ಆಸ್ತಿಗಾಗಿ ಚಿಕ್ಕಪ್ಪನ ಕೊಲೆ, ಎರಡು
ಜನ ಆರೋಪಿತರ ಬಂಧನ,
ಫರತಾಬಾದ ಠಾಣೆ : ದಿನಾಂಕ 5/12/2014 ರಂದು ರಾತ್ರಿ ವೇಳೆಯಲ್ಲಿ ಕವಲಗಾ (ಬಿ)
ಗ್ರಾಮದ ಬ್ರೀಡ್ಜ ಕಂ ಬ್ಯಾರೇಜ ಹತ್ತಿರ ಒಬ್ಬ ಅಪರಿಚಿತ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು
ಯಾವುದೋ ಉದ್ದೇಶಕ್ಕಾಗಿ ಚಾಕುವಿನಿಂದ ಇರಿದು ಭೀರಕವಾಗಿ ಕೊಲೆ ಮಾಡಿ ಬ್ರೀಡ್ಜ ಮೇಲಿಂದ ಕೆಳಗೆ
ನೂಕಿಸಿಕೊಟ್ಟು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು ಈ ಬಗ್ಗೆ ಫರಹತಾಬಾದ ಪೊಲೀಸ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು ಈ ಕೊಲೆ ಪ್ರಕರಣದ ಗಂಭೀರ
ಸ್ವರೂಪದ ಅಫರಾದ ಅಂತಾ ಪರಿಗಣಿಸಿ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ
ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ
ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ, ಶ್ರೀ ಸಂತೋಷ ಬಾಬು. ಐ.ಪಿ.ಎಸ್. ಸಹಾಯಕ ಪೊಲೀಸ್
ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಜೆ. ಹೆಚ್ ಇನಾಮದಾರ
ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ
ನಾಗಭೂಷಣ, ಹೆಚ್.ಸಿಗಳಾದ ಶಂಕರ, ಅರ್ಜುನ ಸಿಂಗ್, ಎ.ಹೆಚ್.ಸಿ ಅರ್ಜುನ ಹೆಚ್.ಸಿ, ಪಿಸಿಗಳಾದ ಮಲ್ಲಿನಾಥ ಆರ್.ಹೆಚ್, ಅಶೋಕ ಹಳಿಗೋದಿ, ಮಶಾಕ,
ಚನ್ನಬಸಯ್ಯ, ಬಲರಾಮ ರವರು ಕೂಡಿಕೊಂಡು ಮಾಹಿತಿ ಸಂಗ್ರಹಿಸಿ ಅಪರಿಚಿತ
ವ್ಯಕ್ತಿಯ ಹೆಸರು ಶಾಬೋದ್ದಿನ ತಂದೆ ಮಹಿಬೂಬಸಾಬ ಜಮಾದಾರ ಸಾ :ಮೈನಾಳ ಈತನ ಮೃತ ದೇಹ ಅಂತಾ ಪತ್ತೆ
ಹಚ್ಚಿ ಆರೊಪಿತರ ಪತ್ತೆಗಾಗಿ ಜಾಲ ಬಿಸಿ ಮಾಹಿತಿ ಸಂಗ್ರಹಿಸಿ ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದು
ಆರೋಪಿ ಮಹ್ಮದ ಮಶಾಕ (ಜುನೈದಿ) ಮತ್ತು ಆತನ ಗೆಳೆಯನಾದ ಜಹೀರ ಇವರಿಬ್ಬರು ಕೂಡಿಕೊಂಡು ಮೈನಾಳ
ಗ್ರಾಮದಲ್ಲಿರುವ ತಮ್ಮ ಪಾಲಿಗೆ ಬರುವ 9 ಎಕರೆ
ಜಮೀನು ತಮ್ಮ ಚಿಕ್ಕಪ್ಪ ನೀಡದಿದ್ದಕ್ಕೆ ಮೃತ ಶಾಬೋದ್ದಿನ ಈತನಿನನ್ನು ಮೊಟಾರ ಸೈಕಲ ಮೇಲೆ ಕರೆದುಕೊಂಡು
ಹೋಗಿ ಕವಲಗಾ ಬಿ ಹೋಗುವ ರಸ್ತೆಯಲ್ಲಿರುವ ಬ್ರೀಡ್ಜ ಕಂ ಬ್ಯಾರೇಜ ಮೇಲೆ ಕೊಲೆ ಮಾಡಿ ಶವವನ್ನು
ಬ್ರಿಡ್ಜನ ಕೆಳಗಡೆ ಬಿಸಾಕಿ ಫರಾರಿಯಾಗಿದ್ದು ದಿನಾಂಕ 20/12/2014 ರಂದು ಈ
ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
1) ಮಹ್ಮದ ಮಶಾಕ @
ಜನೈದ ತಂದೆ ಮೈನೋದ್ದಿನ ಜಮಾದಾರ ಸಾ : ಮೈನಾಳ ತಾ :ಜಿ ಕಲಬುರಗಿ ಹಾಲಿ ವಸ್ತಿ ಗರಿಬ ನವಾಜ
ಕಾಲೋನಿ ಕಲಬರುಗಿ 2) ಜಹೀರ @ ಮಹ್ಮದ ಜಹೀರ ತಂದೆ ಖಾಜಾಮಿಯ್ಯಾ ಸಾ : ಗರಿಬ
ನವಾಜ ಕಾಲೋನಿ ಆಜಾದಪುರ ರೋಡ್ ಕಲಬುರಗಿ ರವರನ್ನು ಬಂಧಿಸಿ ನ್ಯಾಂಗ ಭಂಧನಕ್ಕೆ ಕಳುಹಿಸಿದ್ದು ಈ
ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಶ್ಲಾಘಿಸಿರುತ್ತಾರೆ.
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚರ ಪ್ರಕರಣ :
ಕಾಳಗಿ ಠಾಣೆ : ಕುಮಾರಿ ವಯ:07 ವರ್ಷ
ಇವಳಿಗೆ ದಿನೇಶ ಚವ್ಹಾಣ, ಕಾಳ್ಯಾ ಜಾಧವ, ನಾಗೇಶ ರಾಠೋಡ, ಮತ್ತು ಶಿವಾ ರಾಠೋಡ ಇವರುಗಳು ದಿನಾಂಕ 19-12-2014 ರಂದು
ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನಗೆ ಮನೆಯಿಂದ ಎಳೆದುಕೊಂಡು ದಿನೇಶನ ಮನೆಗೆ ಹೋಗಿ ದಿನೇಶನು
ತನ್ನೊಂದಿಗೆ ಸಂಬೋಗ ಮಾಡಿದ್ದು ನಂತರ ಎಲ್ಲರೂ ಕೂಡಿ ತಾಂಡಾದ ಪಕ್ಕದಲ್ಲಿರುವ ಧರ್ಮು ರಾಠೋಡ ರವರ
ತೋಗರಿಯ ಹೋಲದಲ್ಲಿ ಎಳೆದುಕೊಂಡು ಹೋಗಿ ಎಲ್ಲರು ಸರದಿಯಂತೆ ತನ್ನ ಮೇಲೆ ಮಲಗಿ ಜಬರಿ ಸಂಭೋಗ
ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ
ಠಾಣೆ : ಶ್ರೀಮತಿ ಶಿವರತ್ನಾ ಗಂಡ ಗಿರೀಶ
ರವರು ದಿನಾಂಕ: 20-12-2014 ರಂದು 12-30 ಗಂಟೆ ಸುಮಾರಿಗೆ ತಾನು ಮತ್ತು ತನ್ನ ಚಿಕ್ಕಮ್ಮ
ಶಿವಲಿಲಾ, ತಾಯಿ ಅಕ್ಕನಾಗಮ್ಮ ರವರು ಕಮಲ ಹೊಟೇಲ ಎದುರುಗಡೆಯಿಂದ ಕೇಂದ್ರ ಬಸ್
ನಿಲ್ದಾಣದ ಕಡೆಗೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋ/ಸೈಕಲ್ ನಂ: ಕೆಎ 32 ಯು 5843 ರ ಸವಾರನು ಎಮ್.ಎಸ್.ಕೆ.ಮಿಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಅದೆ ರೀತಿ ಅತಿವೇಗ ಮತ್ತು
ಅಲಕ್ಷತನದಿಂದ ಅಡ್ಡವಾಗಿ ಬರುತ್ತಿದ್ದ ಮೋ/ಸೈಕಲ್ ನಂ; ಕೆಎ 02 ಹೆಚ್.ಎಮ್. 931 ನೆದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ
ನನಗೆ ಭಾರಿ ಪೆಟ್ಟು ಬಿದ್ದಿದ್ದು ಮೋಟಾರ ಸೈಕಲ ನಂ ಕೆಎ-02-ಹೆಚ,ಎಮ್- 931 ನೆದ್ದರ ಹಿಂದುಗಡೆ ಕುಳಿತು ಬಂದಿದ್ದ
ಮಹಿಬೂಬ ಷಾ ಇತನಿಗೂ ಗಾಯವಾಗಿದ್ದು ಎರಡು ಮೋಟಾರ ಸೈಕಲ ನಿಲ್ಲಿಸಿ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment