ಜಿಲ್ಲಾ ಪೊಲೀಸ್ ಕಾರ್ಯಲಯ
ಬಳ್ಳಾರಿ, ದಿನಾಂಕ: 19-01-2015
ಪತ್ರಿಕಾ ಪ್ರಕಟಣೆ
1) ಕುರುಗೋಡು ಪೊಲೀಸ್ ಠಾಣೆ ಸರಹದ್ದಿನ ಕಂಪ್ಲಿ-ಕುರುಗೋಡು ರಸ್ತೆಯ ಗುರುಸಿದ್ದನಗೌಡರ ಹೊಲದ ಹತ್ತಿರ ಆಟೋ ಮತ್ತು ಮೋಟಾರ್ ಸೈಕಲ್ ನಡುವೆ ರಸ್ತೆ ಅಫಘಾತ ಮೋಟಾರ್ ಸೈಕಲ್ ಸವಾರನ ಸಾವು.
ಫಿರ್ಯಾದಿದಾರರಾದ ಶ್ರೀ. ಕುಮಾರಸ್ವಾಮಿ, 38 ವರ್ಷ, ವಾ: ಕುರುಗೋಡು ರವರು ದೂರು ನೀಡಿದ್ದೇನೆಂದರೆ, ದಿ: 17/01/2015 ರಂದು ಮಧ್ಯಾಹ್ನ 03:30 ಗಂಟೆಗೆ ನನ್ನ ಬಾಮೈನಾದ ಶ್ರೀ.ಶರಣಪ್ಪ, 33 ವರ್ಷ, ವಾ:ರಾಮನಗರ, ಬಳ್ಳಾರಿ ಈತನು ತನ್ನ ಟಿವಿಎಸ್ ಮೋಟರ್ ಸೈಕಲ್ ನಂಬರ್ ಕೆ.ಎ.34/ಎಕ್ಸ್.5637 ರಲ್ಲಿ ಕಂಪ್ಲಿ-ಕುರುಗೋಡು ರಸ್ತೆಯಲ್ಲಿ ಗುರುಸಿಧ್ದನಗೌಡನ ಹೊಲದ ಬಳಿ ಬರುತ್ತಿದ್ದಾಗ ಕುರುಗೋಡು ಕಡೆಯಿಂದ ಆಟೋ ನಂಬರ್ ಕೆ.ಎ.34/ಎ.5495 ನೇದ್ದನ್ನು ಅದರ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಶರಣಪ್ಪನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಶರಣಪ್ಪನಿಗೆ ಎಡಗಾಲು, ಎಡಗೈಗೆ ತೆಲೆಗೆ ಭಾರೀಗಾಯವಾಗಿದ್ದು, ನಂತರ ಶರಣಪ್ಪನನ್ನು ಚಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾದಗೆ ರಾತ್ರಿ 10:15 ಗಂಟೆಗೆ ಶರಣಪ್ಪನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ, ಆಟೋ ಚಲಕ ಅಪಘಾತ ಮಾಡಿ ಪರಾರಿಯಾಗಿರುತ್ತಾನೆ. ಕಾರಣ ಅಪಘಾತ ಮಾಡಿ ಪರಾರಿಯಾದ ಅಟೋ ಚಾಲಕನ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೊಟ್ಟ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಹೊಸಪೇಟೆ ಸಂಚಾರ ಪೊಲೀಸ್ ಠಾಣೆ ಸರಹದ್ದಿನ ಬಳ್ಳಾರಿ ರಸ್ತೆಯ ಎನ್.ಹೆಚ್.-63 ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ರಸ್ತೆಯ ಪಕ್ಕದಲ್ಲಿ ನಿಂತಿದ್ದ ವೃದ್ದ ಮಹಿಳೆಗೆ ಡಿಕ್ಕಿ ಮಹಿಳೆಯು ಸ್ಥಳದಲ್ಲೇ ಸಾವು.
ಫಿರ್ಯಾದಿದಾರರಾ ಮಹಬ್ಭಾಷ, 35 ವರ್ಷ, ವಾ: ಹೊಸಪೇಟೆ ಇವರು ದೂರು ನೀಡಿದ್ದೇನೆಂದರೆ, ದಿನಾಂಕ: 18-01-2015 ರಂದು ರಾತ್ರಿ 8-00 ಗಂಟೆಗೆ ಹೊಸಪೇಟೆ ಪಟ್ಟಣದ ಎನ್.ಹೆಚ್.-63 ರಸ್ತೆಯಲ್ಲಿನ ಬಳ್ಳಾರಿ ರಸ್ತೆ ಸರ್ಕಲ್‍ನ ತಾರ್ ರಸ್ತೆಯ ಮೇಲೆ ಫಿರ್ಯಾದಿ ಮತ್ತು ಆತನ ತಾಯಿಯಾದ ಗೂಡುಮಾಬಿ, 68 ವರ್ಷ, ವಾ: ಹೊಸಪೇಟೆ ಇವರು ಕೂಡಿ ಇಬ್ಬರೂ ಸಿರಸನಕಲ್ಲಿನಿಂದ ಆಟೋದಲ್ಲಿ ಬಂದು ಸರ್ಕಲ್‍ನಲ್ಲಿ ಇಳಿದು ನಿಂತುಕೊಂಡಿದ್ದಾಗ ಅದೇ ವೇಳೆಗೆ ಬಳ್ಳರಿ ಕಡೆಯಿಂದ ಹೊಸಪೇಟೆ ಡಿಪೋ ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-37 ಎಫ್. 409 ನೇದ್ದನ್ನು ಅದರ ಡ್ರೈವರನು ಅತಿವೇಗ ಹಾಗು ನಿರ್ಲಕ್ಷಣದಿಂದ ಚಲಾಯಿಸಿಕೊಂಡು ಬರುತ್ತಾ ಏಕಾಏಕಿ ರಸ್ತೆಯ ಮೇಲೆ ನಿಂತಿದ್ದ ಫಿರ್ಯದಿ ತಾಯಿಗೆ ಡಿಕ್ಕಿ ಹೊಡೆಸಿ ಅಫಘಾತ ಮಾಡಿ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದು, ಸದರಿ ಅಫಘಾತದಿಂ ಗಾಯಗೊಮಡ ಗೂಡುಮಾಬಿಯು ಸ್ಥಳದಲ್ಲೇ ಮೃತಪಟ್ಟಿದ್ದು, ಸದರಿ ಬಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
3) ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಸರಹದ್ದಿನ ಗೌತಮ್‍ನಗರ, ಬಳ್ಳಾರಿಯಿಂದ 22 ವರ್ಷ, ಮಹಿಳೆ ಕಾಣೆಯಾದ ಬಗ್ಗೆ.
ದಿನಾಂಕ: 18-1-2015 ರಂದು ರಾತ್ರಿ 8-45 ಗಂಟೆಗೆ ಶ್ರೀ. ಕೆ. ನಾಗೇಶ್, ವಾಸ: ಗೌತಮ್ ನಗರ, ಬಳ್ಳಾರಿ ರವರು ಠಾಣೆಗೆ ಬಂದು ದೂರು ನೀಡಿದ್ದು ಸಾರಾಂಶ: ದಿನಾಂಕ: 17-1-2015 ರಂದು ಸಂಜೆ 5-30 ಗಂಟೆಗೆ ಬಳ್ಳಾರಿ ಗ್ರಾಮೀಣ ಠಾಣೆ ಸರಹದ್ದು ಗೌತಮ್ ನಗರದಲ್ಲಿರುವ ತನ್ನ ಮನೆಯಿಂದ ತನ್ನ ಹೆಂಡತಿ ಶ್ರೀಮತಿ. ಬಿ. ಆಶ್ವಿನಿ, 22 ವರ್ಷ, ಇವರು ಕಸಪೊರಕೆ ತರುತ್ತೇನೆಂದು ತನ್ನ ಮನೆಯ ಪಕ್ಕದ ವಾಸಿ ಶ್ರೀಮತಿ. ರೇಣುಕರವರಿಗೆ ಹೇಳಿ ತನ್ನ ಮಕ್ಕಳನ್ನು ಅವರ ಮನೆಯ ಮುಂದೆ ಬಿಟ್ಟು ಹೋದವಳು ಬಂದಿಲ್ಲವೆಂದು ತನ್ನ ಹೆಂಡತಿಯು ಹೊಸಪೇಟೆಯಲ್ಲಿರುವ ಅವಳ ತಂಗಿ ಕು: ಚೈತ್ರಾಳ ಪೋನ್‍ಗೆ ಕರೆ ಮಾಡಿ ತಾಯಿಗೆ ಮಾತನಾಡಬೇಕು ಎಂದು ಹೇಳಿ ಪೋನ್ ಕಟ್ ಮಾಡಿದ್ದು ತನ್ನ ಹೆಂಡತಿಯ ತಾಯಿಯು ಪುನ: ತನ್ನ ಹೆಂಡತಿಗೆ ಪೋನ್ ಮಾಡಿದಾಗ ಪೋನ್ ಸ್ವೀಚ್ ಅಫ್ ಬಂದಿರುತ್ತದೆಂದು ಕಾಣೆಯಾದ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡಲು ಕೋರಿದ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ.
4) ಬಳ್ಳಾರಿ ನಗರದ ಎ.ಪಿ.ಎಂ.ಸಿ. ಠಾಣೆ ಸರಹದ್ದಿನ ಅಂದ್ರಾಳ್ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ನಗದು ಹಣ ವಶ ಆರೋಪಿತರ ಬಂಧನ.
ದಿನಾಂಕ 18-01-2015 ರಂದು ಸಾಯಂಕಾಲ 5-45 ಗಂಟೆಗೆ ಶ್ರೀ. ನಿರಂಜನ್, ಪಿ.ಎಸ್.ಐ. ಎ.ಪಿ.ಎಂ.ಸಿ ಯಾರ್ಡ ಪೊಲೀಸ್ ಠಾಣೆ ರವರಿಗೆ ಅಂದ್ರಾಳ್ ಗ್ರಾಮದ ಬಾಲಾಜಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಬದ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಮತ್ತು ಸಿಬ್ಬಂದಿ ಮೇಲ್ಕಂಡ ಸ್ಥಳಕ್ಕೆ ಧಾಳಿ ಮಾಡಿ ಮಹಾದೇವ ಹಾಗು ಇತರೆ 6 ಜನರು ಎಲ್ಲರೂ ವಾ: ರಾಣಿತೋಟ, ಬಳ್ಳಾರಿ ಇವರನ್ನು ದಸ್ತಗಿರಿ ಮಾಡಿ ಅವರಿಂದ ಜೂಜಾಟಕ್ಕೆ ತೊಡಗಿಸಿದ್ದ ರೂ. 15,065/- ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತು ಪಡಿಸಿಕೊಂಡಿದದ್ದು, ಈ ಬಗ್ಗೆ ಎ.ಪಿ.ಎಂ.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಪೊಲೀಸ್ ಸೂಪರಿಂಟೆಂಡೆಂಟ್, ಬಳ್ಳಾರಿ.
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.
No comments:
Post a Comment