Police Bhavan Kalaburagi

Police Bhavan Kalaburagi

Sunday, January 11, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 8/2015 ಕಲಂ. 79, 80 ಕೆ.ಪಿ. ಕಾಯ್ದೆ:
ದಿನಾಂಕ:- 10-01-2015 ರಂದು ಸಂಜೆ 5:30 ಗಂಟೆಗೆ ಶ್ರೀ ಎಂ. ನಾಗರೆಡ್ಡಿ, ಪಿ.ಐ., ಡಿ.ಸಿ.ಐ.ಬಿ. ಕೊಪ್ಪಳ ರವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು, ಮೂಲ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿ:-     10-01-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದ ಪ್ರಶಾಂತ ರೆಸಿಡೆನ್ಸಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಅಂತಾ ದೊರೆತ ಖಚಿತ ಮಾಹಿತಿ ಮೇರೆಗೆ ಸಂಜೆ 4:00 ಗಂಟೆ ಲಾಡ್ಜನ ರೂಮ್ ನಂ: 206 ರಲ್ಲಿ ದಾಳಿ ಮಾಡಿ ಬೆಟ್ಟಿಂಗ್ ತೊಡಗಿದ್ದ ಬಾಬಾ ಖಲಂದರ ತಂದೆ ಮುಕ್ತುಮ್ ಸಾಬ, 23 ವರ್ಷ, ಮುಸ್ಲೀಂ ಸಾ: ಪ್ರಶಾಂತ ನಗರ-ಗಂಗಾವತಿ ಇವನನ್ನು ಹಿಡಿದು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 4,930-00, ಒಂದು ಸ್ಯಾಮಸಂಗ್ ಮೊಬೈಲ್, ಒಂದು ಬಾಲ್ ಪೆನ್ನು ಮತ್ತು ಒಂದು ಬೆಟ್ಟಿಂಗ್ ಚೀಟಿಯನ್ನು ವಶಪಡಿಸಿಕೊಂಡಿದ್ದು, ಸಂಜೆ 4:00 ರಿಂದ 4:45 ಗಂಟೆಯವರೆಗೆ ಪಂಚನಾಮೆ ನಿರ್ವಹಿಸಿದ್ದು. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 08/2015 ಕಲಂ 79, 80 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
2)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ. 363 ಐ.ಪಿ.ಸಿ:.
ದಿನಾಂಕ. 05-01-2015 ರಂದು ಫಿರ್ಯಾದಿದಾರರು ತಮ್ಮ ಇಬ್ಬರು ಮಕ್ಕಳಾದ ದರ್ಶನ ಮತ್ತು ಕಾರ್ತಿಕ ಇವರನ್ನು ಹುಲಿಗೆಮ್ಮಾ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದು, ಮದ್ಯಾನ್ಹ 12 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಇಬ್ಬರು ಮಕ್ಕಳನ್ನು ದೇವಸ್ಥಾದ ಪಕ್ಕದಲ್ಲಿರುವ ತಗಡಿನ ಶಡ್ಡಿನಲ್ಲಿ ನಿಲ್ಲಿಸಿ ಮುದ್ದಮ್ಮ ಕಟ್ಟೆಗೆ ಕಾಯಿ ಕರ್ಪುರ ಮಾಡಿಸಲು ಕಾಯಿ ಕರ್ಪುರ ಹೂವು ಹಣ್ಣು ತರಲು ಅಂಗಡಿಗೆ ಹೋದಾಗ ಫಿರ್ಯಾದಿದಾರರ ಕಿರಿಯ ಮಗ ಕಾರ್ತಿಕ 4 ಇವನನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
 3) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 3/2015 ಕಲಂ. 279, 337 ಐ.ಪಿ.ಸಿ:
ದಿನಾಂಕ. 10-01-2015 ರಂದು ರಾತ್ರಿ 9-50 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 10-00 ಗಂಟೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಾಬಾಖಾಜಿ ಇತನ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ತಾನು ಮತ್ತು ಅಭಿಷೇಕ ಜಾಗಟಗೇರ ಇಬ್ಬರೂ ಮಹಾಲಕ್ಷ್ಮೀ ಟೆಲಿಕಾಮ್ ನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಇಂದು ದಿನಾಂಕ. 10-01-2015 ರಂದು ಬಸ್ ನಿಲ್ದಾಣದಲ್ಲಿ ಅಂಗಡಿಗೆ ಸಂಬಂಧಿಸಿದ ಪಾರ್ಸಲ್ ಬಂದಿದ್ದು, ಅದನ್ನು ತೆಗೆದುಕೊಂಡು ಬರಲು ತಾನು ಮತ್ತು ಅಭಿಷೇಕ ಇಬ್ಬರೂ ಮೋಟಾರ್ ಸೈಕಲ್ ನಂ KA 37 / Q 7176 ನೆದ್ದರ ಮೇಲೆ ಬಸ್ ನಿಲ್ದಾಣಕ್ಕೆ ಹೊರಟಿದ್ದು, ಮೋಟಾರ್ ಸೈಕಲನ್ನು ಅಭಿಷೇಕ ಇತನು ಚಲಾಯಿಸುತ್ತಿದ್ದು ತಾನು ಹಿಂದೆ ಕುಳಿತುಕೊಂಡಿದ್ದು, ಅಭಿಷೇಕ ಇತನು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್.-63 ರಸ್ತೆಯ ಮೇಲೆ ವೈಭವ ಬಾರ್ ಮುಂದೆ ಮೋಟಾರ್ ಸೈಕಲನ್ನು ಜೋರಾಗಿ ಮತ್ತು ನಿರ್ಲಕ್ಷ್ಯನದಿಂದ ಚಲಾಯಿಸಿಕೊಂಡು ಹೊರಟಿದ್ದು ಮತ್ತು ಎದುರುಗಡೆಯಿಂದ ಬಂದ ಒಬ್ಬ ಮೋಟಾರ್ ಸೈಕಲ್ ನಂಬರ KA 37 / R 2780 ನೆದ್ದರ ಸವಾರ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಇಬ್ಬರೂ ಸೈಡ್ ತೆಗೆದುಕೊಳ್ಳದೆ ಮುಖಾಮುಖಿಯಾಗಿ ಟಕ್ಕರ ಮಾಡಿ ಅಪಘಾತ ಮಾಡಿಕೊಂಡಿದ್ದು ಇದರಿಂದ ತನಗೆ ಹಣೆಗೆ ತೆರಚಿದ ಗಾಯವಾಗಿದ್ದು, ಅಭಿಷೇಕ ಇತನಿಗೆ ತಲೆಯ ಬಲಭಾಗದ ಹಣೆ, ತಲೆಯ ಹಿಂದೆ ರಕ್ತಗಾಯ, ಬಲಗಾಲ ಮೊಣಕಾಲ ಕೆಳಗೆ ತೆರಚಿದ ಗಾಯ ಹಾಗೂ ಎಡಗಾಲ ಮೊಣಕಾಲಿಗೆ ಒಳಪೆಟ್ಟು ಆಗಿದ್ದು ಹಾಗೂ ರಮೇಶ ಇತನಿಗೆ ಬಲಗಣ್ಣಿನ ಹುಬ್ಬಿಗೆ, ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿ ಸೊಂಟಕ್ಕೆ ಒಳಪೆಟ್ಟು ಬಿದ್ದಿರುತ್ತದೆ. ಆಗ ಸಮಯ ರಾತ್ರಿ 9-00 ಗಂಟೆಯಾಗಿತ್ತು ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 10-00 ಗಂಟೆಯಿಂದ 10-45 ಗಂಟೆಯವರೆಗೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 11-00 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ 03/2014 ಕಲಂ. 279, 337 ಐ.ಪಿ.ಸಿ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

No comments: