈ ಮೊಳಕೈಗೆ ತರಚೀದಗಾಯಗಳಾಗಿದ್ದು ಅಪಘಾತಪಡಿಸಿದ ಮೋ.ಸೈ
ಸವಾರ ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಪೊಲೀಸ ಠಾಣೆ ಕಲಬುರಗಿ
ದಿನಾಂಕ 18-12-2014 ರಂದು 5-00 ಪಿ.ಎಮ್ ಕ್ಕೆ ಮಿಜಗುರಿ ನಯಾ ಮೊಹಲ್ಲಾದಲ್ಲಿರುವ ನಸೀರ
ಈತನ ಮನೆಯ ಎದರುಗಡೆ ರೋಡಿನ ಮೇಲೆ ತನ್ನ ಮಗನಾದ ಅಬ್ದುಲ ರಹಿಮಾನ ನೊಂದಿಗೆ
ನಿಂತಾಗ ಮೋಟಾರ ಸೈಕಲ
ನಂ. ಕೆ.ಎ 32 ಎಚ್. 1094 ನೇದ್ದರ ಮೇಲೆ ಇಬ್ಬರು ಕುಳಿತು ಅದರ ಚಾಲಕ ಜವಹಾರ
ಸ್ಕೂಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಅಬ್ದುಲ ರಹಿಮಾನನಿಗೆ ಅಪಘಾತ ಮಾಡಿ ತನ್ನ
ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ರಹಿಮಾನನಿಗೆ ಮೊಳಕಾಲಿಗೆ
ಮತ್ತು ಬಲಗಡೆ ಕಿವಿತೆ ಗಾಯ ಪೆಟ್ಟಾದ ಬಗ್ಗೆ
ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗೆದೆ.
No comments:
Post a Comment