ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 279, 337, 338,
283, 304(ಎ) ಐ.ಪಿ.ಸಿ:.
ದಿನಾಂಕ: 30-01-2015 ರಂದು
11-50 ಪಿಎಂ.ಕ್ಕೆ ಬನ್ನಿಕೊಪ್ಪ ಹತ್ತಿರ ರಸ್ತೆ ಅಪಘಾತದಲ್ಲಿ ಇಬ್ಬರಿಗೆ ಭಾರಿ ಗಾಯವಾಗಿದ್ದು, ಒಬ್ಬ
ವ್ಯಕ್ತಿ ಮೃತಪಟ್ಟ ಬಗ್ಗೆ ಫಿರ್ಯಾದಿದಾರರು ದೂರವಾಣಿ ಮುಖಾಂತರ ಮಾಹಿತಿ ತಿಳಿಸಿದ ಮೇರೆಗೆ ನಾನು ಸ್ಥಳಕ್ಕೆ
ಭೇಟಿ ನೀಡಿ, ಪರಿಶೀಲಿಸಿ, ನಂತರ ಅಲ್ಲಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿಕೊಟ್ಟು ಪ್ರಕರಣದಲ್ಲಿಯ
ಗಾಯಾಳುಗಳಿಗೆ ಅವಲೊಕಿಸಿದೆನು. ನಂತರ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರನಿಗೆ ವಿಚಾರಿಸಿ ಪಿರ್ಯಾದಿದಾರನು
3-00 ಎ.ಎಂ.ಕ್ಕೆ ತನ್ನದೊಂದು ಲಿಖಿತ ದೂರನ್ನು ಬರೆದು ಹಾಜರ ಪಡಿಸಿದ್ದರ ಸಾರಾಂಶ ವೇನೆಂದರೆ, ಗಾಯಾಳು
ರಾಘವೇಂದ್ರ ಮತ್ತು ಆರೋಪಿ ಹಾಗೂ ಮೃತ ಮೂರು ಜನರು ಕಾರ್ ನಂ:ಎಪಿ-02 ಎಕ್ಯೂ-7589 ನೇದ್ದರಲ್ಲಿ ಗೋವಾ
ಪ್ರವಾಸ ಮುಗಿಸಿಕೊಂಡು ವಾಪಸ್ ತಮ್ಮ ಊರಿಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಹೋಗುವಾಗ
ದಾರಿಯಲ್ಲಿ ಬನ್ನಿಕೊಪ್ಪ ಸೀಮಾದಲ್ಲಿ ದಿನಾಂಕ:30-01-2015 ರಂದು 11-30 ಪಿಎಂ ಸುಮಾರಿಗೆ ಸದರ ಎನ್.ಹೆಚ್-63
ರಸ್ತೆಯ ಮೇಲೆ ಟಿಪ್ಪರ್ ನಂ:ಕೆಎ-35 ಬಿ-4600 ನೇದ್ದರ ಚಾಲಕನು ಯಾವುದೇ ಸೂಚನೆ ನೀಡದೇ ಮತ್ತು ಇಂಡಿಕೇಟರ್
ಹಾಕದೇ ನಿಲ್ಲಿಸಿದ ಟಿಪ್ಪರ್ ಗೆ ಆರೋಪಿ ಜಯಚಂದ್ರ ಇವನು ಕಾರ್ ನಂ:ಎಪಿ-02 ಎಕ್ಯೂ-7589 ನೇದ್ದನ್ನು
ಅಲಕ್ಷ್ಯತನದಿಂದ ಹಾಗೂ ಅತೀವೇಗದಿಂದ ಓಡಿಸಿಕೊಂಡು ಬಂದು ಟಿಪ್ಪರ್ ಗೆ ಹಿಂದಿನಿಂದ ಡಿಕ್ಕಿಹೊಡೆಸಿ
ಅಪಘಾತಪಡಿಸಿದ್ದರಿಂದ ಅಪಘಾತದಲ್ಲಿ ಕಾರಿನಲ್ಲಿ ರಾಘವೇಂದ್ರ ಮತ್ತು ಆರೋಪಿ ಜಯಚಂದ್ರನಿಗೆ ಸಾದಾ ಮತ್ತು
ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನೊಬ್ಬ ಪವನ್ ಇವನು ಭಾರೀ ರಕ್ತಗಾಯಗೊಂಡು ಸ್ಥಳದಲ್ಲಿ
ಮೃತಪಟ್ಟಿರುತ್ತಾನೆ. ಸದರಿ ಅಪಘಾತವು ಎರಡು ವಾಹನಗಳ ಚಾಲಕರ ಅಲಕ್ಷ್ಯತನದಿಂದ ಜರುಗಿದ್ದು,
ಸದರಿಯವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ಲಿಖಿತ ದೂರನ್ನು
ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಮುನಿರಾಬಾದ ಪೊಲೀಸ್ ಠಾಣೆ
ಗುನ್ನೆ ನಂ. 17/2015 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 21-01-2015 ರಂದು ಫಿರ್ಯಾದಿದಾರರು ಮತ್ತು ಅವರ ಅಳಿಯ ಮಗಳು ಕೂಡಿಕೊಂಡು ಜೆ.ಪಿ.
ಟ್ರಾವೆಲ್ಸ ಬಸ್ ನಂ. ಕೆ.ಎ.01/ಸಿ.2897 ಬಸ್ಸಿನಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ
ಹೋಗುತ್ತಿರುವಾಗ ದಿನಾಂಕ. 22-01-2015 ರಂದು 02-00 ಎ.ಎಂ.ಕ್ಕೆ ಹೊಸಪೇಟೆ ದಾಟಿ ಕುಷ್ಟಗಿ
ಕಡೆಗೆ ಹೋಗುತ್ತಿರುವಾಗ ಜೈಹಿಂದ ಡಾಬಾದ ಮುಂದೆ ಹುಲಗಿ ಕ್ರಾಸಿನಲ್ಲಿ ಎನ್ ಹೆಚ್.13 ರಸ್ತೆಯ
ಮೇಲೆ ಬಸ್ಸಿನ ಚಾಲಕನು ಬಸ್ಸನ್ನು ರೋಡ ಹಂಪ್ಸದಲ್ಲಿ ಬಸ್ಸನ್ನು ನಿಧಾನ ಮಾಡಿಕೊಳ್ಳದೆ
ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಒಮ್ಮೇಲೆ ಚಲಾಯಿಸಿದ್ದರಿಂದ ರೋಡ ಹಂಪ್ಸಗೆ ಒಮ್ಮೇಲೆ ಬಸ್ಸು
ಪುಟಿದಿದ್ದು, ಬಸ್ಸಿನ ಹಿಂದೆ ಕುಳಿತ ಫಿರ್ಯಾದಿದಾರರು ಬಸ್ಸಿನಲ್ಲಿ ಮೇಲೆ ಪುಟಿದು ಹಿಂದಿನ ಸೀಟಿನಲ್ಲಿ
ಬಿದ್ದಿದ್ದರಿಂದ ಫಿರ್ಯಾದಿಗೆ ಸೊಂಟಕ್ಕೆ ಮತ್ತು ಎಡಗೈ ಮುಂಗೆಗೆ ಭಾರಿ ಒಳಪೆಟ್ಟು
ಬಿದ್ದಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
No comments:
Post a Comment