ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ. ಝೈಬುನ್ನಿಸಾ ಗಂಡ ಮಹ್ಮದ
ಮೆಹಮೂದ, ಸಾ|| ಹಾಗರಗಾ ಕ್ರಾಸ್ ಸಭಾ ಫಂಕ್ಷನ ಹಾಲ ಎದುರುಗಡೆ ನ್ಯೂ ರಹೆಮತ ನಗರ ಕಲಬುರಗಿ ರವರನ್ನು
ದಿನಾಂಕ: 20/02/2011 ರಂದು ಮಹ್ಮದ ಮಹೆಮುದ ತಂದೆ ಮಹ್ಮದ ಯೂಸೂಫ ಸಾ||ಭಾಲ್ಕಿ ಇವರ ಜೊತೆ ಮುಸ್ಲಿಂ ಸಂಪ್ರದಾಯದಂತೆ
ನಮ್ಮ ತಂದೆ-ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ನನ್ನ ಜೊತೆ
ಅನ್ಯೋನ್ಯವಾಗಿ ಇರದೆ ನನಗೆ ನನ್ನ ಗಂಡ ನಿಮ್ಮ ತಂದೆ ಹೆಸರಿನಲ್ಲಿ ಇದ್ದ 30*40 ವಿಸ್ತ್ರೀರ್ಣವುಳ್ಳ ಪ್ಲಾಟ ಇದ್ದು, ಮತ್ತು ನಿಮ್ಮ ತಾಯಿಯ ಹೆಸರಿನಲ್ಲಿ
ಇದ್ದ ಮನೆ ಮತ್ತು 3,00,000/- ರೂಪಾಯಿ ತೆಗೆದುಕೊಂಡು ಬರುವಂತೆ ನನಗೆ ಪ್ರತಿ ನಿತ್ಯ ವರದಕ್ಷಿಣೆ ಹಾಗೂ ಮಾನಸಿಕ
ಹಾಗೂ ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾನೆ. ನಾನು ನನ್ನ ಗಂಡನಿಗೆ ನಮ್ಮ ತಂದೆ-ತಾಯಿಯವರು
ಬಡವರಾಗಿದ್ದು, ಮದುವೆಯ ಸಮಯದಲ್ಲಿಯೆ ಬಹಳಷ್ಟು ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದು, ಎಲ್ಲಿಂದ ಹಣ ತರಲಿ ಅಂತಾ ಅಂದಾಗ ಆಗ
ನನ್ನ ಗಂಡ ಒಂದು ವೇಳೆ ಆಸ್ತಿಯನ್ನು ತರದೆ ಹೋದಲ್ಲಿ ಹಾಗೂ ಪೊಲೀಸ ಠಾಣೆಗೆ ದೂರು ಕೊಟ್ಟಲ್ಲಿ
ನಿನ್ನ ಮನೆಯವರಿಗೆ ಜೀವ ಸಹಿತ ಬಿಡುವದಿಲ್ಲ ಮತ್ತು ನಿನ್ನ ತಂಗಿ ಕಾಲೇಜಿಗೆ ಹೋಗುವ ಸಮಯದಲ್ಲಿ
ಮುಖದ ಮೇಲೆ ಆಸೀಡ್ ಹಾಕುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದು ಅಲ್ಲದೆ ನನಗೆ ನನ್ನ ಮೈಮೇಲೆ
ಅಲ್ಲಲ್ಲಿ ಬ್ಲೇಡ್ದಿಂದ ಕೊಯಿದ ಗಾಯಗಳು ಮಾಡಿರುತ್ತಾನೆ.ಅದರಂತೆನಾನು ಭಾಲ್ಕಿಯಲ್ಲಿ ಇದ್ದಾಗ
ನನ್ನ ಗಂಡ ಮಹ್ಮದ ಮಹೆಮೂದ, ಮಾವ ಮಹ್ಮದ ಯೂಸುಫ@ಖಮರ, ಅತ್ತೆ ಮಾಜಾನ ಬೇಗಂ, ಮೈದುನ ಮಹ್ಮದ ಖಲೀಲ, ನಾದನಿಯರಾದ ಫಾತೀಮಾ ಬೇಗಂ ಗಂಡ ದಿ: ನಿಸಾರ ಅಹ್ಮದ, ಗೌಸಿಯಾ ಗಂಡ ಸೈಯದ ಸಾಜೀದ ಹುಸೇನ, ಶಬಾನಾ ಗಂಡ ವಸೀಮ, ಸಲ್ಮಾ@ಶಲ್ಲು ಇವರೆಲ್ಲರು ಸೇರಿಕೊಂಡು ನನಗೆ
ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿರುತ್ತಾರೆ. ನಂತರ ಮದುವೆಯಾಗಿ 3 ತಿಂಗಳು ಆದ ಮೇಲೆ ನಾನು ನನ್ನ ತವರು
ಮನೆಗೆ ಬಂದು ಸುಮಾರು 14 ತಿಂಗಳು ಇಲ್ಲಿಯೆ ಉಳಿದಿದ್ದು, ನಂತರ ನನ್ನ ಗಂಡ ನನ್ನ ಹತ್ತಿರ ಬಂದು ನನಗೆ ಸರಿಯಾಗಿ
ನೋಡಿಕೊಳ್ಳುತ್ತೇನೆ ಅಂತಾ ಹೇಳಿ ನನಗೆ ಗುಲಬರ್ಗಾದ ಡೆಕ್ಕನ ಕಾಲೇಜ ಹತ್ತಿರ ಬೇರೆ ಮನೆ ಮಾಡಿ
ಅಲ್ಲಿಯೆ ಇಟ್ಟಿದ್ದು, ಸ್ವಲ್ಪ ದಿನ ನನಗೆ ನನ್ನ ಗಂಡ ಸರಿಯಾಗಿ ನೋಡಿಕೊಂಡಿದ್ದು, ನಂತರ ದಿನಾಂಕ: 11/10/014 ರಂದು
ನನ್ನ ಮಾವ, ಅತ್ತೆ, ಮನೆಗೆ ಬಂದಿದ್ದು, ಆಗ ನನ್ನ ಗಂಡ ನನಗೆ ಮತ್ತೆ ತವರು ಮನೆಯಿಂದ ಹಣ, ಬಂಗಾರ ತೆಗೆದುಕೊಂಡು ಬಾ ಅಂತಾ
ಕಿರುಕುಳ ನೀಡಿ ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕುವಾಗ ನಾನು ಹಿಂದಕ್ಕೆ ಸರಿದಿದ್ದರಿಂದ ಸೀಮೆ
ಎಣ್ಣೆ ನನ್ನ ಹೊಟ್ಟೆಯ ಮೇಲೆ ಬಿದ್ದು ಹೊಟ್ಟೆಯ ಪದರು ಸುಟ್ಟಿರುತ್ತದೆ. ಮತ್ತು ನನಗೆ ಮೊಳಕೈಯಿಂದ
ನನ್ನ ಬಾಯಿಗೆ ಹೊಡೆದಿದ್ದರಿಂದ ಮೇಲಿನ ಹಲ್ಲು ಬಿದಿದ್ದು, ಇದರ ಉಪಚಾರ ಪಡೆದಿರುತ್ತೇನೆ. ಮತ್ತು ನನ್ನ ಗಂಡ ಮಾವ, ಅತ್ತೆ ಮೂರು ಜನ ಸೇರಿ ನನಗೆ ಕೈ
ಕಾಲು ಕಟ್ಟಿ ನನ್ನ ತಲೆಯ ಕೂದಲನ್ನು ಕತ್ತರಿಸಿರುತ್ತಾರೆ. ಮತ್ತು ಹುಬ್ಬುಗಳು ಸಹ
ಕತ್ತರಿಸಿರುತ್ತಾರೆ. ನನಗೆ ನನ್ನ ಗಂಡ ದಿನಾಲೂ ರಾತ್ರಿ ಸಮಯದಲ್ಲಿ ಹೊರಗಿನಿಂದ ಯಾವುದೋ ಸಿಹಿ
ಪದಾರ್ಥ ತಂದು ತಿನ್ನಿಸುತ್ತಿದ್ದು, ಸ್ವಲ್ಪ ಸಮಯದ ನಂತರ ನನಗೆ ನಿದ್ರೆ ಬರುತ್ತಿದ್ದು ಬೆಳಿಗ್ಗೆ ಎದ್ದು ನಾನು ಮೂತ್ರ
ವಿಸರ್ಜನೆಗೆ ಹೋದಾಗ ನನ್ನ ಸೂಕ್ಷ್ಮಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು ನನ್ನ ಗಂಡ ರಾತ್ರಿ
ಸಮಯದಲ್ಲಿ ಯಾವುದೋ ಗಟ್ಟಿಯಾದ ವಸ್ತು ಹಾಕಿ ನೋವು ಉಂಟು ಮಾಡಿದ ಬಗ್ಗೆ ಗೊತ್ತಾಗಿರುತ್ತದೆ. ಹೀಗೆ
ನನಗೆ ಹಲವಾರು ಬಾರಿ ಈ ರೀತಿ ಮಾಡಿದ್ದರಿಂದ ನನ್ನ ಸೂಕ್ಷ್ಮಾಂಗಕ್ಕೆ ಗಾಯವಾಗಿದ್ದು
ಇರುತ್ತದೆ. ದಿನಾಂಕ: 20/10/2014 ರಂದು
ನನಗೆ ನನ್ನ ಗಂಡ ನಿನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ನನಗೆ ನನ್ನ ತಂದೆಯ
ಮನೆಯಾದ ನ್ಯೂ ರಹೆಮತ ನಗರ ಕಾಲೋನಿಗೆ ತಂದು ಬಿಟ್ಟು ಹೋಗಿರುತ್ತಾನೆ. ನಾನು ಗಂಡನ ಮನೆಗೆ ಹೋಗದೆ
ನನ್ನ ತಂದೆಯ ಮನೆಯಲ್ಲಿಯೆ ಉಳಿದಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಸುಲೋಚನಾ ಗಂಡ ಅರುಣಕುಮಾರ ಹೊನಗುಂಟಿ ಸಾ:ಹೆಚ್.ಎಮ್.ಪಿ
ಕಾಲೋನಿ ಶಹಾಬಾದ ಇವರ ಮಗಳಾದ ಕುಮಾರಿ ಇವಳು
ಕಾಲೊನಿಯಲ್ಲಿರುವ ಶಾಲೆಗೆ ಹೋಗಿ ಮರಳಿ ಸಾಯಾಂಕಾಲ ಮನೆಗೆ ಬಂದು ಮನೆಯ ಮುಂದೆ ನನ್ನ ಮಗಳು
ಮತ್ತು ನನ್ನ ಮಗ ಇವರು ಆಟವಾಡುತ್ತಿದ್ದರು. ನಾನು ಮತ್ತು ನನ್ನ ಅತ್ತೆಯಾದ ನಿಂಗಮ್ಮಾ ಇಬ್ಬರೂ
ಮನೆಯ ಮುಂದೆ ಮಾತನಾಡುತ್ತಾ ಕುಳಿತ್ತಿದ್ದೇವು. ಅದೇ ವೇಳೆಗೆ ಬಾಜು ಮನೆಯ ಶೇರಅಲಿ ತಂದೆ
ಖಾಜಾಮಿಯಾ ಇನಮದಾರ ಇತನು ನನ್ನ ಮಗಳಿಗೆ ಕರೆದು “ ಸೈಯದ ಪೀರ ದರ್ಗಾ
ಹತ್ತಿರ ಯಾರೊ ಸೈಕಲ ಬಿಟ್ಟಿದ್ದಾರೆ ತರೊಣ ನಡೆ” ಅಂತಾ ಅಂದಾಗ ಆಗ ಅಲ್ಲಿಯೇ
ಇದ್ದ ನಾನು ಎಲ್ಲಿಗೆ ಕರೆದುಕೊಂಡು ಹೋಗುತ್ತಿ ಅಂತಾ
ಕೇಳಿದಾಗ ಸದರಿ ಶೇರಅಲಿ ಇತನು “ ಸೈಯದ ಪೀರ ದರ್ಗಾ
ಹತ್ತಿರ ಯಾರೊ ಸೈಕಲ ಬಿಟ್ಟು ಹೋಗಿರುತ್ತಾರೆ” ಅಂತಾ ಅಂದು ನನ್ನ
ಮಗಳಿಗೆ ಕರೆದುಕೊಂಡು ಹೋದನು. ಅವನ ಹಿಂದೆ ನನ್ನ ಮಗನು ಕೂಡಾ ಹೊಗಿರುತ್ತಾನೆ. ನಂತರ ನನ್ನ ಮಗಳು
ಮತ್ತು ಮಗ ಕೂಡಿ ನನ್ನ ಮಗಳು ಅಳುತ್ತಾ ಮನಗೆ ಬಂದಾಗ ನಾನು ನನ್ನ ಮಗಳಿಗೆ ಯಾಕೆ ಅಳುತ್ತಿದ್ದಿ ಅಂತಾ
ಕೇಳಿದಾಗ ನನ್ನ ಮಗಳು ಅಳುತ್ತಾ ಹೇಳಿದ್ದೇನೆಂದರೆ, ಶೇರಅಲಿ ಇತನು ನನಗೆ
ಸೈಕಲ ಕೊಡಿಸುತ್ತೇನೆ ಅಂತಾ ಹೇಳಿ ಹೆಚ್.ಎಮ್.ಪಿ. ರಿವರ್ ಪಂಪ ಕ್ರಾಸ ಹತ್ತಿರ ಇರುವ ಹಾಳು ಬಿದ್ದ
ಮನೆಯ ಬಾಜು ಕರೆದುಕೊಂಡು ಹೋಗಿ ನನಗೆ ನಿನ್ನ
ಚಡ್ಡಿ ಬಿಚ್ಚು ಅಂತಾ ಅಂದಾಗ ಅದಕ್ಕೆ ನಾನು ಯಾಕೆ
ನನ್ನ ಚಡ್ಡಿ ಬಿಚ್ಚಲಿ ಅಂತಾ ಅಂದಾಗ ಅದಕ್ಕೆ ಅವನು ನಿನಗೆ ಗೊತ್ತಾಗುವದಿಲ್ಲಾ ನೀನು ಚಿಕ್ಕವಳು
ಇದ್ದಿ ಚಡ್ಡಿ ಬಿಚ್ಚು ಇಲ್ಲಂದ್ರ ನಾನು ನಿನ್ನ ಚಡ್ಡಿ ಬಿಚ್ಚುತ್ತೇನೆ ಅಂದಾ ಅಂದು ನನಗೆ ಹಿಡಿದು ನನ್ನ ಚಡ್ಡಿಯನ್ನು ಕೈಯಿಂದ
ಜಗ್ಗುತ್ತಿರುವಾಗ ನಾನು ಗಾಭರಿಯಾಗಿ ಚಿರಾಡಿ ಅಳುತ್ತಾ ಅವನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ
ಮನೆಯ ಕಡೆಗೆ ಬರುತ್ತಿವಾಗ ನನ್ನ ತಮ್ಮ ಹಾಳು ಮನೆಯ ಹೊರಗಡೆ ಇದ್ದು ಅವನೊಂದಿಗೆ ನಾನು
ಬಂದಿರುತ್ತೇನೆ” ಅಂತಾ ನನ್ನ ಮಗಳು
ಅಳುತ್ತಾ ಹೇಳಿದಳು.ಸದರಿ ವಿಷಯವನ್ನು ನನ್ನ ಅತ್ತೆಯಾದ ನಿಂಗಮ್ಮಾ ಮತ್ತು ಮಾವನಾದ ಮರೇಪ್ಪಾ
ಇವರಿಗೆ ತಿಳಿಸಿದ್ದೇನು. ನಾವು ಮಾದಿಗ ಜನಾಂಗದವರು ಅಂತಾ ಶೇರಅಲಿ ಇತನಿಗೆ ಗೊತ್ತಿದ್ದರೂ ಕೂಡಾ
ನನ್ನ ಮಗಳಿಗೆ ಪುಸಲಾಯಿಸಿ ಸಂಬೊಗ ಮಾಡಲು ಪ್ರಯತ್ನಿಸಿರುತ್ತಾನೆ.ಅಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ
ಶಾಂತಪ್ಪ ತಂದೆ ಭೀಮರಾಯ ಬಿರಜೆ ಸಾ|| ಸಾವಳಗಿ (ಬಿ) ತಾ:ಜಿ: ಕಲಬುರಗಿ. ರವರು
ದಿನಾಂಕ:
02/12/2014 ರಂದು ರಾತ್ರಿ 7:30 ಗಂಟೆಯಿಂದ 9:30 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿದಾರನು
ತನ್ನ ಹೊಲದಲ್ಲಿ ಕಟ್ಟಿದ ಎರಡು ಎತ್ತುಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅವುಗಳ
ಕಿಮ್ಮತ್ತು 75,000/- ರೂ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀಮತಿ ಸುಮಿತ್ರಾ ಗಂಡ ಶರತ ಸಾಃ ಬಾಪು ನಗರ ಸೇಡಂ ರೋಡ
ಗುಲಬರ್ಗಾ ರವರು ದಿನಾಂಕ 03-12-2014 ರಂದು ಹಳೆ ಸಾಮಾನು ಆಯುವ ಕೆಲಸಕ್ಕಾಗಿ ಮುಂಜಾನೆ 09-00
ಎ.ಎಮ್ ಕ್ಕೆ ಗುಬ್ಬಿ
ಕಾಲೂನಿ ಕ್ರಾಸ್ ಹತ್ತಿರ ಸೇಡಂ ರಿಂಗ ರೋಡ ಕಡೆ ಹೋಗುತ್ತಿದ್ದಾಗ ಮೋಟಾರ ಸೈಕಲ ನಂ. ಕೆ.ಎ 32
ಇ.ಜಿ 0948
ನೇದ್ದರ ಚಾಲಕನು ತನ್ನ
ಮೋಟಾರ ಸೈಕಲನ್ನು ಆರ್.ಟಿ.ಓ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಎಡಗಾಲು ಪಾದದ ಮೇಲಿಂದ ಹಾಯಿಸಿ ರಕ್ತಗಾಯಗೊಳಸಿ ತನ್ನ ಮೋಟಾರ
ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment